HOLY ROSARY CHURCH, KUNDAPUR – 450 th JUBILEE SOUVENIR 2021

ಹಿಜಾಬ್- ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ರಾಜ್ಯ ಬಂದ್‌ ಕರೆಗೆ ಶ್ರೀನಿವಾಸಪುರದಲ್ಲಿ ಬೆಂಬಲ ವ್ಯಕ್ತವಾಗಿದೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಹಿಜಾಬ್ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕರ್ನಾಟಕ ಅಮೀರ್ ಎ ಶರೀಯತ್‌ನ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿರುವ ರಾಜ್ಯ ಬಂದ್‌ಗೆ ಶ್ರೀನಿವಾಸಪುರ ಗುರುವಾರ ಬೆಂಬಲ ವ್ಯಕ್ತವಾಗಿದೆ .
ಮುಸ್ಲಿಮರಿಗೆ ಸೇರಿದ ಬಹುತೇಕ ಅಂಗಡಿಗಳು , ಮಳಿಗೆಗಳು , ಹೊಟೇಲ್ ಗಳು ತೆರೆಯಲಿಲ್ಲ . ಕೆಲವು ಶಿಕ್ಷಣ ಸಂಸ್ಥೆಗಳು , ಮದ್ರಸಗಳಿಗೆ ರಜೆ ಸಾರಲಾಗಿದೆ . ಅಲ್ಲದೆ ಆಜಾದ್ ರಸ್ತೆ, ರಾಜಾಜಿ ರಸ್ತೆ, ಟಿಪ್ಪು ಸರ್ಕಲ್, ತರಕಾರಿ ಮಾರುಕಟ್ಟೆ, ಮಟನ್ ಮಾರ್ಕೆಟ್, ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಿವೆ .
ಮುಸ್ಲಿಂ ಮಾಲಕತ್ವದ ಕಚೇರಿಗಳು , ಅಂಗಡಿಗಳು , ಮಳಿಗೆಗಳು , ಹೊಟೇಲ್ ಗಳು ವರ್ಕ್ ಶಾಪ್‌ಗಳು , ಅಂಚೆ ಕಛೇರಿ ರಸ್ತೆಯ ಫುಟ್ ವೀರ್ ಅಂಗಡಿಗಳು, ಗುತ್ತಿಗೆ ಸಂಸ್ಥೆಗಳು ಕೂಡ ಮುಚ್ಚಲ್ಪಟ್ಟಿವೆ .
ಮುಸ್ಲಿಂ ಸಂಘಟನೆಗಳೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ .

ಸಿನೆಮಾ ಹಾಗೂ ಧಾರಾವಾಹಿ ಭರಾಟೆಯಲ್ಲಿ ನಾಟಕ ಸಂಸ್ಕೃತಿ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ : ಗುಂಜೂರು ಆರ್. ಶ್ರೀನಿವಾಸರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ಮಾ. 17 : ಸಿನೆಮಾ ಹಾಗೂ ಧಾರಾವಾಹಿ ಭರಾಟೆಯಲ್ಲಿ ನಾಟಕ ಸಂಸ್ಕೃತಿ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಮಾಜ ಸೇವಕ ಶ್ರೀ ಗುಂಜೂರು ಆರ್. ಶ್ರೀನಿವಾಸರೆಡ್ಡಿ ತಿಳಿಸಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ದಾನ ವೀರ ಶೂರ ಕರ್ಣ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಂದು ನಾಟಕ ಪ್ರದರ್ಶಿಸಬೇಕಾದರೆ ಅದರ ಹಿಂದೆ ಹಲವಾರು ತಿಂಗಳುಗಳ ಅಭ್ಯಾಸ, ಹಾವ, ಭಾವ, ಕಠಿಣ ಶ್ರಮ ಇರುತ್ತದೆ. ನಾಟಕಗಳನ್ನು ಇಂದಿಗೂ ಉಳಿಸಿ ಬೆಳೆಸುತ್ತಿರುವುದು ಗ್ರಾಮೀಣ ಭಾಗದ ಜನರೇ. ನಾಟಕಗಳಲ್ಲಿ ಹಲವಾರು ರೀತಿಯ ಪಾತ್ರಗಳು ತಮ್ಮದೇ ಆದ ದಾಟಿಯಲ್ಲಿ ನೈಜವಾಗಿ ಅಭಿನಯಿಸುತ್ತಾರೆ. ಇಂತಹ ಕಲೆಗಳನ್ನು ಪ್ರೋತ್ಸಾಹಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ.
ಕಲೆ ಕೇವಲ ಮನರಂಜನೆಗಷ್ಟೇ ಅಲ್ಲದೆ ಅರಿವಿನ ವಿಕಾಸಕ್ಕೆ ಪೂರಕ. ಸಿನೆಮಾ-ಧಾರಾವಾಹಿ ಪರಿಪೂರ್ಣ ರಂಗ ಕಲೆಗಳು ಅಲ್ಲ. ಆದರೆ, ನಾಟಕಗಳು ನಿಜವಾದ ರಂಗಕಲೆ. ನಾಟಕದಲ್ಲಿ ಭಾವನೆ, ಸನ್ನಿವೇಶಗಳಿಗೆ ತಕ್ಕಂತೆ ಪಾತ್ರಗಳ ಅನುಕರಣೆ ನೋಡುಗರನ್ನು ಹಿಡಿದಿಡುತ್ತವೆ. ಹೀಗಾಗಿ ರಂಗಭೂಮಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಇನ್ನು ಜೀವಂತವಾಗಿದೆ. ಒಮ್ಮೆ ನೋಡಿದ ಸಿನೆಮಾ ಹಾಗೂ ಧಾರವಾಹಿಗಳಲ್ಲಿ ಅದೇ ರಾಗ, ಅದೇ ಹಾಡು ಇರುತ್ತದೆ. ಆದರೆ, ನಾಟಕಗಳಲ್ಲಿ ವಿಭಿನ್ನ ಪ್ರಕಾರಗಳು ಇರುವುದನ್ನು ಕಾಣಬಹುದು. ರಂಗ ನಾಟಕಗಳು ನೈಜತೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತಮ ಪಡಿಸುವಲ್ಲಿ ಮಹತ್ವ ಪೂರ್ಣವಾದವುಗಳಾಗಿವೆ. ರಂಗ ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಮಾಡುವಂತೆ ತಿಳಿಸಿದರು. ಆಧುನಿಕತೆಯಿಂದಾಗಿ ಮರೆಯಾಗುತ್ತಿರುವ ನಮ್ಮ ರಂಗನಾಟಕಗಳನ್ನು ಉಳಿಸಿ ಬೆಳೆಸುವತ್ತ ಕಲಾವಿದರು ಮತ್ತು ಕಲಾಸಕ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ರಂಗಭೂಮಿ ಮತ್ತು ರಂಗ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವತ್ತ ಇಂದಿನ ಯುವ ಜನಾಂಗ ಚಿಂತನೆ ನಡೆಸಬೇಕಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ರಂಗ ನಾಟಕಗಳಿಂದ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಂಗ ಮಹತ್ವದ ಸಾಂಸ್ಕೃತಿಕ ಕಲೆಗಳು ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸ ಆಯಾಮ ನೀಡಲಿವೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ಸಾಮಾಜಿಕ ಬದುಕಿನಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಬಣದ ಮುಖಂಡರು, ಅಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ಸ್ವರ್ಧಿಸಿ ಗೆದ್ದು ತೋರಿಸಲಿ – ಮಾಜಿ ಶಾಸಕ , ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕ ವೆಂಕಟಶಿವಾರೆಡ್ಡಿ ಸವಾಲು

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯರಿಗೆ ರಾಜಕೀಯ ಸಿದ್ಧಾಂತಗಳು , ಜೀವನದ ಮೌಲ್ಯಗಳಿದ್ದರೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಹುಳುಕುಗಳನ್ನು ಸರಿಮಾಡಿಕೊಂಡು ತಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಲಿ ಎಂದು ಮಾಜಿ ಶಾಸಕ , ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಸವಾಲು ಹಾಕಿದರು.
ನಗರದ ಜೆಡಿಎಸ್ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದ ವೇಳೆ ತಾವು ಮಾತನಾಡಿ , ಜೆಡಿಎಸ್ ಪಕ್ಷವನ್ನು ಬಿಜೆಪಿ ಪಕ್ಷದ ಬಿ ಟೀಮ್ ಎಂದು ಹೇಳಿದ್ದೀರಿ. ಇದು ಹಾಸ್ಯಾಸ್ಪದ ಹಾಗೂ ರಾಜಕೀಯವಾಗಿ ತಾವು ಉಳಿದುಕೊಳ್ಳಲು ನೀಡಿರುವ ಹತಾಶೆಯ ಹೇಳಿಕೆ ಎಂದು ಟೀಕಿಸಿದರು. ಕಳೆದ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರನ್ನು ಸೋಲಿಸಿದ್ದು , ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಷಡ್ಯಂತ್ರ ರೂಪಿಸಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಬಿಜೆಪಿಯ ಬಿ ಟೀಮ್ ಯಾರು ಎನ್ನುವುದನ್ನು ರಸ್ತೆಯಲ್ಲಿ ಓಡಾಡುವ ಸಾಮಾನ್ಯ ಪ್ರಜೆಯೂ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.
ತಮ್ಮ ರಾಜಕೀಯ ಉಳಿವಿಗಾಗಿ ರಾಜ್ಯದಲ್ಲಿ ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದೀರಿ . 5 ವರ್ಷ ಸಿಎಂ ಆಗಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ನೀವು ಕೊಟ್ಟಿರುವುದು ಏನು 2018 ರ ವಿಧಾನಸಭ ? ಚುನಾವಣೆಯಲ್ಲಿ 80 ಕ್ಕಿಂತ ಕಡಿಮೆ ಶಾಸಕರು , 2019 ರ ಲೋಕಸಭೆ ಚುನಾವಣೆಯಲ್ಲಿ ಒಬ್ಬ ಸಂಸದರನ್ನು ಗೆಲ್ಲಿಸಿಕೊಂಡಿದ್ದೀರಿ .
ನಿಮ್ಮ ಸ್ವಕ್ಷೇತ್ರದಲ್ಲಿ 46 ಸಾವಿರಕ್ಕೂ ಅಧಿಕ ಮತಗಳಿಂದ ಸೋತು , ಬಾದಾಮಿಯಲ್ಲಿ ಹಾಗೋ ಹೀಗೋ ಗೆದ್ದಿದ್ದೀರಿ . ಇದೀಗ ಅಲ್ಲಿಯೂ ಚೀತೂ ಎನಿಸಿಕೊಂಡು ಹೊರಕ್ಕೆ ತಳ್ಳಲ್ಪಟ್ಟಿದ್ದೀರಿ ಎಂದು ಲೇವಡಿ ಮಾಡಿದರು .
ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಈಗ ಹುಚ್ಚರಂತೆ ಹೇಳುವ ನೀವು , 2018 ರ ಚುನಾವಣೆಯಲ್ಲಿ ನಮ್ಮ ನಾಯಕರ ಮನೆ ಬಾಗಿಲಿಗೆ ಬಂದು ಸರಕಾರ ರಚಿಸುವಂತೆ ಮನವಿ ಮಾಡಿ ಮಂತ್ರಿ ಮಂಡಲದಲ್ಲಿ ಭಾಗಿಯಾಗಿದ್ದು , ತಾವಲ್ಲವೇ ಎಂದು ಪ್ರಶ್ನಿಸಿದರು
ಒಂದು ರಾಷ್ಟ್ರೀಯ ಪಕ್ಷದ ಸಿಎಲ್ ಪಿ ನಾಯಕರು ಎನಿಸಿಕೊಂಡಿರುವ ನಿಮ್ಮದು ಇಷ್ಟೆಲ್ಲಾ ಕಥೆಗಳಿವೆ . ಆದರೂ ಜೆಡಿಎಸ್ ಪಕ್ಷದ ಶಾಸಕರಾಗಿ ಮುಂದುವರೆಯುತ್ತಿರುವ ಶ್ರೀನಿವಾಸಗೌಡರ ಮನೆಯಲ್ಲಿ ಕುಳಿತು ಅದೇ ಪಕ್ಷದ ವಿರುದ್ಧ ಮಾತನಾಡುತ್ತೀರಿ ಎಂದರೆ ನೀವೊಬ್ಬ ಅವಕಾಶವಾದಿ , ಬ್ಲಾಕ್‌ಮೇಲ್ ರಾಜಕಾರಣ ಮಾಡಿಕೊಂಡು ಬದುಕುತ್ತಿರುವುದು ಅರ್ಥವಾಗುತ್ತಿದೆ . ಇನ್ನಾದರೂ ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ , ಇಲ್ಲದಿದ್ದರೆ ಗೌರವವಾಗಿ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಸಲಹೆ ನೀಡಿದರು .
ನಾವೇ ಪವರ್‌ಫುಲ್ , ಸಿದ್ಧರಾಮಯ್ಯರನ್ನು ಕೋಲಾರಕ್ಕೆ ಕರೆತರಲು ಶಾಸಕರಾದ ಕೆ.ಆರ್.ರಮೇಶ್‌ ಕುಮಾರ್‌ , ಕೆ.ಶ್ರೀನಿವಾಸಗೌಡ ಮೋಸ್ಟ್ ವೆಲ್‌ಕಂ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ . ಸಿದ್ದರಾಮಯ್ಯರೇ ಅಲ್ಲ , ಯಾರೇ ಬರಲಿ . ಸಿದ್ದರಾಮಯ್ಯರಿಗಿಂತ ಹೆಚ್ಚು ಮತಗಳು ಗಳಿಸುವಷ್ಟು ಶಕ್ತಿ ನಮಗೂ ಇದೆ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ನಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸುತ್ತೇವೆ ಎನ್ನುವುದೇ ಮುಖ್ಯ ಎಂದ ಅವರು , ಮುಂಬರುವ ಚುನಾವಣೆಯಲ್ಲಿ ನಾವೆ ಪವರ್‌ಫುಲ್‌ ಆಗುತ್ತೇವೆ . ನಮ್ಮದ ಪಕ್ಷದ್ದೇ ನಿರ್ಣಾಯಕ ಆಗುತ್ತದೆ . ಶ್ರೀನಿವಾಸಗೌಡರು ಸೇರಿದಂತೆ ಯಾರು ಬೇಕಾದರೂ ಕಾಂಗ್ರೆಸ್‌ಗೆ ಹೋಗಲಿ , ಈಗಾಗಲೇ ಪಂಚರಾಜ್ಯ ಚುನಾವಣೆ ಫಲಿತಾಂಶದಿಂದಲೇ ಪರಿಸ್ಥಿತಿ ಅರ್ಥವಾಗಿದ್ದು , ಮುಂದೆ ಜೆಡಿಎಸ್‌ಗೆ ಒಳ್ಳೆಯ ಭವಿಷ್ಯ ಇದೆ ಎಂದು ತಿಳಿಸಿದರು .
ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ , ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸ್ವಂತ ಶಕ್ತಿ ಇಲ್ಲದ ಕೆಲವರು ಸಿದ್ದರಾಮಯ್ಯ ಕೋಲಾರಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ . ಆ ಮೂಲಕ ತಮ್ಮ ಗೆಲುವಿಗೆ ಸಲೀಸು ಮಾರ್ಗ ಹುಡುಕಿಕೊ೦ಡು ಹೊರಟಿದ್ದಾರೆಂದು ಲೇವಡಿ ಮಾಡಿದರು .
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ , ಮಾಜಿ ಸದಸ್ಯ ಕಿತ್ತಂಡೂರು ನಂಜುಂಡಪ್ಪ , ತಾಪಂ ಮಾಜಿ ಸದಸ್ಯ ಗೋಪಾಲಗೌಡ , ನಗರಸಭೆ ಸದಸ್ಯ ವಡಗೂರು ರಾಕೇಶ್ , ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮತ್ತಿತರರಿದ್ದರು .

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಕುಣಿತ ಭಜನಾ ತರಬೇತುದಾರರಿಗೆ ಸನ್ಮಾನ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ವತಿಯಿಂದ ಕುಣಿತ ಭಜನಾ ತರಬೇತುದಾರರಾಗಿ ತರಬೇತಿ ನೀಡಿದ ಮಾವಿನಕಟ್ಟೆ ಶ್ರೀ ಮಹಾಮ್ಮಾಯಿ ಭಜನಾ ಮಂಡಳಿಯ ಅಧ್ಯಕ್ಷರಾದ ಗಣಪತಿ ದೇವಾಡಿಗ ಹಾಗೂ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಕುಣಿತ ಭಜನಾ ತರಬೇತುದಾರರಾದ ರಾಜೇಂದ್ರ ಶೆಟ್ಟಿಗಾರ್ ಅವರನ್ನು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ವೇದಿಕೆಯಲ್ಲಿ ಜರಗಿದ ಪ್ರಥಮ ವರ್ಷದ ಭಜನೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಬೆಳ್ಮಣ್ಣು ಜೇಸಿಐ ಅಧ್ಯಕ್ಷ ವೀಣೇಶ್ ಅಮೀನ್, ಜೇಸಿಐ ನಿಕಟ ಪೂರ್ವ ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಗೌರವಾಧ್ಯಕ್ಷ ರಾಜು ಶೆಟ್ಟಿ, ಪೂರ್ವಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ರಘುವೀರ್ ಶೆಟ್ಟಿ, ಆನಂದ ಪೂಜಾರಿ, ದಿನೇಶ್ ಬೀರೊಟ್ಟು, ರಾಜೇಶ್ ಕೋಟ್ಯಾನ್, ಸತೀಶ್ ಪೂಜಾರಿ, ಉದಯ ಅಂಚನ್ ಮೊದಲಾದವರಿದ್ದರು.
ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿ ಸನ್ಮಾನಿತರ ಪರಿಚಯ ನೀಡಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ವಂದಿಸಿದರು.

ಸಂಕಷ್ಟದಲ್ಲಿರುವ ರೈತರನ್ನು ರಕ್ಷಣೆ ಮಾಡಬೇಕು ಮುಂದಿನ ದಿನಗಳಲ್ಲಿ ಕೃಷಿಯನ್ನೇ ತೊರೆದು ಕೂಲಿ ಮಾಡುವ ಮಟ್ಟಕ್ಕೆ ತಲುಪಬಹುದು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ಮಾ-15, ಮಾವಿನ ಹೂವಿಗೆ ಬಾದಿಸುತ್ತಿರುವ ಅಂಟುರೋಗ (ಜಿಗಿ ಹುಳು) ನಿಯಂತ್ರಣಕ್ಕೆ ಉಚಿತ ಔಷದಿಯನ್ನು ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತರನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ತೋಟಗಾರಿಕ ಸಹಾಯಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು.


ಜಿಲ್ಲೆಯ ರೈತರನ್ನು ನಿದ್ದೆ ಗೆಡಿಸುತ್ತಿರುವ ಟೆಮೋಟೋಗೆ ಊಜಿಕಾಟ ಕ್ಯಾಪ್ಸಿಕಂಗೆ ನುಸಿರೋಗ ಕಾಟ ಹೂ ಮತ್ತು ಆಲುಗಡ್ಡೆಗೆ ಅಂಗಮಾರಿ ಕಾಟ ಈಗ ಮಾವು ಬೆಳೆಗಾರರಿಗೆ ಜಿಗಣಿ ಹುಳ ಕಾಟದಿಂದ ಮುಕ್ತಿಯಾಗಲು ಗುಣಮಟ್ಟದ ಔಷಧಿ ದೊರೆಯದೆ ಕಂಗಾಲಾಗಿರುವ ರೈತರು ಮುಂದಿನ ದಿನಗಳಲ್ಲಿ ಕೃಷಿಯನ್ನೇ ತೊರೆದು ಕೂಲಿ ಮಾಡುವ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ರೈತರ ಮುಂದಿನ ಭವಿಷ್ಯ ನುಡಿದರು.
ಜಿಲ್ಲಾದ್ಯಂತ ಮಾವಿನ ಮರಗಳು ಸಮೃದ್ದವಾದ ಹೂಗಳಿಂದ ಕಂಗಳಿಸುತ್ತಿದ್ದು, ಜೇನು ದುಂಬಿಗಳ ಪರಾಗಸ್ಪರ್ಶ ದಿಂದ ಈಗಾಗಲೆ ಬಹುತೇಕ ಮಾವಿನ ಪಿಂದೆಗಳು ಆರಂಭವಾಗಿರುವ ಕೃಷಿಯಲ್ಲಿರುವ ರೈತರಿಗೆ ಹೂ ಮತ್ತು ಪಿಂದೆಗಳನ್ನು ಕಾಡುತ್ತಿರುವ ಕ್ವಾಟರ್ ಪಿಲ್ಲರ್ಮ ಮತ್ತು ಅಪರ್ಸ್ ಹುಳುಗಳ ದಾಳಿಯಿಂದ ಕೈಗೆ ಬಂದಿರುವ ಪಸಲು ಸಂಪೂರ್ಣವಾಗಿ ನಾಶವಾಗು ಬೀತಿಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದರು ಅಧಿಕಾರಿಗಳು ರೈತರಿಗೆ ಸ್ಪಂಧಿಸುತ್ತಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಜನವರಿ ಸಮಯದಲ್ಲಿ ಗಿಡದಲ್ಲಿ ಹೂ ಅರಳಿ ಈ ಭಾರಿ ಉತ್ತಮವಾದ ಅಧಿಕ ಪ್ರಮಾಣದ ಪಸಲು ಬರುವ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಆದಾಯದ ಮೂಲಕ ಸಾಲ
ತೀರಿಸಿಕೊಳ್ಳುವ ಆಸೆಯಲ್ಲಿದ್ದ ರೈತರಿಗೆ ಆಕಾಶವೇ ಕಳಚಿಬಿದ್ದಂತೆ ಮಾವುಗೆ ಕಾಡುತ್ತಿರುವ ಅಂಟುರೋಗ ನಿಯಂತ್ರಣಕ್ಕೆ ದಿಕ್ಕುತೋಚದಂತಾಗಿದೆ. ಜಿಲ್ಲಾದ್ಯಂತ ಪ್ರತಿಷ್ಠಿತ ಔಷದಿ ಕಂಪನಿಗಳಲ್ಲಿ ಸಾವಿರಾರು ರೂಪಾಯಿ ಹಣ ನೀಡಿ ಔಷದಿ ಸಿಂಪರಣೆ ಮಾಡುತ್ತಿದ್ದರು ಹತೋಟಿಗೆ ಬರುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರೈತರ
ಕೈಗೆ ಸಿಗುತ್ತಿಲ್ಲವೆಂದು ಆರೋಪ ಮಾಡಿದರು. ಉತ್ತಮ ಪಸಲಿನ ನಿರೀಕ್ಷೆಯಿಂದ ಸಸ್ಯ ಸಂರಕ್ಷಣ ಕ್ರಮಗಳನ್ನು
ಕೈಗೊಂಡು ಖರ್ಚು ಮಾಡಿದ್ದ ಹಣವು ಬಾರದ ಸ್ಥಿತಿಯಲ್ಲಿ ಮಾವು ಬೆಳೆ ಇದೆ. ತೋಟ ಗುತ್ತಿಗೆ ಪಡೆಯುತ್ತಿದ್ದ, ವ್ಯಾಪಾರಸ್ಥರು ಬೆಳೆಯ ಸ್ಥಿತಿಗತಿ ಕಂಡು ವಾಪಸ್ಸಾಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕಷ್ಟಾಪಟ್ಟು ಮಾವು ತೋಟ ನಿರ್ಮಿಸಿ ಮಾವು ಬೆಳೆದು ಇದನ್ನೇ ನಚ್ಚಿಕೊಂಡ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ ಎಂದು ಅಧಿಕಾರಿಗಳಿಗೆ ವಿವರಣೆ ಮಾಡಿದರು. ಹಿಂದೆಂದು ಈ ಪ್ರಮಾಣದಲ್ಲಿ ಅಂಟುರೋಗ ಕಂಡುಬಂದಿಲ್ಲ. ಪ್ರತಿಯೊಂದು ಗಿಡ ಅಂಟು ಕಟ್ಟಿಕೊಂಡಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಸಂಬಂಧಪಟ್ಟ ವಿಜ್ಞಾನಿಗಳನ್ನು ಕರೆಯಿಸಿ ಅಂಟುರೋಗಕ್ಕೆ ಗುಣಮಟ್ಟದ ಔಷಧಿಯನ್ನು ಉಚಿತವಾಗಿ ನೀಡುವ ಮುಖಾಂತರ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರದ ತೋಟಗಾರಿಕಾ ಸಚಿವರು ನಿಲ್ಲಬೇಕು ಇಲ್ಲವಾದರೆ ಮಾವಿನ ಅಂಟು ರೋಗದ ಹೂ ಸಮೇತ ಶಾಸಕರ
ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕ ಸಹಾಯಕ ನಿರ್ದೇಶಕರಾದ ಹರೀಶ್ ಕುಮಾರ್ ಮಾವು ಹೂ ಮತ್ತು ಪಿಂದಿಗೆ ಬಾದಿಸುತ್ತಿರುವ ಅಂಟು ರೋಗದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗುಣಮಟ್ಟದ ಔಷಧಿ ವಿತರಣೆದ ಮಾಡಿ ರೈತರ ರಕ್ಷಣೆ ಮಾಡುವ ಭರವಸೆಯನ್ನು ನೀಡಿದರು. ಈ ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ
ಐತಂಡಹಳ್ಳಿ ಮಂಜುನಾಥ, ಹಸಿರು ಸೇನೆ ತಾ.ಅಧ್ಯಕ್ಷ ಆಚಂಪಲ್ಲಿ ಗಂಗಾದರ್, ಆಲವಾಟಿ ಶಿವ, ದ್ಯಾವಂಡಹಳ್ಳಿ ರಾಜಣ್ಣ, ಸಹದೇವಪ್ಪ, ಶೇಕ್‍ಷಪಿವುಲ್ಲಾ, ಕೋಲಾರ ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾ
ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ, ರಾಯಲ್ಪಾಡು ಹರೀಶ್, ತೆರ್ನಹಳ್ಳಿ ವೆಂಕಿ, ವೆಂಕಟಸ್ವಾಮಿಗೌಡ, ರಮೇಶ್. ಮುಂತಾದವರಿದ್ದರು.

ಹೈದರಾಬಾದಿನ ನಡೆದ ಕರಾಟೆ ಸ್ಫರ್ಧೆಯಲ್ಲಿ ಒಕಿನೋವಾ ಗೋಜೂ-ರೈ ಕರಾಟೆ ಶಾಲೆಯ ಸ್ಪರ್ದಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಇತ್ತೀಚೆಗೆ ಹೈದರಾಬಾದಿನಲ್ಲಿ ಜಿ.ಎಸ್.ಕೆ. ಗೋಜೂ- ರೈ ಡೂ ಶಾಲೆಯಲ್ಲಿ ನಡೆದಿರುವ ಅಂತರ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಶ್ರೀನಿವಾಸಪುರದ ಒಕಿನೋವಾ ಗೋಜೂ-ರೈ ಕರಾಟೆ ಶಾಲೆಯ ಸ್ಪರ್ದಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ ಶ್ರೀ ವೇಣು ವಿದ್ಯಾ ಸಂಸ್ಥೆಯ 10ನೇ ತರಗತಿಯ ನಮೀಷ್ ಹೆಚ್.ಎನ್. ಬಿ. ವಿಭಾಗ ಪ್ರಥಮ ಸ್ಥಾನ ಹಾಗೂ (ಐ.ಸಿ.ಎಸ್.ಇ) ವಿಭಾಗದ ವಿದ್ಯಾರ್ಥಿನಿ
6ನೇ ತರಗತಿಯ ತನುಶ್ರೀ ಬಿ.ವಿ. ಪ್ರಥಮ ಸ್ಥಾನ ಗಳಿಸಿದ್ದಾರೆ.
ಶ್ರೀನಿವಾಸಪುರದ ಒಕಿನೋವಾ ಗೋಜೂ-ರೈ ಕರಾಟೆ ಶಾಲೆಯ ಸ್ಪರ್ದಾರ್ಥಿಗಳು ಭಾಗವಹಿಸಿ ವಿಜೇತರಾಗಿ ಹಾಗೂ ಮೆಡಲ್ ಮತ್ತು ಪ್ರಶಸ್ತಿ ಪತ್ರಗಳ ಜೊತೆಗೆ ಮೆಡೆಲ್,ಟ್ರೋಫಿಯನ್ನು ಪಡೆದಿರುತ್ತಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಬಿ. ಗೋಪಾಲಗೌಡ ಹಾಗೂ ಕರ್ನಾಟಕ ಸರ್ಕಾರಿ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬೈರೇಗೌಡರವರು ಉಪಸ್ಥಿತರಿದ್ದು, ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಮಕ್ಕಳು ಭಾಗವಹಿಸಬೇಕೆಂದು ತಿಳಿಸಿದರು.ಕರಾಟೆ ತರಬೇತುದಾರ ಗ್ರಾಂಡ್ ಮಾಸ್ಟರ್ ಹೆಚ್. ಎನ್. ನರಸಿಂಹಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,
ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂತೊಷದಿಂದಿರಲು ಕ್ರೀಡೆಗಳಲ್ಲಿ ಹಾಗೂ ಕರಾಟೆಯನ್ನು ಅರಿಯುವುದು ಉತ್ತಮವೆಂದು ತಿಳಿಸುತ್ತಾ, ಮುಖ್ಯವಾಗಿ ಹೆಣ್ಣು ಮಕ್ಕಳು ಕರಾಟೆ ಅರಿಯಿವುದು ಉತ್ತಮವೆಂದು ಹೇಳಿದರು.

ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯಿಂದ ಡಿಜಿಟಲ್ ಸದಸ್ಯತ್ವ ಅಭಿಯಾನ ಬ್ಲಾಕ್ ಕಾಂಗ್ರೆಸ್ ಕುಂದಾಪುರ.

JANANUDI.COM NETWORK

ನೂರಾರು ವರ್ಷಗಳ ಹೋರಾಟದಿಂದ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ ಇದು ಒಂದು ಆಂದೋಲನ ,ದೇಶದ ಜನರೇ ರೂಪಿಸಿದ ಸಂಘಟನೆ .ಭಾರತ ಪ್ರಜಾಪ್ರಭುತ್ವ ,ಸಂವಿಧಾನ ಉಳಿಸಲು, ಸೌಹಾರ್ದತೆ ಮತ್ತು ಐಕ್ಯತೆಯನ್ನು ಕಾಪಾಡಲು ಕಟಿಬದ್ಧವಾಗಿರುವ ಪಕ್ಷ.
ದೇಶ ಈಗ ಮತ್ತೊಮ್ಮೆ ಸಂಕಷ್ಟದಲ್ಲಿದೆ .ಬೆಲೆಯೇರಿಕೆ, ನಿರುದ್ಯೋಗ ,ಸರ್ವಾಧಿಕಾರ ,ಜನವಿರೋಧಿ ಧೋರಣೆಗಳಿಂದ ದೇಶದ ಜನತೆಗೆ ಮುಕ್ತಿ ಬೇಕಾಗಿದೆ .ಭಾರತವನ್ನು ಮತ್ತೆ ಅಭಿವೃದ್ಧಿ ಹಾದಿಗೆ ಮರಳಿಸಬೇಕಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆ ತರಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದೆ.

ಬ್ಲಾಕ್ ಕಾಂಗ್ರೆಸ್ ಕುಂದಾಪುರ ಡಿಜಿಟಲ್ ಸದಸ್ಯತ್ವದ ಅಭಿಯಾನವು ಈಗಾಗಲೇ ಪುರಸಭೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬೂತ್ ಎನ್ರೋಲರ್ ಮೂಲಕ ನಡೆಯುತ್ತಿದೆ. ಬೂತ್ ಹಂತದಲ್ಲಿ ಇಬ್ಬರು ನೊಂದಣಿ ಕಾರರು ಇದ್ದು ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವವನ್ನು ಪಡೆಯುತ್ತಿದ್ದಾರೆ. ಪುರಸಭಾ ಸದಸ್ಯೆ ಶ್ರೀಮತಿ ಪ್ರಭಾವತಿ ಶೆಟ್ಟಿ ತಮ್ಮ ಬೂತ್ ನಲ್ಲಿ ನೂರಕ್ಕೂ ಹೆಚ್ಚು ಸದಸ್ಯರನ್ನು ಈಗಾಗಲೇ ನೊಂದಾಯಿಸಿ ಸದಸ್ಯತ್ವ ನೊಂದಣಿಯ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಲಾಡಿ ಜಿಲ್ಲಾ ಪಂಚಾಯತ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಕೃಷ್ಣ ಪೂಜಾರಿ, ವಾಣಿ ಶೆಟ್ಟಿ ,ಕೋಟೇಶ್ವರದ ಜಿಲ್ಲಾ ಪಂಚಾಯತ್ ನಲ್ಲಿ ವಿನ್ಸಿಲ್ ಅಲ್ಮೇಡ್, ಜೋಸೆಫ್ ರೆಬೆಲ್ಲೊ ಬೂತ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ನೋಂದಾಯಿಸಿದ್ದಾರೆ.


ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯಲು ಆಸಕ್ತರಿರುವವರು ತಮ್ಮ ವೋಟರ್ ಐಡಿಯ ಮಾಹಿತಿಯನ್ನು ನೀಡಿ ಕಚೇರಿ ಸಿಬ್ಬಂದಿಯಿಂದ ಸದಸ್ಯತ್ವ ಪಡೆಯಬಹುದು, ಇಲ್ಲವಾದಲ್ಲಿ ಬೂತ್ ಎನ್ರೋಲರ್ ಮಾಹಿತಿಯನ್ನು ಪಡೆದು ತಮ್ಮ ಬೂತಲ್ಲಿ ಸದಸ್ಯತ್ವ ನೋಂದಾಯಿಸ ಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಮನವಿಯನ್ನು ಮಾಡಿಕೊಂಡಿದ್ದಾರೆ.


ಕಚೇರಿ ಸಮಯ ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ.
ಮೋಬೈಲ್ ಸಂಖ್ಯೆ. 9480591862

ನೋಂದಾವಣಿ ಗೆ ಕೊನೆಯ ದಿನಾಂಕ 31-3-2022

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ 25 ಸದಸ್ಯರಿಂದ ನೇತ್ರದಾನ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ಣು ಹುಮ್ಯಾನಿಟಿ ಟ್ರಸ್ಟಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಂದು ಆಯೋಜಿಸಿದ ನೇತ್ರದಾನ ಸಂಕಲ್ಪ ಶಿಬಿರದಲ್ಲಿ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 25 ಸದಸ್ಯರಿಂದ ಸ್ವಯಂಪೇರಿತರಾಗಿ ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದರು.

ಇವರಿಗೆ ಬೆಳ್ಮಣ್ಣು ಹುಮ್ಯಾನಿಟಿ ಟ್ರಸ್ಟಿನ ರೋಶನ್ ಬೆಳ್ಮಣ್ಣು ಅವರು ಪ್ರಮಾಣ ಪತ್ರ ನೀಡಿ ಸಮಾಜಮುಖಿ ಕಾರ್ಯಗಳಿಗೆ ಸದಾ ಮುಂದೆ ನಿಂತು ಸಹಕರಿಸುತ್ತಿರುವ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರ ಸಾಧನೆ ಪ್ರಶಂಸನಿಯವೆಂದರು.

ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷರಾದ ದಿನೇಶ್ ಬೀರೊಟ್ಟು, ಸತೀಶ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಕಾರ್ಯದರ್ಶಿ ಸುರೇಶ್ ಕಾಸ್ರಬೈಲು, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಹರಿಣಾಕ್ಷಿ ನಂದೀಶ್, ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಸದಸ್ಯರಾದ ಸುದರ್ಶನ್ ಕುಂದರ್, ಕೀರ್ತನ್ ಕುಮಾರ್, ಪ್ರಶಾಂತ್ ಬೋಳ, ಲೀಲಾ ಪೂಜಾರಿ, ಪದ್ಮಶ್ರೀ ಪೂಜಾರಿ , ಅಶ್ವಿನಿ ಪ್ರಭಾಕರ್, ಆರತಿ ಕುಮಾರಿ ಮೊದಲಾದವರಿದ್ದರು

ಕೃಷಿಕರ ಮಗಳು ಗ್ರಾಮೀಣ ಪ್ರತಿಭೆ ಸಿವಿಲ್ ಜಡ್ಜ್ ಆಗಿ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ನಂಬಿಗಾನಹಳ್ಳಿ ಸುಷ್ಮಾ

ಕೋಲಾರ,ಮಾ.14: ಕರ್ನಾಟಕ ಉಚ್ಚ ನ್ಯಾಯಾಲಯದ 2021ನೇ ನೇ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ರಲ್ಲಿ ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಮಾಲೂರಿನ ನಂಬಿಗಾನಹಳ್ಳಿ ಸುಷ್ಮಾ ಅವರು ಆಯ್ಕೆಯಾಗಿದ್ದಾರೆ.
ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಸುಷ್ಮಾ ಸಿವಿಲ್ ಜಡ್ಜ್ ಆಗುವ ಮೂಲಕ ಸಾಧನೆ ಮಾಡಿದ್ದಾರೆ.
ಸುಷ್ಮಾರವರು ಚಿಕ್ಕ ಮರಿಯಪ್ಪ ಹಾಗೂ ನಾರಾಯಣಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.
ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದರ ವರೆಗೂ ಹಾಗೂ ದೊಡ್ಡಶಿವಾರ ಗ್ರಾಮದಲ್ಲಿ 6ರಿಂದ 10ರವರೆಗೆ, ಮಾಲೂರು ಬಾಲಕಿಯರ ಕಾಲೇಜಿನಲ್ಲಿ ಪಿಯುಸಿ, ಮಾಲೂರು ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.
ನಂತರ ಕೋಲಾರದ ಬಸವಶ್ರೀ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. ಮಾಲೂರಿನ ಹಿರಿಯ ವಕೀಲರಾದ ಎಂ ಮುನಿರಾಜು ಅವರ ಕಚೇರಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ವಕೀಲ ತರಬೇತಿ ವೃತ್ತಿಯಲ್ಲಿ ಸಾಗಿ ಇಂದು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾಗಿದ್ದಾರೆ.