

ಕೋಲಾರ : ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಗುರಿ ಸಾಧನೆಯ ಹಿತದೃಷ್ಟಿಯಿಂದ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಕೋಲಾರ ಜಿಲ್ಲಾ ಘಟಕದ ಸಾಮಾನ್ಯ ಸಭೆ ಭಾನುವಾರ ನಗರದ ಅಲ್ಲಮೀನ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆ ಹಾಗೂ ನಿಗಮ/ನಿಯಮಿತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮುಸ್ಲಿಂ ಸಮುದಾಯದ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು. ಸಮುದಾಯದ ಶಿಕ್ಷಣ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಬಲಿಕರಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿ, ಈ ಕಾರ್ಯಸಾಧನೆಗಾಗಿ ಜಿಲ್ಲಾ ಮಟ್ಟದ ಹೊಸ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಲಾಯಿತು.
ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಹೀಗಿದೆ:
ಜಿಲ್ಲಾಧ್ಯಕ್ಷೆ: ಶ್ರೀಮತಿ ಶಿರೀನ್ ತಾಜ್ (ಜಿಲ್ಲಾ ವ್ಯವಸ್ಥಾಪಕಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ)
ಗೌರವಾಧ್ಯಕ್ಷ: ಶ್ರೀ ಅಬ್ದುಲ್ ನವೀದ್ ಎ. (ಪ್ರಾಂಶುಪಾಲ, ದೇವರಾಯ ಸಮುದ್ರ ಮುರಾರ್ಜಿ ದೇಸಾಯಿ ವಸತಿ ಶಾಲೆ)
ಕಾರ್ಯಾಧ್ಯಕ್ಷ: ಶ್ರೀ ಅಸ್ಗರ್ (ಪ್ರೌಢಶಾಲಾ ಶಿಕ್ಷಕರು)
ಹಿರಿಯ ಉಪಾಧ್ಯಕ್ಷ: ಶ್ರೀ ಅಯಾಜ್ (ಮುಖ್ಯೋಪಾಧ್ಯರು, ಸ.ಕಿ.ಪ್ರಾ. ಶಾಲೆ)
ಕಾರ್ಯದರ್ಶಿ: ಶ್ರೀ ಮುಜೀಬ್ (ವಿಜ್ಞಾನ ಶಿಕ್ಷಕರು, ತಾಯಲೂರು ಸರ್ಕಾರಿ ಪ್ರೌಢಶಾಲೆ)
ಉಪಾಧ್ಯಕ್ಷರು: ಡಾ. ಶಗುಫ್ತ ತಬಸ್ಸಮ್ (ತಜ್ಞ ವೈದ್ಯರು, ಮಾಲೂರು ಸಾರ್ವಜನಿಕ ಆಸ್ಪತ್ರೆ), ಶ್ರೀ ನಯಾಜ್ ಅಹಮದ್ ಬೇಗ್
ಖಜಾಂಚಿ: ಶ್ರೀ ಸೈಯದ್ ಆಸಿಫ್ ಅಹಮದ್ (ಉಪನ್ಯಾಸಕರು, ಅಲಮೀನ್ ಅನುದಾನಿತ ಕಾಲೇಜು)
ಜಂಟಿ ಕಾರ್ಯದರ್ಶಿಗಳು: ಶ್ರೀ ಜಮೀಲ್ ಅಹಮದ್ (ಸಿ.ಆರ್.ಪಿ), ಶ್ರೀ ಏಜಾಜ್ ಪಾಷ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ)
ಸಂಘಟನಾ ಕಾರ್ಯದರ್ಶಿಗಳು: ಶ್ರೀ ಖಾಸಿಂ ಅಲಿ (ಗ್ರಾಮ ಆಡಳಿತ ಅಧಿಕಾರಿ), ಶ್ರೀಮತಿ ರಿಹಾನ ಬಾನು (ಮುಖ್ಯೋಪಾಧ್ಯರು, ಪ್ರೌಢಶಾಲೆ)
ಮಾಧ್ಯಮ ಕಾರ್ಯದರ್ಶಿ: ಶ್ರೀ ನಬಿ ಸಾಬ್ (ಗ್ರಾಮ ಆಡಳಿತ ಅಧಿಕಾರಿ), ಮೊಹಮ್ಮದ್ ಅಲಿ (ಔಷಧಗಾರ, ಶ್ರೀನಿವಾಸಪುರ) – ಕಾರ್ಯಕಾರಿ ಸಮಿತಿ ಸದಸ್ಯ , ಸಯ್ಯದ್ ಅಮ್ಜದ್ ಪಾಷಾ (ತಾಂತ್ರಿಕ ಅಧಿಕಾರಿ, KOMUL, ಶ್ರೀನಿವಾಸಪುರ) – ಕಾರ್ಯಕಾರಿ ಸಮಿತಿ ಸದಸ್ಯ .
ಸಭೆಯಲ್ಲಿ ಬೆಂಗಳೂರಿನ ರಾಜ್ಯ ಸಂಘದ ಪ್ರಮುಖರಾದ ಡಾ. ಮಹಮ್ಮದ್ ಇಸ್ಮಾಯಿಲ್, ಶ್ರೀ ಸೈಯದ್ ಸಾಜಿದ್ ಹುಸೇನ್, ಶ್ರೀ ಇಶಾಕ್ ಅಹಮದ್, ಶ್ರೀ ಮಹಮ್ಮದ್ ಹುಸೇನ್ ಮುಜಾವರ್ ಹಾಗೂ ಶ್ರೀ ಯೂಸುಫ್ ಅಸ್ಲಾಂ ಉಪಸ್ಥಿತರಿದ್ದರು. ಇವರು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧಿಕೃತ ಘೋಷಣೆ ಮಾಡಿ, ಹೊಸ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿ, ಸರ್ಕಾರಿ ಹುದ್ದೆಗಳಲ್ಲಿ ನೌಕರರ ಸಬಲೀಕರಣ, ಯುವಕರಿಗೆ ಶಿಕ್ಷಣ-ಉದ್ಯೋಗಾವಕಾಶ ವಿಸ್ತರಣೆ ಮತ್ತು ಮಹಿಳಾ ಸಬಲೀಕರಣದ ಕುರಿತು ತೀವ್ರ ಚರ್ಚೆ ನಡೆಯಿತು.

