Inauguration and Blessing of the Renovated St Anne Chapel, Thottam


ಮಲ್ಪೆ: ದೇವಾಲಯಗಳು ದೇವರ ಅಸ್ತಿತ್ವದ ಪವಿತ್ರ ಸ್ಥಳವಾಗಿದ್ದು ಇದರ ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಬುಧವಾರ ತೊಟ್ಟಂ ಸಂತ ಅನ್ನಮ್ಮನವರ ಚಾಪೆಲ್ ಉದ್ಘಾಟಿಸಿ ಆಶೀರ್ವಚನ ನೆರವೇರಿಸಿ ಪವಿತ್ರ ಬಲಿಪೂಜೆ ಅರ್ಪಿಸಿ ಸಂದೇಶ ನೀಡಿದರು.
ದೇವಾಲಯಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ವಿಶೇಷವಾದ ಮಹತ್ವವಿದ್ದು ದೇವರಿಗೆ ಸ್ತುತಿ ಮತ್ತು ಆರಾಧನೆ ಸಲ್ಲಿಸಲು ದೇವಾಲಯ ಸಹಕಾರಿಯಾಗುತ್ತದೆ. ಕಟ್ಟಡಗಳಿಗಿಂತಲೂ ನಮಗೆ ಅತ್ಯಾವಶ್ಯಕವಾದುದು ಆಂತರಿಕ ನಂಬಿಕೆ, ದೇವರಿಗಿರುವ ಗೌರವ ಮತ್ತು ಬಡವರನ್ನು ಗೌರವಿಸುವ ಜೀವನ ಶೈಲಿ. ಒಳಗಿನ ಭಕ್ತಿ ಇಲ್ಲದ ಹೊರಗಿನ ಆಚರಣೆಗಳಿಗೆ ಯಾವುದೇ ಅರ್ಥವಿಲ್ಲ.
ಈ ದೇವಾಲಯವು ಪ್ರಾರ್ಥನೆಗೆ, ದೈವಿಕ ಅನುಭವಕ್ಕೆ ಮತ್ತು ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸಲು ಒಂದು ಪವಿತ್ರ ಸ್ಥಳವಾಗಿರುತ್ತದೆ. ಕಲ್ಲಿನಿಂದ ನಿರ್ಮಿತ ಕಟ್ಟಡಗಳು ನಾಶವಾಗಬಹುದು; ಆದರೆ ನಮ್ಮೊಳಗಿನ ಜೀವಂತ ದೇವಾಲಯ ಸದಾಕಾಲ ಉಳಿಯುತ್ತದೆ ಎಂದರು.
ಬಲಿಪೂಜೆಯ ಬಳಿಕ ಜಪಸರ ಪ್ರಾರ್ಥನೆ ನಡೆದು ತದನಂತರ ಕಿರು ದೇವಾಲಯದಿಂದ ಮುಖ್ಯ ದೇವಾಲಯದ ವರೆಗೆ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಯಿತು. ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮದ ನಿರ್ವಹಣೆಯನ್ನು ವಂ|ವಿಲ್ಸನ್ ಡಿಸೋಜಾ ನೆರವೇರಿಸಿದರು.
ಮುಖ್ಯ ದೇವಾಲಯದ ತೆರೆದ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಚಾಪೆಲ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ , ಆರ್ಕಿಟೆಕ್ಚರ್ ಹಾಗೂ ಸಹಕರಿಸಿದವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಚರ್ಚಿನ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ ಅವರನ್ನು ಚರ್ಚಿನ ಪರವಾಗಿ ಗೌರವಿಸಲಾಯಿತು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕುಲಪತಿಗಳಾದ ವಂ| ಸ್ಟೀಫನ್ ಡಿಸೋಜಾ, ಮಾಜಿ ಶಾಸಕರಾದ ಜೆ ಆರ್ ಲೋಬೊ, ರಘುಪತಿ ಭಟ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಕ್ರೈಸ್ತ ಅಭಿವೃದ್ದಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ಮ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷರಾದ ರಮೇಶ್ ತಿಂಗಳಾಯ ಎಮ್ ಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೊ, ದಾಯ್ಜಿ ವರ್ಲ್ಡ್ ಮುಖ್ಯಸ್ಥರಾದ ವಾಲ್ಟರ್ ನಂದಳಿಕೆ, ಪ್ರಮುಖ ದಾನಿ ಓಸ್ವಲ್ಡ್ ವಾಸ್, ಪೀಟರ್ ಆಂಡ್ರೂ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ 20 ಆಯೋಗಗಳ ಸಂಚಾಲಕರಾದ ಶಾಂತಿ ಫೆರ್ನಾಂಡಿಸ್, ವಾಜ್ ಕುಟುಂಬದ ಪರವಾಗಿ ಕ್ಲಿಫರ್ಡ್ ಲೀನಾ ವಾಜ್ ಮತ್ತು ಕುಟುಂಬದವರು ಹಾಗೂ ಇತರರು ಉಪಸ್ಥೀತರಿದ್ದರು.
ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಸ್ವಾಗತಿಸಿ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ವಂದಿಸಿದರು. ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.
Inauguration and Blessing of the Renovated St Anne Chapel, Thottam
Reported by ; Archibald Furtado


The faithful of St Anne Church, Thottam, gathered in large numbers on Wednesday, 11 February 2026, to witness a historic and grace-filled moment — the Inaugural and Blessing of the Renovated St Anne Chapel, a cherished spiritual landmark of the parish. The solemn celebration was presided over by Most Rev. Dr Gerald Isaac Lobo, Bishop of Udupi Diocese, in the presence of clergy, religious, dignitaries and parishioners.
The programme began at 4.15 p.m. with the ceremonial welcome of the Bishop and invited dignitaries. At 4.30 p.m., the Bishop solemnly inaugurated and blessed the renovated chapel, marking a significant milestone in the faith journey of the parish community.
The event was followed by a short break and refreshments, after which the faithful gathered to recite the Holy Rosary, appropriately on the Feast of Our Lady of Lourdes, invoking the intercession of the Blessed Virgin Mary.
A candlelight procession then moved reverently from the chapel to the main church, symbolising the living continuity of faith between the past and the present. The evening continued with felicitation of benefactors and an episcopal message by the Bishop, who appreciated the parish’s dedication to preserving its spiritual heritage while strengthening community life. The celebration concluded with a fellowship dinner, fostering unity and joy among all present.
Brief background of this St Anne’s Chapel:
The St Anne Chapel holds a special place in the history of Thottam. Dedicated to St Anne, the mother of the Blessed Virgin Mary, the chapel stands as a witness to the deep-rooted faith of earlier generations. It was originally constructed in ancient Thottam by the Vaz family, prominent businessmen who had trade relations with the Portuguese and others. Their generosity and devotion led to the establishment of this sacred space long before the present parish church came into existence.
Records state, the chapel construction started in 1885, however it took 20 years i.e. on 24th May, 1905 got inaugurated with Holy Mass celebration by Very Rev Fr Aloysius S.L. Fernandes Vicar of Milagres Church and others. The property was donated by Minguel Vaz.
Indeed, the chapel predates the spacious and artistic St Anne Church that was later established on 19th May in 1933, as an independent parish in a make shift thatched house nearly a century ago, and under the initiative and later under the supervision of Msgr Denis Jerome D’Souza, then Vicar Forane of the Kallianpur Varado, in1938 a permanent tiled structure was established. The same Church was beautifully renovated under Rev Fr Francis Cornelio and blessed on 28th May, 2019.
Today it is one of the fast growing vibrant Church in the Diocese with Rev Fr Denis DSa as Vicar well-known for his preaching with more than 330 families and 1300+ Catholics, also houses St Anne’s Convent and a Primary School.
Coming to the renovated Chapel, located a mile away, over the decades, it has continued to serve as a cherished place of prayer and devotion for the local faithful, with Holy Mass on Sunday.
The recent renovation has carefully preserved the chapel’s historical and spiritual character while enhancing its beauty and functionality for present and future generations. The successful completion of this project reflects the dedication of the Parish Priest, Rev Fr Denis DSa the Parish Pastoral and Finance Councils, the Vaz family, generous donors, and the wholehearted cooperation of parishioners and well-wishers.
The inauguration and blessing of the renovated chapel marked not only the restoration of a century old historical structure but also a renewal of faith and gratitude.
As the Bishop of Udupi Rt Rev Dr Gerald Issac Lobo reminded in his homily refering Psalmist which reminds us, “Unless the Lord builds the house, those who build it labour in vain” (Psalm 127:1). With hearts filled with thanksgiving, the faithful of St Anne Church look forward to the ‘Newly Blessed Chapel’ continuing to be a beacon of prayer, heritage and devotion for many generations to come, a unique place known for interfaith harmony and brotherhood.








































