

ಕುಂದಾಪುರ,ಎ.5: “455 ವರ್ಷಗಳ ಇತಿಹಾಸ ಇರುವ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದಲ್ಲೇ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಎ.4 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನು ಆಚರಿಸಲಾಯಿತು.ಮೂಲ್ಕಿ ಡಿವೈನ್ ಕಾಲ್ ಸೆಂಟರ್, ಇಲ್ಲಿಯ ಪ್ರವಚಕರಾದ ಧರ್ಮಗುರು ವಂ।ಅನಿಲ್ ಕಿರಣ್ ಫೆರ್ನಾಂಡಿಸ್ ಹಬ್ಬದ ದಿವ್ಯ ಬಲಿದಾನವನ್ನು ಅರ್ಪಿಸಿ “ಕಠಿಣ ಯಾತನೆಗೆ ಒಳಪಟ್ಟು ಶಿಲುಬೆಯ ಮೇಲೆ ಮರಣ ಹೊಂದಿ, ತಾನು ಹೇಳಿದ ಹಾಗೆ, ಮೂರನೇ ದಿನ ಪುನರುತ್ಥಾನ ಗೊಂಡು ತಾನು ದೇವರ ಪುತ್ರ ಎಂದು ಸಾಬಿತು ಮಾಡಿದ ಪಾಸ್ಕ (ಈಸ್ಟರ್) ಹಬ್ಬವನ್ನು ನಾವು ಇಂದು ಆಚರಿಸುತಿದ್ದೇವೆ, ಒಂದು ವೇಳೆ ಯೇಸು ಕ್ರಿಸ್ತರು ಪುನರ್ಜೀವಂತನಾಗಿರುತಿದ್ದರೆ, ನಾವು ಅವರನ್ನು ನಂಬುತಿರಲಿಲ್ಲ, ನಮಗೆ ಅಸ್ಥಿತ್ವವೇ ಇರುತಿರಲಿಲ್ಲ.ಯೇಸುವಿನಿಂದಾಗಿ ಇಂದು ನಾವು ಸ್ವರ್ಗದ ಅನುಗ್ರಹವನ್ನು ಪಡೆದಿದ್ದೇವೆ. ಯೇಸು ಕ್ರಿಸ್ತರಿಗಾಗಿ ಹಲವರು ತಮ್ಮ ಪ್ರಾಣ ನೀಡಿ ರಕ್ತ ಹರಿಸಿ ಸಂತರಾಗಿದ್ದಾರೆ, ನಾವು ಅವರ ಅನುಕರಣೆ ಮಾಡುವ, ನಮ್ಮ ಪೂರ್ವಜರು ಯೇಸು ಕ್ರಿಸ್ತರಲ್ಲಿ ಅಚಲ ನಂಬಿಕೆಯಿಂದ ಜೀವಿಸಿದರು. ನಾವು ಕೂಡ ಅವರಂತೆ ಬದುಕೋಣ, ಭರವಸೆಯಿಂದ ಇರೋಣ, ಧೈರ್ಯ, ನಿಷ್ಠೆಯಿಂದ ಬದುಕೋಣ, ಸತ್ಯವನ್ನು ಆಚರಣೆ ಮಾಡುವ’ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು. ಚರ್ಚಿನ ಧರ್ಮಗುರು ಅ। ವಂ|ಪೌಲ್ ರೇಗೊ ಫಾಸ್ಕ ಹಬ್ಬದ ಧಾರ್ಮಿಕ ಕ್ರಿಯೆಗಳಲ್ಲಿ ಸಹಕರಿಸಿ ಬಲಿದಾನದಲ್ಲಿ ಭಾಗಿಯಾಗಿ ಈ ಆಚರಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಹಬ್ಬದ ಶುಭಾಷಯಗಳನ್ನು ನೀಡಿದರು.
ಪವಿತ್ರ ಹಬ್ಬದ ಆಚರಣೆಯಲ್ಲಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ ಗುರಿಕಾರರು, ಪಾಲನಮಂಡಳಿ ಸದಸ್ಯರು, ಮತ್ತು ಧರ್ಮಭಗಿನಿಯರು, ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳಿಗೆ ಹಾಜರಿದ್ದರು. ಭಕ್ತಾಧಿಗಳಿಗೆ ಈಸ್ಟರ್ ಎಗ್ ನೀಡಲಾಯಿತು.










































































































