

ಶ್ರೀನಿವಾಸಪುರ : ಮಹಾತ್ಮಾಗಾಂಧೀಜಿ ಅಹಿಂಸೆ ಮಾರ್ಗದಲ್ಲಿ ಶಾಂತಿಯಿಂದ ಬಿಳಿಯರನ್ನು ತೊಲಗಿಸಿ ದೇಶಕ್ಕೆ ಸಾಮರಸ್ಯ ಸ್ವಾತಂತ್ರ ತಂದುಕೊಟ್ಟವರ ಆದರ್ಶಗಳು ಸರ್ವ ಕಾಲಕ್ಕೂ ಜನಸಾಮಾನ್ಯರಿಗೆ ಅನನ್ಯವಾಗಿದೆ ಎಂದು ಪಿಡಿಒ ಮಂಗಳಾಂಭ ಹೇಳಿದರು.
ತಾಲೂಕು ದಳಸನೂರು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಪಂಚಾಯಿತಿಯಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಅಂಗವಾಗಿ ವಿಶೇಷ ಗ್ರಾಮ ಸಭೆಗೆ ಚಾಲನೆ ನೀಡಿ ಮಾತನಾಡಿ ಗಾಂಧಿಜಿ ಸತ್ಯ ಧರ್ಮ ಶಾಂತಿಯಿಂದ ದೇಶದಿಂದ ಬ್ರಿಟೀಷರನ್ನು ಹೊರ ಹಾಕಿ ಸ್ವಾತಂತ್ರ ತಂದು ಕೊಟ್ಟವರನ್ನು ಎಂದೆಂದಿಗೂ ಮೆರೆಯಬಾರದು ಎಂದರು.
ಗಾಂಧೀಜಿ ಬದುಕು ಸರಳವಾಗಿ ರೂಪಿಸಿಕೊಂಡು ಜನಸಾಮಾನ್ಯರ ನಾಡಿ ಮಿಡಿತ ಅರಿತು ದೀನರಾಗಿ ಜೀವನ ಮಾಡಿದರು. ಎಲ್ಲರು ಶೈಕ್ಷಣಿಕ ಸಾಮಾಜಿಕವಾಗಿ ಭೌತಿಕವಾಗಿ ಆರ್ಥಿಕವಾಗಿ ಸಮಾನವಾಗಿರಬೇಕೆಂಬ ತುಡಿರದಲ್ಲಿದ್ದವರು ಗಾಂಧೀಜಿ. ಅವರಂತೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ನಮ್ಮ ಸುತ್ತ ಮುತ್ತಲು ಸ್ವಚ್ಚವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಆದರ್ಶ ವಾಗಿರಬೇಕು. ವಿಕಲ ಚೇತನರು ಸರಕಾರಿ ಸೌಲಭ್ಯಗಳು ಸದ್ಬಳಕೆ ಮಾಡಿಕೊಂಡು ಆರೋಗ್ಯವಂತರಾಗಿ ಬದುಕು ಕಟ್ಟಿಕೊಳ್ಳಿ. ಸಮಾಜ ವಿಕಲ ಚೇತನರನ್ನು ಕಿಳರಿಮೆಯಿಂದ ನೋಡಬಾರದು. ದೈವ ಕೃಪೆಯಿಂದ ಜನಿಸಿರುವ ನೀವು ಜ್ಞಾನವಂತರು. ಸಮಾಜ ಅವರನ್ನು ಗೌರವದಿಂದ ಕಣಬೇಕೆಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಹೊಸಹಳ್ಳಿ ಬಾಬು ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿ ಉಪವಾಸ ಸತ್ಯಾಗ್ರಹ ಅಹಿಂಸೆ ಮಾರ್ಗದಲ್ಲೆ ಪ್ರಾಮಾಣಿಕತೆಯಿಂದ ಜೀವನ ಮಾಡಿದ ಅವರು ನಮ್ಮ ದೇಶದಲ್ಲಿ ಹುಟ್ಟಿ ಸಂಚರಿಸಿದೇ ನಮ್ಮ ಪುಣ್ಯ. ನಾವು ಸಹ ಮೊದಲು ನಮ್ಮ ಮನೆ ಮಕ್ಕಳು ಮತ್ತು ಸುತ್ತಮುತ್ತಲ ಜನರಲ್ಲಿ ಶಾಂತಿ ಸ್ವಚ್ಚತೆ ಸಾರಬೇಕು. ಪಾಪಿಗಳನ್ನು ಕ್ಷಮಿಸಿ. ಪಾಪಗಳನ್ನು ಯಾರು ಕ್ಷಮಿಸಬೇಡಿ ಎಂದು ಗಾಂಧಿ ಹೇಳಿರುವಂತೆ ಅವರ ಜ್ಞಾನ ಬಂಡಾರವನ್ನು ವಿಕೇಂದ್ರಿಕರಣ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದಂರು. ಗ್ರಾಪಂ ಅಧ್ಯಕ್ಷ ಸ್ವಾತಿ ಜಯಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಮಮತ, ಮಾಜಿ ಉಪಾಧ್ಯಕ್ಷ ಶಿವಾರೆಡ್ಡಿ, ಸದಸ್ಯೆ ಗಂಗುಲಮ್ಮ, ಕೋಮಲ, ರೇಣುಕಾ, ಪಟೇಲ್, ಸುಧಾ, ಗಂಥಪಾಲಕ ಬಾಬು, ವೀರಭದ್ರಪ್ಪ ಉಪಸ್ಥಿತರಿದ್ದರು .

