

ಕೋಟ: ಕ್ರೈಸ್ತರ ಪವಿತ್ರ ಹಾಗೂ ಪ್ರಾಯಶ್ಚಿತ್ತದ ಕಾಲದ ಪ್ರಯುಕ್ತವಾಗಿ ಎಕದಿನದ ಧ್ಯಾನ ಕೂಟವನ್ನು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಮಾರ್ಚ್ 15 ರಂದು ಆಯೊಜಿಸಲಾಗಿತ್ತು.
ಬಸ್ರೂರು ಫಿಲಿಪ್ ನೇರಿ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಡೆನ್ಸಿ ಮಾರ್ಟಿಸ್ ಅವರು ಪ್ರಧಾನ ಪ್ರವಚಕರಾಗಿ ಧ್ಯಾನ ಕೂಟವನ್ನು ನಡೆಸಿದರು ಕೊಟ್ಟರು. ಶಿಲುಬೆಯ ಹಾದಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಧ್ಯಾನ ಕೂಟ ಪವಿತ್ರ ಬಲಿಪೂಜೆಯೊಂದಿಗೆ ಅಂತ್ಯ ಗೊಂಡಿತು. ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಹಾಜರಾಗಿ ಆತ್ಮಿಕ ಪ್ರಯೋಜನವನ್ನು ಪಡಕೊಂಡರು ಹಾಗೂ ಮುಂಬರುವ “ಶುಭ ಶುಕ್ರವಾರ” ಹಾಗೂ “ಫಾಸ್ಕ ಭನುವಾರಕ್ಕೆ” ಅಧ್ಯಾತ್ಮಿಕವಾಗಿ ತಯಾರಿ ಮಾಡಿಕೊಂಡರು.
ಚರ್ಚಿನ ಧರ್ಮಗುರುಗಳಾದ ವಂ। ಫಾದರ್ ಸ್ಟ್ಯಾನಿ ತಾವ್ರೊ ಅವರು ಧನ್ಯವಾದಗಳನ್ನು ಅರ್ಪಿಸಿದರು.















