HOLY ROSARY CHURCH, KUNDAPUR – 450 th JUBILEE SOUVENIR 2021

“ಅಗತ್ಯವಿರುವ ನೆರೆಹೊರೆಯವರಿಗೆ ಒಂಬತ್ತು ದಿನಗಳಲ್ಲಿ, ನನ್ನ ಒಂಬತ್ತು ಉಡುಗೊರೆಗಳು” ಅರ್ಪಿಸಿ ಜೆಪ್ಪು ಇಗರ್ಜಿಯಲ್ಲಿ ವಿಶಿಷ್ಟ ರೀತಿಯಲ್ಲಿ ಮೊಂತಿ ಹಬ್ಬದ ಆಚರಣೆ / “Nine Gifts on Nine Days for My Needy Neighbour” – Monthi Phest at Jeppu a Unique Way A Feast of Devotion, Togetherness and Gratitude

“ಕ್ರಿಸ್ತಾಚೆಂ ಜನನ್” ನವೆ ಕೊಂಕಣಿ ಫಿಲ್ಮ್ ಪಯ್ಲ್ಯಾ ಪ್ರದರ್ಶನಾಕ್ ವಿಶ್ರಾಂತ್ ಬಿಸ್ಪ್ ಅಲೋಶಿಯಸ್ ಪಾವ್ಲ್ ಡಿಸೋಜ್ ಹಾಣಿ ಬೊರೆ ಮಾಗ್ಲೆಂ / Premiere of new movie “Christachem Janan” Greetings from Retired Bishop Aloysius Paul D’Souza

ಉತ್ತಮ ಶಿಕ್ಷಕ ಪ್ರಶಸ್ತಿ ವಾಪಾಸ್ – ಪ್ರತಿಭಟನೆ ನಡೆಸಿದವರ ಮೇಲೆ ಕೇಸು ದಾಖಲು-ಬಿಜೆಪಿಯ ಶಿಲ್ಪಾ ಜೆ ಸುವರ್ಣ ಖಂಡನೆ

ಉತ್ತಮ ಶಿಕ್ಷಕ ಪ್ರಶಸ್ತ ವಾಪಾಸ್ – ಪ್ರತಿಭಟನೆ ನಡೆಸಿದವರ ಮೇಲೆ ಕೇಸು ದಾಖಲು ಜಿಲ್ಲೆಯಲ್ಲಿ ಸಂಘಟನಾ ಶಕ್ತಿಯಿಲ್ಲದ ಕಾಂಗ್ರೆಸ್ಸಿಗರಿಗೆ ಸೇಡಿನ ರಾಜಕೀಯವೊಂದೇ ಶ್ರೀ ರಕ್ಷೆಯಾಗಿದೆ:- ಶಿಲ್ಪಾ ಜಿ ಸುವರ್ಣ

ಉಡುಪಿ : ಜಿಲ್ಲೆಯ ಕುಂದಾಪುರದ ಶಿಕ್ಷಕರಾದ ಬಿಜಿ ರಾಮಕೃಷ್ಣ ಅವರಿಗೆ ಅಂತಿಮಗೊಳಿಸಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆಹಿಡಿಯುವ ಮೂಲಕ ಮತೀಯವಾದಿಗಳ ಆಶಯಗಳಿಗೆ ಪೂರಕವಾಗಿ ನಡೆದುಕೊಂಡಂತಹ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾವು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯನ್ನು ನಡೆಸಿದಂತಹ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಸಹಿತ ನಮ್ಮ ಪಕ್ಷದ 11 ಮಂದಿ ಪದಾಧಿಕಾರಿಗಳ ಮೇಲೆ ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೆ ಸುವರ್ಣ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ಸಿನ ಅಸಹನೀಯ ಸ್ಥಿತಿ:

ನಿರಂತರವಾಗಿ ಚುನಾವಣೆಗಳಲ್ಲಿ ತಮ್ಮ ವಿರುದ್ಧದ ಜನಾದೇಶದಿಂದಾಗಿ ಉಡುಪಿ ಜಿಲ್ಲೆಯಲ್ಲಿ ನೆಲೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೂ ಅಸಹನೀಯ ಸ್ಥಿತಿಯನ್ನು ತಲುಪಿದೆ ಹಾಗೂ ಜಿಲ್ಲೆಯಲ್ಲಿ ಸಂಘಟನಾ ಶಕ್ತಿಯನ್ನು ಹೊಂದಿರದ ಕಾಂಗ್ರೆಸ್ ಪಕ್ಷವೂ ಸೇಡಿನ ರಾಜಕಾರಣವನ್ನು ತನ್ನ ಶ್ರೀ ರಕ್ಷೆಯನ್ನಾಗಿಸಿಕೊಂಡಿದೆ.

ತಮ್ಮ ವಿರುದ್ಧದ ಪ್ರತಿಭಟನೆಯನ್ನು ರಾಜಕೀಯ ಸವಾಲಾಗಿ ಸ್ವೀಕರಿಸುವ ಬದಲು ದ್ವೇಷದ ರಾಜಕಾರಣಕ್ಕೆ ಬಳಸಿಕೊಂಡು ಪ್ರತಿಭಟನಾಕಾರರ ಮೇಲೆ ಪ್ರಕರಣವನ್ನು ದಾಖಲಿಸುವ ಮೂಲಕ ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಿದೆ.

ಅಧಿಕಾರದ ದುರ್ಬಳಕೆಯ ಮೂಲಕ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಬೆದರಿಸಬಹುದೆಂದು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಕಾಂಗ್ರೆಸ್ಸಿನ ಈ ಗೊಡ್ಡು ಬೆದರಿಕೆಗಳನ್ನು ಸವಾಲಾಗಿ ಸ್ವೀಕರಿಸುತ್ತಾರೆ ವಿನಃ ಹೆದರುವ ಜಾಯಮಾನದ ಮನೋಸ್ಥಿತಿಯನ್ನು ನಮ್ಮ ಕಾರ್ಯಕರ್ತರು ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಕುಂದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಗುಲ್ಬರ್ಗಾ- ಮಾತೆ ಮರಿಯಮ್ಮನವರ ಜಯಂತಿಯ ಅಂಗವಾಗಿ ಆರೋಗ್ಯ ಮಾತೆ ದೇವಾಲಯದ ಮರಿಯಾ ಆಶ್ರಮದಲ್ಲಿನ ಮಕ್ಕಳಿಗಾಗಿ ಆಡೋಟ ಸ್ಪರ್ಧೆ

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಇಪ್ಪತ್ತರ ಸಂಭ್ರಮ

ಗುಲ್ಬರ್ಗಾ ಧರ್ಮ ಕ್ಷೇತ್ರದ ಆರೋಗ್ಯ ಮಾತೆ ದೇವಾಲಯ ಮರಿಯಾಶ್ರಮ ಜಲಸಂಗೀಯಲ್ಲಿ ಮಾತೆ ಮರಿಯಮ್ಮನವರ ಜಯಂತಿಯನ್ನು ಆಚರಣೆ

ಕಲ್ಯಾಣಪುರ – ಮಿಲಾಗ್ರೆಸ್ ಕ್ಯಾಥೆಡ್ರಲ್ ನಲ್ಲಿ ಮಾತೆ ಮೇರಿ ಜನ್ಮದಿನ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಿತು / Kalyanpur – Mother Mary’s birthday was celebrated with great fervor and festivity at the Milagres Cathedral

ಕೋಟ ಸಂತ ಜೊಸೇಫ್ ಚರ್ಚಿನಲ್ಲಿ ಮೇರಿ ಮಾತೆಯ ಜನ್ಮ ದಿನ – ತೇನೆ ಹಬ್ಬ ಆಚರಣೆ