ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಸುಗಟೂರು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ರಾವಣೋತ್ಸವದ ಅಂಗವಾಗಿ ದೀಪೋತ್ಸವ ಏರ್ಪಡಿಸಲಾಗಿತ್ತು.
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ನೇತ್ರ ತಜ್ಞ ಡಾ. ದೇವಾಜ್ ಹೇಳಿದರು.
ತಾಲ್ಲೂಕಿನ ಬೈರಗಾನಪಲ್ಲಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ ಶುಕ್ರವಾರ ಏರ್ಪಡಿಸಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯನ ಅಂಗಾಂಗಳಲ್ಲಿ ನೇತ್ರ ಪ್ರಧಾನವಾದುದು. ನೇತ್ರ ರೋಗವನ್ನು ನಿರ್ಲಕ್ಷಿಸಿದರೆ ಅಂಧಕಾರ ಆವರಿಸುವ ಸಾಧ್ಯತೆತೆ ಇರುತ್ತದೆ. ಎಷ್ಟೋ ಜನ ಕಣ್ಣಿಲ್ಲದೆ ಪರಿತಪಿಸುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಇರುವ ಕಣ್ಣನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ನಿರ್ದೇಶಕ ಸುರೇಶ್ ಗೌಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವವರು ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ದೃಷ್ಟಿ ಮಂದವಾಗುವುದನ್ನು ತಪ್ಪಿಸಬೇಕು. ಅಗತ್ಯ ಇರುವ ನೇತ್ರ ರೋಗಿಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ, ಉಚಿತವಾಗಿ ಕನ್ನಡಕ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಬಡವರ ಪಾಲಿಗೆ ದೊಡ್ಡ ಭರವಸೆಯಾಗಿದೆ. ಅದು ಕೈಗೊಂಡಿರುವ ಸಮಾಜ ಸೇವಾ ಕಾರ್ಯಗಳು ಹಾಗೂ ಆರ್ಥಿಕಾಭಿವೃದ್ದಿ ಯೋಜನೆಗಳು ಜನರನ್ನು ಸದೃಢಗಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಮಣ, ಮೇಲ್ವಿಚಾರಕ ವೆಂಕಟೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಈರಮ್ಮ ನಾಗರಾಳ, ಸೇವಾ ಪ್ರತಿನಿಧಿಗಳಾದ ಧನಲಕ್ಷ್ಮಿ, ¯ಕ್ಷ್ಮಿ ನವೀನ್ ಇದ್ದರು.
JANANUDI.COM NETWORK

ಮುಂಬೈ: ಮಾತುಬಾರದ 13 ವರ್ಷದ ಬಾಲಕನನ್ನು ಕೊಲೆಗೈದು ಗೋಣಿ ಚೀಲದೊಳಗೆ ತುಂಬಿ ಎಸೆದಿರುವ ಅಮಾನುಷ್ಯ ಘಟನೆ ಪುಣೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಬಾಲಕನಿಗೆ ಮಾತು ಬರುತ್ತಿರಲಿಲ್ಲ. ಬಾಲಕನನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಎಸೆದಿದ್ದು, ಕೊತ್ರುದ್ ಪ್ರದೇಶದಲ್ಲಿ ಗೋಣಿ ಚೀಲ ಒಂದರಲ್ಲಿ ಶವ ಪತ್ತೆಯಾಗಿದೆ. ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಸ್ಥಳಕ್ಕೆ ಕೊತ್ರುಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕೊತ್ರುಡ್ ಠಾಣಾ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಪುರಸಭೆ ವತಿಯಿಂದ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಸಲಾಯಿತು.
ಹರಾಜಿನಲ್ಲಿ ದಿನವಹಿ ಮಾರುಕಟ್ಟೆ ವಾರ್ಷಿಕ ರೂ.10.20 ಲಕ್ಷ, ವಾರದ ಸಂತೆ 3.68 ಲಕ್ಷ, ಕಸಾಯಿ ಖಾನೆ ರೂ.8500, ಬಸ್ ನಿಲ್ದಾಣ ಶುಲ್ಕ ರೂ.2.56 ಲಕ್ಷ, ತಾಲ್ಲೂಕು ಕಚೇರಿ ಮುಂಭಾಗದ ಶೌಚಾಲಯ ಶುಲ್ಕ ರೂ.18000, ಪುರಸಭೆ ವಾಣಿಜ್ಯ ಮಾರುಕಟ್ಟೆಯಲ್ಲಿರುವ ಶೌಚಾಲಯ ಶುಲ್ಕ ರೂ.16,000, ಮುಸಾಫಿರ್ ಖಾನಾ ನೆಲಮಹಡಿ ವಾಹನ ನಿಲುಗಡೆ ಶುಲ್ಕ ರೂ.70,000 ಕ್ಕೆ ಹರಾಜು ಮಾಡಲಾಯಿತು.
ಈ ಹರಾಜಿನಿಂದ ಪುರಸಭೆಗೆ ವಾರ್ಷಿಕ ಒಟ್ಟು ರೂ.17.56 ಲಕ್ಷ ವರಮಾನ ಸಿಕ್ಕಿದೆ.
ಪುರಸಭಾದ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಂದಾಯ ನಿಕೀಕ್ಷಕ ವಿ.ನಾಗರಾಜ್, ಎನ್.ಶಂಕರ್, ನಾಗೇಶ್, ವೆಂಕಟೇಶ್, ಸುರೇಶ್, ಮುನಿರಾಜು, ಆನಂದ್ ಇದ್ದರು.
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಾಗರಿಕರು ಸಹಕರಿಸಬೇಕು. ವೈಯಕ್ತಿಕ ಹಿತದೃಷ್ಟಿಯಿಂದ ಯಾವುದೇ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುವುದನ್ನು ಬಿಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ರಾಜಧಾನಿ ಮಾವಿನ ಕಾಯಿ ಮಂಡಿ ಸಮೀಪ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಪಟ್ಟಣದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಶ್ರೀನಿವಾಸಪುರ ಚಿಂತಾಮಣಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಕೆಳಸೇತುವೆಯಲ್ಲಿ ಮಳೆಗಾಲ ನೀರು ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೆ ನೀರು ಹೊರ ಹೋಗಲು ಕಾಲುವೆ ನಿರ್ಮಿಸಲು ಸಮೀಪದ ನಾಗರಿಕರು ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ಹುಸೇನ್ ಸಾಬ್, ಸಹಾಯಕ ಎಂಜಿನಿಯರ್ ನಾಗರಾಜ್, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಮಲ್ಲಿಕಾರ್ಜುನ್, ಗಿತ್ತಿಗೆದಾರ ಭಕ್ತವತ್ಸಲಂ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಸದಸ್ಯರಾದ ಭಾಸ್ಕರ್, ಸಂಜಯ್ ಸಿಂಗ್, ಶ್ರೀನಾಥ್, ಕೆ.ಅನ್ನೀಸ್ ಅಹ್ಮದ್, ಮುಖಂಡರಾದ ದಿಂಬಾಲ ಅಶೋಕ್, ಕೆ.ಕೆ.ಮಂಜುನಾಥರೆಡ್ಡಿ ಇದ್ದರು.
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಮಾ.24- ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎನ್. ಪ್ರವೀಣ್ ವಿರುದ್ದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಏ.7ರಂದು ನಡೆಯುವ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ವಿರುದ್ದವಾಗಿ ಮತ ಅಥವಾ ಕೈ ಎತ್ತುವುದರ ಮೂಲಕ ಮತ ಚಲಾಯಿಸಬೇಕೆಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ನಗರಸಭೆ ಎಲ್ಲಾ 8 ಮಂದಿ ಜೆಡಿಎಸ್ ಸದಸ್ಯರಿಗೆ ಮಾ.24ರಂದು ಸಚೇತನ(ವಿಪ್) ಜಾರಿ ಮಾಡಿದ್ದಾರೆ.
ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್ ಅವರ ವಿರುದ್ದ ಕಾಂಗ್ರೆಸ್ ಸದಸ್ಯರ ಜೊತೆಗೂಡಿ ಬಿಜೆಪಿಯ ಓರ್ವ, ಜೆಡಿಎಸ್‍ನ ನಾಲ್ವರು ಸದಸ್ಯರು ಸಹಿ ಮಾಡಿದ್ದಾರೆ. ಕೋಲಾರ ತಾಲೂಕು ಜೆಡಿಎಸ್ ಅಧ್ಯಕ್ಷೆ ಕೆ.ಆರ್.ರಾಜರಾಜೇಶ್ವರಿ ಅವರು ನಗರಸಭೆ ಉಪಾಧ್ಯಕ್ಷ ಎನ್.ಎಸ್. ಪ್ರವೀಣ್ ವಿರುದ್ದವಾಗಿ ಸಹಿ ಮಾಡಿರುವ ನಾಲ್ವರು ಜೆಡಿಎಸ್ ಸದಸ್ಯರು ಸೇರಿ ಒಟ್ಟು 8ಮಂದಿ ಸದಸ್ಯರು ಮಾ.23ರಂದು ತಾಲೂಕು ಕಚೇರಿಗೆÀ ಬಂದು ಹೇಳಿಕೆ ನೀಡುವಂತೆ ನೋಟೀಸ್ ಜಾರಿ ಮಾಡಿದ್ದರು.
ಸಭೆಗೆ ಬಂದಿದ್ದ ಆರು ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನ ಅಧ್ಯಕ್ಷೆ ಕೆ.ಆರ್.ರಾಜೇಶ್ವರಿ ಅವರ ಮುಂದೆ ಮಂಡಿಸಿದ್ದರು. ಆದರೆ ಅಧ್ಯಕ್ಷೆ ಶ್ವೇತ ಶಬರೀಶ್, ಕೆ.ಮಂಜುನಾಥ್ ಗೈರು ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ವಕೀಲರಾದ ರತ್ನಮ್ಮ ಅವರು ಒಬ್ಬೊಬ್ಬ ಜೆಡಿಎಸ್ ಸದಸ್ಯರ ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದರು.
ಉಪಾಧ್ಯಕ್ಷ ಎನ್.ಎಸ್.ಪ್ರವೀಣ್ ಮಾತನಾಡಿ ನಾನು ಯಾವುದೇ ರೀತಿ ಪಕ್ಷಕ್ಕೆ ಕಳಂಕವಾಗುವಂತೆ ನಡೆದುಕೊಂಡಿಲ್ಲ, ಭ್ರಷ್ಟಚಾರ ನಡೆಸಿಲ್ಲ. ಹಗರಣಗಳು ನಡೆಸಿಲ್ಲ. ನಮಗೆ ಬಹುಮತ ಇಲ್ಲದಿದ್ದರೂ ಪಕ್ಷೇತರರು ಹಾಗೂ ವಿಪಕ್ಷದವರ ಬೆಂಬಲದಿಂದ ಅಧಿಕಾರವನ್ನು ಪಡೆದಿದ್ದೇವೆ. ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಆಡಳಿತವನ್ನು ನಡೆಸಲಾಗುತ್ತಿದೆ.
ವಿನಾಕಾರಣ ಅಧ್ಯಕ್ಷೆ ಶ್ವೇತಶಬರೀಶ್ ಅವರು ಕಾಂಗ್ರೆಸ್ ಬಿ.ಎಂ.ಮುಬಾರಕ್ ಅವರೊಂದಿಗೆ ಪರೋಕ್ಷವಾಗಿ ಕೈ ಜೋಡಿಸಿ ನನ್ನ ವಿರುದ್ದ ವೈಯುಕ್ತವಾಗಿ ಹಗೆ ಸಾಧಿಸುತ್ತಿದ್ದಾರೆ. ಕಳೆದ 7 ತಿಂಗಳಿಂದಲೂ ನನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ತಾವುಗಳು ಆಗಲೇ ಶಿಸ್ತು ಕ್ರಮಕ್ಕೆ ಮುಂದಾಗಿದ್ದರೆ ಇಂದು ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ ಎಂದು ಸಭೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ
ಬುಧವಾರ ಕೋಲಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಆರು ಮಂದಿ ಜೆಡಿಎಸ್ ಸದಸ್ಯರ ಅಭಿಪ್ರಾಯ ಹಾಗೂ ಅವರು ಕೊಟ್ಟಿರುವ ಹೇಳಿಕೆಯನ್ನು ತೆಗೆದುಕೊಂಡು ಪೋಟೋ ಮತ್ತು ವಿಡಿಯೋ ಸಮೇತ ಮಾ.24ರಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ತಾಲೂಕು ಅಧ್ಯಕ್ಷೆ ಕೆ.ಆರ್.ರಾಜರಾಜೇಶ್ವರಿ ನೇತೃತ್ವದಲ್ಲಿ ನಗರಸಭೆ ಉಪಾಧ್ಯಕ್ಷ ಎನ್.ಎಸ್. ಪ್ರವೀಣ್ ಮತ್ತಿತರ ಸದಸ್ಯರುಗಳು ಭೇಟಿ ಮಾಡಿ ಚರ್ಚಿಸಿದರು.
ಕೋಲಾರ ನಗರಸಭೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಅಧ್ಯಕ್ಷೆ ಶ್ವೇತಶಬರೀಶ್ ಅವರು ಕಾಂಗ್ರೆಸ್ ಸದಸ್ಯರೊಂದಿಗೆ ಶಾಮೀಲಾಗಿ ಉಪಾಧ್ಯಕ್ಷರ ವಿರುದ್ದ ಪರೋಕ್ಷವಾಗಿ ಅವಿಶ್ವಾಸ ಮಂಡನೆಗೆ ಮುಂದಾಗಿರುವುದನ್ನ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ.
ನಂತರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎನ್. ಪ್ರವೀಣ್ ವಿರುದ್ದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿರು ಬಗ್ಗೆ ಅವರ ಗಮನಕ್ಕೆ ತಂದರು. ಅಲ್ಲದೆ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್‍ನ ನಾಲ್ವರು ಸದಸ್ಯರು ಕೂಡ ಸಹಿ ಮಾಡಿದ್ದಾರೆ ಅನ್ನೋದನ್ನ ದಾಖಲೆಗಳ ಸಮೇತ ಅವರಿಗೆ ಮನವರಿಕೆ ಮಾಡಿಕೊಟ್ಟರು. ಮಾ.23ರಂದು ಕೋಲಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಸದಸ್ಯರು ಕೊಟ್ಟಿರುವ ಹೇಳಿಕೆಗಳ ದಾಖಲೆಗಳನ್ನು ರಾಜ್ಯಾಧ್ಯಕ್ಷರಿಗೆ ತಲುಪಿಸಿದರು.
ವಿಪ್ ಜಾರಿ: ಕೋಲಾರ ನಗರಸಭೆಯಲ್ಲಿ ಏ.7ರಂದು ನಡೆಯುವ ಸಭೆಯಲ್ಲಿ ಪ್ರವೀಣ್ ಎನ್.ಎಸ್. ಉಪಾಧ್ಯಕ್ಷರು ಕೋಲಾರ ನಗರಸಭೆ ಇವರ ವಿರುದ್ದ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯದ ವಿರುದ್ದವಾಗಿ ಮತ ಅಥವಾ ಕೈ ಎತ್ತುವುದರ ಮೂಲಕ ಮತ ಚಲಾಯಿಸಬೇಕೆಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರು ಕೋಲಾರ ನಗರಸಭೆ ಎಲ್ಲಾ 8 ಮಂದಿ ಜೆಡಿಎಸ್ ಸದಸ್ಯರಿಗೆ ಮಾ.24ರಂದು ಸಚೇತನ(ವಿಪ್) ಜಾರಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜ್, ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಮಾಜಿ ಸದಸ್ಯ ರಾಕೇಶ್ ಹಾಜರಿದ್ದರು.
JANANUDI.COM NETWORK

ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ 11 ವರ್ಷ ಪ್ರಾಯದ ವಿದ್ಯಾರ್ಥಿ ತಕ್ಶಿಲ್ (Thakshil) ಮೆದುಳು ಕೇನ್ಸರ್ ನಿಂದ ಬಳಲುತ್ತಿದ್ದು K.M.C. ಮಣಿಪಾಲ್ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತನ ಚಿಕಿತ್ಸೆಗಾಗಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯಿಂದ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ರು ಗಳಾದ ಗಣೇಶ್ ಆಚಾರ್ಯ, ಸೋನಿ ಡಿಕೋಸ್ಟಾ, ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ತಕ್ಶಿಲ್ ನ ತಾಯಿ ಈ ದೇಣಿಗೆ ಸ್ವೀಕರಿಸಿದರು.
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ಶ್ರೀನಿವಾಸಪುರ ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಚರಂಡಿ ಒಂದೇ ಪ್ಯಾಕೇಜ್ ನಡಿಯಲ್ಲಿ ಮಂಜೂರಾಗಿದ್ದು ಸುಮಾರು ಒಂದು ವರ್ಷದ ಹಿಂದೆಯೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಆ ಸಮಯದಲ್ಲಿ ಪಟ್ಟಣದಲ್ಲಿ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಲು ಗುತ್ತಿಗೆದಾರರು ಮುಂದಾಗಿದ್ದರು ರಸ್ತೆ ಬದಿಯ ಅಂಗಡಿ ಮಾಲೀಕರು ಹಾಗೂ ಅಕ್ಕಪಕ್ಕದ ಮನೆ ಮಾಲೀಕರು ತಕರಾರು ಮಾಡಿ ಚರಂಡಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು ಕಳೆದ ಕೆಲವು ತಿಂಗಳಿಗಳಿಂದ ವ್ಯವಸ್ಥಿತವಾಗಿ ಚರಂಡಿ ಗಳಿಲ್ಲದೆ ಪರದಾಡುತ್ತಿದ್ದ ಅಂಗಡಿ ಮಾಲೀಕರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಸಹ ಮಾಡಿ ಪುರಸಭೆಯ ಅಧಿಕಾರಿಗಳು ಹಾಗೂ ಅಧ್ಯಕ್ಷರು ತಾಲ್ಲೂಕಿನ ಶಾಸಕರಾದ ಕೆ ಅರ್ ರಮೇಶ್ ಕುಮಾರ್ ಗಮನಕ್ಕೂ ತರಲಾಗಿತ್ತು ಶಾಸಕರು ಕೇಂದ್ರ ಸಚಿವರ ಜೊತೆ ಮಾತನಾಡಿ ಪಟ್ಟಣದ ಚರಂಡಿ ಕಾಮಗಾರಿ ವಿಚಾರಗಳನ್ನು ಪ್ರಸ್ತಾಪ ಮಾಡಿ ಸಮಸ್ಯೆಯನ್ನು ಅರಿವು ಮೂಡಿಸಿ ಪುನಃ ನಿನ್ನೆ ಚರಂಡಿ ಕಾಮಗಾರಿಗೆ ಭೂಮಿಪೂಜೆಯನ್ನು ತಾಲೂಕಿನ ಹಾಲಿ ಶಾಸಕರಾದ ಕೆ ಆರ್ ರಮೇಶ್ ಕುಮಾರ್ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ನೆರವೇರಿಸಿದರು ಇನ್ನು ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಇ ಓ ಆನಂದ್,ಹುಸೇನ್ ಸಾಬ್, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಅಕ್ಬರ್ ಷರೀಫ್ ಪುರಸಭೆ ಸದಸ್ಯ ಕೆ ಅನೀಸ್ ಅಹ್ಮದ್ ಇಫ್ತೆಖಾರ್ ಅಹ್ಮದ್ ಶಬ್ಬೀರ್ ಖಾನ್ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಖಾದರ್, ಪುರಸಭೆಯ ಮಾಜಿ ಸದಸ್ಯ ಶಂಕರ್ ಜಾಮಿಯಾ ಮಸೀದಿ ಮುತುವಲ್ಲಿ ಝಹೀದ್ ಅನ್ಸಾರಿ ,ಗುತ್ತಿಗೆದಾರರಾದ ಭಕ್ತವತ್ಸಲರೆಡ್ಡಿ, ಹರೀಶ್ , ಅಶೋಕ್ ಇದ್ದರು.
