HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ವಾರ್ಷಿಕ್ ರೆತಿರ್ ಆರಂಭ್- ಫಾ|ರಿಚ್ಚರ್ಡ್ ಕಾಪುಚಿನ್ ಆನಿ ಪಂಗಡ್ ರೆತಿರ್ ಚಲವ್ನ್ ವ್ಹರ್ತಾತ್

ಪಯ್ಲ್ಯಾ ದೀಸ್‍ಚ್ ಸಭಾರಾಂಕ್ ಉಪ್ಕಾರ್ ಫಾವೊ ಜಾಲಾಂ- ಬ್ರದರ್ ಉರ್ಬಾನ್

JANANUDI.COM NETWORK

ಕುಂದಾಪುರ್, ಮಾ.24: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಮಾರ್ಚಾಚ್ಯಾ 24 ವೆರ್ ವಾರ್ಷಿಕ್ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಮಂಗಳೂರ್ ಡಿವೈನ್ ಮರ್ಸಿಚೊ ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಆನಿ ತಾಚೊ ಪಂಗಡ್ ಚಲವ್ನ್ ವ್ಹರ್ತಾತ್.
ರೆತಿರ್ ಆರಂಭ್ ಜಾಲ್ಯಾ ಪಯ್ಲ್ಯಾ ದೀಸ್‍ಚ್ ಸಭಾರಾಂಕ್ ಉಪ್ಕಾರ್ ಫಾವೊ ಜಾಲಾಂ ಮ್ಹಣುನ್ ಬ್ರದರ್ ಉರ್ಬಾನ್ ಡಿಸೋಜಾನ್ ಕಳಯ್ಲೆ. ರೆತಿರೆಕ್ ಬ್ರದರ್ ಆಲ್ಬನ್ ಡಿಸೋಜಾ ಗಾಯನ್ ಆನಿ ವಾಜ್‍ಂತ್ರ್ ಖೆಳೊನ್ ಸಾಂಗಾತ್ ದಿಲೊ. ಸಹಾಯಕ್ ಯಾಜಕ್ ಮಾ|ಬಾ|ವಿಜಯ್ ಡಿಸೋಜಾನ್ ಸ್ವಾಗತ್ ಮಾಗೊನ್ ಡಿವೈನ್ ಮರ್ಸಿ ಪಂಗ್ಡಾಚಿ ಒಳಕ್ ಕರ್ನ್ ದಿಂವ್ನ್ ಸಹ ಬಲಿದಾನ್ ಭೆಟಯ್ಲೆ.
ಫಾಲ್ಯಾ ಮಾರ್ಚ್ 25 ವೆರ್ ಸಾಂಜೆರ್ 4 ವೊರಾರ್ ಆರಂಭ್ ಜಾಂವ್ಚ್ಯಾ ರೆತಿರೆಂತ್ ಕುಡಿಚ್ಯಾ ಪೀಡೆ ಖಾತಿರ್ ವಿಶೇಸ್ ಆರಾದಾನ್ ಆಸಾ ಮ್ಹಣುನ್ ಮಾ|ಬಾ|ರಿಚ್ಚರ್ಡ್ ಕಾಸ್ಟೆಲೀನೊನ್ ಕಳಯ್ಲಾ. ತಶೆಂಚ್ ಫಾಲ್ಯ ವಿಶೇಸ್ ಥರಾನ್ ಖುರ್ಸಾಚೆ ಆರಾದಾನ್ ಆಸ್ತೆಲೆಂ.

ಹೆಣ್ಣು ಮಕ್ಕಳು ಚುನಾವಣೆ ಬಂದಾಗ ಹಣ ಆಮಿಷಗಳಿಗೆ ಸ್ವಾಭಿಮಾನ ಬಲಿ ಕೊಡದಿರಿ -ಬ್ಯಾಲಹಳ್ಳಿ ಗೋವಿಂದಗೌಡ ಕರೆ

ಶುದ್ದ ಮನಸ್ಸಿನಿಂದ ಮತ ಚಲಾಯಿಸಿ ದೇಶ,ಸಮಾಜ ಉಳಿಸಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕುವ ಜನ ಚುನಾವಣೆ ಬಂದಾಗ ತಮ್ಮ ಸ್ವಾಭಿಮಾನವನ್ನು ಆಮಿಷಗಳಿಗೆ ಬಲಿಕೊಡದೇ ಶುದ್ಧ ಮನಸ್ಸಿನಿಂದ ಮತ ಚಲಾಯಿಸುವ ಮೂಲಕ ಸಮಾಜ ಹಾಗೂ ದೇಶವನ್ನು ಉಳಿಸಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ ಗೋವಿಂದಗೌಡ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಗುಂಪುಗಳಿಗೆ ಎರಡು ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಪರಿಸ್ಥಿತಿಯಲ್ಲಿ ಸಮಾಜಸೇವೆಗೆ ಇಲ್ಲಿ ಬೆಲೆ ಇಲ್ಲ, ಬರಿ ಹಣ ಆಮಿಷಗಳಿಗೆ ಬಲಿಯಾಗುವ ಪರಿಸ್ಥಿತಿ ಎದುರಾಗುತ್ತಿದೆ, ಇದರಿಂದ ದೇಶ ಹಾಗೂ ಸಮಾಜಕ್ಕೆ ಕಂಟಕ ಎಂದು ಅಭಿಪ್ರಾಯಪಟ್ಟ ಅವರು, ಮಹಿಳೆಯರು ಮನಸ್ಸು ಮಾಡಿದರೆ ಮಾತ್ರ ರಾಜಕಾರಣದಲ್ಲಿನ ಕೊಳಕನ್ನು ಸ್ವಚ್ಚಪಡಿಸಬಹುದು ಎಂದರು.
ಸಮಾಜದಲ್ಲಿ ಹೆಣ್ಣಿಗೆ ಗೌರವ ನೀಡಿದರೇ ಸಮಾಜಕ್ಕೆ ಗೌರವ ನೀಡಿದಂತೆ ಚುನಾವಣೆ ಸಂದರ್ಭದಲ್ಲಿ ಹೆಣ್ಣುಮಕ್ಕಳನ್ನು ಹಣದ ಆಮಿಷಗಳಿಗೆ ಯಾಮಾರಿಸುವರು ಇದ್ದಾರೆ, ಅಂತಹ ಆಸೆಗಳಿಗೆ ಮಾರು ಹೋಗಬಾರದು ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡು ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ಹೆಣ್ಣು ಮಕ್ಕಳಿಗೆ ಎರಡು ಲಕ್ಷ ಸಾಲ ನೀಡುವ ಶಕ್ತಿ ಡಿಸಿಸಿ ಬ್ಯಾಂಕ್‍ಗೆ ಇದೆ ಆದರೆ ಸಾಲ ಮರುಪಾವತಿ ಉಳಿತಾಯ, ಹಾಗೂ ವಹಿವಾಟನ್ನು ಡಿಸಿಸಿ ಬ್ಯಾಂಕ್ ನಲ್ಲಿ ಪ್ರತಿಯೊಬ್ಬರೂ ಮಾಡುವಂತಾಗಬೇಕು, ಸಾಲ ನೀಡಲು ಅಲೆದಾಡಿಸಿ ಜನರ ರಕ್ತ ಹೀರುವ ಖಾಸಗಿ ಬ್ಯಾಂಕುಗಳಿಂದ ದೂರವಿರಿ, ಸಹಕಾರಿ ರಂಗವನ್ನು ಉಳಿಸಿ ಬೆಳೆಸುವ ಮೂಲಕ ನಿಮ್ಮ ಠೇವಣಿ ಹಣ ಇಲ್ಲೇ ಇಟ್ಟು, ಮತ್ತಷ್ಟು ತಾಯಂದಿರಿಗೆ ನೆರವಾಗಲು ನೀವೂ ಕಾರಣರಾಗಿ ಎಂದು ಕಿವಿ ಮಾತು ಹೇಳಿದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನಿಂದ ಪ್ರತಿನಿತ್ಯ 5 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದ್ದು, ಇದಕ್ಕೆ ಮೂಲ ಶಕ್ತಿ ಹೆಣ್ಣು ಮಕ್ಕಳು, ತಾಲೂಕಿನ ಚಿನ್ನಾಪುರ ಗ್ರಾಮದ ದಲಿತ ಹೆಣ್ಣು ಮಕ್ಕಳು ಎರಡು ಜಿಲ್ಲೆಗೆ ಮಾದರಿಯಾಗಿದ್ದಾರೆ, 50 ಸಾವಿರದಿಂದ 2 ಲಕ್ಷ ಸಾಲ ಪಡೆದಿದ್ದಾರೆ, ಅವರ ಸ್ವಾಭಿಮಾನದ ಬದುಕು ಇತರರಿಗೆ ಮಾದರಿಯಾಗಿದ್ದು, ಉಳಿತಾಯದ ಹಣ ಡಿಸಿಸಿ ಬ್ಯಾಂಕಿನಲ್ಲೇ ಇಟ್ಟು ಬ್ಯಾಂಕನ್ನು ಬೆಳೆಸಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ದೇಶದಲ್ಲಿ ಭದ್ರತೆ ರಹಿತವಾಗಿ ಸಾಲ ಕೊಟ್ಟ ಇತಿಹಾಸ ಕೋಲಾರ ಡಿಸಿಸಿ ಬ್ಯಾಂಕ್‍ಗೆ ಮಾತ್ರವಿದೆ, ಹೆಣ್ಣು ಮಕ್ಕಳೇ ನಮ್ಮ ಬ್ಯಾಂಕಿಗೆ ಭದ್ರತೆಯಾಗಿದ್ದಾರೆ, ಆ ನಂಬಿಕೆಯಿಂದಳೇ 900 ಕೋಟಿ ಸಾಲವನ್ನು ತಾಯಂದಿರಿಗೆ ನೀಡಿದ್ದೇವೆ, ಅದೇ ತಾಯಂದಿರು ಇಂದು ಸುಮಾರು 325 ಕೋಟಿ ಉಳಿತಾಯ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಬ್ಯಾಂಕ್ ನಿಮಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ನಿಮಗೆ ಆರ್ಥಿಕ ಶಕ್ತಿ ತುಂಬುತ್ತಿದೆ, ಈ ಹಣವನ್ನು ನೀವು ಆಧಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿ, ಆರ್ಥಿಕವಾಗಿ ಶಕ್ತಿ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ನಿರ್ದೇಶಕ ಯಲವಾರ ಸೊಣ್ಣೇಗೌಡ, ಡಿಸಿಸಿ ಬ್ಯಾಂಕ್ ನಿಮಗೆ ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಾಲ ನೀಡುತ್ತಿದೆ, ನೀವು ಯಾರಿಗೂ ಲಂಚ ನೀಡಬೇಕಾಗಿಲ್ಲ, ನಿಮ್ಮ ಉಳಿತಾಯ ಖಾತೆಗೆ ನೇರವಾಗಿ ಸಾಲದ ಹಣ ಬರುತ್ತಿದೆ, ಈ ನೆರವು ಸದುಪಯೋಗಪಡಿಸಿಕೊಂಡು ಬ್ಯಾಂಕಿನಲ್ಲೇ ಉಳಿತಾಯ ಮಾಡಿ ಎಂದು ಕೋರಿದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ, ಡಿಸಿಸಿಬ್ಯಾಂಕ್ ಮಹಿಳೆಯರಿಗೆ ಶಕ್ತಿ ತುಂಬಿದೆ, ಮೀಟರ್ ಬಡ್ಡಿ ದಂಧೆಯಿಂದ ರಕ್ಷಣೆ ಒದಗಿಸಿದೆ, ಈ ಬ್ಯಾಂಕ್ ನಮ್ಮ ದೇವಾಲಯ, ತವರು ಮನೆ ಎಂದು ಭಾವಿಸೋಣ, ಬ್ಯಾಂಕಿಗೆ ಮೋಸ ಮಾಡದೇ ಸಾಲವನ್ನು ಸಮರ್ಪಕವಾಗಿ ಮರುಪಾವತಿಸಿ, ನಮ್ಮ ಉಳಿತಾಯದ ಹಣ ಇಲ್ಲೇ ಇಟ್ಟು ಶಕ್ತಿ ತುಂಬೋಣ ಎಂದರು.
ಗೋವಿಂದಗೌಡರು
ಶಾಸಕರಾಗಬೇಕು
ಕಾರ್ಯಕ್ರಮದಲ್ಲಿ ಚಿನ್ನಾಪುರ ಮಹಿಳಾ ಸಂಘದ ಸದಸ್ಯೆ ನಾರಾಯಣಮ್ಮ ಮಾತನಾಡಿ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಾಲದ ಪ್ರತಿ ಪೈಸೆಯೂ ನಮ್ಮ ಉಳಿತಾಯ ಖಾತೆಗೆ ಸೇರುವಂತೆ ಮಾಡಿರುವ ಗೋವಿಂದಗೌಡರು ಶಾಸಕರಾಗಬೇಕು, ಮಹಿಳೆಯರು ಯಾರ್ಯಾರೋ ನೀಡುವ ಹಣ ಆಮಿಷಗಳಿಗೆ ಬಲಿಯಾಗದೇ ಅವರನ್ನು ಆಯ್ಕೆ ಮಾಡುವ ಸಂಕಲ್ಪ ಮಾಡಬೇಕು ಎಂದು ತಿಳಿಸಿ, ಬ್ಯಾಂಕ್ ಅಧ್ಯಕ್ಷರೇ ಶಾಸಕರಾದರೆ ನಮಗೆ ಈಗ ನೀಡುತ್ತಿರುವ 5 ಲಕ್ಷ ಬಡ್ಡಿರಹಿತ ಸಾಲ 10 ಲಕ್ಷಕ್ಕೇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಸಾಲದ ಚೆಕ್‍ಗಳನ್ನು ಪಡೆದುಕೊಂಡರು.

ಸೌದಿ ಆರೇಬಿಯಾಕ್ಕೆ ಪ್ರವೇಶೆಸಿಲು ಇನ್ನು ಮು೦ದೆ ಲಸಿಕೆ ಪ್ರಮಾಣಪತ್ರಗಳ ಅಗತ್ಯವಿಲ್ಲ

JANANUDI.COM NETWORK

ರಿಯಾದ್‌ : ವಿದೇಶಗಳಿ೦ದ ಬರುವ ಜನರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ನು ಮು೦ದೆ ಲಸಿಕ ಪ್ರಮಾಣಪತ್ರದ ಅಗತ್ಯವಿಲ್ಲ ಎ೦ದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಲಸಿಕೆ ಪ್ರಮಾಣ ಶೇ.99ರಷ್ಟಿದ್ದು, ಪಾಸಿಟಿವಿಟಿ ದರ ಶೇ.4ಕ್ಕಿ೦ತ ಕಡಿಮ ಇರುವುದರಿಂದ ನಿರ್ಬಂಧಗಳಲ್ಲಿ ಸಡಿಲಿಕೆ ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾವನ್ನು ಪ್ರವೇಶಿಸಲು ಇನ್ನು ಮುಂದೆ ಲಸಿಕೆ ಪ್ರಮಾಣಪತ್ರದ ಅಗತ್ಯವಿಲ್ಲ, ಕೋವಿಡ್‌ -19 ಪರೀಕ್ಷೆ ಅಥವಾ ಯಾವುದೇ ರೀತಿಯ ಕ್ವಾರ್ಟಾಯ್ನ್ ಇಲ್ಲ ಎ೦ಬುದು ಮೂರು ಹೊಸ ಅಧಿಕೃತ ಘೋಷಣೆಗಳಾಗಿವೆ. ಅದೇ ಸಮಯದಲ್ಲಿ, ಮುಖಿಮ್‌ ನೋಂದಣಿಯನ್ನು ಕಡ್ಮಾಯಗೊಳಿಸಲಾಗಿದೆ.

ಕೋಲಾರ ನಗರಕ್ಕೆ ಸಮರ್ಪಕ ನೀರು ಪೂರೈಕೆಗೆ ಹಾಗೂ ವೈಜ್ಞಾನಿಕ ಕಸ ವಿಂಗಡನೆಗೆ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಮಾ.23 : ಕೋಲಾರ ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಕೂಡಲೇ ಸರಿಪಡಿಸಬೇಕು ಹಾಗೂ 32 ವಾರ್ಡುಗಳ ಕಸವನ್ನು ಕಸ ವಿಂಗಡನೆ ಮಾಡದೆ ಸುರಿಯುತ್ತಿರುವದನ್ನು ಖಂಡಿಸಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಮನವಿ ಪತ್ರವನ್ನು ಕೋಲಾರ ನಗರಸಭೆಯ ಆಯುಕ್ತರಿಗೆ ಸಲ್ಲಿಸಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ಕೋಲಾರ ನಗರದಲ್ಲಿ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದ್ದು, ನೀರಿನ ಅಭಾವವನ್ನು ನೀಗಿಸಲು ನಗರಸಭೆ ಅಧಿಕಾರಿಯಾದ ತಾವು ಎಲ್ಲಾ ವಾರ್ಡುಗಳಿಗೂ ಭೇಟಿ ನೀಡಿ ಪ್ರತಿ ವಾರ್ಡಿನಲ್ಲಿಯೂ ಕೂಡ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದ ರೀತಿ ಕ್ರಮ ಕೈಗೊಳ್ಳಬೇಕು. ಹಾಗೂ ನಗರದಲ್ಲಿನ ವಾರ್ಡುಗಳಲ್ಲಿರುವ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲಲ್ಲಿ ಅಪಘಾತಗಳೂ ಸಹ ಸಂಭವಿಸುತ್ತಿದೆ. ದೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.
ನಗರದ ವಾರ್ಡುಗಳಲ್ಲಿ ಕಸ ಶೇಖರಣೆ ಮಾಡಿ ಅದನ್ನು ವಿಂಗಡನೆ ಮಾಡದೆ ಒಟ್ಟಾಗಿ ಅನಧಿಕೃತವಾಗಿ ಚಿಂತಾಮಣಿ ರಸ್ತೆಯ ಪಕ್ಕದಲ್ಲಿ ಕಾನೂನು ಬಾಹಿರವಾಗಿ ಸುರಿಯುತ್ತಿದ್ದಾರೆ. ತಮ್ಮ ಗಮನಕ್ಕೆ ಇದ್ದರೂ ಕೂಡ ಸುತ್ತಮುತ್ತಲಿನ ಹಳ್ಳಿಯ ಜನಕ್ಕೆ ಆ ಕಸದಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಮಟ್ಟಕ್ಕೆ ಕಸ ವಿಲೇವಾರಿಯನ್ನು ಮಾಡುತ್ತಿದ್ದೀರಿ ವೈಜ್ಞಾನಿಕವಾಗಿ ಕಸವಿಲೇವಾರಿ ಘಟಕಗಳನ್ನು ಕೂಡಲೇ ನಿರ್ಮಾಣ ಮಾಡಬೇಕು. ಈ ಹಿಂದೆ ಎಲ್ಲಾ ಅಧಿಕಾರಿಗಳು ಅಧ್ಯಕ್ಷರು ಹಾಲಿ, ಮಾಜಿ ನಗರಸಭೆ ಅಧಿಕಾರಿಗಳು ಕೆಂದಟ್ಟಿ ಬಳಿ ಹೋಗಿ ಗುದ್ದಲಿ ಪೂಜೆ ನೆರವೇರಿಸಿದ್ದೀರಿ. ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರವರು 10 ಎಕರೆ ಜಾಗವನ್ನು ಮಂಜೂರು ಮಾಡಿದ್ದೇನೆ ಎಂದು ತಿಳಿಸಿದರು. ನೀವು ಸಹ ಆ ಜಾಗಲ್ಲಿ ಪೂಜೆಯನ್ನು ಮಾಡಿರುತ್ತೀರಿ. ಬರೀ ಮೂರು ತಿಂಗಳ ಒಳಗೆ ಕೆಂದಟ್ಟಿ ಬಳಿ ನೂತನ ಕಸ ವಿಲೇವಾರಿ ಘಟಕವನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದಾಗಿ ತಿಳಿಸಿದ್ದು, ಇದುವರೆಗೂ ಯಾವುದೇ ಕಾಮಗಾರಿ ನಡೆಸದೆ ಅನಧಿಕೃತವಾಗಿ ಕಸವನ್ನು ಚಿಂತಾಮಣಿ ರಸ್ತೆಯಲ್ಲಿ ಸುರಿಯುತ್ತಿರುವುದು ಕಾನೂನು ಬಾಹಿರವಲ್ಲವೇ? ಯಾಕೆ ನೀವು ಕೋಲಾರ ನಗರವನ್ನು ಹಾಳುಗೆಡವುತ್ತಿದೀರಿ ಎಂದು ಎಂದು ಪ್ರಶ್ನಿಸಿದರು. ಹಾಗೂ ಕೂಡಲೇ ನಗರದ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಮಿ, ಜಿಲ್ಲಾ ಗೌರವಾಧ್ಯಕ್ಷ ಕೊಲದೇವಿ ಗೋಪಾಕೃಷ್ಣಮೂರ್ತಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ಕೋಲಾರ ತಾಲ್ಲೂಕು ಅಧ್ಯಕ್ಷ ಪಿ.ಎಂ.ಜಗನ್ನಾಥರೆಡ್ಡಿ, ಮುಳಬಾಗಿಲು ನಗರ ಅಧ್ಯಕ್ಷ ಹೆಚ್.ಎಂ.ಆರ್. ಸತೀಶ್, ರೈತ ಮುಖಂಡರು ಉತ್ತನೂರು ಶಿವಣ್ಣ ಭಾಗವಹಿಸಿದ್ದರು.

ಕೋಲಾರ ನಗರಸಭೆ ಉಪಾಧ್ಯಕ್ಷ ವಿರುದ್ದ ಅವಿಶ್ವಾಸ ಮಂಡನೆಗೆ ಸಹಿ : ಜೆಡಿಎಸ್ ಸಿದ್ದಾಂತ ಉಲಂಘಿಸಿದವರ ವಿರುದ್ದ ಶಿಸ್ತು ಕ್ರಮ- ತಾಲೂಕು ಅಧ್ಯಕ್ಷೆ ರಾಜರಾಜೇಶ್ವರಿ ಎಚ್ಚರಿಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಮಾ.23: ಕೋಲಾರ ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಕಾಂಗ್ರೆಸ್ ಸದಸ್ಯರ ಜೊತೆಗೂಡಿ ಜೆಡಿಎಸ್‍ನ ನಾಲ್ವರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಬುಧವಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಅಧ್ಯಕ್ಷೆ ಕೆ.ಆರ್. ರಾಜರಾಜೇಶ್ವರಿ ನೇತೃತ್ವದಲ್ಲಿ ಸಭೆ ನಡೆಯಿತು.
ಜೆಡಿಎಸ್ ಪಕ್ಷದ ಗಮನಕ್ಕೆ ತಾರದೆ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸದಸ್ಯರ ಜೊತೆಗೂಡಿ ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಕಾರಣ ನೀಡುವಂತೆ ಜೆಡಿಎಸ್ ಪಕ್ಷದಿಂದ ಗೆದ್ದಿರುವ ಎಲ್ಲಾ 8 ಸದಸ್ಯರು ಮಾ.23ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆಗೆ ಹಾಜರಾಗಬೇಕೆಂದು ನೋಟೀಸ್ ನೀಡಲಾಗಿತ್ತು.
ಈ ಸಭೆಗೆ ಜೆಡಿಎಸ್ ಪಕ್ಷದ ಪ್ರವೀಣ್‍ಗೌಡ, ಸೂರಿ, ರಾಕೇಶ್, ಇದಾಯತ್ ಹಾಜರಾಗಿದ್ದರೆ, ಶಮತಾಜ್ ಪರವಾಗಿ ಅವರ ಪತಿ ಮಹ್ಮದ್ ರಫೀ, ನಗ್ಮಾಭಾನು ಪರವಾಗಿ ಏಜಾಜ್ ಆಗಮಿಸಿದ್ದರು. ಆದರೆ ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್ ಮತ್ತು ಕೆ.ಮಂಜುನಾಥ್ ಸಭೆಗೆ ಗೈರು ಹಾಜರಾಗಿದ್ದರು.
ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯದ ಪರವಾಗಿ ಕಾಂಗ್ರೆಸ್ ಜೊತೆಗೂಡಿ ಸಹಿ ಮಾಡಿರುವ ಬಗ್ಗೆ ಸಭೆಯಲ್ಲಿದ್ದ ಸದಸ್ಯರುಗಳಿಂದ ತಾಲೂಕು ಅಧ್ಯಕ್ಷ ಕುರ್ಕಿ ರಾಜರಾಜೇಶ್ವರಿ ಮಾಹಿತಿ ಪಡೆದುಕೊಂಡರು.
ಜೆಡಿಎಸ್ ಸದಸ್ಯ ಇದಾಯತ್ ಮಾತನಾಡಿ, ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ಸಂಸದ ಎಸ್.ಮುನಿಸ್ವಾಮಿ ಅವರ ಜೊತೆಯಲ್ಲಿ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನನಗೆ ಇಷ್ಟವಾಗಲಿಲ್ಲ ಅದಕ್ಕಾಗಿಯೇ ನಾನು ಕಾಂಗ್ರೆಸ್ ಸದಸ್ಯರು ಜೊತೆಗೂಡಿ ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾಗಿ ಹೇಳಿದರು.
ಇನ್ನುಳಿದಂತೆ ಸದಸ್ಯೆ ಶಮತಾಜ್ ಪರವಾಗಿ ಅವರ ಪತಿ ಮಹಮ್ಮದ್ ರಫೀ ಮಾತನಾಡಿ, ಅಧ್ಯಕ್ಷರು-ಉಪಾಧ್ಯಕ್ಷರ ನಡುವೆ ಹೊಂದಾಣಿಕೆಯಿಲ್ಲ, ಇದರಿಂದ ನಮ್ಮ ವಾರ್ಡ್‍ಗಳಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಅದಕ್ಕಾಗಿ ನಮ್ಮ ಪತ್ನಿ ಉಪಾಧ್ಯಕ್ಷರ ವಿರುದ್ದ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ ಎಂದು ಹೇಳಿದರೆ ಮತ್ತೋರ್ವ ಸದಸ್ಯೆ ನಗ್ಮಾಭಾನು ಪರವಾಗಿ ಅವರ ಪತಿ ಏಜಾಜ್ ಮಾತನಾಡಿ, ಜೆಡಿಎಸ್ ಪಕ್ಷದಿಂದ ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ನನ್ನ ಪತ್ನಿ ಸಹಕಾರ ಕೊಡುತ್ತಾರೆ ಎಂದು ಹೇಳಿದರು.
ಇನ್ನೂ ಉಪಾಧ್ಯಕ್ಷ ಪ್ರವೀಣ್‍ಗೌಡ, ನಾನು ಯಾವುದೇ ರೀತಿ ಪಕ್ಷಕ್ಕೆ ಕಳಂಕವಾಗುವಂತೆ ನಡೆದುಕೊಂಡಿಲ್ಲ, ಭ್ರಷ್ಟಚಾರ ನಡೆಸಿಲ್ಲ. ಹಗರಣಗಳು ನಡೆಸಿಲ್ಲ. ನಮಗೆ ಬಹುಮತ ಇಲ್ಲದಿದ್ದರೂ ಪಕ್ಷೇತರರು ಹಾಗೂ ವಿಪಕ್ಷದವರ ಬೆಂಬಲದಿಂದ ಅಧಿಕಾರವನ್ನು ಪಡೆದಿದ್ದೇವು. ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಆಡಳಿತ ನಡೆಸಲಾಗುತ್ತಿತ್ತು.
ವಿನಾಕಾರಣ ಅಧ್ಯಕ್ಷೆ ಶ್ವೇತಶಬರೀಶ್ ವಿಪಕ್ಷದವರೊಂದಿಗೆ ಶಾಮೀಲಾಗಿ ನನ್ನ ವಿರುದ್ದ ವೈಯುಕ್ತವಾಗಿ ಹಗೆ ಸಾಧಿಸುತ್ತಿದ್ದಾರೆ. ಕಳೆದ 7 ತಿಂಗಳಿಂದ ನನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ತಾವುಗಳು ಆಗಲೇ ಶಿಸ್ತು ಕ್ರಮಕ್ಕೆ ಮುಂದಾಗಿದ್ದರೆ ಇಂದು ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಸೂರಿ, ರಾಕೇಶ್ ಮಾತನಾಡಿ, ಕೋಲಾರ ನಗರಸಭೆಯಲ್ಲಿ 8 ಜೆಡಿಎಸ್ ಸದಸ್ಯರಿದ್ದಾರೆ. ಅದರಲ್ಲಿ ನಾಲ್ಕು ಮಂದಿ ಸದಸ್ಯರು ಕಾಂಗ್ರೆಸ್ ಮುಖಂಡರೊಂದಿಗೆ ಸೇರಿಕೊಂಡು ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ, ಯಾರು ಸಹಿ ಮಾಡಿದ್ದಾರೆ ಅವರ ವಿರುದ್ದ ಕಟ್ಟುನಿಟ್ಟನ ಕ್ರಮ ತೆಗೆದುಕೊಳ್ಳಬೇಕು, ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಪಕ್ಷ ಏನೇ ಸೂಚನೆ ಕೊಟ್ಟರು ಅದನ್ನ ನಾವು ಪಾಲನೆ ಮಾಡುತ್ತೇವೆ ಎಂದು ಸಭೆಯಲ್ಲಿ ಹೇಳಿದರು.
ಜೆಡಿಎಸ್ ಸದಸ್ಯರುಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಆರ್.ರಾಜರಾಜೇಶ್ವರಿ ಮಾತನಾಡಿ, ಜೆಡಿಎಸ್ ಪಕ್ಷದ ಗಮನಕ್ಕೆ ತಾರದೆ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿಕೊಂಡು ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿರುವುದು ಪಕ್ಷದ ಉಲ್ಲಂಘನೆಯಾಗಿದೆ. ಪಕ್ಷದ ವರಿಷ್ಠರ ಗಮನಕ್ಕೆ ಬಾರದಂತೆ ವಿಪಕ್ಷದವರೊಂದಿಗೆ ಸೇರಿಕೊಂಡು ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ಪಕ್ಷಕ್ಕೆ ದ್ರೋಹ ಬಗೆಯುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ನಗರಸಭೆಯ ವ್ಯಾಪ್ತಿಯಲ್ಲಿ ಪಕ್ಷದ ವತಿಯಿಂದ 8 ಮಂದಿ ಆಯ್ಕೆಯಾಗಿದ್ದಾರೆ. 8 ಮಂದಿಗೂ ಇಂದು ಸಭೆಗೆ ಹಾಜರಾಗಬೇಕೆಂದು ಸೂಚಿಸಿದ್ದರೂ ಸಹ 6 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದೀರಿ, ನಗರಸಭೆ ಅಧ್ಯಕ್ಷರು ಸೇರಿದಂತೆ ಇಬ್ಬರು ಪಕ್ಷದ ಸಭೆಗೆ ಗೈರು ಹಾಜರಾಗಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಸದಸ್ಯರುಗಳ ಅಭಿಪ್ರಾಯವನ್ನ ಸಂಗ್ರಹಿಸಿದ್ದು, ಮಾ.26ರ ಶನಿವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‍ಸಿ ಇಂಚರಗೋವಿಂದರಾಜು, ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್ ಅವರಿಗೆ ಈ ವರದಿಯನ್ನ ಸಲ್ಲಿಸುವುದಾಗಿ ಹೇಳಿದರು. ಇದನ್ನ ಮೀರಿ ಸದಸ್ಯರುಗಳು ನಡೆದುಕೊಂಡರೆ ಅವರ ವಿರುದ್ದ ಶಿಸ್ತು ಕ್ರಮಕ್ಕೆ ಜರುಗಿಸುವಂತೆ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ ಮಾಡುವುದಾಗಿ ಹೇಳಿದರು.
ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಕಾಂಗ್ರೆಸ್ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಏ.7ರಂದು ನಗರಸಭೆಯಲ್ಲಿ ಸಭೆಯನ್ನ ಕರೆಯಲಾಗಿದೆ. ಇಲ್ಲಿ ಜೆಡಿಎಸ್ ಪಕ್ಷದ ಸೂಚನೆಗಳನ್ನ ಎಲ್ಲಾ 8 ಸದಸ್ಯರುಗಳು ಪಾಲನೆ ಮಾಡಲೇಬೇಕು, ಇಲ್ಲವಾದರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು.
ಅಷ್ಟರೊಳಗೆ 8 ಮಂದಿ ಜೆಡಿಎಸ್ ಸದಸ್ಯರುಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿರುವ ಜೆಡಿಎಸ್ ಸದಸ್ಯರು ತಮ್ಮ ತಪ್ಪನ್ನ ತಿದ್ದುಕೊಂಡು ವಾಪಸ್ ಬಂದರೆ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ನಾಲ್ವರು ಸದಸ್ಯರು ಬರದೆ ಹೋದರೆ ಜೆಡಿಎಸ್ ವರಿಷ್ಟರ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ವಿಫ್ ಜಾರಿ ಮಾಡುತ್ತೇವೆ. ಇದನ್ನ ಮೀರಿ ಕಾಂಗ್ರೆಸ್ ಜೊತೆಗೂಡಿದರೆ ಆ ಸದಸ್ಯರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು, ಅಲ್ಲದೆ ವಿಫ್ ಉಲ್ಲಂಘನೆ ಮಾಡಿದರೆ ಅವರ ಸದಸ್ಯತ್ವ ರದ್ದು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜೆಡಿಎಸ್ ಪಕ್ಷದಿಂದ ಪತ್ರ ನೀಡಲಾಗುವುದು ಎಂದು ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಖಡಕ್ ಸಂದೇಶ ಕೊಟ್ಟರು.
ಈ ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ವಕೀಲರಾದ ರತ್ನಮ್ಮ, ತಾ.ಪಂ ಮಾಜಿ ಸದಸ್ಯ ಗೋಪಾಲಗೌಡ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜ್, ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಮಾಜಿ ಸದಸ್ಯ ವೆಂಕಟೇಶ್, ಅಣ್ಣಹಳ್ಳಿ ಯಾಮಣ್ಣ, ಉಮರ್, ಅನ್ವರ್ ಮತ್ತಿತರಿದ್ದರು.

ಕೆಜಿಎಫ್ ಕೊಳಚೆ ನಿವಾಸಿಗಳಿಗೆ ಸ್ವಂತ ಸೂರು ನೀಡಲು ಶಾಸಕಿ ರೂಪಕಲಾ ಆಗ್ರಹ


ಮನವಿಗೆ ಸಚಿವ ಸೋಮಣ್ಣ ಸ್ಪಂದನೆ-ತುರ್ತು ಸಭೆ-ಕುಟುಂಬಗಳ ಸರ್ವೆಗೆ ಸೂಚನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯ ಕೆಜಿಎಫ್ ನಗರದ ಸಂಕಷ್ಟದ ಬದುಕು ನಡೆಸುತ್ತಿರುವ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಸ್ವಂತ ಸೂರು ಒದಗಿಸುವ ಮೂಲಕ ನಗರಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರಾಜ್ಯ ವಸತಿ ಸಚಿವ ಸೋಮಣ್ಣ ಭರವಸೆ ನೀಡಿ, ಕುಟುಂಬಗಳ ಸಮಗ್ರ ಸರ್ವೇ ನಡೆಸಲು ಸೂಚನೆ ನೀಡಿದರು.
ವಿಧಾನಸಭಾ ಅಧಿವೇಶನದಲ್ಲಿ ಕೆಜಿಎಫ್ ನಗರದ ಕೊಳಚೆ ಪ್ರದೇಶದ ನಿವಾಸಿಗಳು, ಗಣಿ ಕಾರ್ಮಿಕ ಕುಟುಂಬಗಳಿರುವ ಬಡಾವಣೆಗಳ ದುಸ್ಥಿತಿ ಕುರಿತು ಧ್ವನಿಯೆತ್ತಿದ್ದ ಶಾಸಕಿ ರೂಪಕಲಾ ಅವರ ಮನವಿಗೆ ಸ್ಪಂದಿಸಿದ ಸಚಿವರು, ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಕೋಲಾರ ಜಿಲ್ಲಾಧಿಕಾರಿಗಳು, ಸ್ಲಂ ಬೋರ್ಡ್, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು.
ಹಾಲಿ ಕೆಜಿಎಫ್ ನಗರದಲ್ಲಿ ಘೋಷಿತ 17 ಕೊಳಚೆ ಪ್ರದೇಶಗಳಿವೆ, 15 ವಾರ್ಡುಗಳಲ್ಲಿ ಕೊಳಚೆ ಪ್ರದೇಶಗಳಂತಿರುವ 15 ಸ್ಲಂಗಳನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆ, ಜತೆಗೆ ಕೆಜಿಎಫ್‍ನಲ್ಲಿ ಗಣಿ ಕಾರ್ಮಿಕ ಕುಟುಂಬಳು ಶೆಡ್‍ಗಳಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲದೇ ಜೀವನ ನಡೆಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತರಲಾಯಿತು.
ಖುದ್ದು ಭೇಟಿಗೆ
ಸೋಮಣ್ಣ ಭರವಸೆ
ಸಚಿವ ಸೋಮಣ್ಣ ಮಾತನಾಡಿ, ನಾನೇ ಖುದ್ದ ಕೆಜಿಎಫ್ ನಗರಕ್ಕೆ ಭೇಟಿ ನೀಡುವುದಾಗಿ ತಿಳಿಸಿ, ಘೋಷಿತವಲ್ಲದ ಸ್ಲಂಗಳಲ್ಲಿನ ಪರಿಸ್ಥಿತಿ, ಕುಟುಂಗಳ ಸ್ಥಿತಿ, ಅವರ ಉದ್ಯೋಗ, ಜೀವನ ಮಟ್ಟದ ಕುರಿತು ಸಮಗ್ರ ಸರ್ವೇ ನಡೆಸಿ ಕೂಡಲೇ ವರದಿ ನೀಡಲು ಜಿಲ್ಲಾಧಿಕಾರಿಗಳು ಹಾಗೂ ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕ ಶರಣಪ್ಪ ಅವರಿಗೆ ಸೂಚಿಸಿದರು.
ಗಣಿ ಪ್ರದೇಶದ ಶೆಡ್‍ಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿರುವ ಕುಟುಂಬಗಳ ಸ್ಥಿತಿಗತಿ ಸರ್ವೇ ನಡೆಸಿ ವರದಿ ನೀಡಿ, ಈ ಕುಟುಂಬಳಿಗೆ ನಿವೇಶನ ಒದಗಿಸಲು ಅಗತ್ಯವಾದ ಸರ್ಕಾರಿ ಜಾಗ ಗುರುತಿಸಿ ಎಂದು ಸೂಚಿಸಿದ ಸಚಿವರು, ಅತಿ ತುರ್ತಾಗಿ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಂಕಷ್ಟದಲ್ಲಿ ಜನ
ಶೀಘ್ರ ಮನೆ ನೀಡಿ
ಶಾಸಕಿ ರೂಪಕಲಾ ಮಾತನಾಡಿ, ಸುಮಾರು 30 ಸಾವಿರ ಕಾರ್ಮಿಕರ ಕುಟುಂಬಗಳು ಇಂದು ಬೀದಿಪಾಲಾಗಿದ್ದಾರೆ, ಈವರೆಗೂ ಯಾರಿಗೂ ನಿವೇಶನ,ಮನೆಯ ಹಕ್ಕು ಪತ್ರ ನೀಡಿಲ್ಲ, ಕಳೆದ ಮಳೆಗಾಲದಲ್ಲಿ ಗಣಿ ಶೆಡ್‍ಗಳಲ್ಲಿರುವ ಕಾರ್ಮಿಕ ಕುಟುಂಬಗಳು ಅನುಭವಿಸಿದ ಯಾತನೇ ಕಣ್ಣಾರೆ ಕಂಡಿದ್ದೇನೆ, ಕೂಡಲೇ ಹಕ್ಕು ಪತ್ರ ನೀಡಲು ಕ್ರಮವಹಿಸಿ ಎಂದು ಮನವಿ ಮಾಡಿದರು.
ಕಳೆದ 30 ವರ್ಷಗಳಲ್ಲಿ ಈ ಕುಟುಂಬಗಳಿರುವ ವ್ಯಾಪ್ತಿಯನ್ನು ಸ್ಲಂ ಎಂದು ಘೋಷಿಸಿಲ್ಲ, ಅವರ ಬದುಕು ನರಕವಾಗಿದೆ, 40 ವರ್ಷಗಳಿಂದ ಈ ಕಾರ್ಮಿಕರಿಗೆ ಒಂದೇ ಒಂದು ಮನೆ,ನಿವೇಶನ ಹಂಚಿಕೆಯಾಗಿಲ್ಲ, 40 ವರ್ಷಗಳಿಂದ ನ್ಯಾಯವೂ ಸಿಕ್ಕಿಲ್ಲ ಈ ಕಾರ್ಮಿಕರಿಗೆ ನ್ಯಾಯ ಒದಗಿಸಿ ಎಂದು ಕೋರಿದರು.
ಸಭೆಯಲ್ಲಿ ಹಾಜರಿದ್ದ ಕೋಲಾರ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಕೆಜಿಎಫ್ ನಗರದಲ್ಲಿ ಇರುವ ಸ್ಲಂ ಪ್ರದೇಶಗಳನ್ನು ಗುರುತಿಸಿ, ಸಮಗ್ರ ಸರ್ವೇ ಕಾರ್ಯ ನಡೆಸಿ ಅಲ್ಲಿನ ಜನರ ಸ್ಥಿತಿಗತಿಗಳ ಆಧಾರದ ಮೇಲೆ ಸ್ಲಂಗಳೆಂದು ಘೋಷಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕ ಶರಣಪ್ಪ, ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಆಯುಕ್ತ ನವೀನ್ ಚಂದ್ರ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಜನರಲ್ ಮ್ಯಾನೇಜರ್ ಮಹದೇವಪ್ರಸಾದ್, ಕೆಜಿಎಫ್ ತಹಸೀಲ್ದಾರ್ ಸುಜಾತಾ, ಸ್ಲಂ ಬೋರ್ಡ್‍ನ ಇಇ, ಎಇಇ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ತಾಲ್ಲೂಕಿನ ಕಿರುವಾರದಲ್ಲಿ ನಿರ್ಮಿಸಲಾಗಿರುವ ಸೀತಾ ಕೋದಂಡರಾಮ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಕಿರುವಾರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸೀತಾ ಕೋದಂಡರಾಮ ದೇವಾಲಯದಲ್ಲಿ ಬುಧವಾರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ನಾಲ್ಕು ದಿನಗಳಿಂದ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಗಳನ್ನು ನಡೆಸಿದ ಬಳಿಕ ಗಣಪತಿ, ಸುಬ್ರಮಣ್ಯಸ್ವಾಮಿ, ಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮ ವಿಗ್ರಹಗಳ ಸ್ಥಿರ ಬಿಂಬ ಪ್ರತಿಷ್ಠಾಪನೆ ಮಾಡಲಾಯಿತು.
ಇದಕ್ಕೂ ಮೊದಲು ದೇವಾಲಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ಪ್ರಾಯಶ್ಚಿತ್ತ ಸಂಕಲ್ಪ, ರಕ್ಷಾ ಬಂಧನ, ಮೃತ್ಸಂಗ್ರಹಣ, ಅಂಕುರಾರ್ಪಣೆ, ಕಳಶಾರಾಧನೆ, ಅಗ್ನಿಪ್ರತಿಷ್ಠೆ, ಪಂಚದ್ರವ್ಯ ಸ್ಥಾಪನೆ, ವೇದ ಪಾರಾಯಣ, ವೇದಿಕಾರ್ಚನೆ, ಮಂತ್ರನ್ಯಾಸ, ನಾಡಿಸಂಧಾನ, ಗಣಪತಿ ಕಳಾಹೋಮ, ಗೋದರ್ಶನ, ದೇವತಾರ್ಚನೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಧಾನ ಅರ್ಚಕರಾದ ಶ್ರೀನಾಥಾಚಾರ್, ಶ್ರೀನಿವಾಸಾಚಾರ್, ಎಸ್.ರಾಜಗೋಪಾಲಾಚಾರ್, ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ವಾನ್ ವಿನಯ್ ರೆಡ್ಡಿ ಅವರಿಂದ ಹರಿಕಥಾ ಕಾಲಾಕ್ಷೇಪ ಏರ್ಪಡಿಸಲಾಗಿತ್ತು.

ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು : ನಿರ್ದೇಶಕ ಎನ್.ಹನುಮೇಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಬಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ನಿವೃತ್ತ ನೌಕರರಿಗೆ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದನೆ ರೈತರ ಉಪ ಕಸುಬಾಗಿ ಯಶಸ್ವಿಯಾಗಿದೆ. ಹೈನೋದ್ಯಮ ರೈತರ ನಿಜವಾದ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಅದನ್ನು ಶ್ರದ್ಧೆಯಿಂದ ಮಾಡಬೇಕು. ವೈಜ್ಞಾನಿಕ ಪದ್ಧತಿ ಅನುಸರಿಸಿ ರಾಸು ಪಾಲನೆ ಮಾಡಬೇಕು ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಬೇಸಿಗೆಯಲ್ಲಿ ಹಾಲಿನ ಗುಣಮಟ್ಟ ರಕ್ಷಿಸಲು ಹಸುಗಳನ್ನು ನೆರಳಿನಲ್ಲಿ ಇರುವಂತೆ ನೊಡಿಕೊಳ್ಳಬೇಕು. ನೀರಿನಲ್ಲಿ ಗೋಣಿ ಚೀಲ ನೆನೆಸಿ ಹಸುಗಳ ಬೆನ್ನಿನ ಮೇಲೆ ಹಾಕಬೇಕು. ಹಸುಗಳಿಗೆ ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋದಾರ ಶಕ್ತ ಪುಡಿ ನೀಡಬೇಕು. ಹಸುಗಳಿಗೆ ಕೆಚ್ಚಲು ಬಾವು, ಕಾಲು ಬಾಯಿ ಜ್ವರ ಬರದಂತೆ ಎಚ್ಚರ ವಹಿಸಬೇಕು. ಅಗತ್ಯ ಬಿದ್ದಾಗ ಸಾಫ್‍ಕಿಟ್ ಬಳಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀಲಟೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಎನ್.ರಾಮರೆಡ್ಡಿ, ಎನ್.ಸಿ.ಶ್ರೀನಿವಾಸರೆಡ್ಡಿ ಅವರನ್ನು ಸನ್ಮಾನಿಸಿ, ಗೌರವ ಧನದ ಚೆಕ್ ನೀಡಿ ಬೀಳ್ಕೊಡಲಾಯಿತು. ಬೇರೆ ಬೇರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೂ.6.40 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಕೆ.ಪಿ.ಶ್ವೇತ, ಎಂ.ನಾರಾಯಣಸ್ವಾಮಿ, ಎಂ.ಆರ್.ಆಂಜಪ್ಪ ಇದ್ದರು.

ST AGNES CBSE SCHOOL MANGALURU : Organises Art Integrated Exhibition – Blend of Uttarakhand and Karnataka States

Art has the power to transform, to illuminate, to educate, inspire and motivate

JANANUDI.COM NETWORK

The CBSE board’s constructive approach to blended learning and depicting of culture and tradition in an artistic way was shown through an art exhibition at St Agnes CBSE school Mangaluru today bringing the traditional blend of Uttarakhand and Karnataka states of India.

The students, teachers of the school under the guidance of the principal put up an exuberant exhibition depicting the tradition, culture, food and various dance forms to show the blended learning of the states. 

The exhibition was inaugurated by the Chief Guest Sr Dr. Agatha Mary AC former Superior General of the Apostolic Carmel Congregation. The dignitaries present were Sr Dr Lydia Fernandes AC the Joint Secretary of St Agnes Educational Institutions and Sr Carmel Rita AC the administrator of St Agnes college were the guest of honour for the occasion. Sr Edna Furtado Ac the administrator, the Principal, Vice Principal and Coordinator of the school.

The art and culture were well depicted and meticulously organized from 9am to 2.30pm with visitors being the parents, students from other neighboring schools and college and sisters of the congregation. The entire atmosphere and ambiance brought in a lot of educative concepts to the visitors. The students presented their art form in creative way. The entire day was a grand affair for the hard work put up by all.

default

ಮಂಗಳೂರು ಸೇಂಟ್ ಆಗ್ನೆಸ್ CBSE ಶಾಲೆಯಲ್ಲಿ ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳ ಸಾಂಪ್ರದಾಯಿಕ ಮಿಶ್ರಣದ ಕಲಾ ಪ್ರದರ್ಶನ

ಕಲೆಗೆ ಪರಿವರ್ತಿಸುವ, ಬೆಳಗಿಸುವ, ಶಿಕ್ಷಣ ನೀಡುವ, ಮತ್ತು ಪ್ರೇರೇಪಿಸುವ ಶಕ್ತಿಯಿದೆ

ಮಂಗಳೂರು: ಸಂಯೋಜಿತ ಕಲಿಕೆ ಮತ್ತು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಲಾತ್ಮಕ ರೀತಿಯಲ್ಲಿ ಬಿಂಬಿಸುವ CBSE ಮಂಡಲಿಯು ಕೇಂದ್ರಿಯ ಶಿಕ್ಷಣ ಇಲಾಖೆಯ ನಿಯಾದಂತೆ ಇಂದು ಮಂಗಳೂರಿನ ಸೇಂಟ್ ಆಗ್ನೆಸ್ CBSE ಶಾಲೆಯಲ್ಲಿ ಭಾರತದ ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳ ಸಾಂಪ್ರದಾಯಿಕ ಸಮ್ಮಿಲನದ ಕಲಾ ಪ್ರದರ್ಶನ ವಿದ್ಯಾರ್ಥಿಗಳಿಂದ ನಡೆಯಿತು.
ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ರಾಜ್ಯಗಳ ಸಂಯೋಜಿತ ಕಲಿಕೆಯನ್ನು ತೋರಿಸಲು ಸಂಪ್ರದಾಯ, ಸಂಸ್ಕೃತಿ, ಆಹಾರ ಮತ್ತು ವಿವಿಧ ನೃತ್ಯ ಪ್ರಕಾರಗಳನ್ನು ಬಿಂಬಿಸುವ ವಿಜೃಂಭಣೆಯ ಪ್ರದರ್ಶನವನ್ನು ಏರ್ಪಡಿಸಿದರು.
ಅಪೋಸ್ಟೋಲಿಕ್ ಕಾರ್ಮೆಲ್ ಸಭೆಯ ಮಾಜಿ ಸುಪೀರಿಯರ್ ಜನರಲ್ ಸಿಸ್ಟರ್ ಡಾ।.ಅಗಾಥಾ ಮೇರಿ ಎಸಿ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಸಮಾರಂಭಕ್ಕೆ ಅತಿಥಿಗಳಾಗಿ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಾ ಲಿಡಿಯಾ ಫೆರ್ನಾಂಡಿಸ್ ಮತ್ತು ಸೇಂಟ್ ಆಗ್ನೆಸ್ ಕಾಲೇಜಿನ ಆಡಳಿತಾಧಿಕಾರಿ ಕಾರ್ಮೆಲ್ ರೀಟಾ ಎಸಿ ಉಪಸ್ಥಿತರಿದ್ದರು. ಸಿಸ್ಟರ್ ಎಡ್ನಾ ಫರ್ಟಾಡೊ ಎಸಿ ಅವರು ಶಾಲೆಯ ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಸಂಯೋಜಕರು ಉಪಸ್ಥಿತರಿದ್ದರು
.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಕಲೆ ಮತ್ತು ಸಂಸ್ಕೃತಿಯನ್ನು ಉತ್ತಮ ಮತ್ತು ನಿಖರವಾಗಿ ಆಯೋಜಿಸಲಾಗಿದೆ ಹಾಗೆ ಸಂದರ್ಶಕರು ಪೋಷಕರು, ಇತರ ನೆರೆಯ ಶಾಲೆಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಾರ್ಮೆಲ್ ಸಭೆಯ ಸಹೋದರಿಯರು. ಇದ್ದು, ನೋಡುಗರಿಗೆ ಸಂಪೂರ್ಣ ಶೈಕ್ಷಣಿಕ ಪರಿಕಲ್ಪನೆಗಳ ಪರಿಚಯ ದೊರಕಿತು. ವಿದ್ಯಾರ್ಥಿಗಳು ತಮ್ಮ ಕಲಾ ಪ್ರಕಾರವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸಿದರು. ಎಲ್ಲರೂ ಪಟ್ಟ ಶ್ರಮಕ್ಕೆ ಇಡೀ ದಿನ ಅದ್ಧೂರಿಯಾಗಿ ಹಾಗು ಯಶಸ್ವಿಯಾಗಿ ನಡೆಯಿತು.ಮಂಗಳೂರು:ಸಂಯೋಜಿತ ಕಲಿಕೆ ಮತ್ತು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕಲಾತ್ಮಕ ರೀತಿಯಲ್ಲಿ ಬಿಂಬಿಸುವ CBSE ಮಂಡಲಿಯು ಕೇಂದ್ರಿಯ ಶಿಕ್ಷಣ ಇಲಾಖೆಯ ನಿಯಾದಂತೆ ಇಂದು ಮಂಗಳೂರಿನ ಸೇಂಟ್ ಆಗ್ನೆಸ್ CBSE ಶಾಲೆಯಲ್ಲಿ ಭಾರತದ ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳ ಸಾಂಪ್ರದಾಯಿಕ ಸಮ್ಮಿಲನದ ಕಲಾ ಪ್ರದರ್ಶನ ವಿದ್ಯಾರ್ಥಿಗಳಿಂದ ನಡೆಯಿತು.
ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ರಾಜ್ಯಗಳ ಸಂಯೋಜಿತ ಕಲಿಕೆಯನ್ನು ತೋರಿಸಲು ಸಂಪ್ರದಾಯ, ಸಂಸ್ಕೃತಿ, ಆಹಾರ ಮತ್ತು ವಿವಿಧ ನೃತ್ಯ ಪ್ರಕಾರಗಳನ್ನು ಬಿಂಬಿಸುವ ವಿಜೃಂಭಣೆಯ ಪ್ರದರ್ಶನವನ್ನು ಏರ್ಪಡಿಸಿದರು.
ಅಪೋಸ್ಟೋಲಿಕ್ ಕಾರ್ಮೆಲ್ ಸಭೆಯ ಮಾಜಿ ಸುಪೀರಿಯರ್ ಜನರಲ್ ಸಿಸ್ಟರ್ ಡಾ।.ಅಗಾಥಾ ಮೇರಿ ಎಸಿ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಸಮಾರಂಭಕ್ಕೆ ಅತಿಥಿಗಳಾಗಿ ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಿಸ್ಟರ್ ಡಾ ಲಿಡಿಯಾ ಫೆರ್ನಾಂಡಿಸ್ ಮತ್ತು ಸೇಂಟ್ ಆಗ್ನೆಸ್ ಕಾಲೇಜಿನ ಆಡಳಿತಾಧಿಕಾರಿ ಕಾರ್ಮೆಲ್ ರೀಟಾ ಎಸಿ ಉಪಸ್ಥಿತರಿದ್ದರು. ಸಿಸ್ಟರ್ ಎಡ್ನಾ ಫರ್ಟಾಡೊ ಎಸಿ ಅವರು ಶಾಲೆಯ ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಸಂಯೋಜಕರು ಉಪಸ್ಥಿತರಿದ್ದರು.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಕಲೆ ಮತ್ತು ಸಂಸ್ಕೃತಿಯನ್ನು ಉತ್ತಮ ಮತ್ತು ನಿಖರವಾಗಿ ಆಯೋಜಿಸಲಾಗಿದೆ ಹಾಗೆ ಸಂದರ್ಶಕರು ಪೋಷಕರು, ಇತರ ನೆರೆಯ ಶಾಲೆಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಾರ್ಮೆಲ್ ಸಭೆಯ ಸಹೋದರಿಯರು. ಇದ್ದು, ನೋಡುಗರಿಗೆ ಸಂಪೂರ್ಣ ಶೈಕ್ಷಣಿಕ ಪರಿಕಲ್ಪನೆಗಳ ಪರಿಚಯ ದೊರಕಿತು. ವಿದ್ಯಾರ್ಥಿಗಳು ತಮ್ಮ ಕಲಾ ಪ್ರಕಾರವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸಿದರು. ಎಲ್ಲರೂ ಪಟ್ಟ ಶ್ರಮಕ್ಕೆ ಇಡೀ ದಿನ ಅದ್ಧೂರಿಯಾಗಿ ಹಾಗು ಯಶಸ್ವಿಯಾಗಿ ನಡೆಯಿತು