

ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿಜಿ ಜಯಂತಿಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ (ಅ.2) ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಟೂನಿಸ್ಟ್, ಕಾಂಗ್ರೆಸಿನ ನಾಯಕ ಚಂದ್ರಶೇಖರ ಶೆಟ್ಟಿ ಮಾತನಾಡಿ “ಸ್ವಾತಂತ್ರಕ್ಕಾಗಿ ಅಹಿಂಸಾ ಹೋರಾಟ, ಚಳುವಳಿ ಮಾಡಿ, ಅಹಿಂಸಾ ಮಾರ್ಗದಿಂದ ಸ್ವಾತಂತ್ರ ದೊಕಿಸಿಕೊಟ್ಟಿದ್ದು ಮಹಾತ್ಮ ಗಾಂಧಿ ಎಂದು ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ ಹಾಗಾಗಿ ಗಾಂಧಿ ಜಯಂತಿ ಈಗಲೂ ಪ್ರಸ್ತುತವೇ ಎಂದು ಕೆಲವರು ಎಣಿಸಬಹುದು, ಆದರೆ ಈಗಲೂ ಪ್ರಸ್ತೂತವಾಗಿದೆ, ಯಾಕೆಂದರೆ ಅವರ ಚಿಂತನೇ ಬಹಳ ಶ್ರೇಷ್ಟವಾಗಿದೆ, ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಕೆಳವರ್ಗದವರಿಗೆ, ವಿಧ್ಯೆ ಸಿಗುತೀರಲಿಲ್ಲ, ಅಧಿಕಾರ ಸಿಗುತ್ತೀರಲಿಲ್ಲ, ಸ್ಥಾನ ಮಾನ ದೊರಕುತ್ತೀರಲಿಲ್ಲ. ಇದು ಕೆಲವು ಮೇಲ್ಜಾತಿಯವರಿಗೆ ಮಾತ್ರ ಇದು ದಕ್ಕುತಿತ್ತು. ಗಾಂಧೀಜಿ, ನೆಹರು ಮತ್ತು ಇವರಂತಹವರು ವಿಧ್ಯಾಭಾಸಕ್ಕಾಗಿ ಹೊರದೇಶದ ಕ್ರೈಸ್ತ ವಿಶ್ವವಿಧ್ಯಾಲಯಗಳಲ್ಲಿ ಕಲಿತು ಇಲ್ಲಿ ಬಂದಾಗ ಅವರ ಮನದಲ್ಲಿ ಭಾರತೀಯರಲ್ಲಿಯೂ ಸಮಾನತೆ ಇರಬೇಕು, ವಿಧ್ಯೆ ಸಿಗಬೇಕು, ಅಧಿಕಾರ ಸೀಗಬೇಕು ಎಂಬ ಚಿಂತನೆ ಮೂಡಿತು ಈ ಚಿಂತನೆ ಮೂಡಲು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಕಾರಣವಾದವು, ಅದಲ್ಲದೆ ಭಾರತದಲ್ಲಿ ಕೂಡ ಎಲ್ಲರಿಗೂ ಶಿಕ್ಷಣ ನೀಡಲು ಆರಂಭಿಸಿದ್ದು ಕ್ರೈಸ್ತಶಿಕ್ಷಣ ಸಂಸ್ಥೆಗಳು ಎಂಬುದು ಅಷ್ಟೆ ಸತ್ಯ’ ಶಿಕ್ಷಣದಿಂದಾಗಿ ಮಹಾತ್ಮ ಗಾಂಧಿಯವರಿಗೆ ಸ್ವಾತಂತ್ರ ಸಿಗಬೇಕು ಎಂಬ ಚಿಂತನೆ ಮೂಡಿತು, ಎಂದು ಪ್ರತಿಪಾದಿಸಿದರು.
ಇನ್ನೋರ್ವ ಅತಿಥಿಯಾಗಿದ್ದ ಪ್ರಸ್ತೂತ ಇಟಲಿಯಲ್ಲಿ ಸೇವೆ ನೀಡುತ್ತೀರುವ ಕುಂದಾಪುರದವರೇ ಆದ ಧರ್ಮಗುರು ವಂ।ಮನೋಜ್ ಬ್ರಗಾಂಜಾ ಮಾತನಾಡಿ ‘ಹಲವಾರು ವರ್ಷಗಳಿಂದ ನಾನು ಯುರೋಪ್ ರಾಷ್ಟ್ರದಲ್ಲಿ ಇದ್ದೇನೆ, ವಿದೇಶದಲ್ಲಿಯೂ ಗಾಂಧಿಜಿಯವರಿಗೆ ತುಂಬ ಗೌರವ ಇದೆ, ಯಾಕೆಂದರೆ ಅವರು ಆರಿಸಿಕೊಂಡ ಮಾರ್ಗ ಅಹಿಂಸಾ, ಸತ್ಯ,ಶಾಂತಿ ಇದು ವಿಶಿಷ್ಟವಾಗಿತ್ತು, ಅದರಿಂದಲೇ ನಮಗೆ ಸ್ವಾತಂತರ ಸಿಕ್ಕಿತು. ಪರದೇಶದಲ್ಲಿ ನಮ್ಮ ದೇಶದ ನಾಯಕರುಗಳ ಬಗ್ಗೆ ಅಷ್ಟೇನು ತಿಳಿಯದಿದ್ದರೂ, ಗಾಂಧಿಜಿಯ ಬಗ್ಗೆ ಎಲ್ಲರಿಗೂ ತಿಳಿದಿದೆ, ಅವರು ಗಾಂಧಿಜಿಯವರನು ಬಹಳ ಗೌರವ ನೀಡುತ್ತಾರೆ. ಅವರಿಗೆ ಉಚ್ಚಾರಣೆ ಮಾಡಲು ಕಷ್ಟವಾದರೂ , “ಮಹಾತ್ಮ” ಗಾಂಧಿಜಿ ಎಂದು ಸಂಭೋದಿಸುತ್ತಾರೆ’ ಅವರು ತಿಳಿಸಿದರು. ವೇದಿಕೆಯಲ್ಲಿ ಸಿಸ್ಟರ್ ಜೂಲಿಯೆಟ್, ಕಾರ್ಯದರ್ಶಿ ಶಾಂತಿ ಪಿಂಟೊ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಸ್ವಾಗತಿಸಿದರು, ಆಶಾ ಕರ್ವಾಲ್ಲೊ ನಿರೂಪಿಸಿ ವಂದಿಸಿದರು.





















