Catholic Sabha Mangalore Pradesh (R) Election for the Year 2026-27


ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ 2026-27ನೇ ಸಾಲಿನ ಚುನಾವಣೆಯು ದಿನಾಂಕ 10/05/2026 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ನಡೆಯಿತು. ಚುನಾವಣಾ ಸಂಚಾಲಕರಾದ ಶ್ರೀ ನೈಜಿಲ್ ಪಿರೇರಾ ಹಾಗೂ ಸಹ ಸಂಚಾಲಕರಾದ ಶ್ರೀ ಆಂಡ್ರ್ಯೂ ನೊರೊನ್ಹಾ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.
ಒಟ್ಟು ಮಂಗಳೂರು ಧರ್ಮಪ್ರಾಂತ್ಯದ 12 ವಲಯಗಳನ್ನು ಒಳಗೊಂಡ ಕಥೋಲಿಕ್ ಸಭಾ ಸಂಸ್ಥೆಯಲ್ಲಿ 81 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ತದನಂತರ ಅಧ್ಯಕ್ಷರ ಸ್ಥಾನಕ್ಕೆ ಶ್ರೀ ಸಂತೋಷ್ ಡಿಸೋಜಾ, ಬಜ್ಪೆ ಅವರು ನಿರಂತರ ಎರಡನೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರ ಮೊದಲನೇ ಸ್ಥಾನಕ್ಕೆ ಶ್ರೀ ಸ್ಟೀವನ್ ರೊಡ್ರಿಗಸ್, ವಾಲೆನ್ಸಿಯಾ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರ ಎರಡನೇ ಸ್ಥಾನಕ್ಕೆ ಶ್ರೀ ಆಲ್ಬರ್ಟ್ ಸುನಿಲ್ ಮೊನಿಸ್ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಶ್ರೀಮತಿ ವಿಲ್ಮಾ ಮೊಂತೆರೊ, ದೇರಬೈಲ್ ಅವರು ಸರ್ವಾನುಮತದಿಂದ ಪುನರಾಯ್ಕೆಯಾದರು.
ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಟ್ರೆಸಿ ರೊಡ್ರಿಗಸ್, ಅಮ್ಮೆಂಬಳ ಅವರು ಆಯ್ಕೆಯಾದರು.
ಖಜಾಂಚಿಯಾಗಿ ಶ್ರೀ ಫ್ರಾನ್ಸಿಸ್ ಮೊಂತೆರೊ, ಮರಿಯಾಶ್ರಮ ತಲಪಾಡಿ ಅವರು ಪುನರಾಯ್ಕೆಯಾದರು.
ಸಹ ಖಜಾಂಚಿಯಾಗಿ ಶ್ರೀ ಸ್ಟ್ಯಾನಿ ಮಿರಾಂಡಾ, ನೀರುಡೆ ಅವರು ಸರ್ವಾನುಮತದಿಂದ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷರಾಗಿ ಹುದ್ದೆಯ ಹಕ್ಕಿನಿಂದ ಶ್ರೀ ಆಲ್ವಿನ್ ಡಿಸೋಜಾ ಪಾನೀರ್ ಅವರು ಆಯ್ಕೆಯಾದರು.
Catholic Sabha Mangalore Pradesh (R) Election for the Year 2026-27

The election of Catholic Sabha Mangalore Pradesh (R) for the year 2026-27 was held on 10/05/2026 at 10:00 a.m. in the hall of the Bishop’s House, Mangalore. The election process was conducted by Election Director Mr. Nigel Perera and Assistant Director Mr. Andrew Noronha.
A new executive committee consisting of 81 members representing the 12 deaneries of the Mangalore Diocese was formed.
Thereafter, Mr. Santhosh Dsouza of Bajpe was unanimously elected as President for the second consecutive term.
Mr. Steven Rodrigues of Valencia was unanimously elected as First Vice President.
Mr. Albert Sunil Monis was unanimously elected as Second Vice President.
Mrs. Wilma Montero of Derebail was unanimously re-elected as Secretary.
Mrs. Tracy Rodrigues of Ammembala was elected as Joint Secretary.
Mr. Francis Montero of Mariashram, Talapady was re-elected as Treasurer.
Mr. Stany Miranda of Neerude was unanimously elected as Joint Treasurer.
By virtue of office, Mr. Alvin Dsouza Panir was elected as Immediate Past President.






