HOLY ROSARY CHURCH, KUNDAPUR – 450 th JUBILEE SOUVENIR 2021

ಗ್ರಹಘತಿ ಸರಿಯಿಲ್ಲವೆಂದು ಎಳೆ ಮಗುವನ್ನು ಜಲಾಶಯಕ್ಕೆ ಎಸೆದು ಕೊಂದ ಪಾತಕಿ ಸ್ವಂತ ತಾಯಿ

JANANUDI.COM NETWORK

ಚಿತ್ರ ಎರವಲು (ಸಾಂದರ್ಭಿಕ)

ದಿಂಡಿಗಲ್ ; ಇವತ್ತು ಪ್ರಪಂಚ ವಿಜ್ಞಾನದಲ್ಲಿ ಇಷ್ಟು ಮುಂದುವರೆದಿಯಾದರೂ, ಭಾರತದಲ್ಲಿ ಶಿಕ್ಷಣ ಇದ್ದರೂ, ಜ್ಞಾನದ ಕೊರತೆಯಿಂದ ಮೂಢ ನಂಬಿಕೆಗೆ ಮರುಳಾಗಿ, ರಾಶಿ, ಭವಿಷ್ಯ, ಗ್ರಹಘತಿಗಳು ಎಂದು ಭಾರತದಲ್ಲಿ ಇನ್ನೂ ನಂಬಿಕೆಗೆ ಅನರ್ಹವಾದ ಶೋಚನೀಯ ಘಟನೆಗಳು ನಡೆಯುತ್ತಲೇ ಇವೆ.
ತಮಿಳುನಾಡಿನ ಮಹಿಳೆಯಬ್ಬಳು ಮೂಢನಂಬಿಕೆಗೆ ಮರುಳಾಗಿ,ತನ್ನ ಮಗುವನ್ನು ಜಲಾಶಯಕ್ಕೆ ಎಸೆದುಕೊಂದ ಘಟನೆ ನಡೆದಿದೆ. ತಮಿಳುನಾಡಿನ ದಿಂಡಿಗಲ್ ನಲ್ಲಿ ಈ ಘಟನೆ ನಡೆದಿದ್ದು, ಲತಾ ಹಾಗೂ ಮಹೇಶ್ವರನ್ ಅವರಿಗೆ ನಾಲ್ಕು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗೆ ಗೋಕುಲ್ ಎಂದು ಹೆಸರಿಟ್ಟಿದ್ದರು. ಇತ್ತ ಲತಾಗೆ ಮಗುವಿನ ರಾಶಿ, ಭವಿಷ್ಯ ಗ್ರಹಘತಿಗಳದ್ದೇ ಚಿಂತೆ ಕಾಡುತಿತ್ತು. ಹೀಗಾಗಿ ಆಕೆ ವಿಚಿತ್ರವಾಗಿ ವರ್ತಿಸುತಿದ್ದಳು. ಎಂದು ಹೇಳಲಾಗುತ್ತದೆ.
ಮಗುವಿನ ಗ್ರಹಘತಿ ಚೆನ್ನಾಗಿಲ್ಲವೆಂದು ಯೋಚಿಸಿ ಈ ಹೀನ ಕ್ರತ್ಯ ಮಾಡಿದ ಮಹಿಳೆಗೆ ಈಗ ತನ್ನ ಮಗುವಿನ ಗ್ರಹಘತಿ ಸರಿಯಿಲ್ಲವೋ ಅಥವ ತನ್ನ ಗ್ರಹಘತಿ ಸರಿ ಇರಲಿಲ್ಲವೋ ಎಂದು ಚಿಂತಿಸುವ ಕಾಲ ಬಂದಿದೆ. ಯಾಕೆಂದರೆ ಇವಳಿಗೀಗ ಕೊಲೆ ಆರೋಪದಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ.

ಕ.ಪ್ರೌ. ಶಿಕ್ಷಣ ಪರೀಕ್ಷಾ ಮಂಡಳಿಯ ಗಣಕಯಂತ್ರ ಪರೀಕ್ಷೆಗಳಲ್ಲಿ ಕರ್ನಾಟಕ ವಾಣಿಜ್ಯ/ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ % 100ರಷ್ಟು ಫಲಿತಾಂಶ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕಳೆದ ಫೆಬ್ರವರಿ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಗಣಕಯಂತ್ರ ಪರೀಕ್ಷೆಗಳಲ್ಲಿ ಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಶೇಕಡ100ರಷ್ಟು ಫಲಿತಾಂಶದೊದಿಗೆಒಟ್ಟು 24 ಡಿಷ್ಟಿಂಗನ್ಸ್‍ದೊರೆತಿದ್ದು, ಫಲಿತಾಂಷದಲ್ಲಿ ಬಾಲಕಿಯರೇಹೆಚ್ಚಿನವರಾಗಿದ್ದಾರೆಎಂದು ಸಂಸ್ಥೆಯ ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದಎಂ.ಜಿ. ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಯು ಪಟ್ಟಣದಲ್ಲಿಗಣಕಯಂತ್ರ ಶಿಕ್ಷಣಕ್ಕೆ ಸರ್ಕಾರದಿಂದ ಮಾನ್ಯತೆಪಡೆದ ಏಕೈಕ ಗಣಕಯಂತ್ರ ಸಂಸ್ಥೆಯಾಗಿದ್ದು, ಕಳೆದ ಫೆಬ್ರವರಿ ಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಆಫೀಸ್‍ಆಟೋಮೇಶನ್ ವಿಷಯದಲ್ಲಿ ನಮ್ಮ ಶಾಲೆಗೆ ಶೇಕಡ100ರಷ್ಟುಫಲಿತಾಂಶದೊರೆತಿರುತ್ತದೆ. ಶಾಲೆಯಲ್ಲಿಒಟ್ಟು 53 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಬಾಲಕಿಯರು 24, ಬಾಲಕರು 29 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರುತೇರ್ಗಡೆ ಹೊಂದಿದ್ದು,24 ಡಿಷ್ಟಿಂಗನ್ಸ್, (ಬಾಲಕಿಯರು-13, ಬಾಲಕರು-11) 20 ಪ್ರಥಮದರ್ಜೆ, 7 ದ್ವಿತೀಯ ದರ್ಜೆ, 2 ತೃತೀಯದರ್ಜೆಯಲ್ಲಿತೇರ್ಗಡೆ ಹೊಂದಿರುತ್ತಾರೆ.
ಈ ಪರೀಕ್ಷೆಯಲ್ಲಿತೇರ್ಗಡೆಯಾದಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವಉತ್ತಮ ಫಲಿತಾಂಶಕ್ಕೆಕಾರಣರಾದ ಬೋಧಕರನ್ನುಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದಆರ್. ರಾದಇವರುಅಭಿನಂದಿಸಿದ್ದಾರೆ.

ರೈತರ ಕೃಷಿ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ತಲಾ ರೂ.5 ಲಕ್ಷ ಬಡ್ಡಿರಹಿತ ಸಾಲ ನೀಡಬೇಕು: ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರು ಕೃಷಿ ಕಾರ್ಯಕ್ಕೆ ಬಳಸಿಕೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ತಲಾ ರೂ.5 ಲಕ್ಷ ಬಡ್ಡಿರಹಿತ ಸಾಲ ನೀಡಬೇಕುಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ 96 ಸ್ತ್ರೀ ಶಕ್ತಿ ಸಂಘಗಳಿಗೆ ರೂ.4.80 ಕೋಟಿ ಸಾಲ ವಿತರಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಇನ್ನಷ್ಟು ಸ್ತ್ರೀ ಶಕ್ತಿ ಸಂಘಗಳನ್ನು ಪ್ರಾರಂಭಿಸಬೇಕು. ಅವರು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಪೂರಕವಾಗಿ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಮಹಿಳೆಯರ ಟನ್‍ಗಟ್ಟಲೆ ಚಿನ್ನ, ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳ ದಾಸ್ತಾನಿನಲ್ಲಿದೆ. ಅದೆಷ್ಟೋ ಮಹಿಳೆಯರು ಬಡ್ಡಿ ಪಾವತಿಸಲಾಗದೆ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಬಡ್ಡಿ, ಚಕ್ರಬಡ್ಡಿ ನೀಡಲಾಗದ ಎಷ್ಟೋ ಮಂದಿ ಖಾಸಗಿ ಲೇವಾದೇವಿಗಾರರ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಇಂಥ ಪರಿಸ್ಥಿತಿಯಿಂದ ಬಡವರನ್ನು ಪಾರುಮಾಡಲು ಬಡ್ಡಿರಹಿತ ಸಾಲ ವ್ಯವಸ್ಥೆ ಜಾರಿಗೆ ತರಲಾಯಿತು ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರು ಡಿಸಿಸಿ ಬ್ಯಾಂಕ್‍ನಲ್ಲಿ ಖಾತೆ ತೆರೆದು ಹಣ ಉಳಿತಾಯ ಮಾಡುವುದರ ಮೂಲಕ ಬ್ಯಾಂಕ್ ಬೆಳೆಯಲು ಸಹಕರಿಸಬೇಕು. ಸಾಲ ಪಡೆದುಕೊಳ್ಳುವುದು ಮಾತ್ರವಲ್ಲದೆ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲು ಖಾತೆದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಉಪಾಧ್ಯಕ್ಷ ಸುಬ್ಬರೆಡ್ಡಿ, ನಿರ್ದೇಶಕರಾದ ಮೋಹನ್, ಶಂಕರ್ ಪ್ರಸಾದ್, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ರಾಮಾಂಜಲಸ್ವಾಮಿ, ನರೇಂದ್ರಬಾಬು, ರಮೇಶ್, ರಿಯಾಜ್ ಖಾನ್, ಸತ್ಯಣ್ಣ, ಕವಿತಮ್ಮ, ಈರಪ್ಪ ಇದ್ದರು.

ತಾಲ್ಲೂಕು ಕಚೇರಿಯಲ್ಲಿ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳನಂದಿಸಿತು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕು ಕಚೇರಿಯ ಚುನಾವಣಾ ವಿಭಾಗದದಲ್ಲಿ ಶನಿವಾರ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.
ಶನಿವಾರ ಬೆಳಿಗ್ಗೆ ಕಚೇರಿ ಕಿಟಕಿಯಿಂದ ಹೊಗೆ ಬರುತ್ತಿದುದನ್ನು ಕಂಡ ಸಾರ್ವಜನಿಕರು ಕಚೇರಿ ಸಿಬ್ಬಂದಿ ಹಾಗೂ ಅಗ್ನಿಶಾಕಕ ದಳದ ಗಮನಕ್ಕೆ ತಂದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಕಂದಾಯ ನಿರೀಕ್ಷಕರಾ ಬಿ.ವಿ.ಮುನಿರೆಡ್ಡಿ, ಬಲರಾಮಯ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ ಕಚೇರಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟರು.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಉಪಕರಣಗಳೊಂದಿಗೆ ಕಚೇರಿ ಪ್ರವೇಶಿಸಿ ಬೆಂಕಿ ಆರಿಸಿದರು. ಬೆಂಕಿಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕೆಲವು ಕಡತಗಳು ಬೆಂಕಿಗೆ ಆಹುತಿಯಾಗಿವೆ. ಬೇಗ ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ.
ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜೇಸಿಐ ಕುಂದಾಪುರ ಸಿಟಿ ವತಿಯಿಂದ ಕುಂದಾಪುರ ಸೇಂಟ್ ಜೋಸೆಫ್ ಅನಾಥಾಶ್ರಮದಲ್ಲಿ ಅನ್ನದಾನ

JANANUDI.COM NETWORK

ಕುಂದಾಪುರ, ಮಾ.26: ಜೇಸಿಐ ಕುಂದಾಪುರ ಸಿಟಿ ಘಟಕದ ವತಿಯಿಂದ ಅಕ್ಷಯಪಾತ್ರೆ ಎಂಬ ಕಾರ್ಯಕ್ರಮದಡಿಯಲ್ಲಿ ಕುಂದಾಪುರದ ಸೇಂಟ್ ಜೋಸೆಫ್ ಅನಾಥಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಲವತ್ತು ಕ್ಕೂ ಹೆಚ್ಚು ಮಕ್ಕಳಿಗೆ ವಿಶೇಷ ಬಗೆಯ ಊಟವನ್ನು ಬಡಿಸಲಾಯಿತು.
ಕಾರ್ಯಕ್ರಮಕ್ಕೆ ಇದೊಂದು ಉತ್ತಮ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಘಟಕದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಇದೊಂದು ಉತ್ತಮ ಕಾರ್ಯಕ್ರಮದ ಸಾರ್ಥಕತೆಯನ್ನು ಪಡೆದುಕೊಂಡಿರುತ್ತವೆ. ಎಂದು ಜೇಸಿಐ ಕುಂದಾಪುರ ಸಿಟಿ ಘಟಕದ ಅಧ್ಯಕ್ಷ ಅಭಿಲಾಶ್ ತಮ್ಮ ಅನ್ನಿಸಿಕೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ನ ವಿಜಯ್ ಭಂಡಾರಿ, ಪೂರ್ವ ಅಧ್ಯಕ್ಷರಾದ ಚಂದ್ರಕಾಂತ್, ಶ್ರೀಧರ್ ಸುವರ್ಣ, ಉಪಾಧ್ಯಕ್ಷರಾದ ಡಾ|ಸೋನಿ ಡಿಕೋಸ್ತಾ, ಜೇಸಿಐ ಗಳಾದ ಗುರುರಾಜ್, ಪ್ರೇಮಾ ಡಿಕುನ್ಹಾ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಉಪಸ್ಥಿರಿದ್ದು, ಅನಾಥಾಶ್ರಮದ ಮೇಲ್ವಿಚಾರಕಿ ಭಗಿನಿ ಆಶಾ ಹಾಜರಿದ್ದು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ತೀನ್ ದಿಸಾಂಚಿಂ ರೆತಿರ್ ಸಂಪನ್ನ್

JANANUDI.COM NETWORK

ಕುಂದಾಪುರ್, ಮಾ.26: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಮಾರ್ಚಾಚ್ಯಾ 24 ವೆರ್ ವಾರ್ಷಿಕ್ ರೆತಿರ್ ಆರಂಭ್ ಜಾಲ್ಲಿ ರೆತಿರ್ ಆಜ್ 27 ವೆರ್ ಸಂಪನ್ನ್ ಜಾಲಿ. ಮಂಗಳೂರ್ ಡಿವೈನ್ ಮರ್ಸಿಚೊ ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಆನಿ ತಾಚೊ ಪಂಗ್ಡಾನ್ ಚಲವ್ನ್ ವೆಲಿ.
ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಹಾಣಿ ರೆತಿರ್ ಚಲವ್ನ್ ವ್ಹರ್ತಾನಾ ಉತ್ತಿಮ್ ಪ್ರಸಂಗ್ ದಿಲೆಂ. ಭಕ್ತಿಪಣ್, ಭವಾರ್ಥ್, ಮಾಗ್ಣೆ, ಭಾಗೆವೊಂತ್ಪಣ್, ಪಾತ್ಕಾಂತ್ ಪಡನಾ ಜಾಂವ್ಚ್ಯಾಕ್, ಭೊಗ್ಸಾಣೆ, ಅಶೆಂ ಸಭಾರ್ ವಿಶ್ಯಾಂತ್ ಶಿಕವ್ಣ್ ದಿಲಿ. ಸದಾಂಯಿ ಪವಿತ್ರ್ ಸಾಂಕ್ರಾಮೆಂತಾಚೆಂ ಆರಾಧಾನ್ ಚಲ್ಲೆಂ. ದುಸ್ರ್ಯಾ ದೀಸ್ ಕುಡಿಚ್ಯಾ ಭಲಾಯ್ಕೆಕ್, ವಿವಿಧ್ ಪೀಡೆ ಪಾಸೊತ್ ಆರಾಧಾನ್ ತಶೆಂ ಖುರ್ಸಾಕ್ ವಿಶೇಸ್ ರೀತಿನ್ ಆರಾಧಾನ್ ಕೆಲೆಂ. ತಿಸ್ರ್ಯಾ ದಿಸಾ ಭುಗ್ರ್ಯಾಂ ಖಾತಿರ್, ಕುಟ್ಮಾ ಖಾತಿರ್, ಕಾಜಾರಿ ಜೋಡ್ಯಾ ಪಾಸೊತ್, ಆರಾಧನ್ ಕರ್ನ್ ಆಶಿರ್ವಾದ್ ದಿಲೊ.
ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಸಾಂಗಾತಾ ಫಿರ್ಗಜ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ಯಾಜಕ್ ಮಾ|ಬಾ|ವಿಜಯ್ ಡಿಸೋಜಾನ್ ಭಕ್ತಿಕಾಂಚ್ಯಾ ಮಾತ್ಯಾರ್ ಹಾತ್ ದವರ್ನ್ ಮಾಗ್ಲೆ. ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಸಾಂಗಾತಾ ಫಿರ್ಗಜ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ ಹಾಣಿ ಪವಿತ್ರ್ ಬಲಿದಾನ್ ಭೆಟಂವ್ಚ್ಯಾ ಸವೆಂ ರೆತಿರ್ ಸಂಪನ್ನ್ ಜಾಲಿ. ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊನ್ ಧನ್ಯವಾದ್ ಪಾಟಯ್ಲೆಂ.
ಹ್ಯಾ ತೀನ್ ದಿಸಾಂಚ್ಯಾ ರೆತಿರೆಂತ್ ಸಭಾರಾಂಕ್ ಬರೆಪಣ್ ಲಾಭ್ಲಾ ಮ್ಹಣುನ್ ಬ್ರದರ್ ಉರ್ಬಾನ್ ಡಿಸೋಜಾನ್ ಕಳಯ್ಲೆ. ರೆತಿರೆಕ್ ಪಯ್ಲ್ಯಾ ದಿಸಾ ಬ್ರದರ್ ಆಲ್ಬನ್ ಡಿಸೋಜಾ, ಉಪ್ರಾಂತ್ಲ್ಯಾ ದೋನ್ ದಿಸಾಂ ಬ್ರದರ್ ಆಲ್ವಿನ್ ಕುವೆಲ್ಲೊ ಹಾಣೆ ಗಾಯನ್ ಆನಿ ವಾಜ್‍ಂತ್ರ್ ಖೆಳೊನ್ ಸಾಂಗಾತ್ ದಿಲೊ.

SSLC ಫೈನಲ್ ಪರೀಕ್ಷೆ’ಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ, ಹಿಜಾಬ್ ಧರಿಸಿ ಬಂದ್ರೆ ಅನುಮತಿ ಇಲ್ಲ– ಶಿಕ್ಷಣ ಇಲಾಖೆಯ ಆದೇಶ

ಬೆಂಗಳೂರು: ಮಾ.27: 28-03-2022 ರಿಂದ ದಿನಾಂಕ 11-04-2022ರವರೆಗೆ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಫೈನಲ್ ಪರೀಕ್ಷೆಗೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಬರುವುದು ಕಡ್ಡಾಯವಾಗಿದೆ. ಒಂದು ವೇಳೆ ವಸ್ತ್ರ ಸಂಹಿತೆಯನ್ನು ಪಾಲಿಸದೇ ಇದ್ದರೇ ಪರೀಕ್ಷೆಗೆ ನೋ ಎಂಟ್ರಿ ಎಂಬುದಾಗಿ ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದ್ದು.. ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸತಕ್ಕದ್ದು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಆದೇಶಿಸಲಾಗಿದೆ. ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ರಿಟ್ ಅರ್ಜಿಯ ತೀರ್ಪಿನಲ್ಲಿಯೂ ಸರ್ಕಾರದ ಆದೇಶಗಳನ್ನು ಸಿಂಧುಗೊಳಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಿ, ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಉಡುಪಿ – ಅಧಿಕಾರಿಗಳಿಂದ ಅಕ್ರಮವಾಗಿ ಕಟ್ಟಿದ ಎರಡು ಹೊಟೇಲ್ ಗಳ ಕಟ್ಟಡ ತೆರವು ಕಾರ್ಯಚರಣೆ.

JANANUDI.COM NETWORK

ಉಡುಪಿ: ನಗರದ ಕಟ್ಟಡ ಒಂದಕ್ಕೆ ನಗರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು.ನಗರದ ಜಾಮಿಯಾ ಮಸೀದಿ ಎದುರಿದ್ದ ಅನಧಿಕೃತ ಎರಡು ಹೊಟೇಲ್ ಗಳಾದ ಝಾರ ಮತ್ತು ಝೈತೂನ್ ಕಟ್ಟಡವನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.‌
ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಆದೇಶವಿದ್ದರೂ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಈ ಭಾರಿ ಪೊಲೀಸ್ ಮತ್ತಿತರ ಬಂದೋಬಸ್ತ್ ಗೊಳಿಸಿ ಯಂತ್ರಗಳ ಮೂಲಕ ಕಾರ್ಯಚರ್ಣೆ ನಡೆಸಿದ್ದಾರೆ. ತಹಶೀಲ್ದಾರ್ ಮತ್ತು ಪೌರಾಯುಕ್ತರು ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿದು ಬಂದಿದೆ.
ಜಾಮಿಯಾ ಮಸೀದಿ‌ ಎದುರು ಈ ಮೊದಲು ಗುಜರಿ ಅಂಗಡಿ ಇದ್ದು.. ಮಸೀದಿಯಿಂದ ಜಾಗವನ್ನು ಲೀಸ್ ಗೆ ಪಡೆದು ನಿಯಮಗಳನ್ನು ‌ಗಾಳಿಗೆ ತೂರಿ ಹೊಟೇಲ್ ನಿರ್ಮಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.ಹಲವು ತಿಂಗಳ‌ ಹಿಂದೆಯೇ ಕಟ್ಟಡ ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದೆ.‌ ರಾತ್ರಿಯಿಂದಲೇ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ ನಗರಸಭೆ ಆಡಳಿತ ಶನಿವಾರ ಬೆಳಗ್ಗೆಯೇ ನೂರಾರು ಪೊಲೀಸರ ಭದ್ರತೆಯೊಂದಿಗೆ ಕಾರ್ಯಚರಣೆಗೆ ಇಳಿದಿದೆ ಎಂದು ಮಾಹಿತಿ ಮತ್ತು ವಿಡೀಯೊ ತುಣುಕುಗಳು ಹರಿಯುತ್ತಾ ಇವೆ.
ಹೊಟೇಲ್ ಮಾಲಕರ ತಾವೇ ತೆರವು‌ ಮಾಡುತ್ತೇವೆ ಎಂಬ ಮನವಿಗೆ ನಗರಸಭೆ ಅಧಿಕಾರಿಗಳು ಪುರಸ್ಕರಿಸಿದ್ದು, ಅದರಂತೆ ತೆರವು ಕಾರ್ಯ ‌ಮುಂದುವರಿದಿದೆ ಎನ್ನಲಾಗಿದೆ.

ಸುಗಟೂರು ಗ್ರಾಮದಲ್ಲಿ ರಾವಣೋತ್ಸವದ ಅಂಗವಾಗಿ ದೀಪೋತ್ಸವ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಸುಗಟೂರು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ರಾವಣೋತ್ಸವದ ಅಂಗವಾಗಿ ದೀಪೋತ್ಸವ ಏರ್ಪಡಿಸಲಾಗಿತ್ತು.