

ಕುಂದಾಪುರ,ನ. 22: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ನ. 21 ರಂದು ಶಾಲಾ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ವಾರ್ಷೀಕೋತ್ಸವದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ।ಪೌಲ್ ರೇಗೊ ‘ಪ್ರಸಕ್ತ ವರ್ಷದಲ್ಲಿ ಈ ಶಾಲೆ ಸಾಧಿಸಿದ ಪ್ರಗತಿ, ಮಕ್ಕಳು ತೋರಿಸಿದ ಪ್ರತಿಭೆಗಳು, ಶಿಕ್ಷಕರು ನೀಡಿದ ನಿಸ್ವಾರ್ಥ ಸೇವೆ ಅಮೂಲ್ಯವಾಗಿದೆ, ಇದರಿಂದ ಈ ಶಾಲೆ ಸತತ 8 ವರ್ಷಗಳಿಂದ ಎಸ್.ಎಸ್.ಎಲ್.ಸಿ. ಯಲ್ಲಿ ಶೇ. 100 ಫಲಿತಾಂಶ ಪಡೆದಿದೆ. ಶಿಕ್ಶಣ ಅಂದರೆ ಜ್ಞಾನ ಪಡೆಯುವುದು, ಪುಸ್ತಕದ ಜ್ಞಾನ ಬಹು ಅಮುಲ್ಯ, ಶಿಕ್ಷಣಕ್ಕೆ ನಮ್ಮ ಜೀವನವನ್ನೆ ರೂಪಿಸುವ ಶಕ್ತಿ ಇದೆ. ವಿದ್ಯಾರ್ಥಿಗಳು, ಜ್ಞಾನ, ಶಿಸ್ತು, ಮಾನವೀಯತೆ, ವಾತ್ಸಲ್ಯ, ನಿಷ್ಠೆಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಮುಖ್ಯ ಅತಿಥಿ ಡ್ಯುರೊಟಾಪ್ ಕನ್ಸ್ಟ್ರಕ್ಶನ್ ಕೆಮಿಕಲ್ ಕಂಪೆನಿಯ ವ್ಯವಸ್ಥಾಪಕರಾದ ಆಲ್ವಿನ್ ಕ್ವಾಡರ್ಸ್ “ಕೇವಲ ಶಿಕ್ಷಣ ಪಡೆದರೆ ಸಾಲದು, ಜಾಣ್ಮೆಯೂ ಕಲಿತುಕೊಳ್ಳಬೇಕು, ಕಡಿಮೆ ಓದಿದವರೂ ಕೂಡ, ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿ ಹಲವರಿಗೆ ಉದ್ಯೋಗ ನೀಡಿ, ಜೀವನದಲ್ಲಿ ಸಫಲಾಗಿದ್ದಾರೆ’ ಎಂದು ತಿಳಿಸಿದರು. ಮತ್ತೋರ್ವ ಅತಿಥಿ ಎಂಜಿನೀಯರ್ ಕ್ರೀಡಾಪಟು, ನಾಟ್ಯಗಾರ್ತಿ ನಿಖಿತಾ ನಾರಯಣ ಖಾರ್ವಿ, ಶಿಕ್ಷಣದ ಜೊತೆ ಕೆಲವು, ಕ್ರೀಡೆ, ನಾಟ್ಯ, ನಟನೆ ಇಂತಹದಾದ ಯಾವುದಾದರು ಹವ್ಯಾಸಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ತಿಳಿಸಿದರು.
ವಂ।ಪೌಲ್ ರೇಗೊ ವೇದಿಕೆಯಲ್ಲಿದ್ದ ಅತಿಥಿಗಳನ್ನು ಸನ್ಮಾನಿಸಿದರು. ಹಾಗೇ ಅಥಿಗಳ ಜೊತೆ ಗೌರವಾನ್ವಿತ ಅತಿಥಿಯಾದ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿ. ಸುಪ್ರಿಯಾ ಇವರುಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು, ಅಧಿಕ ಅಂಕ ಗಳಿಸಿದವರನ್ನು ಕ್ರೀಡೆ ಮತ್ತು ವಿವಿಧ ರೀತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ನಾನಿಸಲಾಯಿತು. ಶಿಕ್ಷಕೇತರ ಸಿಬಂದಿ, ಶಾಲಾ ವಾಹನ ಚಾಲಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಸೇವೆ ನೀಡುವ ಆಟೋ ರಿಕ್ಷಾ ಚಾಲಕರಿಗೆ ಗೌರವಿಸಲಾಯಿತು
ವಿದ್ಯಾರ್ಥಿಗಳು ಕಿರು ನಾಟಕ ಕುಣಿತ, ಯಕ್ಷಗಾನ, ನ್ರತ್ಯಗಳನ್ನು ಪ್ರದರ್ಶಿಸಿದರು. ವೇದಿಕೆ ಕಾರ್ಯಕ್ರಮವನ್ನು ಶಿಕ್ಷಕರು, ಶಿಕ್ಷಕೇತರ ಸಿಬಂದಿ ನಿರ್ವಹಿಸಿದರು ಮನೋರಂಜನೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ವೇದಿಕೆಯಲ್ಲಿ ಶಾಲಾ ನಾಯಕಿ ಪರ್ಲ್ ಆಲೀನಾ ಬಾರೆಟ್ಟೊ ಉಪಸ್ಥಿತರಿದ್ದರು.
ಶಿಕ್ಷಕಿ ಸಿಸ್ಟರ್ ಜೂಲಿಯೆಟ್ ರೆಬೆಲ್ಲೊ ದಾನಿಗಳ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಪವರ್ ಪಾಂಯ್ಟ್ ಮೂಲಕ ಶಾಲಾ ವರದಿಯನ್ನು ಪ್ರಸ್ತೂತ ಪಡಿಸಿ, ವಂದಿಸಿದರು.













































































































