

ಕುಂದಾಪುರ : ಕಳೆದ ಮೂವತ್ತು ವರ್ಷಗಳಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅಟೆಂಡರ್ (ಗ್ರೇಡ್ 2)ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮ ಹೆಚ್. ಅವರು ವಯೋನಿವೃತ್ತಿ ಹೊಂದಿದ್ದು ಆಸ್ಪತ್ರೆಯ ವತಿಯಿಂದ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಶ್ ಅವರು ಕಳೆದ ಮೂವತ್ತು ವರ್ಷಗಳಿಂದ ಎಲ್ಲರಿಗೂ ಬೇಕಾದವರಾಗಿ ಅನನ್ಯ ಸೇವೆ ಸಲ್ಲಿಸಿರುವ ರಾಮ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಅವರ ಮುಂದಿನ ನಿವೃತ್ತಿ ಜೀವನ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರಿಸಿದರು. ತನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿಕೊಂಡ ರಾಮ ಅವರು ಕ್ರತಜ್ಞತೆಗಳನ್ನು ಅರ್ಪಿಸಿದರು. ಆಸ್ಪತ್ರೆಯ ಇತರ ವೈದ್ಯಾಧಿಕಾರಿಗಳು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.


