HOLY ROSARY CHURCH, KUNDAPUR – 450 th JUBILEE SOUVENIR 2021

ತಾಡಿಗೋಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಮದ್ಯ ವಶ, ವ್ಯಕ್ತಿಯ ಬಂಧನ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಬಕಾರಿ ಇಲಾಖೆ ಅಧಕಾರಿಗಳು ತಾಲ್ಲೂಕಿನ ತಾಡಿಗೋಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮತಂಪಲ್ಲಿ ಕ್ರಾಸ್ ಸಮೀಪ ಕಾರೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಮದ್ಯ ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಗ್ಗೆ ಸಿಕ್ಕಿದ ಖಚಿತ ಸುಳಿವಿನ ಮೇರೆಗೆ, ಶುಕ್ರವಾರ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಕಾರಿನಲ್ಲಿದ ಸುರೇಶ್ ಎನ್ನುವ ವ್ಯಕ್ತಿಯನ್ನು ಬಂಧಿಸಿ, 34.56 ಲೀಟರ್ ಮದ್ಯ ಹಾಗೂ 54.6 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಇನ್ಸ್‍ಪೆಕ್ಟರ್ ಬಿ.ಎಸ್.ರೋಹಿತ್, ಸಬ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ, ಪೇದೆಗಳಾದ ಮಂಜುನಾಥ್, ರಾಘವೇಂದ್ರ ದಾಳಿಯಲ್ಲಿ ಭಾಗವಹಿಸಿದ್ದರು.

ಆರ್‍ಎಸ್‍ಎಸ್‍ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿ: ಜಮೀರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಸಂಸದ ಮುನಿಸ್ವಾಮಿಅವರಿಗೆ ನಿಜವಾದದೇಶಭಕ್ತಿಯಿದ್ದರೆಆರ್‍ಎಸ್‍ಎಸ್‍ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಿ ಎಂದುಅಂಜುಮಾನ್‍ಇಸ್ಲಾಮಿಯಾಅಧ್ಯಕ್ಷಜಮೀರ್‍ಅಹಮದ್ ಸವಾಲು ಹಾಕಿದರು.
ನಗರದಕ್ಲಾಕ್‍ಟವರ್‍ನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆರಾಷ್ಟ್ರಧ್ವಜ ಹಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಮಾತನಾಡದ ಸಂಸದ ಮುನಿಸ್ವಾಮಿ ಸದಾ ಹಿಂದು-ಮುಸ್ಲಿಂ ಬಂಧುಗಳ ಮಧ್ಯೆ ಜಗಳ ತಂದಿಡುವ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.ಯಾರಿಗೂ ಭಯಪಟ್ಟು ನಾವು ಧ್ವಜ ಹಾರಿಸಿಲ್ಲ. ನಮ್ಮರಾಷ್ಟ್ರಭಕ್ತಿಯನ್ನು ನಾವು ಸಾಬೀತು ಪಡಿಸಿದ್ದೇವೆ. ದೇಶಪ್ರೇಮದ ಬಗ್ಗೆ ನಮಗೆ ಇವರು ಪಾಠ ಮಾಡಬೇಕಿಲ್ಲಎಂದುಕಿಡಿಕಾರಿದರು.
ನಾವು ಕ್ಲಾಕ್‍ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದೇವೆ. ಅದೇರೀತಿ ಸಂಸದರುಆರ್‍ಎಸ್‍ಎಸ್ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಮೂಲಕ ದೇಶಪ್ರೇಮ ಸಾಬೀತು ಮಾಡಿಕೊಳ್ಳಲಿ.ಹಿಂದೂ-ಮುಸ್ಲಿಂ ನಡುವೆ ಪ್ರಚೋದನಾಕಾರಿ ಹೇಳಿಕೆಗಳನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.
ಆಗಸ್ಟ್ 15 ರಂದು ನಾವೆಲ್ಲರೂಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನುಆಗಸ್ಟ್ 14 ರಂದುಎಂದು ಹೇಳುವ ಸಂಸದರ ಬುದ್ಧಿ ನಮಗೆ ಅರ್ಥವಾಗಿದೆ.ಇಂತಹರಾಜಕೀಯ ಬದಿಗೊತ್ತಿಅಭಿವೃದ್ಧಿಕಡೆಗೆ ಗಮನ ಕೊಡಲಿ ಎಂದು ಸಲಹೆ ನೀಡಿದರು.
ಕ್ಲಾಕ್‍ಟವರ್ ನಿಮ್ಮಪ್ಪದಾ.ನಿಮ್ಮಪ್ಪದಾ ಅಂತಯಾವಾಗಲೂ ಸಂಸದರು ಹೇಳುತ್ತಾರೆ.ಆದರೀಗ ಹೇಳುತ್ತೇನೆ. ಈ ಕ್ಲಾಕ್‍ಟವರ್ ನಮ್ಮಪ್ಪದೇ…ಇನ್ನು ಮುಂದೆ ಈ ರೀತಿ ಹೇಳಿಕೆಗಳನ್ನು ನೀಡಬೇಡಿಎಂದು ಎಚ್ಚರಿಸಿದ ಜಮೀರ್ 1938 ರಲ್ಲಿ ನಮ್ಮತಾತ ಹಾಜಿ ಮಹಮದ್ ಮುಸ್ತಾಫ ಸಾಹೇಬ್‍ಕ್ಲಾಕ್‍ಟವರ್ ನಿರ್ಮಾಣ ಮಾಡಿದ್ದು, ಮೈಸೂರು ಮಹಾರಾಜ ನರಸಿಂಹರಾಜ ಒಡೆಯರ್‍ಅವರುಕ್ಲಾಕ್‍ಟವರ್, ಎಸ್ಸೆನ್ನಾರ್‍ಆಸ್ಪತ್ರೆ, ಬಸ್‍ನಿಲ್ದಾಣಗಳ ಉದ್ಘಾಟನೆ ಮಾಡಿದ್ದರು. ಚರಿತ್ರೆಗೊತ್ತಿಲ್ಲದ ಮುನಿಸ್ವಾಮಿ ಕೇವಲ ಓಟಿಗೋಸ್ಕರಅಣ್ಣ-ತಮ್ಮಂದಿರ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆಎಂದುದೂರಿದರು.
ಭಗವಂತ ಬಾಯಿ ಕೊಟ್ಟಿದ್ದಾನೆಎಂದು ಸುಮ್ಮ ಸುಮ್ಮನೆ ಏನೇನೋ ಹೇಳಬೇಡಿ, ಮುಸ್ಲಿಂರ ದೇಶಭಕ್ತಿಯನ್ನು ಪ್ರಶ್ನೆ ಮಾಡುವಗೋಜಿಗೆ ಹೋಗಬೇಡಿ, ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದ್ದು ಸೂರಾಯ್ಯತಯ್ಯಬ್‍ಎಂಬುದು ನೆನಪಿರಲಿ.ದೇಶಕ್ಕಾಗಿ ಬಹಳಷ್ಟು ತ್ಯಾಗ ಬಲಿದಾನಗಳನ್ನು ಈ ಸಮುದಾಯ ಮಾಡಿದೆ.ಮುಸ್ಲಿಂ ದೊರೆಗಳ ಆಡಳಿತಾವಧಿಯಲ್ಲಿ ಮಸೀದಿಗಳ ಜೊತೆ ಹಿಂದೂ ದೇವಾಲಯಗಳ ನಿರ್ಮಾಣ ಮಾಡಿದ್ದೇವೆ ಹಾಗೂ ಈಗಲೂ ನಮ್ಮಕರ್ನಾಟಕದ ಕೆಲ ದೇವಾಲಯಗಳಲ್ಲಿ ಸುಲ್ತಾನ್‍ಆರತಿ ಪೂಜಾಕಾರ್ಯಕ್ರಮ ನಡೆಯುತ್ತದೆಎಂಬುದರ ಬಗ್ಗೆ ತಿಳಿದುಕೊಳ್ಳಿ ಎಂದರು.
ಪದೇ ಪದೇ ಪಂಕ್ಚರ್‍ಅಂಗಡಿ, ಚಿಕನ್ ಶಾಪ್, ತಂದೆತಾಯಿಯರನ್ನು ಸಾಕುವುದಿಲ್ಲ ಎಂಬ ಮಾತುಗಳನ್ನಾಡಬೇಡಿ, ಈ ಕೆಲಸಗಳನ್ನು ಮಾಡಿಕೊಂಡೆ ನನ್ನ ಸಮುದಾಯದವರು ನಾಲ್ಕು ಕುಟುಂಬಗಳ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.ಶೈಕ್ಷಣಿಕವಾಗಿ ಸಹ ಸಮುದಾಯದವರು ಮುಂದಿದ್ದು ಪಂಕ್ಚರ್‍ಅಂಗಡಿಯವರು ಸಹ ಓದಿಕೊಂಡೇ ಈ ಕೆಲಸ ಮಾಡುತ್ತಿರುತ್ತಾರೆ.ನಮ್ಮನ್ನು ಶೈಕ್ಷಣಿಕವಾಗಿ ತುಳಿಯಲು ಬೇಕಾದಷ್ಟು ಪಾಲಿಸಿಗಳನ್ನು ಮಾಡುತ್ತಿದ್ದಾರೆ, ಇದೆಲ್ಲಾ ಬೇಡಎಂದರು.
ಇದಕ್ಕೂ ಮುಂಚೆ ನೀವು ಪಂಕ್ಚರ್ ಹಾಕಿಸಿಕೊಳ್ಳಲು ಬಂದಿಲ್ಲವೇಎಂದು ಪ್ರಶ್ನಿಸಿದ ಜಮೀರ್ ಮುಂದಿನ ದಿನಗಳಲ್ಲೂ ಬನ್ನಿ ಪಂಕ್ಚರ್ ಹಾಕುತ್ತೇವೆಎಂದು ವ್ಯಂಗ್ಯವಾಡಿದರು.
ಇತಿಹಾಸತಿರುಚಿ ಹೇಳುವುದನ್ನು ಬಿಟ್ಟುಅಭಿವೃದ್ಧಿಯಕಡೆಗೆಒತ್ತು ನೀಡಿಎಂದು ಸಲಹೆ ಮಾಡಿದರಲ್ಲದೆ, ನಿನ್ನಪ್ಪದಾ..ನನ್ನಪ್ಪದಾಎಂದೆಲ್ಲಾಇನ್ನು ಮುಂದೆ ಮಾತನಾಡಬೇಡಿ…ಇದೇನು ಆಸ್ತಿನಾ ನಾವು ಬರೆದುಕೊಳ್ಳೋಕೆ ಎಂದು ಪ್ರಶ್ನಿಸಿದರು.

ಕೋಲಾರ ನಗರದ ಗಡಿಯಾರ ಗೋಪುರದಲ್ಲಿ ಅಲ್ಪಸಂಖ್ಯಾತ ಮುಖಂಡರ ಸಹಕಾರದೊಂದಿಗೆ ತ್ರಿವರ್ಣ ಧ್ವಜರೋಹಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ನಗರದಗಡಿಯಾರಗೋಪುರದಲ್ಲಿ ಶನಿವಾರ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರ ಸಹಕಾರದೊಂದಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್‍ ಇಲಾಖೆಯುತ್ರಿವರ್ಣಧ್ವಜ ಹಾರಿಸುವಲ್ಲಿ ಯಶಸ್ವಿಯಾಯಿತು.
ಎರಡು ದಿನಗಳ ಹಿಂದಷ್ಟೇ ಸಂಸದಎಸ್.ಮುನಿಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಗಡಿಯಾರಗೋಪುರಕ್ಕೆತ್ರಿವರ್ಣವನ್ನು ಬಳಿಸಿ, ಗೋಪುರದ ಮೇಲ್ಭಾಗದಲ್ಲಿತ್ರಿವರ್ಣಧ್ವಜವನ್ನು ಹಾರಿಸುವ ಸಲುವಾಗಿ ತಾವುಏಕಾಂಗಿಯಾಗಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.144 ಸೆಕ್ಷನ್‍ಅವಧಿ ಮುಗಿದ ಮಾ.21 ರ ನಂತರ ನೂರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿ ಈ ಕುರಿತು ಡಿಸಿ ಮತ್ತು ಎಸ್ಪಿಗೆ ಮನವಿ ಸಲ್ಲಿಸಿದ್ದರು.
ಗಡಿಯಾರಗೋಪುರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಕೋಲಾರದಲ್ಲಿ ಹಿಜಾಬ್ ಸಂಬಂಧ 144 ಸೆಕ್ಷನ್‍ಜಾರಿಯಲ್ಲಿರುವುದರಿಂದ ಸಂಸದರ ಪ್ರತಿಭಟನೆಗೆ ಪೆÇಲೀಸ್ ವರಿಷ್ಠಾಧಿಕಾರಿದೇವರಾಜ್‍ಅನುಮತಿಯನ್ನು ನಿರಾಕರಿಸಿದ್ದರು.
ಆನಂತರ ಪ್ರಕರಣ ಸೂಕ್ಷ್ಮತೆಯನ್ನುಅರಿತು ಡಿಸಿ ವೆಂಕಟ್‍ರಾಜಾ ಮತ್ತು ಎಸ್ಪಿ ದೇವರಾಜ್‍ತಾವೇ ರಂಗಕ್ಕಿಳಿದರು.ಈ ವೇಳೆಗಾಗಲೇ ಗಡಿಯಾರಗೋಪುರ ಸುತ್ತಮುತ್ತಲಿನ ಅಲ್ಪಸಂಖ್ಯಾತ ಮುಖಂಡರುತ್ರಿವರ್ಣಧ್ವಜ ಹಾರಿಸುವ ವಿಚಾರದಲ್ಲಿತಮ್ಮದೇನುಅಭ್ಯಂತರಆಕ್ಷೇಪವಿಲ್ಲ, ಇಲ್ಲಿಗೆಯಾರೂ ಬಂದುರಾಜಕೀಯ ಲಾಭ ಪಡೆದುಕೊಳ್ಳುವ ಅಗತ್ಯವಿಲ್ಲ, ತಾವೇ ಈ ಕಾರ್ಯಕ್ಕೆ ಬೆಂಬಲ ನೀಡುವುದಾಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಗಡಿಯಾರಗೋಪುರಕ್ಕೆ ಬಿಳಿ ಬಣವನ್ನು ಬಳಿಸಿ, ಮಧ್ಯಭಾಗತ್ರಿವರ್ಣವನ್ನು ಅರಳಿಸಿ, ಗೋಪುರದ ಮೇಲ್ಭಾಗಇಪ್ಪತ್ತುಅಡಿಯ ಕಂಬವನ್ನು ವೆಲ್ಡಿಂಗ್ ಮಾಡಿಸಿ ಮಧ್ಯಾಹ್ನದ ವೇಳೆಗೆ ಸಕಲಗೌರವಗಳೊಂದಿಗೆ ತ್ರಿವರ್ಣಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲಿ ಅಂಜುಮಾನ್‍ಅಧ್ಯಕ್ಷಜಮೀರ್‍ಅಹಮದ್ ಮತ್ತು ಸ್ಥಳೀಯ ಅಲ್ಪಸಂಖ್ಯಾತ ಮುಖಂಡರುಇಡೀ ದಿನ ಜಿಲ್ಲಾಡಳಿತ ಹಾಗೂ ಪೆÇಲೀಸ್‍ಇಲಾಖೆಯೊಂದಿಗೆ ಹಾಜರಿದ್ದು ಈ ಕಾರ್ಯ ಸುಗಮವಾಗಿ ಸಾಗಿಸಲು ಸಹಕರಿಸಿದರು.
ಈ ಸಂದರ್ಭದಲ್ಲಿಯಾವುದೇಅಹಿತರ ಘಟನೆಗಳು ನಡೆಯದಂತೆ ಸುಮಾರು 500 ಕ್ಕೂ ಹೆಚ್ಚು ಪೆÇಲೀಸರನ್ನು ಬಂದೋಬಸ್ತ್‍ಗೆ ವ್ಯವಸ್ಥೆ ಮಾಡಲಾಗಿತ್ತು.ಗಡಿಯಾರಗೋಪುರದ ಮೂಲಕ ಇಡೀ ದಿನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.ಗೋಪುರದ ಸುತ್ತಲೂ100 ಮೀಟರ್ ಪ್ರದೇಶದಲ್ಲಿಜನರಓಡಾಟಕ್ಕೆ ಅವಕಾಶ ನೀಡಿರಲಿಲ್ಲ.

ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾರ್ಷಿಕ ಪುರಸ್ಕಾರ

JANANUDI.COM NETWORK


ಕುಂದಾಪುರ, ಮಾ.19: ಸ್ಥಳೀಯ ಸಂತ ಜೋಸೆಫ್ ಕನ್ನಡ ಮಾದ್ಯಮ ಶಾಲೆಯಲ್ಲಿ ಸಂತ ಜೋಸೆಫರ ಹಬ್ಬದಂದು ವಾರ್ಷಿಕ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಚರ್ಚ್ ಸ್ತ್ರೀ ಸಂಘಟನೇಯ ಅಧ್ಯಕ್ಷೆ ವಿನಯಾ ಡಿಕೋಸ್ತಾ, ಬಹುಮಾನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ “ನೀವು ಚೆನ್ನಾಗಿ ಸಾಧನೆ ಮಾಡಿ ಇವತ್ತು ಬಹುಮಾನ ಗಳಿಸಿದ್ದಿರಿ, ನೀವು ಬಹುಮಾನ ಗಳಿಸಲು ಅರ್ಹರು, ನೀವು ಪ್ರಯತ್ನಿಸಿದ್ದಿರಿ, ಬಹುಮಾನ ದೊರಕದವರು ನಿರಾಶೆ ಪಡಬೇಕಾದ ಅವಶ್ಯಕತೆಯಿಲ್ಲ. ಮುಂದಿನ ವರ್ಷ ನೀವು ಬಹುಮಾನ ಗಳಿಸಲು ಶ್ರಮಿಸಬೇಕು” ಎಂದು ಹೇಳಿದರು.
ಅತಿಥಿಗಳಾದ ಕುಂದಾಪುರ ಚರ್ಚ್ ಸ್ತ್ರೀ ಸಂಘಟನೇಯ ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್, ಸಂತ ಜೋಸೆಫ್ ಪ್ರೌಢ ಶಾಲೆಯ ಶಿಕ್ಷಕಿ ಸೆಲಿನ್ ಬಾರೆಟ್ಟೊ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸತ್ಕರಿಸಿದರು. ಸ್ವಾಗತ, ನಿರೂಪಣೆ, ವಂದನೆ ಎಲ್ಲವನ್ನು ವಿದ್ಯಾರ್ಥಿಗಳು ನೇರವೇರಿಸಿದರು. ಮುಖ್ಯ ಶಿಕ್ಷಕಿ ಧರ್ಮ ಭಗಿನಿ ಕೀರ್ತನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕಿ ಧರ್ಮಭಗಿನಿ ನವಿತಾ, ಶಿಕ್ಷಕಿಯರಾದ ಮರಿಯಾ ತೆರೆಜಾ, ವಾಯ್ಲೆಟ್ ಡಿಸೋಜಾ, ಅನಿಲ್ ಕುಮಾರ್ ಪಾಯ್ಸ್, ವನಿತಾ ಬರೆಟ್ಟೊ, ಶಾರದ, ಜೊಸ್ಫಿನ್ ಪೇರಿಸ್ ಮತ್ತಿರರು ಉಪಸ್ಥಿತರಿದ್ದರು.

ಶ್ರೀನಿವಾಸಪುರ ವರದ ಬಾಲಾಂಜನೇಯಸ್ವಾಮಿ ಬ್ರಹ್ಮ ರಥೋತ್ಸವ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ವರದ ಬಾಲಾಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಏರ್ಪಡಿಸಲಾಗಿತ್ತು. ರಥೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವರದ ಬಾಲಾಂಜನೇಯಸ್ವಾಮಿ ದೇವಾಲಯದ ಮೈದಾನದಲ್ಲಿ ಧಾರ್ಮಿಕ ವಿಧಿಗಳನ್ನು ಕೈಗೊಂಡ ಬಳಿಕ ರಥವನ್ನು ಎಳೆಯಲಾಯಿತು. ಭಕ್ತಾದಿಗಳು ರಥದ ಮೇಲೆ ಹಸಿ ಬಾಳೆಕಾಯಿ ಹಾಗೂ ದವನ ಎಸೆದು ಭಕ್ತಿ ಪ್ರದರ್ಶಿಸಿದರು.
ದೇವಾಲಯದ ಮೂಲ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಸಮುದಾಯಗಳ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮೀನ ಪ್ರದೇಶದಿಂದ ರೈತರು ಎತ್ತಿನ ಗಾಡಿಗಳಲ್ಲಿ ಪಾನಕ ತಂದು ಉಚಿತವಾಗಿ ವಿತರಿಸಿದರು. ಅನ್ಯ ಕೋಮಿನವರೂ ಸಹ ಜಾತ್ರೆಗೆ ಬಂದಿದ್ದ ಜನರಿಗೆ ತಂಪು ಪಾನೀಯ ವಿತರಣೆ ಮಾಡಿದರು.
ಜಾತ್ರೆಯಲ್ಲಿ ತಂಪು ಪಾನೀಯಗಳು, ಕಲ್ಲಂಗಡಿ ಹಾಗೂ ಕಬ್ಬಿನ ಹಾಲಿಗೆ ಹೆಚ್ಚಿನ ಬೇಡಿಕೆ ಇತ್ತು. ಮಕ್ಕಳು ಬೆಲೂನ್ ಮತ್ತು ಆಟಿಕೆಗಳನ್ನು ಖರೀದಿಸಿ ಖುಷಿ ಪಟ್ಟರು. ಐಸ್ ಕ್ರೀಮ್ ಸವಿದು ಆನಂದಿಸಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್, ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರಥೋತ್ಸವದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದರು
.

ಕೈವಾರ ಯೋಗಿನಾರೇಯಣ ಯತೀಂದ್ರರು ತಮ್ಮ ಕಾಲ ಜ್ಞಾನದ ಮೂಲಕ ಪ್ರಸಿದ್ಧರಾಗಿದ್ದಾರೆೆ-ಬಿ.ಎಲ್.ರಾಮಣ್ಣ

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಕೈವಾರ ಯೋಗಿನಾರೇಯಣ ಯತೀಂದ್ರರು ತಮ್ಮ ಕಾಲ ಜ್ಞಾನದ ಮೂಲಕ ಪ್ರಸಿದ್ಧರಾಗಿದ್ದಾರೆೆ ಎಂದು ತಾಲ್ಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಲ್.ರಾಮಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಏರ್ಪಡಸಿದ್ದ ಕೈವಾರ ಯೋಗಿನಾರಾರೇಯಣ ಯಂತೀದ್ರರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ತಾತಯ್ಯನವರ ಕೀರ್ತನೆಗಳು ಈ ಭಾಗದ ಜನರ ನಾಲಿಗೆಯ ಮೇಲೆ ನಲಿದಾಡುತ್ತಿವೆ. ತಾತಯ್ಯನವರ ಕೀರ್ತನೆಗಳನ್ನು ಹಾಡುವುದು ಒಂದು ಪರಂಪರೆಯಾಗಿ ಮುಂದುವರಿದಿದೆ ಎಂದು ಹೇಳಿದರು.
ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಕಲಾ ಶಂಕರ್ ಮಾತನಾಡಿ, ತಾತಯ್ಯ ಎಂದು ಹೆಸರಾಗಿರುವ ಕೈವಾರ ನಾರಾಯಣಪ್ಪ ಅವರ ಕಾಲಜ್ಞಾನ, ಕಾಲಾಂತರದಲ್ಲಿ ನಿಜವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೀರ್ತನಕಾರರಾಗಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಚಿಸಿರುವ ಕೀರ್ತನೆಗಳು ಸಾಮಾನ್ಯ ಜನರ ಹೃದಯದಲ್ಲಿ ನೆಲೆಯೂರಿವೆ. ಖ್ಯಾತ ಸಂಗೀತಗಾರರು ಹಾಡಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಮನೋಹರ ಮಾನೆ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಣಜಿಗ ಸಮುದಾಯದ ಮುಖಂಡರಾದ ಬಿ.ಎಲ್.ಸೂರಣ್ಣ, ಬಿ.ಎಲ್.ಪ್ರಕಾಶ್, ಕೃಷ್ಣಮೂರ್ತಿ, ಭಾಸ್ಕರ್, ಮುರಳಿ, ಶ್ರೀನಿವಾಸ್, ಎಲ್.ವಿ.ಗೋವಿಂದಪ್ಪ, ಶ್ರೀನಿವಾಸಯ್ಯ, ವಿಜಯ ಭಾಸ್ಕರ್, ಗುರುಪ್ರಸಾದ್, ರಘು, ಹೂಗಳಗೆರೆ.ಎ.ಹರೀಶ್. ಅರ್.ನಾರಾಯಣಸ್ವಾಮಿ, ತಹಶೀಲ್ದಾರ್ ಮನೋಹರ ಮಾನೆ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಇದ್ದರು.

ಕುಂದಾಪುರ ಕಾನ್ವೆಂಟಿನಲ್ಲಿ ಸಂತ ಜೋಸಫರ ಹಬ್ಬ; ಸಂತ ಜೋಸೆಫರು ದೇವದಾಸರಾಗಿದ್ದರು


ಕುಂದಾಪುರ, ಮಾ.19: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬದಂದು ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.
Dಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿದರು.

ಕಟ್ಕರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ|ಆಲ್ವಿನ್ ಸಿಕ್ವೇರಾ “ಯೇಸುವಿನ ಪಿತ ಸಂತ ಜೋಸೆಫ್ ದೇವರ ದಾಸನಾಗಿದ್ದನು, ಒಂದು ಕತ್ತೆ ಪ್ರಮಾಣಿಕವಾಗಿ ಮಾಲೀಕನ ಹೊರೆಗಳನ್ನು ಹೊರುತ್ತದೋ, ಹಾಗೆ ಅವನು ದೇವರ ಅಪ್ಪಣೆ ಮತ್ತು ಮಾತುಗಳು ತನಗೆ ಹೊರೆಯಾದರೂ, ಪ್ರಮಾಣಿಕವಾಗಿ ಆ ಹೊರೆಗಳನ್ನು ಹೊತ್ತು ಯೇಸುವನ್ನು ಮತ್ತು ಆತನ ತಾಯಿಯನ್ನು ಹಲವು ಗಂಡಾಂತರಗಳಿಂದ ಕಾಪಾಡಿದ ದೇವದಾಸನಾಗಿದ್ದಾನೆ ಸಂತ ಜೋಸೆಫನು, ನಾವು ಕೂಡ ಅವನಂತೆ ಪರರ ಕಶ್ಟ ದುಖಗಳ ಹೊರೆಗಳನ್ನು ಹೊರಲು ಸಿದ್ದರಿರಬೇಕು” ಎಂದು ಸಂದೇಶ ನೀಡಿದರು.


ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೇಜೆಸ್ ಸಹಬಲಿದಾನವನ್ನು ಅರ್ಪಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಧರ್ಮಭಗಿನಿ ಸಂಗೀತ ವಂದಿಸಿದರು.

ಅಣ್ಣನ ಮಗನ ಸಾವಿಗೆ ತೆರಳಿದ ಇಬ್ಬರು ಸಹೋದರರ ದುರಂತ ಸಾವು. ಅಪಘತದಲ್ಲಿ ಸ್ಥಳದಲ್ಲೆ ಮ್ರತ್ಯು.


ಕೊಟೇಶ್ವರ ಚರ್ಚಿನ ಫಾದರ್ ಸಿರಿಲ್ ಮಿನೇಜೆಸ್ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತಿದ್ದರು

ಉಪ್ಪಿನಂಗಡಿ,ಮಾ. 19: ನಿನ್ನೆ ವೇಣೂರಿನ ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟರ್‌ ನಡುವೆ ನಡೆದ ಘೋರ ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟರು.. ಹಬ್ಬದ ದಿನವೇ ಘಟನೆ ನಡೆದಿದ್ದು ‌ಉಪ್ಪಿನಂಗಡಿಯ ಹಿರೆಬಂಡಾಡಿ ಭಾಗದಲ್ಲಿ ಜನರಲ್ಲಿ‌ ಶೋಕ ಮುಡುಗಟ್ಟಿತ್ತು.
ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ಅಬ್ದುಲ್‌ ರಝಾಕ್‌ ಪುತ್ರರಾದ ಹಮ್ಮಬ್ಬ ಸಿರಾಜ್ (28 )ಮತ್ತು ಕಜುತುಬುದ್ದೀನ್‌ ಸಾದಿಕ್‌ (32) ಆಗಿದ್ದಾರೆ.ಗುರುವಾರ ವೇಣೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ನಾಲ್ಕು ವರ್ಷ ಪ್ರಾಯದ ಅವರ ಅಣ್ಣನ ಮಗನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದವರನ್ನು ಸ್ಥಳೀಯ ಗೋಳಿಯಂಗಡಿಯ ಸಾರ್ವಜನಿಕರು ಇನ್ನಿತರ ಸಹಕಾರದೊಂದಿಗೆ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದರು..ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದು, ಕಳೆದ ಐದು ತಿಂಗಳ ಹಿಂದೆ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ, ಇವರು. ತಾಯಿ, 8 ಸಹೋದರರು ಮತ್ತು 6 ಸಹೋದರಿಯರನ್ನು ಅಗಲಿದ್ದಾರೆ.
ಇದೇ ಬಸ್ಸಿನಲ್ಲಿ ಕೊಟೇಶ್ವರ ಚರ್ಚಿನ ಧರ್ಮಗುರು ವಂ।ಸಿರಿಲ್ ಮಿನೇಜೆಸ್ ಪ್ರಯಾಣಿಸುತಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ. ಅಪಘಾತದಲ್ಲಿ ಸಿಕ್ಕಿ ಹಾಕಿಕೊಂಡು ಅವರು ಕೊಟೇಶ್ವರ ತಲಪುವಾಗ ರಾತ್ರಿ ಒಂದುವರೆ ಗಂಟೆಯಾಗಿತ್ತು ಎಂದು ಮಾದ್ಯಮಕ್ಕೆ ತಿಳಿಸಿದರು.

ವಿಶ್ವ ಹ್ಯಾಪಿನೆಸ್ಸ್‌ ವರದಿ: ಭಾರತಕ್ಕೆ 146 ರಲ್ಲಿ 136ನೇ ರ್‍ಯಾಂಕ್‌‌, ಪಾಕಿಸ್ತಾನ ಕೂಡ ಭಾರತಕ್ಕಿಂತ ಉತ್ತಮ

JANANUDI.COM NETWORK

ಮಾರ್ಚ್ 20ರಂದು ‘ಅಂತಾರಾಷ್ಟ್ರೀಯ ಹ್ಯಾಪಿನೆಸ್‌ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಇದರ ಕೆಲವೇ ದಿನಗಳ ಮೊದಲು ವಿಶ್ವ ಸಂಸ್ಥೆಯು ತನ್ನ 10ನೇ ವರ್ಷದ ‘ವಿಶ್ವ ಹ್ಯಾಪಿನೆಸ್ಸ್‌ ವರದಿ’ಯನ್ನು ಬಿಡುಗಡೆ ಮಾಡಿದ್ದು 146 ದೇಶಗಳ ಈ ಪಟ್ಟಿಯಲ್ಲಿ ಭಾರತವು 136ನೇ ಸ್ಥಾನವನ್ನು ಪಡೆದಿದೆ. ಪಟ್ಟಿಯಲ್ಲಿ ಕೊನೆಯ ದೇಶವಾಗಿ ಅಪಘಾನಿಸ್ತಾನ 146 ಸ್ಥಾನ ಪಡೆದು ವಿಶ್ವದ ಅತೃಪ್ತ ದೇಶವಾಗಿ ಹೊಮ್ಮಿದೆ.
ಉಳಿದಂತೆ ಭಾರತದ ನೆರೆಯ ದೇಶಗಳಾದ ಚೀನಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್‌‌ ಮತ್ತು ಶ್ರೀಲಂಕಾ ದೇಶಗಳು ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೆ ಇವೆ.
ಫಿನ್‌ಲ್ಯಾಂಡ್‌ ದೇಶವು ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಸತತ ಐದನೇ ವರ್ಷವೂ ಹೆಸರಿಸಲ್ಪಟ್ಟಿದೆ.. ಈ ಪಟ್ಟಿಯಲ್ಲಿ ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಐಸ್‌ಲ್ಯಾಂಡ್‌, ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ ಇವೆ.ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ದೇಶಗಳ ಜಾಗತಿಕ ಸಂತೋಷದ ಶ್ರೇಯಾಂಕವನ್ನು ಹೊಂದಿರುವ ‘ವರ್ಲ್ಡ್ ಹ್ಯಾಪಿನೆಸ್ ವರದಿ’ಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್‌ವರ್ಕ್‌ನಿಂದ ಪ್ರತಿ ವರ್ಷ ಬಿಡುಗಡೆಯಾಗುತ್ತದೆ.
“ದೇಶವೊಂದರ ಸರ್ಕಾರಗಳು ತಮ್ಮ ಜನರ ಮೇಲೆ ಹೇಗೆ ಕಾಳಜಿ ವಹಿಸುತ್ತವೆ ಎಂಬುದರ ಮೇಲೆ ದೇಶಗಳು ರ್‍ಯಾಂಕಿಂಗ್ ಪಡೆಯುತ್ತದೆ. ನಿರ್ದಿಷ್ಟ ದೇಶದ ಜನರ ಸಂತೃಪ್ತಿಯ ಜೀವನ ಆ ದೇಶದ ಉನ್ನತ ರೇಟಿಂಗ್‌ಗಳಿಗೆ ಕಾರಣವಾಗುತ್ತದೆ” ಎಂದು ಆಲ್ಟೊ ವಿಶ್ವವಿದ್ಯಾಲಯದ ತಜ್ಞ ಫ್ರಾಂಕ್ ಮಾರ್ಟೆಲಾ ವಿವರಿಸುತ್ತಾರೆ.
ಸಂಖ್ಯಾಶಾಸ್ತ್ರಜ್ಞರು ಗ್ಯಾಲಪ್‌ ವಲ್ಡ್‌ ಪೋಲ್‌ ಮತ್ತು ತಲವಾರು GDP, ಜೀವಿತಾವಧಿ, ಆರೋಗ್ಯಕರ ಜೀವಿತಾವಧಿ, ಭ್ರಷ್ಟಾಚಾರದ ಗ್ರಹಿಕೆಗಳು, ಉದಾರತೆ, ಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಆರೋಗ್ಯಕರ ಜೀವಿತಾವಧಿ, ಸಾಮಾಜಿಕ ಬೆಂಬಲ ಅಂಶಗಳ ಡೇಟಾದ ಮೇಲೆ ಶ್ರೇಯಾಂಕವನ್ನು ಆಧರಿಸಿ ಈ ವರದಿಯನ್ನು ತಯಾರಿಸುತ್ತಾರೆ ಎಂದು ತಿಳಿದು ಬಂದಿದೆ.