

ಕುಂದಾಪುರ ; ಕುಂದಾಪುರ ತಾಲೂಕಿನ ಹೆಸ್ಕತ್ತೂರು ಗ್ರಾಮದ ಸಾನ್ವಿ ಕೋಳಿ ಫಾರ್ಮ್ ಹಿಂಬದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು 27-08-2025 ರಂದು,112 ಪೊಲೀಸರಿಗೆ ಕಂಟ್ರೋಲ್ ರೂಮಿಗೆ ಕರೆ ಬಂದಿತ್ತು. ತಕ್ಷಣ ಕಂಟ್ರೋಲ್ ರೂಮಿನಲ್ಲಿದ್ದ ಹೇಡ್ ಕಾನ್ಸ್ಟೇಬಲ್ ಪ್ರಿನ್ಸ್ ಮತ್ತು ಪೊಲೀಸ್ ಚಾಲಕ, ಹೇಡ್ ಕಾನ್ಸ್ಟೇಬಲ್ ರಾಜೇಶ್ ಡಿಸೋಜಾ ಅಲ್ಲಿಗೆ ದಾವಿಸಿ ಆಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದವನನ್ನು ಬಂದಿಸಿದ್ದರು. ಇದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತುಂಬ ಮೆಚ್ಚುಗೆಯಾಗಿದ್ದು. ಇಂದು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿಯಾದ ಹರಿರಾಮ್ ಶಂಕರ್, ಐಪಿಎಸ್ ಇವರು ಪ್ರಶಾಂಸನ ಪತ್ರ ಹಾಗೂ ಬಹುಮಾನ ನೀಡಿದ್ದಾರೆ.


