

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ದಿನಾಂಕ 16/8/2026 ರಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜ್ ಆಡಿಟೋರಿಯಂ ಇಲ್ಲಿ ನಡೆಸಲಾಯಿತು. ಸಭೆಯನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಕಳೆದ ವರ್ಷದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ಸಂಘಟನೆಯ ಸದಸ್ಯರಿಗೆ ಶೃದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥಿಸಲಾಯಿತು.
ಸಭಾಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು. 2026-27ನೇ ವರ್ಷದ ಕಾರ್ಯದರ್ಶಿಯವರಾದ ಶ್ರೀಮತಿ ವಿಲ್ಮಾ ಮೊಂತೇರೊರವರು ಕಳೆದ ವಾರ್ಷಿಕ ಸಭೆಯ ಹಾಗೂ ವಾರ್ಷಿಕ ವರದಿಯನ್ನು ವಾಚಿಸಿದರು. ಖಜಾಂಚಿಯವರಾದ ಶ್ರೀ ಫ್ರಾನ್ಸಿಸ್ ಮೊಂತೆರೊರವರು ಲೆಕ್ಕಪತ್ರವನ್ನು ಮಂಡಿಸಿದರು. ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಐವನ್ ಮೈಕಲ್ ರೊಡ್ರಿಗಸ್ರವರು ತಮ್ಮ ಸಂದೇಶವನ್ನು ನೀಡಿದರು.
ಸಭೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ತಮ್ಮ ಸಂದೇಶದಲ್ಲಿ ಎಲ್ಲಾ ಸಭೆಯ ಕಾರ್ಯಕರ್ತರಿಗೆ ತಮ್ಮ ಸೇವೆಗಾಗಿ ಶುಭಹಾರೈಸಿದರು. ತಮ್ಮ ಘಟಕ ಮಟ್ಟದಲ್ಲಿ ಸಮಸ್ಯೆಗಳು ಸಂಭವಿಸಿದಾಗ ಕೂಡಲೇ ಸ್ಪಂದನೆ ನೀಡಲು ಕರೆ ನೀಡಿದರು. ಕಥೊಲಿಕ್ ಸಭೆಯು ಸಮಾಜದ ಸಾಮಾನ್ಯ ಜನರ ಬಲಿಷ್ಟ ಸಂಘಟನೆಯಾಗಿದೆ. ಕಥೊಲಿಕ್ ಸಭಾ ಸಂಘಟನೆಯ ಏಳಿಗೆಯನ್ನು ಸಹಿಸದ ಕೆಲವು ಕಾಣದ ಕೈಗಳು ಸಂಘಟನೆಯ ಅಧ್ಯಕ್ಷರ, ಪದಾಧಿಕಾರಿಗಳ ಮತ್ತು ಸಂಘಟನೆಯ ಹೆಸರನ್ನು ವಾಟ್ಸಪ್ ಮೆಸೇಜನ್ನು ಕಳುಹಿಸುವ ಮುಖಾಂತರ ಹಾಳು ಮಾಡುತ್ತಿದ್ದಾರೆ. ಇದನ್ನು ಖಡಾಖಂಡಿತವಾಗಿ ಖಂಡಿಸಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. ಸಭೆಯ ಲೆಕ್ಕಪತ್ರಗಳು ಆಂತರಿಕ ಲೆಕ್ಕಪರಿಶೋಧಕರಿಂದ ಪರಿಶೀಲಿಸಿ ಮಾಸಿಕ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ವಾರ್ಷಿಕವಾಗಿ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಿ ಬ್ಯಾಲೆನ್ಸ್ ಶೀಟ್ ತಯಾರಿಸಿ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುತ್ತೇವೆ. ಹೀಗಾಗಿ ಎಲ್ಲಾ ಲೆಕಪತ್ರಗಳು ಪಾರದರ್ಶತೆಯಿಂದ ಕೂಡಿದೆ ಎಂದು ತಿಳಿಸಿದರು. ಹೀಗೆ ಬಂದ ಮೆಸೇಜನ್ನು ಅದರ ಸಾರಾಂಶವನ್ನು ಅರ್ಥ ಮಾಡದೆ ಉಳಿದವರಿಗೆ ಕಳುಹಿಸುವುದು ಸಮಂಜಸವಲ್ಲ ಎಂದು ಸದಸ್ಯರಲ್ಲಿ ಭಿನ್ನವಿಸಿದರು.
ಕಳೆದ ವರ್ಷದಲ್ಲಿ ಅತ್ಯಧಿಕ ಸದಸ್ಯತ್ವದ ನೋಂದಣಿ ಮಾಡಿದ ಘಟಕ ಮತ್ತು ವಲಯಗಳಿಗೆ, ಆಮ್ಚೊ ಸಂದೇಶ್ ಪತ್ರಿಕೆಗಾಗಿ ಅತ್ಯಧಿಕ ಚಂದಾದಾರಿಕೆ ಮಾಡಿದ ಹಾಗೂ ಜಾಹೀರಾತು ನೀಡಿ ಸಹಕರಿಸಿದ ಘಟಕಗಳಿಗೆ ಮತ್ತು ವಲಯಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಪ್ರಸ್ತುತ ವರ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿಲ್ಮಾ ಮೊಂತೇರೊರವರು ವಂದನಾರ್ಪನೆಗೈದರು. ರಾಷ್ಟ್ರಗೀತೆಯನ್ನು ಹಾಡಿ ಮಧ್ಯಾಹ್ನದ ಭೋಜನದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
Catholic Sabha Mangalore Pradesh® Annual General Body Meeting

The Annual General Body Meeting for the year 2025-26 of the Catholic Sabha Mangalore Pradesh® was held on 16/8/2026 at the Milagres College Auditorium in Mangaluru. The meeting commenced with a prayer, followed by paying tribute and praying for the departed members of the organization who rendered their service during the past year.
The President of the assembly Mr.Santhosh DSouza, welcomed all those present. The secretary for the year 2026-27 Mrs.Vilma Monteiro read out the minutes of the previous annual meeting and presented the annual report.
The Treasurer Mr.Francis Monteiro presented the financial accounts. The Spiritual Director Rev.Fr.Ivan Michael Rodrigues delivered his message.
The President of assembly Mr.Santhosh DSouza in his address extended his best wishes to all the office bearers and activists of the association for their selfless service. He called upon them to respond immediately whenever issues arise at their unit levels. He highlighted that the Catholic Sabha is a strong organization representing the common people of the community. Expressing deep sorrow and anger, he strongly condemned certain unseen hands-unable to digest the growth of the organization-who has been attempting to defame the Catholic Sabha, its President and its office bearers by circulating misleading Whats App messages.
He explained that all accounts are systematically audited by internal auditors, presented and approved in the monthly meetings, and subsequently audited annually by chartered accountants to prepare the Balance Sheet presented at the AGM. Thus he affirmed that all financial transactions are maintained with complete transparency. He requested the members not to forward such baseless messages to others without understanding their core context and intent.
Units and zones that achieved the highest membership registrations during the past year were recognised and awarded, along with those that contributed highest subscriptions and advertisements for the ‘Amcho Sandesh’ ,magazine.The General Secretary for the current year , Mrs.Vilma Monteiro proposed the vote of thanks. The meeting concluded with the singing of the National Anhem followed by lunch.






































