

ಕೋಲಾರ : ಶಾಲಾ-ಕಾಲೇಜುಗಳ ವಾಹನಗಳ ತಪಾಸಣಾ ಆಂದೋಲನದಲ್ಲಿ 177 ಕೇಸ್ ದಾಖಲಿಸಿ 9.60 ಲಕ್ಷ ರೂ ದಂಡ ಹಾಗೂ ತೆರಿಗೆಯನ್ನು ವಸೂಲಿ ಮಾಡಲಾಗಿದೆ.
ಏಪ್ರಿಲ್ 2025 ರಿಂದ ಸೆಪ್ಟೆಂಬರ್ 18ರವರೆಗೆ ಶೈಕ್ಷಣಿಕ ಸಂಸ್ಥೆಗಳ ಬಸ್ಗಳನ್ನು ತಪಾಸಣೆ ನಡೆಸಿ 18 ಸೀಸ್ ಮಾಡಲಾಗಿದ್ದು 4 ವಾಹನಗಳ ಆರ್ಸಿ ರದ್ದುಗೊಳಿಸಿ ಸ್ಮಾಪ್ ಮಾಡಲಾಗಿದೆ. ಕೋಲಾರದ ಅರ್ಕ ಶಾಲೆ 4 ಬಸ್ಗಳ ಮೇಲೆ ಮೊಕದ್ದಮೆ ಹೂಡಲಾಗಿದ್ದು ನರಸಾಪುರ ವಿದ್ಯಾನಿಕೇತನ ಶಾಲೆ ವಿರುದ್ಧ 5, ಶ್ರೀನಿವಾಸಪುರ ವೇಣು ಶಾಲೆ ವಿರುದ್ಧ 2, ರೋಣೂರು ವಿಐಪಿ ಶಾಲೆ ಮೇಲೆ 2 ಕೇಸ್, ಬೆಂಗಳೂರು ಸೆಲೆಸ್ಬಿಯನ್ ಶಾಲೆ ಎರಡು ಬಸ್ ಮೇಲೆ ಕೇಸ್ ಹಾಕಲಾಗಿದೆ. ಜಿಲ್ಲೆಯ ಪ್ರತಿಯೊಂದು ಶಾಲೆ-ಕಾಲೇಜಿಗೆ ಭೇಟಿ ನೀಡಿ ಬಸ್ಗಳನ್ನು ತಪಾಸಣೆ ನಡೆಸಿ ತೆರಿಗೆ, ವಿಮೆ, ಆರ್ಸಿ, ಎಫ್ಸಿ ಮುಂತಾದ ದಾಖಲೆಗಳನ್ನು ಪರಿಶೀಲಿಸಿ ಲೋಪ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. 15 ವರ್ಷ ಹಳತಾಗಿರುವ ಬಸ್ಗಳನ್ನು ಸ್ಥಳದಲ್ಲೇ ಸ್ಮಾಪ್ ಮಾಡಲಾಗಿದೆ. 2ನೇ ಮತ್ತು 4ನೇ ಶನಿವಾರ, ಭಾನುವಾರದಂದೂ ತಪಾಸಣಾ ಕೆಲಸ ನಡೆಸಲಾಗಿದ್ದು, ಬ್ರೇಕ್ ಇನ್ಸೆಕ್ಟರ್ ಹೇಮಂತ್ ಕುಮಾರ್, ಮಹಮ್ಮದ್ ಹುಸೇನ್ ಹಾಗೂ ಮಂಜುನಾಥ್ ಅವರು ಆಂದೋಲನದ ಸಾರಥ್ಯ ವಹಿಸಿದ್ದರೆಂದು ಆರ್ಟಿಓ ಎಂ.ವೇಣುಗೋಪಾಲ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

