


ಸಂತ ಜೊಸೆಫರ ಇಗರ್ಜಿ ಕೋಟ ದಲ್ಲಿ ಮಾತೆ ಮರಿಯಮ್ಮನವರ ಸ್ವರ್ಗಾರೋಹಣದ ಹಬ್ಬ ಹಾಗೂ ದೇಶದ ಸ್ವಾತಂತ್ರ್ಯೊತವ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರಂಭದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ದೇಶಕ್ಕಾಗಿ ವಿಶೇಶವಾಗಿ ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.
ನಂತರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೊಸೆಫ್ ರೊಡ್ರಿಗಸ್ ಸ್ವಾಗತ ಭಾಶಣ್ ಮಾಡಿದರು. ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಧ್ವಜಾರೋಹಣ ನೆರವೇರಿಸಿದರು. ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಶರಾದ ಹೆರಾಲ್ಡ್ ಫೆರ್ನಾಂಡಿಸ್, ಕಥೊಲಿಕ್ ಸಭಾ ಅಧ್ಯಕ್ಶ ವಿಲ್ಟನ್ ಒಲಿವೆರಾ ಉಪಸ್ಥಿತರಿದ್ದರು. ಗಾಯನ ಮಂಡಳಿಯವರು ದೇಶ ಭಕ್ತಿ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಪ್ರಸ್ತುತ ಶಿಕ್ಶಣ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಥೊಲಿಕ್ ಸಭಾ ಕಾರ್ಯದರ್ಶಿ ಫ್ಲಾವಿಯಾ ಡಾಯಸ್ ಧನ್ಯವಾದ ಸಮರ್ಪಿಸಿದರು. ಜೆಸ್ಲಿನ್ ರೊಡ್ರಿಗಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಸನ್ನಿ ಡಾಯಸ್ ಮತ್ತು ಕುಟುಂಬದವರು ಎಲ್ಲರಿಗೂ ಲಘು ಉಪಹಾರ ಹಾಗೂ ಸಿಹಿ ತಿಂಡಿಯ ವ್ಯವಸ್ತೆಯನ್ನು ಮಾಡಿದ್ದರು.



























































