


ಕೋಟ: ಸಂತ ಜೋಸೆಫರ ಇಗರ್ಜಿಯಲ್ಲಿ ಅಪ್ಪಂದಿರ ದಿನಾಚರಣೆಯನ್ನು ಇತ್ತೀಚೆ ಪವಿತ್ರ ಬಲಿಪೂಜೆಯೊಂದಿಗೆ ಆಚರಿಸಲಾಯಿತು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯಾದ “ಸಂಪದ” ಸಂಸ್ಥೆಯ ನಿರ್ದೇಶಕರಾದ ವಂದನೀಯ ರೆಜಿನಾಲ್ಡ್ ಪಿಂಟೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಸಹಭಾಗಿಯಾದರು. ಪವಿತ್ರ ಬಲಿಪೂಜೆಯಲ್ಲಿ ಅಪ್ಪಂದರಿಗಾಗಿ ವಿಶೇಶ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹೆರಾಲ್ಡ್ ಫೆರ್ನಾಂಡಿಸ್ ಅವರು ಸ್ವಾಗತಿಸಿದರು. ವಂದನೀಯ ಸ್ಟ್ಯಾನಿ ತಾವ್ರೊ ಅವರು ಪ್ರಾಸ್ತವಿಕ ಭಾಶಣ ಮಾಡಿದರು. ಕುಟುಂಬದಲ್ಲಿ ತಂದೆಯ ಪಾತ್ರ ವಿಷಯವಾಗಿ ಒಲಂಪಿಯಾ ಲಾಜರಸ್ ಅವರು ಮಾತನಾಡಿದರು.
ಪುರುಷರ ಸ್ವಸಹಾಯ ಸಂಘವನ್ನು ಈ ಸಂದರ್ಬದಲ್ಲಿ ವಂದನೀಯ ರೆಜಿನಾಲ್ಡ್ ಪಿಂಟೊ ಅವರು ಉದ್ಘಾಟಿಸಿದರು. ಸಂಘದ ಸಂಚಾಲಕರಾದ ಮೆಲ್ವಿನ್ ಕ್ರಾಸ್ತಾ ಅವರು ಉಪಸ್ಥಿತರಿದ್ದರು. ರೊಬರ್ಟ್ ರೊಡ್ರಿಗಸ್ ಅವರು ಕಾರ್ಯಾಕ್ರಮವನ್ನು ನಿರ್ವಹಿಸಿದರು. ನೊರಾ ಡಿಸೋಜ ಅವರು ಧನ್ಯವಾದ ಸಮರ್ಪಣೆ ಮಾಡಿದರು.























