HOLY ROSARY CHURCH, KUNDAPUR – 450 th JUBILEE SOUVENIR 2021

ವಿಶ್ವ ಹ್ಯಾಪಿನೆಸ್ಸ್‌ ವರದಿ: ಭಾರತಕ್ಕೆ 146 ರಲ್ಲಿ 136ನೇ ರ್‍ಯಾಂಕ್‌‌, ಪಾಕಿಸ್ತಾನ ಕೂಡ ಭಾರತಕ್ಕಿಂತ ಉತ್ತಮ

JANANUDI.COM NETWORK

ಮಾರ್ಚ್ 20ರಂದು ‘ಅಂತಾರಾಷ್ಟ್ರೀಯ ಹ್ಯಾಪಿನೆಸ್‌ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಇದರ ಕೆಲವೇ ದಿನಗಳ ಮೊದಲು ವಿಶ್ವ ಸಂಸ್ಥೆಯು ತನ್ನ 10ನೇ ವರ್ಷದ ‘ವಿಶ್ವ ಹ್ಯಾಪಿನೆಸ್ಸ್‌ ವರದಿ’ಯನ್ನು ಬಿಡುಗಡೆ ಮಾಡಿದ್ದು 146 ದೇಶಗಳ ಈ ಪಟ್ಟಿಯಲ್ಲಿ ಭಾರತವು 136ನೇ ಸ್ಥಾನವನ್ನು ಪಡೆದಿದೆ. ಪಟ್ಟಿಯಲ್ಲಿ ಕೊನೆಯ ದೇಶವಾಗಿ ಅಪಘಾನಿಸ್ತಾನ 146 ಸ್ಥಾನ ಪಡೆದು ವಿಶ್ವದ ಅತೃಪ್ತ ದೇಶವಾಗಿ ಹೊಮ್ಮಿದೆ.
ಉಳಿದಂತೆ ಭಾರತದ ನೆರೆಯ ದೇಶಗಳಾದ ಚೀನಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್‌‌ ಮತ್ತು ಶ್ರೀಲಂಕಾ ದೇಶಗಳು ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೆ ಇವೆ.
ಫಿನ್‌ಲ್ಯಾಂಡ್‌ ದೇಶವು ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಸತತ ಐದನೇ ವರ್ಷವೂ ಹೆಸರಿಸಲ್ಪಟ್ಟಿದೆ.. ಈ ಪಟ್ಟಿಯಲ್ಲಿ ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಐಸ್‌ಲ್ಯಾಂಡ್‌, ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ ಇವೆ.ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ದೇಶಗಳ ಜಾಗತಿಕ ಸಂತೋಷದ ಶ್ರೇಯಾಂಕವನ್ನು ಹೊಂದಿರುವ ‘ವರ್ಲ್ಡ್ ಹ್ಯಾಪಿನೆಸ್ ವರದಿ’ಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್‌ವರ್ಕ್‌ನಿಂದ ಪ್ರತಿ ವರ್ಷ ಬಿಡುಗಡೆಯಾಗುತ್ತದೆ.
“ದೇಶವೊಂದರ ಸರ್ಕಾರಗಳು ತಮ್ಮ ಜನರ ಮೇಲೆ ಹೇಗೆ ಕಾಳಜಿ ವಹಿಸುತ್ತವೆ ಎಂಬುದರ ಮೇಲೆ ದೇಶಗಳು ರ್‍ಯಾಂಕಿಂಗ್ ಪಡೆಯುತ್ತದೆ. ನಿರ್ದಿಷ್ಟ ದೇಶದ ಜನರ ಸಂತೃಪ್ತಿಯ ಜೀವನ ಆ ದೇಶದ ಉನ್ನತ ರೇಟಿಂಗ್‌ಗಳಿಗೆ ಕಾರಣವಾಗುತ್ತದೆ” ಎಂದು ಆಲ್ಟೊ ವಿಶ್ವವಿದ್ಯಾಲಯದ ತಜ್ಞ ಫ್ರಾಂಕ್ ಮಾರ್ಟೆಲಾ ವಿವರಿಸುತ್ತಾರೆ.
ಸಂಖ್ಯಾಶಾಸ್ತ್ರಜ್ಞರು ಗ್ಯಾಲಪ್‌ ವಲ್ಡ್‌ ಪೋಲ್‌ ಮತ್ತು ತಲವಾರು GDP, ಜೀವಿತಾವಧಿ, ಆರೋಗ್ಯಕರ ಜೀವಿತಾವಧಿ, ಭ್ರಷ್ಟಾಚಾರದ ಗ್ರಹಿಕೆಗಳು, ಉದಾರತೆ, ಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಆರೋಗ್ಯಕರ ಜೀವಿತಾವಧಿ, ಸಾಮಾಜಿಕ ಬೆಂಬಲ ಅಂಶಗಳ ಡೇಟಾದ ಮೇಲೆ ಶ್ರೇಯಾಂಕವನ್ನು ಆಧರಿಸಿ ಈ ವರದಿಯನ್ನು ತಯಾರಿಸುತ್ತಾರೆ ಎಂದು ತಿಳಿದು ಬಂದಿದೆ.

15 ಸಾವಿರ ಶಿಕ್ಷಕರ ನೇಮಾಕಾತಿ: ವಿವರಣೆ ನೀಡಿದ ಸಚಿವ ಬಿ.ಸಿ.ನಾಗೇಶ್

JANANUDI.COM NETWORK

ಬೆ೦ಗಳೂರು: 15000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.
ಬೆ೦ಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1-8ನೇ ತರಗತಿ ಶಾಲೆಗಳಲ್ಲಿ 36,000 ಶಿಕ್ಷಕರ ಕೂರತೆಯಿದೆ. ಅದರಲ್ಲಿ 21 ಸಾವಿರ ಗಣಿತ ಶಿಕ್ಷಕರ ಕೊರತೆ ಇದೆ ಎಂದು ತಿಳಿಸುತ್ತಾ, ಹೀಗಾಗಿ ಉತ್ತಮ ಗುಣಮಟ್ಟದ ಶಿಕ್ಷಣಕಕ್ಕಾಗಿ ಶಿಕ್ಷಕರ ನೇಮಕಾತಿಗೆ ಇಲಾಖೆ ಮುಂದಾಗಿದೆ ಎ೦ದರು.
ಹೈದರಾಬಾದ್‌-ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದ್ದು, ಉಳಿದೆಡೆ. 10 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧರಿಸಲಾಗಿದೆ. ಗಣಿತ ಶಿಕ್ಷಕರ ನೇಮಕಾತಿಗಾಗಿ ಮಾರ್ಚ್‌ 23ರರಿ೦ದ ಆನ್‌ ಲೈನ್‌ ನಲ್ಲಿ ಅರ್ಜಿಗೆ ಅವಕಾಶ ನೀಡಲಾಗಿದೆ. ಏಪ್ರಿಲ್‌ 23 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಮೇ21 ಹಾಗೂ 22ರಂದು ಶಿಕ್ಷಕರಿಗೆ ಪರೀಕ್ಷೆ ನಿಗದಿಯಾಗಿದೆ. ಈ ಬಾರಿ ಎ೦ಜಿನಿಯರಿ೦ಗ ಪದವಿಧರರು ಕೂಡ ಗಣಿತ ಶಿಕ್ಷಕರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆ 400 ಅ೦ಕಗಳಲ್ಲಿ ನಡೆಯಲಿದ್ದು, ಮೊದಲ ಪತ್ರಿಕೆ ಜನರಲ್‌ ಪೇಪರ್‌-150 ಅಂಕ ನಿಗದಿಯಾಗಿದೆ. 2ನೇ ಪತ್ರಿಕೆ ವಿಷಯವಾರು- 150 ಮಾರ್ಕ್‌ ಇದ್ದು. ಪಾಸ್‌ ಆಗಲು 45 ಮಾರ್ಕ್ಸ್‌ ಕಡ್ಡಾಯ. 3 ನೇ ಪತ್ರಿಕೆ ಭಾಷಾವಾರು ಪರೀಕ್ಷೆಯಾಗಿದ್ದು,100 ಅಂಕಗಳಿಗೆ ಪರೀಕ್ಷೆ ನಡಯಲಿದೆ.
ಪಾಸ್‌ ಆಗಲು 50 ಮಾರ್ಕ್ಸ್‌ ಕಡ್ಡಾಯವಾಗಿದೆ ಎ೦ದು ವಿವರಣೆ ನೀಡಿದರು.

ಹಿಂದೂ ಗೆಳೆಯನಿಗೆ,ಮುಸ್ಲಿಂ ಗೆಳೆಯ ಕಿಡ್ನಿ ದಾನ – ದ್ವೇಷ ಬಿತ್ತುವ ಜನರು ಇಂತಹ ಮಾನವೀಯತೆಯಿಂದ ಪಾಠ ಕಲಿಯಬೇಕು

JANANUDI.COM NETWORK

ಕೋಲ್ಕತ್ತಾ: ಭಾರರದಲ್ಲಿ ಹಿಂದು ಮುಸ್ಲಿಂ ಮಧ್ಯೆ ವೈಷ್ಯಮ್ಯ ಹೆಚ್ಚಿಸುವುದರಲ್ಲೆ ಕೆಲವರು ಮಗ್ನರಾಗಿರುವಾಗ ಒರ್ವ ಮುಸ್ಲಿಂ ವ್ಯಕ್ತಿ ತನ್ನ ಹಿಂದೂ ಸ್ನೇಹಿತನ ಮೇಲಿನ ಪ್ರೀತಿಯ್ಂದಾಗಿ ಆತನನ್ನು ಉಳಿಸಿ ಅವನ ಸಂಸಾರ ರಕ್ಷಣೆ ಮಾಡಲಿಕ್ಕಾಗಿ ಕಿಡ್ನಿ ದಾನ ಮಾಡಲು ಮುಂದಾಗಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದಿದೆ.
ಹಸ್ಲು ಮೊಹಮ್ಮದ್ ಎಂಬವರು ತನ್ನ ಅಂಗಾಂಗ ದಾನಕ್ಕೆ ಅನುಮೋದನೆ ಕೋರಿ ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರನು ತನ್ನ ಮೂತ್ರಪಿಂಡವನ್ನು ದಾನ ಮಾಡುವ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸಿದೆ. ತನಿಖೆ ವೇಳೆ ಇದು ಹಣಕ್ಕೆ ನಡೆಯುವ ವಿನಿಮಯವೇ ಎಂಬ ಬಗ್ಗೆ ಪರಿಶೀಲಿಸಲಾಗಿದೆ. ಆದರೆ ಯಾವುದೇ ಹಣಕ್ಕೆ ಅಲ್ಲ ಬದಲಾಗಿ ಸ್ನೇಹ ಸಹೋದರತ್ವಕ್ಕಾಗಿ ದಾನ ಮಾಡುವುದು ತಿಳಿದು ಬಂದಿದೆ.ಹಸ್ಲು ಮೊಹಮ್ಮದ್ ಮತ್ತು ಅನಾರೋಗ್ಯ ಪೀಡಿತ ಅಚಿಂತ್ಯ ಬಿಸ್ವಾಸ್ ಆರು ವರ್ಷಗಳ ಹಿಂದೆ ಸ್ನೇಹಿತರಾಗಿದ್ದರು. ಕಂಪನಿಯಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ಎರಡು ವರ್ಷಗಳ ಹಿಂದೆ ಹಸ್ಲು ಆ ಕೆಲಸ ಬಿಟ್ಟು ಸ್ವಂತ ಉದ್ಯಮ ಆರಂಭಿಸಿದರು.
ಈ ಘಟನೆಕುರಿತು ಮಾತನಾಡಿದ ಹಸ್ಲು, ಅಚಿಂತ್ಯ ಅವರಿಗೆ ತುರ್ತು ಕಸಿ ಅಗತ್ಯವಿದೆ ಎಂದು ಕೇಳಿದಾಗ, ನನ್ನ ಒಂದು ಮೂತ್ರಪಿಂಡವನ್ನು ಅವರಿಗೆ ದಾನ ಮಾಡಲು ನಿರ್ಧರಿಸಿದೆ. ಇದನ್ನು ಮಾಡುವುದರಿಂದ ನಾನು ಸಾಯುವುದಿಲ್ಲ ಆದರೆ ಅಚಿಂತ್ಯನಿಗೆ ಖಂಡಿತವಾಗಿಯೂ ಹೊಸ ಜೀವನ ಸಿಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಅಚಿಂತ್ಯ ಮಾತನಾಡಿ, ಇಷ್ಟು ದೊಡ್ಡ ತ್ಯಾಗ ಮಾಡಲು ಹಸ್ಲು ನಿರ್ಧರಿಸಿದ್ದು. ನಾನು ಮತ್ತು ನನ್ನ ಕುಟುಂಬ ಯಾವಾಗಲೂ ಅವರಿಗೆ ಕೃತಜ್ಞರಾಗಿರುತ್ತೇವೆ. ಅವನು ಮುಂದೆ ಬರದೇ ಇದ್ದಿದ್ದರೆ ನನ್ನ ಸಾವಿನ ನಂತರ ನನ್ನ ಸಂಸಾರವೇ ನಾಶವಾಗುತ್ತಿತ್ತು ಎಂದು ಅಚಿಂತ್ಯ ಹೇಳಿದ್ದಾರೆ.
ದ್ವೇಷ ಬಿತ್ತುವ ಜನರು ಇಂತಹ ಮಾನವೀಯತೆಯಿಂದ ಪಾಠ ಕಲಿಯಬೇಕು

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಆರ್ಥೊಡಾಕ್ಸ್ ಪಾದ್ರಿಯ ಬಂಧನ

JANANUDI.COM NETWORK

ಕೇರಳದ, ಮಲಂಕರ ಸಿರಿಯನ್ ಆರ್ಥೊಡಾಕ್ಸ್ ಚರ್ಚಿನ ಪಾದ್ರಿ ಪಾಂಡ್ಸನ್ ಜಾನ್ ಎಂಬವರು ಅಪ್ರಾಪ್ತ ಬಾಲಕಿಗೆ ಲೈಗಿಂಕ ಕಿರುಕುಳ ನೀಡಿದ ಆರೋಪದಲ್ಲಿ ಅವರನ್ನು ಪೊಲೀಸರು ಬಂದಿಸಿದ್ದಾರೆ. ಒಮ್ಮೆ ಚರ್ಚ್‌ನಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡುವಾಗ, ಮತ್ತೊಮ್ಮೆ ಆಕೆಯ ಸ್ವಂತ ಮನೆಯಲ್ಲಿ ಲೈಗಿಂಕ ಕಿರುಕುಳ ನೀಡಿದ್ದಾಗಿ ನಿನ್ನೆ ಗುರುವಾರ, ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪಾದ್ರಿಯನ್ನು ಬಂಧಿಸಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯ ಕೂಡಲ್‌ನಲ್ಲಿರುವ ಆರ್ಥೊಡಾಕ್ಸ್ ಚರ್ಚ್‌ನ ಪಾದ್ರಿ, 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. 17 ವರ್ಷದ ಹುಡುಗಿಯನ್ನು ಕೌನ್ಸೆಲಿಂಗ್‌ಗಾಗಿ ತನ್ನ ಆರೈಕೆಯಲ್ಲಿ ಬಿಟ್ಟಾಗ ಪಾದ್ರಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಸಂತ್ರಸ್ತೆಯ ಪೋಷಕರು ಆಕೆಗೆ ಶಿಕ್ಷಣ ಕಲಿಯುವ ಬಗ್ಗೆ ತೊಂದರೆ ಎದುರಿಸುತ್ತಿರುವ ಕಾರಣ ಆಕೆಗೆ ಕೌನ್ಸೆಲಿಂಗ್‌ಗಾಗಿ ಪಾದ್ರಿಯ ಸಹಾಯ ಕೇಳಿದ್ದರು.
ಪೊಲೀಸ್ ದೂರಿನ ಪ್ರಕಾರ, ಆರೋಪಿಯು ಮಾರ್ಚ್ 12 ಮತ್ತು 13 ರಂದು ಎರಡು ವಿಭಿನ್ನ ಸ್ಥಳಗಳಲ್ಲಿ ಅವಳೊಂದಿಗೆ ಎರಡು ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ಮೊದಲಿಗೆ, ಪಾದ್ರಿ ಸಂತ್ರಸ್ತೆಯನ್ನು ಚರ್ಚ್‌ನಲ್ಲಿ ಲೈಂಗಿಕವಾಗಿ ನಿಂದಿಸಿದ್ದಾನೆ. ಘಟನೆಯ ನಂತರ, ಬಾಲಕಿ ಮರುದಿನ ಚರ್ಚ್‌ಗೆ ಹೋಗಲು ನಿರಾಕರಿಸಿದಳು. ಆದರೆ, ಅರ್ಚಕನೇ ಆಕೆಯ ಮನೆಗೆ ತೆರಳಿ ಬಾಲಕಿಯನ್ನು ಕೋಣೆಯೊಳಗೆ ಕರೆದೊಯ್ದು ಬಾಗಿಲು ಮುಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ

ಈ ವರ್ಷದ ಮೊದಲ ಚಂಡಮಾರುತ “ಅಸಾನಿ”ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆ

JANANUDI.COM NETWORK

ದೆಹಲಿ. 17:ಈ ವರ್ಷದ ಮೊದಲ ಅಸಾನಿ ಹೆಸರಿನ ಚಂಡಮಾರುತ: 2022 ರ ಮೊದಲ ಚಂಡಮಾರುತ, ಮಾರ್ಚ್ 21 ರಂದು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಮಾನ ಇಲಾಖೆ ತಿಳಿಸಿದೆ.
ಅಸಾನಿ ಚಂಡಮಾರುತ, 2022 ರ ವರ್ಷದ ಮೊದಲ ಚಂಡಮಾರುತವಾಗಿದ್ದು, ಮಾರ್ಚ್ 21, 2022 ರಂದು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಅಂಡಮಾನ್ ನಿಕೋಬಾರ್ ಅನ್ನು ಹೊಡೆದ ನಂತರ, ಅಸಾನಿ ಚಂಡಮಾರುತವು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕಡೆಗೆ ಚಲಿಸುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಬಂಗಾಳಕೊಲ್ಲಿಯ ಆಗ್ನೇಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ಎರ್ಪಟ್ಟು ಮಾರ್ಚ್ 21 ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.
ಮಾರ್ಚ್ 15 ರಂದು ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶ (ಎಲ್‌ಪಿಎ) ಪೂರ್ವ-ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಮತ್ತು ಮಾರ್ಚ್ 19 ರ ವೇಳೆಗೆ ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಡುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪೋಲ್ಯಾಂಡಿನ ಕರೋಲಿನಾ ಬೈಲಾವ್ಸ್ಕಾ 2021ರ ವಿಶ್ವಸು೦ದರಿ, ಭಾರತೀಯ ಮೂಲದ ಶ್ರೀ ಸೈನಿ ಮೂದಲ ರನ್ನರ್‌

JANANUDI.COM NETWORK

ಕರೋಲಿನಾ ಬೈಲಾವ್ಸ್ಕಾ


ಪೋರ್ಟಾರೀಕೊ: 2021ರ ವಿಶ್ವಸು೦ದರಿ ಪಟ್ಟ ಪೋಲ್ಯಾ೦ಡ್‌ ದೇಶದ ಕರೋಲಿನಾ ಬೈಲಾವ್ಸ್ಕಾ ಎಂಬ ಬೆಡಗಿಗೆ ದೊರಕಿದೆ.
ಪೋರ್ಟಾರೀಕೊ ದಲ್ಲಿ ಶುಕ್ರವಾರ ನಡೆದಿರುವ ಪ್ರಶಸ್ತಿ ಪ್ರದಾನ ಸಮಾರ೦ಭದಲ್ಲಿ 2019ನೇ ಸಾಲಿನ ವಿಶ್ವಸು೦ದರಿ ಜಮೈಕಾದ ಟೋನಿ ಅ್ಯನ್‌ ಸಿ೦ಗ್‌ ಪೋಲ್ಯಾ೦ಡ್‌ ನ ಕರೋಲಿನಾ ಬಿಲಾವಸ್ಥ್‌ ಗೆ ವಿಶ್ವ ಸುಂದರಿ ಕಿರೀಟ ತೊಡಿಸಿದ್ದಾರೆ.

ಶ್ರೀ ಸೈನಿ


ಈ ವಿಶ್ವಸು೦ದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕಾ ಪ್ರಜೆಯಾದ ಶ್ರೀ ಸೈನಿ ಮೂದಲ ರನ್ನರ್‌
ಅಪ್‌ ಆಗಿ ಹೊರಹೊಮ್ಮಿದ್ದಾರೆ. ಕೋಟ್‌ ಡಿ ಐವರಿಯ ಒಲಿವಿಯಾ ಯೇಸ್‌ ಎರಡನೇ ರನ್ನರ್‌ ಅಪ್‌
ಪ್ರಶಸ್ತಿಗೆ ಭಾಜನರಾಗಿರುವುದಾಗಿ ವರದಿ ತಿಳಿಸಿದೆ.

ಬರೇ ಐದು ನಿಮಿಷಗಳ ಚಾರ್ಜ್‌ ನಲ್ಲಿ 650 ಕಿ.ಮೀ. ಓಡಬಲ್ಲದು ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ

JANANUDI.COM NETWORK


ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಆಧಾರಿತ ಎಲೆಕ್ಟ್ರಿಕ್ ಕಾರು ಟೊಯೊಟಾ ಮಿರಾಯ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅನಾವರಣಗೊಳಿಸಿದರು.
ಟೊಯೊಟಾ ಕಿರ್ಲೋಸ್ಕರ್ ಮೋಟರ್ ಒಂದೇ ಚಾರ್ಜ್‌ನಲ್ಲಿ 650 ಕಿ.ಮೀ. ದೂರವನ್ನು ಕ್ರಮಿಸುವ ವಾಹನವನ್ನು ನಿರ್ಮಿಸಿದೆ. ಚಾರ್ಜ್ ಮಾಡಲು ಐದು ನಿಮಿಷಗಳು ಸಾಕು. ಈ ವಾಹನವು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ನ ಭಾಗವಾಗಿದೆ .
ಮಿರೈ ಹೈಡ್ರೋಜನ್ ಇಂಧನದಿಂದ ಇದು ಚಲಿಸುತ್ತದೆ. ವಿದ್ಯುತ್ ಉತ್ಪಾದಿಸಲು ವಾಹನವು ಹೈಡ್ರೋಜನ್ ಮತ್ತು ಆಮ್ಲಜನಕದ ಸಂಯೋಜನೆಯಿಂದ ಚಾಲಿತವಾಗಿದೆ. ಈ ವಾಹನವು ಹೆಚ್ಚಿನ ಒತ್ತಡದ ಹೈಡ್ರೋಜನ್ ಇಂಧನ ಟ್ಯಾಂಕ್‌ನಿಂದ ಚಾಲಿತವಾಗಿದೆ .ಈ ವಾಹನಕ್ಕೆ ಬಳಸಲಾದ ಬ್ಯಾಟರಿಯು ಸಾಮಾನ್ಯ ಎಲೆಕ್ಟ್ರಿಕ್ ವಾಹನಗಳಲ್ಲಿ ಇರುವ ಬ್ಯಾಟರಿಗಿಂತ 30 ಪಟ್ಟು ಚಿಕ್ಕದಾಗಿದೆ .
ಟೊಯೊಟಾದ ಹೈಡ್ರೋಜನ್ ಫ್ಯೂಲ್ ಸೆಲ್ ಮಿರಾಯ್ ವಾಹನವು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು ಆದರೆ, ಟೊಯೊಟಾ ಈ ವಾಹನದ ಬೆಲೆಯನ್ನು ಬಹಿರಂಗಪಡಿಸಿಲ್ಲ.ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುವ ಬಗ್ಗೆ ತಯಾರಕರು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.

ಅಪ್ರತಿಮ ನಟ ಕುಂಭಾಶಿ ರಾಮಚಂದ್ರ (ಬೆನಕ) ಆಚಾರ್ಯ ನಿಧನ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರದ ಪ್ರಸಿದ್ಧ ಚೇತನಾ ಕಲಾರಂಗದ ಸಕ್ರಿಯ ಸದಸ್ಯ, ಅಪ್ರತಿಮ ನಾಟಕ ಕಲಾವಿದ ರಾಮಚಂದ್ರ (ಬೆನಕ) ಆಚಾರ್ಯ (60) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಕುಂಭಾಶಿಯ ನಾರಾಯಣ ಆಚಾರ್ಯ – ಸತ್ಯಮ್ಮ ದಂಪತಿಯ ಪುತ್ರನಾದ ರಾಮಚಂದ್ರ ಆಚಾರ್ಯ ಸೆಂಟ್ರಿಂಗ್ ಮತ್ತು ಮರಗೆಲಸಗಳನ್ನು ಮಾಡುತ್ತಿದ್ದರು. ಕೋಟೇಶ್ವರದ ಚೇತನಾ ಕಲಾರಂಗದ ಸದಸ್ಯನಾಗಿ, ಸಂಸ್ಥೆಯ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ಪ್ರಸಿದ್ಧ ನಿರ್ದೇಶಕರಾದ ಪ್ರಭಾಕರ ಐತಾಳ, ವಾದಿರಾಜ ತವಳ, ವಾಸುದೇವ ಶೆಟ್ಟಿಗಾರ್, ಗಣೇಶ್ ಐತಾಳರ ನಿರ್ದೇಶನದ ಕುರಿದೊಡ್ಡಿ ಕುರುಕ್ಷೇತ್ರ, ಚೋರ ಚರಣದಾಸ, ಬಾವಿ ಕಳೆದಿದೆ, ಬೆನಕನ ಕೆರೆ ಮೊದಲಾದ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ಬೆನಕನ ಕೆರೆ ನಾಟಕದ ಬೆನಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅದ್ಭುತ ನಟನೆಯ ನಂತರ, ಆ ಪಾತ್ರದ ‘ಬೆನಕ’ ಎಂಬ ಹೆಸರು ಇವರಿಗೇ ಅಂಟಿಕೊಂಡು ಬೆನಕ ಆಚಾರ್ಯ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯತೊಡಗಿದರು. ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪರು ನಿರ್ಮಿಸಿ ನಿರ್ದೇಶಿಸಿದ್ದ ಕುಂದಗನ್ನಡದ ಟೆಲಿ ಧಾರಾವಾಹಿ “ಇದೆಂತಾ ಕತಿ ಮಾರ್ರೆ” ಯಲ್ಲಿ ಕುಡುಕನ ಪಾತ್ರ ನಿರ್ವಹಿಸಿದ ಆಚಾರ್ಯರು, ಕುಡಿದುಕೊಂಡು ಮಧ್ಯರಸ್ತೆಯಲ್ಲಿ ನಡೆಯುವುದರಿಂದಲೇ ಅದಕ್ಕೆ ‘ಮದ್ಯಪಾನ’ ಎನ್ನುವುದು ಎಂದು ಪೊಲೀಸರಿಗೇ ಆವಾಜ್ ಹಾಕಿದ್ದನ್ನು ವೀಕ್ಷಕರು ಸದಾ ಸ್ಮರಿಸಿಕೊಂಡು ತಮಾಷೆ ಮಾಡುವುದಿದೆ.
ರಾಮಚಂದ್ರ ಆಚಾರ್ಯರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಆಚಾರ್ಯರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚೇತನಾ ಕಲಾರಂಗದ ಅಧ್ಯಕ್ಷ, ಶ್ರೀನಿವಾಸ ಕುಂದರ್, ಗೌರವಾಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಐತಾಳ್, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಜೋಗಿ, ಬಿ. ಎಂ. ಗುರುರಾಜ ರಾವ್ ಹಾಗೂ ಅಪಾರ ಅಭಿಮಾನಿಗಳು ಕುಂಭಾಶಿಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಸಂಸ್ಥೆಯ ಇನ್ನೋರ್ವ ಗೌರವಾಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಯುವಶಕ್ತಿ ಮಿತ್ರ ಮ೦ಡಲ ಹೆಗಾರ್‌ಬೈಲು ವಕ್ವಾಡಿ, ಬೆಳ್ಳಿ ಹಬ್ಬದ ಪ್ರಯುಕ್ತಯುವ ಸ೦ಭ್ರಮ-2022

JANANUDI.COM NETWORK

ಕು೦ದಾಪುರ: ಯುವಶಕ್ತಿ ಮಿತ್ರ ಮ೦ಡಲ ಹೆಗಾರ್‌ಬೈಲು, ವಕ್ಕಾಡಿ ಇವರ ಬೆಳ್ಳಿ ಹಬ್ಬದ ಪ್ರಯುಕ್ತ ಯುವ
ಸ೦ಭ್ರಮ-2022 ಮಾ.19ರ೦ದು ಶನಿವಾರ ವಕ್ವಾಡಿಯ ಯುವಶಕ್ತಿ ವೇದಿಕೆ, ಪ೦ಚಾಯತ್‌ ವಠಾರ ಇಲ್ಲಿ
ನಡೆಯಲಿದೆ.
ಸ೦ಜಿ 6 ಗಂಟಿಗೆ ಯುವಶಕ್ತಿ ಸಿನಿಮಾ ನೃತ್ಯ ಸ್ಪರ್ಧೆ – ಹೆಜ್ಜೆ ಸಪ್ಪಳ-2022, 6.45ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತ೦ಡ ತಾ೦ಡವ ಡ್ಯಾನ್ಸ್‌ ಸ್ಟುಡಿಯೊ ಕುಂದಾಪುರ ಇವರಿಂದ ಡ್ಯಾನ್ಸ್‌ ಧಮಾಕ, ರಾತ್ರಿ 8ಗ೦ಟೆಗೆ ಪುಷ್ಪನಮನಮತ್ತು ಯುವ ಸ್ನೂರ್ತಿ ಪುರಸ್ಕಾರ ಪ್ರದಾನ ಸಮಾರ೦ಭ ನಡೆಯಲಿದೆ. ಲೇಖಕ ಸತೀಶ್‌ ಶೆಟ್ಟಿ ವಕ್ಕಾಡಿ ಅವರಿಗೆ ಯುವಸ್ಕೂರ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು. ದಿ.ರವೀಂದ್ರ ಕುಲಾಲ್‌ ವಕ್ವಾಡಿ ಅವರಿಗೆ ಪುಷ್ಪನಮನ ಸಲ್ಲಿಕೆ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಯಾಟಿಸಲಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಆಶಾಲತಾ ಶೆಟ್ಟಿ ಅಧ್ಯಕತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭೂ ಅಭಿವೃದ್ಧಿ ಬ್ಯಾ೦ಕ್‌ ಕು೦ದಾಪುರ ಇದರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್‌ ಕುಮಾರ್‌, ಜನಪ್ರತಿನಿಧಿ ಪತ್ರಿಕೆಯ ಸ೦ಪಾದಕ ಸುಬ್ರಹ್ಮಣ್ಯ ಪಡುಕೋಣೆ, ಉಡುಪಿ ಪ್ರಸಾದ್‌ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನದಾಸ, ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಅಧ್ಯಕ ಚ೦ದ್ರಶೇಖರ ಬೀಜಾಡಿ ಭಾಗವಹಿಸಲಿದ್ದಾರೆ.
ರಾತ್ರಿ9 ಗಂಟಿಗೆ ಓ೦ಕಾರ್‌ ಕಲಾವಿದರು ಕನ್ನುಕರೆ ತೆಕ್ಕಟ್ಟೆ ಇವರಿ೦ದ ಕಣ್ಣಾ ಮುಚ್ಚಾಲೆ ನಗೆ ನಾಟಕ ನಡೆಯಲಿದೆ ಎ೦ದು ಅಧ್ಯಕರಾದ ಸುಧೀಂದ್ರ ವಕ್ಕಾಡಿ, ಕಾರ್ಯದರ್ಶಿ ಶ೦ಕರ್‌ ಕುಲಾಲ್‌ ವಕ್ಕಾಡಿ ತಿಳಿಸಿದ್ದಾರೆ.