

ಕುಂದಾಪುರ: ಜು.25; ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೌದಿ ಅರೇಬಿಯಾದ ರಿಯಾದ್ ಅಲ್ಲಿನ ಗುಡ್ನೇಸ್ ಸಂಘಟನೇಯಿಂದ ೮ ನೇ ತರಗತಿಯ ಎಲ್ಲಾ ಮಕ್ಕಳ ವರ್ಷದ ಶಾಲಾ ಶುಲ್ಕವಾಗಿ 35 ಸಾವಿರ ರೂಪಾಯಿಗಳನ್ನು ನೀಡಿದ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಶೀದಿ ಮತ್ತು ಶಾಲಾ ಕಲಿಕಾ ವಸ್ತುಗಳು ಬ್ಯಾಗ್, ಕ್ಯಾಲೆಕ್ಲುಲೇಟರ್ ಇನ್ನಿತರ ವಸ್ತುಗಳನ್ನು ಜು.24 ರಂದು ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು.
ಗುಡ್ನೇಸ್ ಸಂಘಟನೇಯ ಪರವಾಗಿ ಡೋರಾ ಡಿಸೋಜಾ, ವಿನಯಾ ಡಿಕೋಸ್ತಾ, ಗ್ಲೇನೋರಾ ಡಿಸೋಜಾ ಉಪಸ್ಥಿತರಿದ್ದು ಸಹಾಯ ಹಸ್ತದ ವಸ್ತುಗಳನ್ನು ವಿತರಿಸಿ ಶುಭ ಕೋರಿದರು. ಅಧ್ಯಕ್ಷ ಸ್ಥಾನ ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಗುಣರವರು ರವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿ ‘ಸಹಾಯ ನೀಡುವುದು ಒಂದು ಉತ್ತಮ ಕೆಲಸ ಮಾನವನು ಒಬ್ಬರಿಂದೊಬ್ಬರಿಗೆ ಸಹಾಯ ಮಾಡಬೇಕು, ಆವಾಗ ದೇವರು ಒಳಿತನ್ನು ಮಾಡುತ್ತಾರೆ, ಇಂದು ನೀವು ಸಹಾಯ ಹಸ್ತ ಪಡೆದಿದ್ದಿರಿ, ಮುಂದಿನ ದಿನಗಳಲ್ಲಿ ನೀವೂ ಕೂಡ ಇತರರಿಗೆ ಸಹಾಯ ಹಸ್ತ ನೀಡಬೇಕು’ ಎಂದು ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ಮಾತನಾಡಿ ರಿಯಾದ್ ಗುಡ್ನೇಸ್ ಸಂಸ್ಥೆಯ ಹೆಸರಿಗೆ ತಕ್ಕಂತೆ ಮಾಡುವ ಒಳ್ಳೆಯ ಕಾರ್ಯಗಳನ್ನು ತಿಳಿಸಿ, ಬಡವರಿಗೆ, ಅಸಕ್ತರಿಗೆ, ರೋಗಿಗಳಿಗೆ, ಶಿಕ್ಷಣ ಸಂಸ್ಥಯ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ’ ಎಂದು ಸಂಸ್ಥೆಯ ಬಗ್ಗೆ ತಿಳಿಸಿ, ಇವತ್ತು ಸಹಾಯಹಸ್ತ ಪಡೆದ ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಉತಿರ್ಣಾದರೆ ಸಹಾಯಹಸ್ತ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಗುಡ್ನೆಸ್ ಸಂಘಟನೆಯಲ್ಲಿ ಮೂಲತಹ ಭಾರತ ದೇಶದ ಸದಸ್ಯರಿದ್ದು ಸಂಘಟನೇಯ ಅಧ್ಯಕ್ಷ ರವಿ ಕಾಸ್ಟೆಲೀನೊ, ಶಂಕರಪುರ. ಕಾರ್ಯದರ್ಶಿ ನೆಲ್ಸನ್ ಡಿಸೋಜ, ಕಿನ್ನಿಗೊಳ್ಳಿ. ಜೋವಿನ್ ಮರ್ಸಿ ಜೋಸುವ ಟ್ರಸ್ಟಿ ತಮಿಳ್ನಾಡು. ಮತ್ತು ಸದಸ್ಯ ಫ್ರಾನ್ಸಿಸ್ ಡಿಸೋಜ ಪಿಯುಸ್ ನಗರ್ ಇವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ವಂದಿಸಿದರು. ಶಿಕ್ಷಕ ಅಶೋಕ್ ದೆವಾಡಿಗ ನಿರೂಪಿಸಿದರು.















































