ಬೆಂಗಳೂರು : ಮಾಧ್ಯಮದವರಿಗೂ ಆದ್ಯತೆ ಮೇರೆಗೆ ರಿಯಾಯಿತಿ ದರದಲ್ಲಿ ನಿವೇಶನ ಮತ್ತು ಮನೆ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರು ಭರವಸೆ ನೀಡಿದ್ದಾರೆ. ಕರ್ನಾಟಕ ಕಾರ್ಯದ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಗೃಹಮಂಡಳಿಯಲ್ಲಿ ಭೇಟಿ ಮಾಡಿ, ಸಲ್ಲಿಸಿದ ಮನವಿ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಈ ಭರವಸೆ ನೀಡಿದ್ದಾರೆ. ಗೃಹ ಮಂಡಳಿಯಲ್ಲಿ ನಾನಾ ಕಾರಣಗಳಿಗಾಗಿ ಹಂಚಿಕೆಯಾಗದೆ ಉಳಿದಿರುವ ನಿವೇಶನಗಳೇ ಬಹಳಷ್ಟಿವೆ. ಅವುಗಳನ್ನು ಜಿಲ್ಲಾವಾರು ಪಟ್ಟಿ ಮಾಡಿ ನಿವೇಶನ ರಹಿತರಾದ ಪತ್ರಕರ್ತರಿಗೆ […]
ಕೋಲಾರ:- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜನರ ಜೀವನದ ಕುರಿತು ಕಾಳಜಿ ಇರುವುದು ನಿಜವೇ ಆದರೆ ಎನ್ಹೆಚ್-75 ರಲ್ಲಿನ ಬೆತ್ತನಿ ಸಮೀಪ ತಮ್ಮ ಬದುಕು ಕಟ್ಟಿಕೊಳ್ಳಲು ಶಾಹಿ ಗಾರ್ಮೆಂಟ್ಸ್ಗೆ ಹೋಗುವ ಸಾವಿರಾರು ಮಹಿಳಾ ಕಾರ್ಮಿಕರಿಗೆ ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ನಿರ್ಮಿಸಿ ಜವಾಬ್ದಾರಿ ಪ್ರದರ್ಶಿಸಲಿ ಮತ್ತು ಜಿಲ್ಲಾಡಳಿತ ಈ ತಾಯಂದಿರ ಜೀವಕ್ಕೆ ಸಂಚಕಾರ ಬರುವ ಮುನ್ನಾ ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಷ್ಟ್ರೀಯ ಹೆದ್ದಾರಿ […]
ಶ್ರೀನಿವಾಸಪುರ ಪಟ್ಟಣದ ಮಾರುತಿ ಬಡವಾಣೆಯಲ್ಲಿನ ಗಜಪಡೆ ಯುವಕರ ಬಳಗದಿಂದ 24ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆಯೊಂದಿಗೆ ಗಣಪತಿ ವಿರ್ಸಜನೆಯನ್ನು ಹಮ್ಮಿಕೊಳ್ಳಲಾಯಿತು.ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ , ಮುಖಂಡರಾದ ಪೂಲ್ ಶಿವಾರೆಡ್ಡಿ, ಎ.ಸಿ.ಶಶಿಧರ್, ಅಭಿಜಯರಾಜ್, ವಿಕಾಶ್, ಕಿಶೋರ್, ಜಿ.ಆರ್.ಶ್ರೀನಿವಾಸ್, ಆಂಜಪ್ಪ, ರಾಮಾಂಜಿ, ಸಂತೋಷ್,ಜಾಕೀರ್ ಇದ್ದರು.
ಶ್ರೀನಿವಾಸಪುರ : ಸರ್ಕಾರವು ಕಳೆದ ಸಾಲಿನಲ್ಲಿ ಸ್ಥಳಿಯ ಕೇಂದ್ರದಲ್ಲಿ ಎರಡು ವರ್ಷಗಳ ತೋಟಗಾರಿಕೆ ಡಿಪ್ಲಮೋ ಕೋರ್ಸ್ನ್ನು ಮುಚ್ಚಲು ಆದೇಶಿಸಿತ್ತು ಎಂದು ಹೊಗಳಗೆರೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ.ಆರ್.ಕೆ.ರಾಮಚಂದ್ರ ಪತ್ರಿಕೆಗೆ ಮಾಹಿತಿ ನೀಡಿದರು.ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿ ಆದರೆ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಎರಡು ವರ್ಷಗಳ ಡಿಪ್ಲಮೋ ಕೋರ್ಸ್ನ್ನು ಪುನರಾಂಭಿಸಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ 2024-25 ಸಾಲಿಗೆ ಡಿಪ್ಲಮೋ ಕೋರ್ಸ್ಗೆ ಸೇರಲು ಬಯಸುವವರು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.uhsbagalkot.edu.in ನೋಡುವುದು .ಅರ್ಜಿಯನ್ನು […]
ಕೋಲಾರ:- ಸೌಹಾರ್ದತೆ ಸಾಮರಸ್ಯದಿಂದ ದಸರಾ ಆಚರಿಸಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸೋಣ ಎಂದು ಅಂಬೇಡ್ಕರ್ ನಗರ ಶ್ರೀರೇಣುಕಾ ಯಲ್ಲಮ್ಮ ದೇವಾಲಯ ಧರ್ಮಾಧಿಕಾರಿ ಡಾ.ಎ.ಕೃಷ್ಣಪ್ಪ ಹೇಳಿದರು.ನಗರದಲ್ಲಿ ದಸರಾ ಉತ್ಸವ ಸಮಿತಿಯಿಂದ ವಿಜಯದಶಮಿ ಅಂಗವಾಗಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಕೆ.ಆರ್.ಧನರಾಜ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮದೇವತೆಗಳ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿ ನೆನಪಿನ ಕಾಣಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಕೋಲಾರ ನಗರದಲ್ಲಿ ದಸರಾ ಉತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಎಲ್ಲಾ ಜಾತಿ ಧರ್ಮೀಯರು ಕೂಡಿ ಆಚರಿಸುವಂತ ವಾತಾವರಣವನ್ನು ದಸರಾ ಉತ್ಸವ […]
ಶ್ರೀನಿವಾಸಪುರ : ಅಕ್ಟೋಬರ್ 28ರಂದು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಮತದಾರರ ಪಟ್ಟಿಯಲ್ಲಿ ಬಹಳಷ್ಟು ಲೋಪ ದೋಷಗಳಾಗಿವೆ ಎಂದು ಕಲಾ ಶಂಕರ್ ಆರೋಪಿಸಿದರು. ಗುರುವಾರ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ಪ್ರಸ್ತುತ ಇರುವಂತಹ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಲಾ ನಿಯಮದಂತೆ ಮತದಾರರ ಪಟ್ಟಿಯನ್ನು 22 ದಿನಗಳ ಮುಂಚಿತವಾಗಿ ಪ್ರಕಟಣೆ ಮಾಡಬೇಕು ಆದರೆ ಪ್ರಕಟಿಸಿಲ್ಲ, ಎಂ ಬೈರೇಗೌಡರು […]
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿ ಯಲ್ಲಿ ಸಾಮಾನ್ಯ ಸಭೆಯನ್ನು ಗುರುವಾರ ಅಧ್ಯಕ್ಷರಾದ ಬಿ.ಆರ್ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿ ಹಲವು ಕಾಮಗಾರಿಗಳಿಗೆ ಅನುಮೋದನೆಯನ್ನು ಪಡೆಯಲಾಯಿತು.ವಿಶೇಷವಾಗಿ ಪಟ್ಟಣದ ೧೦ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡುವುದು, ಕೊಳ್ಳೂರು ಹೊಸ ಬಡಾವಣೆಯಲ್ಲಿ ಸ್ಮಶಾನ ಅಭಿವೃದ್ಧಿ, ಪುರಸಭಾ ವ್ಯಾಪ್ತಿಯ ಪುರಸಭೆಗೆ ಸೇರಿದ ಜಾಗಗಳನ್ನು ಗುರುತಿಸಿ ಕಾಂಪೌಂಡ್ ನಿರ್ಮಾಣ, ಸಿ ಎ ನಿವೇಶನಗಳಲ್ಲಿ ಶೆಟ್ಟಲ್ ಕಾಕ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಹಾಗೂ ಪಟ್ಟಣದ ಪ್ರಮುಖ ವೃತ್ತಗಳಿಗೆ […]
ಕೋಲಾರ:- ದಸರಾ ಮುಕ್ತಾಯದ ಹಿಂದಿನ ದಿನವಾದ ಆಯುಧಪೂಜೆಗಾಗಿ ನಗರದಲ್ಲಿ ಹಬ್ಬದ ವ್ಯಾಪಾರ ಜೋರಾಗೇ ನಡೆದಿದ್ದು, ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹ ಎಲ್ಲೇ ಮೀರಿದೆ, ಹೂ,ಹಣ್ಣು,ಬುದುಗುಂಬಳದ ಬೆಲೆ ಗಗನಕ್ಕೇರಿ ಗ್ರಾಹಕನ ಜೇಬು ಕಚ್ಚುತ್ತಿದ್ದರೆ, ಕಳೆದೊಂದು ತಿಂಗಳಿಂದ ಹೂವಿನ ದರ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಖುಷಿ ತಂದಿದೆ.ಆಯುಧಪೂಜೆ ಹಿನ್ನಲೆಯಲ್ಲಿ ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಮನೆಗಳ ಸ್ವಚ್ಚತೆಯ ಜತೆಗೆ ತಾವು ಬಳಸುವ ವಾಹನ,ಉಪಕರಣಗಳಿಗೆ, ವರ್ಷವಿಡೀ ಉದ್ಯೋಗ ನೀಡುವ ಅಂಗಡಿ,ಸಂಸ್ಥೆಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಈ ಬಾರಿಯೂ ನಡೆದಿದ್ದು, […]
ಶ್ರೀನಿವಾಸಪುರದ ಕನ್ಯಕಾಪರಮೇಶ್ವರಿ ದೇವಾಲಯದ ಮುಂದೆ ಏರ್ಪಡಿಸಿದ್ದ ಗಂಗಾ ಹಾರತಿ ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು. ಕನ್ಯಕಾ ಪರಮೇಶ್ವರಿ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಾವಿನ ಪಟ್ಟಣದಲ್ಲಿ ಗಂಗಾ ಹಾರತಿ, ತೆಪ್ಪೋತ್ಸವ ಉದ್ಘಾಟನೆಶ್ರೀನಿವಾಸಪುರ: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ದಸರಾ ಪ್ರಯುಕ್ತ ಮಂಗಳವಾರ ಗಂಗಾ ಹಾರತಿ ಹಾಗೂ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು.ಬಿ.ಆರ್.ಭಾಸ್ಕರ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗಂಗಾ […]

