

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾವು ಬೆಳೆಗಾರರಿಗೆ ಉಪಯುಕ್ತವಾಗುವಂತೆ ಮಾವು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆ, ಕೀಟ, ರೋಗ ನಿಯಂತ್ರಣ ಹಾಗೂ ರಫ್ತು ಮಾರುಕಟ್ಟೆ ಉತ್ತೇಜನ ಕುರಿತ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜನವರಿ 19, 2026 (ಸೋಮವಾರ) ರಂದು ಹಮ್ಮಿಕೊಳ್ಳಲಾಗಿದೆ.
ಶ್ರೀನಿವಾಸಪುರ ಪಟ್ಟಣದ ಶ್ರೀ ಮಾರುತಿ ಸಭಾ ಭವನದಲ್ಲಿ (ತಾಲೂಕು ತೋಟಗಾರಿಕೆ ಕಚೇರಿ ಸಮೀಪ) ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMDMC), ಅಫೆಡಾ (APEDA), ಕೆಫೆ ಹಾಗೂ ತೋಟಗಾರಿಕೆ ಇಲಾಖೆಗಳ ಸಂಯುಕ್ತ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷರು ಹಾಗೂ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ಡಾ. ಬಿ.ಸಿ. ಮುದ್ದು ಗಂಗಾಧರ್ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ.
ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಮಾವು ಬೆಳೆಗಾರರಿಗೆ ವೈಜ್ಞಾನಿಕ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ಡಾ. ಎಸ್.ವಿ. ಹಿತ್ತಲಮನಿ, ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕರು (ಲಾಲ್ಬಾಗ್, ಬೆಂಗಳೂರು) ಹಾಗೂ 2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಮಾವು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಡಾ. ಎನ್. ಆತ್ಮತನಾರಾಯಣರೆಡ್ಡಿ, ಸಹಾಯಕ ಪ್ರಾಧ್ಯಾಪಕರು (ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಹೊಗಳಗೆರೆ) ಅವರು ಕೀಟ ಹಾಗೂ ರೋಗ ನಿಯಂತ್ರಣ ಕುರಿತು ವಿವರಿಸಲಿದ್ದಾರೆ.
ಶ್ರೀಮತಿ ಎಂ. ಲಾವಣ್ಯ, ಯೋಜನಾ ನಿರ್ದೇಶಕರು, ಮಾವು ಉತ್ಕೃಷ್ಟ ಕೇಂದ್ರ, ಹೊಗಳಗೆರೆ ಅವರು ಮಾವು ಬೆಳೆಯ ಆಕಾರ ನಿರ್ವಹಣೆ ವಿಷಯ ಮಂಡಿಸಲಿದ್ದಾರೆ.
ಇದಲ್ಲದೆ APEDA ಸಂಸ್ಥೆಯ ಪ್ರತಿನಿಧಿಗಳು GAP ಪ್ರಮಾಣೀಕರಣ ಹಾಗೂ APEDA ನೋಂದಣಿ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲಿದ್ದು,
ವೇಣುಗೋಪಾಲ್ ಜಿ.ಆರ್, ಸಲಹೆಗಾರರು ಕೃಷಿ ರಫ್ತು ಕೋಶ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ, ಬೆಂಗಳೂರು ಅವರು ತಾಜಾ ಮಾವಿನ ರಫ್ತು ಸಾಮರ್ಥ್ಯ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಅವಕಾಶಗಳು ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಟಿ.ಆರ್. ವೇದಮೂರ್ತಿ, ಮಾವು ಅಭಿವೃದ್ಧಿ ಕೇಂದ್ರ (ಹೊಗಳಗೆರೆ) ಉಸ್ತುವಾರಿ ತೋಟಗಾರಿಕೆ ಉಪನಿರ್ದೇಶಕಿ , ಶ್ರೀಮತಿ ಅಸ್ಮ ನಾಜ್, ಜಿಲ್ಲಾ ಪಂಚಾಯತ್ ಕೋಲಾರದ ತೋಟಗಾರಿಕೆ ಉಪನಿರ್ದೇಶಕರು, ಕುಮಾರಸ್ವಾಮಿ ಹಾಗೂ ಶ್ರೀನಿವಾಸಪುರ ಜಿಲ್ಲಾ ಪಂಚಾಯತ್ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಎಂ. ಶ್ರೀನಿವಾಸನ್ ಅವರು ಶುಭಾಶಯ ಕೋರಿದ್ದಾರೆ.
ಮಾವು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ತರಬೇತಿಯ ಸದುಪಯೋಗ ಪಡೆದುಕೊಂಡು ಉತ್ಪಾದನೆ, ಗುಣಮಟ್ಟ ಮತ್ತು ಆದಾಯ ವೃದ್ಧಿಗೆ ನೆರವಾಗಿಸಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7676147041 / 9448402866 / 9972783331 / 8749087299 / 9980725593

