ನಿವಾಸಪುರ ಹೊರವಲಯದಲ್ಲಿನ ಭೈರವೇಶ್ವರ ವಿದ್ಯಾನಿಕೇತನದಲ್ಲಿ ಶನಿವಾರ ಏರ್ಪಡಿಸಿದ್ದ ಕಲೋತ್ಸವ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು ಶ್ರೀನಿವಾಸಪುರ: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು. ಕಲೆ, ಸಾಹಿತ್ಯ ಹಾಗೂ ಸಂಸ್ಕøತಿಯನ್ನು ಗೌರವಿಸಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.ಪಟ್ಟಣದ ಹೊರವಲಯದಲ್ಲಿನ ಭೈರವೇಶ್ವರ ವಿದ್ಯಾನಿಕೇತನದಲ್ಲಿ ಶನಿವಾರ ಏರ್ಪಡಿಸಿದ್ದ ಕಲೋತ್ಸವ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ […]
ಶ್ರೀನಿವಾಸಪುರ : ಪಾದಚಾರಿಗಳಿಗೆ ಪಾದವಿಡುವ ಬಾಗ್ಯವನ್ನು ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಅಧಿಕಾರಿಗಳು ಅನುವುಮಾಡಿಕೊಟ್ಟಿದ್ದಾರೆ. ಶ್ರೀನಿವಾಸಪುರ ಪಟ್ಟಣದ ಮುಖ್ಯ ರಸ್ತೆಯಾದ ಎಂ ಜಿ ರಸ್ತೆಯಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಯಾವುದೇ ಪರವಾನಗೆ ಪಡೆಯದೇ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತಾಲ್ಲೂಕು ದಂಡಾಧಿಕಾರಿ ಹಾಗೂ ಪುರಸಭೆ ಮುಖ್ಯಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದ್ದಾರೆ. ಸರ್ಕಾರ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಒಂದಿಷ್ಟು ಸ್ಥಳ ಮೀಸಲಿಟ್ಟಿದ್ದು ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳಿಂದ […]
ಕೋಲಾರ,ಅ.03: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮಗಳ ಸರ್ವೆ ನಂಬರ್ ಸುಮಾರು ಒಂದು ಸಾವಿರದ 273 ಎಕರೆ 24ವರೆ ಗುಂಟೆಯ ಜಮೀನಿನ ಮಾಲೀಕರು ಕುಟುಂಬದವರ ಹಲವಾರು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊಂಡು, […]
ಶ್ರೀನಿವಾಸಪುರ: ರೋಟರಿ ಸಂಸ್ಥೆಯು ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪುರಸಭೆಯ ಸಿಬ್ಬಂದಿಗೆ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಪುರಸಭಾ ಅಧ್ಯಕ್ಷ ಭಾಸ್ಕರ್ ತಿಳಿಸಿದರು.ಪಟ್ಟಣದ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ವಾಸನ್ ಐ ಕೇರ್ ವತಿಯಿಂದ ಪುರಸಭಾ ಸಿಬ್ಬಂಧಿಗೆ ಉಚಿತ ನೇತ್ರ ತಪಾಸಣಾ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದ ಭಾಸ್ಕರ್, ರೋಟರಿ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ, ಶ್ರೀನಿವಾಸಪುರ ತಾಲ್ಲೂಕಿನಲ್ಲಿಯೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇನ್ನೂ ಇಂತಹ […]
ಶ್ರೀನಿವಾಸಪುರ : ಸಚಿವ ಕೆ.ಎಚ್. ಮುನಿಯಪ್ಪ ರವರನ್ನು ಅಸಭ್ಯ ವರ್ತನೆಯಿಂದ ಅವಾಚ್ಯ ಶಬ್ದಗಳನ್ನು ಮಾತನಾಡಿ ನಮ್ಮ ಸಮುದಾಯವನ್ನು ನಮ್ಮನ್ನು ಕೀಳಮಟ್ಟದಿಂದ ಬೈಯ್ದಿರುವ ಆರೋಪಿಗಳ ಬಗ್ಗೆ ದೂರು ಸಲ್ಲಿಸಿ ಮೂರು ದಿನಗಳು ಆದರೂ ಸಹ ಇದುವರೆಗೂ ಬಂದಿಸಿಲ್ಲ . ಆರೋಪಿಗಳನ್ನು ಅತಿ ಶೀಘ್ರವಾಗಿ ಬಂದಿಸುವಂತೆ ಆದಿಜಾಂಭವ ಸೇವಾ ಸಮಿತಿಯ ಅಧ್ಯಕ್ಷ ಸಿ.ಮುನಿಯಪ್ಪ ಒತ್ತಾಯಿಸಿದರು.ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಆದಿಜಾಂಭವ ಸೇವಾ ಸಮಿತಿಯಿಂದ ಮುತ್ತಿಗೆ ಹಾಕಿ ಮಾತನಾಡಿದರು.ನಾವು ಆರೋಪಿಗಳ ವಿರುದ್ದ ದೂರು ಸಲ್ಲಿಸಿ ಮೂರು ದಿನಗಳು ಕಳೆದರೂ ಸಹ ಇದುವರೆಗೂ […]
ಶ್ರೀನಿವಾಸಪುರ : ಸಚಿವ ಕೆ.ಎಚ್. ಮುನಿಯಪ್ಪ ರವರನ್ನು ಅಸಭ್ಯ ವರ್ತನೆಯಿಂದ ಅವಾಚ್ಯ ಶಬ್ದಗಳನ್ನು ಮಾತನಾಡಿ ಹಾಡಿ ನಮ್ಮ ಸಮುದಾಯವನ್ನು ನಮ್ಮನ್ನು ಕೀಳಮಟ್ಟದಿಂದ ಬೈಯ್ದಿರುವ ಅಡವಿಚಂಬಕೂರು ಗ್ರಾಮದ ಗೋಪಾಲ್ ಊರುಫ್ ಯರ್ರಾಬರ್ರಿ ಗೋಪಾಲ್ ಮತ್ತು ಹರಿನಾಥರೆಡ್ಡಿ ಉರುಫ್ ಹರಿ ಜೆ.ಎಸ್ ರೆಡ್ಡಿ ರವರನ್ನ ಬಂದಿಸುವಂತೆ ಆದಿಜಾಂಭವ ಸೇವಾ ಸಮಿತಿಯ ಅಧ್ಯಕ್ಷ ಸಿ.ಮುನಿಯಪ್ಪ, ಪ್ರದಾನ ಕಾರ್ಯದರ್ಶಿ ಎನ್.ವೆಂಕಟರಮಣಪ್ಪ, ನೇತೃತ್ವದಲ್ಲಿ ಹಾಗು ಆಧಿಜಾಂಭವ ಚಾರಿಟೆಬಲ್ ಟ್ರಸ್ಟ್ನ ಸದಸ್ಯರು ಆಗ್ರಹಿಸಿದರು.ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ಗೋಪಾಲ್ ಊರುಫ್ ಯರ್ರಾಬರ್ರಿ ಗೋಪಾಲ್ ಮತ್ತು ಹರಿನಾಥರೆಡ್ಡಿ […]
ಶ್ರೀನಿವಾಸಪುರ : ಪ್ರಸ್ತುತ ವಿಶ್ವದಲ್ಲಿ ಅಹಿಂಸೆ , ಅಶಾಂತಿ ವಾತವರಣ ನೆಲಸಿದ್ದು ಇದನ್ನ ಹೋಗಲಾಡಿಸಲು ನಾವೆಲ್ಲರೂ ಒಗ್ಗೂಡಿಕೊಂಡು ಸಮಾಜದಲ್ಲಿ ಶಾಂತಿ ನೆಲಸುವ ಪ್ರಯತ್ನ ಮಾಡಬೇಕಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರೆನೀಡಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮಹಾತ್ಮ ಗಾಂಧೀ ಜಯಂತಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಗಾಂಧಿಜೀ ಮತ್ತು ಶಾಸ್ತ್ರೀಜಿಯವರು ದೇಶಕ್ಕೆ ಸ್ವಾತ್ರಂತ್ರ್ಯವನ್ನು ತಂದುಕೊಡಲು ಪ್ರಮುಖ ಪಾತ್ರವಹಿಸಿದ್ದು ಆನೇಕ ಸತ್ಯಾಗ್ರಹಗಳನ್ನು ನಡೆಸಿ ನಮಗೆ ಸ್ವಾತ್ರಂತ್ರ್ಯವನ್ನು ತಂದುಕೊಟ್ಟಿದ್ದು ,ಅವರಲ್ಲಿನ ಸರಳತೆ, ದೇಶಾಭಿಮಾನ ನಾವು […]
ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಗಾಂಧೀ ಜಯಂತಿ ಹಾಗೂ ಸ್ವಚ್ಛತಾ ಇ-ಸೇವೆಯ ಅಭಿಯಾನದ ಅಂಗವಾಗಿ ಪಟ್ಟಣದ ಸರ್ಕಾರಿ ಶಾಲೆಗಳ ಮಕ್ಕಳಿಂದ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಕಲಾಕೃತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಚೇರಿ ವ್ಯವಸ್ಥಾಪಕ ಜಿ.ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜು, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಬಿಐಆರ್ಟಿಇ ಅಧಿಕಾರಿ ಜಿ.ವಿ.ಚಂದ್ರಪ್ಪ, ಪುರಸಭೆ ಕಚೇರಿಯ ಸಿಬ್ಬಂದಿ ಹಾಗೂ ಸರ್ಕಾರಿ ಶಾಲೆಗಳ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸಪುರ : ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸಿ,ಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕು ಆ ಮೂಲಕ ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾದ ರಾಜಕಾರಣ ನಡೆಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಗ್ರಹಿಸಿದರು.ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ. ರಾಜಕೀಯ ಜೀವನದ ಕೊನೆಯಲ್ಲಿ ಗೌರವವನ್ನು ಇಟ್ಟುಕೊಂಡು ರಾಜೀನಾಮೆ ಕೊಡಬೇಕು ಎನ್ನುವುದು ನಮ್ಮ ಆಸೆ .ಸಿದ್ದರಾಮಯ್ಯ ನವರು ತನಿಖೆ ಆಗುವವರೆಗೂ ನಾನು ಈ ಸೀಟಿನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರೆ ಅವರಿಗೆ ಸಿಗುವ ಗೌರವ […]

