

ಕುಂದಾಪುರ, ಜು.27; ಭಾರತೀಯ ಕಥೋಲಿಕ್ ಯುವ ಚಳವಳಿಯ (ICYM) ಯುವ ಕಾರ್ಯಕ್ರಮವಾದ ಉಡುಪಿ ಧರ್ಮಪ್ರಾಂತ್ಯದ ಪ್ರಾದೇಶಿಕ ಯುವ ಸಮಾವೇಶದ ಶಿಲುಭೆಯ ಯಾತ್ರೆಯ ಶಿಲುಬೆ ಜು.26 ರಂದು, 455 ವರ್ಷಗಳ ಚರಿತ್ರೆಯುಳ್ಳ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಗೆ ಮುಟ್ಟಿತು.
ತಲ್ಲೂರು ಸಂತ ಆಸೀಸಿ ಚರ್ಚಿನ ಧರ್ಮಗುರುಗಳಾದ ವಂ।ಎಡ್ವಿನ್ ಡಿಸೋಜಾ ಮತ್ತು ಐ.ಸಿ,ವೈ.ಎಮ್ ಸಂಘಟನೇಯ ಸದಸ್ಯರು ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಅ।ವಂ।ಪೌಲ್ ರೇಗೊ ಹಾಗೂ ಐ.ಸಿ,ವೈ.ಎಮ್ ಸಂಘಟನೇಯ ಸದಸ್ಯರಿಗೆ ಹಸ್ತಾಂತರಿಸಿದರು.
ನಂತರ ಭಕ್ತಿಪೂರ್ವಕ ಪ್ರಾರ್ಥನಾ ವಿಧಿಯನ್ನು ಭಾರತೀಯ ಕಥೋಲಿಕ್ ಯುವ ಸಂಚಾಲನೆಯ (ICYM) ಸದಸ್ಯರು ನೆಡೆಸಿದರಲ್ಲದೆ. ಯೇಸುವಿನ ಕಷ್ಟ ಕಾರ್ಪಣ್ಯದ ಶಿಲುಭೆಯ ಹಾದಿಯ ವಿಧಿಯನ್ನು ನಡೆಸಿಕೊಟ್ಟರು. ಈ ಪ್ರಾರ್ಥನ ವಿಧಿಯಲ್ಲಿ ಯುವ ಜನತೆ ಅಲ್ಲದೆ, ಧರ್ಮಭಗಿನಿಯರು, ಹಿರಿಯರು ಭಾಗವಹಿಸಿದ್ದರು.












































