ಶ್ರೀನಿವಾಸಪುರ : ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನಸುತ್ತಾರೆ. ಅಂತಹವರ ಸಾಲಿನಲ್ಲಿ ಎನ್. ನಾರಾಯಣಸ್ವಾಮಿ ರವರು ನಿಲ್ಲುತ್ತಾರೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಶ್ರಾವಣಿ.ಎಸ್ ಹೇಳಿದರು.ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗ ಕಛೇರಿಯಲ್ಲಿ ನಿವೃತ್ತಿ ಹೊಂದಿದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎನ್. ನಾರಾಯಣಸ್ವಾಮಿ ರವರಿಗೆ ಬೀಳ್ಕೋೀಡಿಗೆ ಸನ್ಮಾನ ಮಾಡಿ ಮಾತನಾಡಿದ ಎಇ ಸರ್ಕಾರದ ಸೇವೆಯನ್ನು […]
ಶ್ರೀನಿವಾಸಪುರ : ಗೌನಿಪಲ್ಲಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸಿ. ಈರಪ್ಪರೆಡ್ಡಿ ತಿಳಿಸಿದರು.ತಾಲ್ಲೂಕಿನ ಗೌನಿಪಲ್ಲಿಯ ದೊಡ್ಡ ಪ್ರಮಾಣದ ವ್ಯವಸಾಯ ಸೇವ ಸಹಕಾರ ಸಂಘಕ್ಕೆ ಸಂಬಂದಿಸಿದ ಬಿ.ಕೊತ್ತಕೋಟ ರಸ್ತೆಯಲ್ಲಿರುವ 24 ವಾಣಿಜ್ಯ ಮಳಿಗೆಗಳ ಹರಾಜು ಪಕ್ರಿಯೆ ಸುಸೂತ್ರವಾಗಿ ನಡೆಯಿತು. ಹರಾಜಿನಲ್ಲಿ ಅಂಗಡಿ ಮಳಿಗೆಯನ್ನು ಹರಾಜಿಗೆ ಪಡೆದವರು ಸಂಘದ ಷರತ್ತು / ಸೂಚನೆಗಳಿಗೆ ಬದ್ದರಾಗಿ ನಡೆದುಕೊಳ್ಳತಕ್ಕದ್ದು. ಈ ಹರಾಜು ಪ್ರಕ್ರಿಯೆಯಲ್ಲಿ […]
ಕೋಲಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ 2024-25ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆಗಳಡಿಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತು ಆಯ್ಕೆ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷರವರು ನಡೆಸಿದರು. ಈ ಸಂದರ್ಭದಲ್ಲಿ ಕೆ.ಜಿ.ಎಫ್ ಆರಕ್ಷಕ ಅಧೀಕ್ಷಕರು, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳಿ ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಶಿರೀನ್ ತಾಜ್ , ನೂರ್ ಆಯೇಶಾ , ಸಲೀಂ ಬಾಬು, ಆರ್ ಟಿ ಓ ಅಧಿಕಾರಿ , ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.
ಶ್ರೀನಿವಾಸಪುರ : ತಾಲೂಕಿನಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಯ್ಕೆಯಾಗಿ ಹತ್ತು ವರ್ಷಗಳು ಕಳದಿದೆ. ಸಂಘದ ಪದಾಧಿಕಾರಿಗಳು ಗ್ರಾಮಗಳಲ್ಲಿ ಸಂಘಗಳ ರಚನೆ, ಅವುಗಳ ಕಾರ್ಯವೈಖರಿಯ ಬಗ್ಗೆ ಪದಾಧಿಕಾರಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಿ.ಹೆಚ್.ಪದ್ಮಯ್ಯ ಮಾಹಿತಿ ನೀಡದರು. ಪಟ್ಟಣದ ಮಾರತಿ ಸಭಾಭವನದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಸಂಘದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಗಾಟಿಸಿ ಮಾತನಾಡಿದರು. ಬೈರವೇಶ್ವರ ವಿದ್ಯಾನಿತೇನದ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಅನುಕೂಲವಾಗುವ ಹಾಗೂ ಗ್ರಾಮೀಣ […]
ಶ್ರೀನಿವಾಸಪುರ : ಮಣ್ಣಿನ ಫಲವತ್ತಿನ ಬಗ್ಗೆ ವಿಜ್ಞಾನಿಗಳ ಸಲಹೆ ಪಡೆದು ಜಮೀನಿನಲ್ಲಿ ಯಾವ ರೀತಿಯಾದ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಮಾಹಿತಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು. ಬೆಳೆಗಳಿಗೆ ಬರುವಂತಹ ರೋಗಗಳಿಗೆ ಯಾವ ರೀತಿಯಾದ ಔಷಧಿ ಸಿಂಪಡನೆ ಮಾಡಬೇಕು ಹಾಗು ಯಾವ ಮಾಡಬೇಕು ಎನ್ನುವುದನ್ನ ಸಲಹೆ ನೀಡಲಾಗುತ್ತದೆ ಕೋಲಾರದ ಟಮಕದ ಕೆವಿಕೆ ಕೃಷಿ ಹವಾಮಾನ ವಿಜ್ಞಾನಿ ಜಿ.ಆರ್. ಸ್ವಾತಿ ಎಂದು ಹೇಳಿದರು.ತಾಲೂಕಿನ ಲಕ್ಷ್ಮೀಸಾಗರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ 3ನೇ […]
ಶ್ರೀನಿವಾಸಪುರ : ಕಾರ್ಯನಿರ್ವಹಿಸುವ ಕಚೇರಿಯು ಸುಸಜ್ಜಿತವಾದ ಕಟ್ಟಡ ಇರಬೇಕು, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತ ಅಲ್ಮೇರಾ , ಅತ್ಯುತ್ತಮ ಗುಣಮಟ್ಟದ ಮೊಬೈಲ್ ಪೋನ್, ಸಿಮ್ ಮತ್ತು ಡೇಟಾ, ಗೋಗಲ್ ಕ್ರೋಮ್ ಬುಕ್ / ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಹಾಗೂ ರಾಜಾ ದಿನಗಳಲ್ಲಿ ಕಚೇರಿ ಯ ಕೆಲಸಗಳು ಬಗ್ಗೆ ಬತ್ತಡ ನೀಡುತ್ತಿರುವ ಬಗ್ಗೆ ಇಲಾಖಾ ಮನವಿ ಸಲ್ಲಿಸುರುವಂತೆ ಇಲಾಖೆಯ ಅನೇಕ ಹಲವಾರು ಬೇಡಿಕೆಗಳನ್ನು ಇಲಾಖೆಗೆ ಗಮನಕ್ಕೆ ತರುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ರವರಿಗೆ ಸರ್ಕಾರಿ ನೌಕರ […]
ಕೋಲಾರ: ಕಳೆದ ಜುಲೈ, 2024 ಮಾಹೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ರವರು ನಡೆಸಿದಂತಹ ಕಂಪ್ಯೂಟರ್ ಪರೀಕ್ಷೆಯಲ್ಲಿ ಕೋಲಾರ ನಗರದ ಗಲ್‍ಪೇಟೆಯಲ್ಲಿರುವ ಪೊಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಭೇತಿ ಶಾಲೆಯು ಕÀಂಪ್ಯೂಟರ್ ಪರೀಕ್ಷೆಯಲ್ಲಿ ಶೇ. 100 ರಷ್ಟು ಟೈಪಿಂಗ್ ಪರೀಕ್ಷೆಯಲ್ಲಿ ಶೇ. 90 ರಷ್ಟು ಫಲಿತಾಂಶ ಪಡೆದಿದ್ದು, ಎನ್.ಶ್ರೀನಿಧಿ, ಆರ್, ವಿನೋದ್, ಲಾವಣ್ಯ, ಕುಸುಮ, ವಿನೋದ್, ಹರ್ಷಿತ, ವಿಜೇಂದ್ರರಾವ್ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯ ಫಲಿತಾಂಶ ಪಡೆದಿದ್ದಾರೆ.ಶೇ.100ರಷ್ಟು ಫಲಿತಾಂಶಕ್ಕಾಗಿ ಶ್ರಮಿಸಿದ ಪ್ರಾಂಶುಪಾಲರಾದ ಡಿ.ಎಂ.ನಾಗರಾಜ […]
ಶ್ರೀನಿವಾಸಪುರ : ಇಂದಿನ ಮಕ್ಕಳು ಪೌಷ್ಟಿಕ ಆಹಾರವಲ್ಲದ ಕುರುಕುರೆ, ಲೇಸ್,ಫಿಸ್ಜಾ, ಬರಗರ್ ದಂತಹ ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಕಡಿಮೆಯಾಗುತ್ತಿದೆ. ಇದರಿಂದ ಪೌಷ್ಡಿಕತೆಗೆ ಸಂಬಂದಿಸಿದ ಕಾಯಿಲೆಗಳು ಇತ್ತಿಚಿಗೆ ಕಂಡು ಬರುತ್ತಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ತೆರ್ನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮಜಿ ಪೌಡೇಶನ್ ಸಹಯೋಗದಲ್ಲಿ ವಾರದಲ್ಲಿ 6 ದಿನಗಳು ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಹಿಂದಿನ ಕಾಲದಲ್ಲಿ ಪೂರ್ವಜರು ಮಕ್ಕಳಿಗೆ ಮನೆಯಲ್ಲಿಯೇ ತಯಾರಿಸಿದ ರಾಗಿ ಮಾಲ್ಟ್ ಹಾಗು […]
ಶ್ರೀನಿವಾಸಪುರ.ರೈತರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಸಹಕಾರಿಯಾಗಿದ್ದು, ರೈತರು ಹೆಚ್ಚಿನ ಠೇವಣಿ ಇಟ್ಟರೆ ಡಿಸಿಸಿ ಬ್ಯಾಂಕ್‍ವತಿಯಿಂದ ಸಾಲ ನೀಡಲು ಸಾಧ್ಯವಾಗುತ್ತದೆ ಎಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬೈರಪಲ್ಲಿ ಬಿ. ವಿ.ವೆಂಕಟರೆಡ್ಡಿ ಹೇಳಿದರು.ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರ ಹಾಗೂ ರೈತರ ಸೇವಾ ಸಹಕಾರ ಸಂಘ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿ ಕಸಬಾ ಸೊಸೈಟಿ ಉತ್ತಮ ಹಾಗೂ ಸುಂದರವಾಗಿ ಕಟ್ಟಡ ಹೊಂದಿದೆ. ಬ್ಯಾಂಕಿನ ಎಲ್ಲಾ ವ್ಯವಹಾರಗಳಿಗೆ ಅನುಕೂಲವಾಗಲಿದೆ, ಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಮೂಲಕ […]

