

ಕುಂದಾಪುರ, ಡಿ.29; ಯೇಸು ಕ್ರಿಸ್ತರ 2025 ರ ಜುಬಿಲಿ ಈ ವರ್ಷದಲ್ಲಿ ಉಡುಪಿ ಧರ್ಮಪ್ರಾಂತ್ಯದ ಹಲವಾರು ಯೋಜನೆಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರತಿ ಧರ್ಮಕೇಂದ್ರದಲ್ಲಿ ಬಡವರಿಗಾಗಿ ಒಂದು ಮನೆ ಕಟ್ಟಿಕೊಡುವ ಯೋಜನೆ ಹಮ್ಮಿಕೊಡಿದ್ದು, ಈ ಯೋಜನೆ ಪ್ರಕಾರ ಕುಂದಾಪುರ ಧರ್ಮಕೇಂದ್ರದ ಹೇರಿಕುದ್ರು ಸಂತ ಅಂತೋನಿ ವಾಳೆಯ ಶ್ರೀ ಮೆಲ್ಕಮ್ ಮತ್ತು ಬ್ಲಾಂಚಿ ಬ್ರಗಾಂಜಾ ಇವರಿಗೆ ಕಟ್ಟಿಕೊಡಲು ನಿರ್ಧರಿಸಿ, ಮೇ 9, 2025 ರಂದು ಅಡಿಪಾಯ ಹಾಕಿ ಅಶಿರ್ವವಚನ ಮಾಡಿದ್ದು, ಇದೀಗ ಉಡುಪಿ ಧರ್ಮಪ್ರಾಂತ್ಯದ ಮತ್ತು ಕುಂದಾಪುರ ಧರ್ಮಕೇಂದ್ರದ ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿ ಕುಂದಾಪುರ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಆಶಿರ್ವಚನ ಮಾಡಿ ಮನೆಯ ಕೀಲಿಕೈಯಗಳನ್ನು ಮನೇಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಸಂತ ಜೋಸೆಫ್ ಚರ್ಚಿನ ಮುಖ್ಯಸ್ಥೆ ವಂ।ಸುಪ್ರಿಯ, ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ವಾಳೆಯ ನೂತನ ಗುರಿಕಾರ ನೊವೆಲ್ ಗೊನ್ಸಾಲ್ವಿಸ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಂತ ವಿನ್ಸೆಂಟ್ ಪಾವ್ಲ್ ಸಮಿತಿಯ ಅಧ್ಯಕ್ಷರಾದ, ಇಗ್ನೆಶಿಯಸ್ ಡಿಕುನ್ಹಾ ಸ್ವಾಗತಿಸಿದರು. ಉಪಾಧ್ಯಕ್ಷರಾದ ವಿಕ್ಟರ್ ಡಿಸೋಜಾ ವಂದಿಸಿದರು. ತಕ್ಕ ಸಮಯಕ್ಕೆ ಮನೆ ನಿರ್ಮಾಣ ಮಾಡಿಕೊಟ್ಟ ಜೋಯ್ ರೆಬೆಲ್ಲೊ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಾಳೆಯ ಮತ್ತು ದರ್ಮಕೇಂದ್ರದ ಅನೇಕರು ಹಾಜರಿದ್ದರು.










