

ಮಂಗಳೂರು ; ಕಳೆದ 26 ವರ್ಷಗಳಿಂದ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಮತ್ತು ಸದ್ವಿಚಾರಗಳ ನೆಲೆಯಲ್ಲಿ ಪುಸ್ತಕ ಪ್ರಕಟನೆಗಳ ಮೂಲಕ ಸಕ್ರಿಯವಾಗಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನದ 17 ನೇ ಆವೃತ್ತಿಯ 2026ರ ವಾರ್ಷಿಕ ಕಲ್ಲಚ್ಚು ಪ್ರಶಸ್ತಿಯನ್ನು ಸಾಹಿತಿ, ಸಾಂಸ್ಕೃತಿಕ ಚಿಂತಕ ಹಾಗೂ ಜನಪದ ಮತ್ತು ವಚನ ಪರಂಪರೆಯ ಬಗ್ಗೆ ಆಗಾಧ ಅಧ್ಯಾಯನಗೈದಿರುವ ಉಮ್ಮತ್ತೂರು ರೇವಣ್ಣ ಅವರಿಗೆ ಘೋಷಿಸಲಾಗಿದ್ದು ಇದೇ ನವೆಂಬರ್ 14 ರ ಶನಿವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮೂಲತಃ ಕರ್ನಾಟಕ ಚಾಮರಾಜನಗರ ಜಿಲ್ಲೆಯವರಾಗಿರುವ ಇವರು ಪ್ರಸ್ತುತ ಸಿಂಗಾಪುರದಲ್ಲಿ ನೆಲೆಸಿದ್ದು ಅಲ್ಲಿಯ ಕನ್ನಡ ಸಂಘ ಮತ್ತು ವಾಹಿನಿ, ಅಂತರ್ಜಾಲ , ನಾಟಕ ಇತ್ಯಾದಿಗಳಲ್ಲೂ ಸಕ್ರಿಯವಾಗಿದ್ದು ತನ್ನ ಸೌಮ್ಯ ವಿಶಿಷ್ಟ ಪ್ರಬುದ್ಧ ಮಾತುಗಾರಿಕೆಯ ಮೂಲಕ ಜನಪ್ರಿಯರಾಗಿರುವರೆಂದು ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಪ್ರಕಾಶಕ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

