ಶಿರ್ವ: ಪ್ರಸ್ತುತ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸುಲಭವಾಗಿ ನಡೆಯಲು ಮತ್ತು ಅತ್ಯಂತ ವೇಗವಾಗಿ ಪರಿಣಾಮಕಾರಿಯಾಗಿ ಮಾನವನ ಕೆಲಸವನ್ನು ಕಂಪ್ಯೂಟರ್ ಬಳಕೆಯಿಂದ ಸಾಗುತ್ತಿದೆ. ಇಂದಿನ ಯುವಕರಲ್ಲಿ ಕಲಿಕೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವ ಮೂಲಕ ಮುಂದೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಿಸಬಹು ದು. ಕಲಿಕೆಗೆ ವಯಸ್ಸು ಮುಖ್ಯ ಅಲ್ಲ ಮನಸು ಮುಖ್ಯ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ […]
ಕೋಟ:ಕರ್ನಾಟಕದ ಆಯ್ದ 10 ಜಿಲ್ಲೆಗಳಲ್ಲಿ ಜೆಇ ಲಸಿಕಾಕರಣ ಅಭಿಯಾನ ನಡೆಯುತ್ತಿದ್ದು, ಇದರಲ್ಲಿ 1ರಿಂದ 15 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೂ ಜೆಸಿ ಲಸಿಕೆಯನ್ನು ಉಚಿತವಾಗಿ ಸರಕಾರ ನೀಡುತ್ತಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್ ಹೇಳಿದರು.ಅವರು ಸೋಮವಾರ ಉಡುಪಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ,ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರದ ಆಶ್ರಯದಲ್ಲಿ ಜೆಇ ಲಸಿಕಾ ಅಭಿಯಾನಕ್ಕೆ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದರು. […]
ಕೋಲಾರ ಡಿಸೆಂಬರ್ 4 : ಕೆ.ಎಸ್.ನಿಸಾರ್ ಅಹಮ್ಮದ್ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರು ಕನ್ನಡವನ್ನು ಬಳಸಿದಷ್ಟು ಚೆನ್ನಾಗಿ ಬೇರಾರೂ ಬಳಸಲಿಲ್ಲ ಎಂದು ಹಿರಿಯ ಕವಿ ಸ.ರಘುನಾಥ ಅಭಿಪ್ರಾಯ ಪಟ್ಟರುಕೋಲಾರದ ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕವು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಕಾವ್ಯ ಕಲರವ ಕಾರ್ಯಕ್ರಮದಲ್ಲಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ನಿತ್ಯೋತ್ಸವ ಕನ್ನಡ ಕವಿತೆ ಮತ್ತು ಉರ್ದು ಅನುವಾದದ ಕವಿತೆಗಳ ಪುಸ್ತಿಕೆಯನ್ನು […]
ಮಂಗಳೂರು: ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು MCC ಬ್ಯಾಂಕ್ ಲಿಮಿಟೆಡ್ ಸಹಯೋಗದಿಂದ ಡಿಸೆಂಬರ್ 4,2022 ರಂದು ದ.ಕ.ಜಿಲ್ಲಾ PLHIV ಯವರಿಗೆ ಸ್ನೇಹಮಿಲನ – 2022 ಎಂಬ ಒಂದು ದಿನದ ಕಾರ್ಯಕ್ರಮವನ್ನು ನಡೆಯಿತು.ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 250 PLHIV ಯವರು ಭಾಗವಹಿಸಿದ್ದು ಸ್ನೇಹಮಿಲನ – 2022 ಅತ್ಯಂತ ಯಶಸ್ವಿಯಾಗಿ ನಡೆಯಿತು. ಜೋಸ್ಅಲ್ಲುಕಾಸ್ ಸಂಸ್ಥೆಯ ಶ್ರೀ ರಾಕೇಶ್ ರವರು ಉದ್ಘಾಟನಾ ಕಾರ್ಯಕ್ರಮ […]
ಕುಂದಾಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾನು ನೀಡಿದ್ದಲ್ಲದೇ, ನಾಟಕಗಳಲ್ಲೂ ಪಾತ್ರ ಮಾಡಿದ್ದೆ. ಎಚ್. ಎನ್. ನಕ್ಕತ್ತಾಯರ ನಾಟಕದಲ್ಲಿ ಪಾತ್ರ ಮಾಡಿದ್ದು ಸಂಗೀತ ನಿರ್ದೇಶನ ನೀಡಿದ್ದು ಸ್ಮರಣೆಯಲ್ಲಿದೆ. ಕುಂದಾಪುರಕ್ಕೆ ಬಂದಾಗ ವೈಕುಂಠ ಹೆಬ್ಬಾರರ ಆಶ್ರಯ ನನಗೆ ದೊರಕುತ್ತಿತ್ತು. ಅವರೊಬ್ಬ ಕಲಾ ಆರಾಧಕ ಮತ್ತು ಕಲಾ ಪೋಷಕ. ಅವರ ಸಂಸ್ಮರಣೆಯಲ್ಲಿ ನನಗೆ ಐರೋಡಿ ಕುಟುಂಬದ ಗೌರವ ದೊರಕುತ್ತಿರುವುದು ಸಂತೋಷವಾಗಿದೆ ಎಂದು ಹೆಸರಾಂತ ಗಾಯಕ ಗರ್ತಿಕೆರೆ ರಾಘಣ್ಣ ಎಂದೇ ಕರೆಯಲ್ಪಡುವ ಹೊ. ನಾ. ರಾಘವೇಂದ್ರ ರಾವ್ ಹೇಳಿದರು.ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಐರೋಡಿಯ […]
ಕರ್ನಾಟಕದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ರವಿ ಬಸ್ರೂರು ಅವರನ್ನು “ಕುಂದಪ್ರಭ” ಸಂಸ್ಥೆಯ ಆಶ್ರಯದಲ್ಲಿ ಪ್ರದಾನ ಮಾಡುವ ಕೋ. ಮ. ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಖ್ಯಾತ ಪತ್ರಕರ್ತ, ಅಂಕಣಗಾರ, ಬ್ಯಾಂಕರ್ ಹಾಗೂ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಂದಾಪುರ ಮೂಲದ ಸಾಧಕರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ಸಂಗೀತ ಕ್ಷೇತ್ರದಲ್ಲಿ ಸಾಧನೆ ಹಾಗೂ ಕುಂದ […]
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕಾ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಭರತನಾಟ್ಯ ಕಲಾವಿದೆ ಪೂರ್ವಿಕಾಳ ಈ ಸಾಧನೆಯನ್ನು ಮೆಚ್ಚಿ ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಹಾಗೂ ಬೋಧಕ- […]
ಕುಂದಾಪುರ: ಡಿಸೆಂಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸ್ತ್ರೀಯ ಸಂಗೀತ ಕಲಾವಿದ ವಿದ್ವಾನ್ ರವಿಕಿರಣ್ ಮಣಿಪಾಲ ಅವರು ಜೀವನದ ಸಂತೋಷಕ್ಕೆ ಕಲೆ ಸಾಹಿತ್ಯ ಸಂಗೀತ ಬೇಕು. ಕಲೆಯ ಆರಾಧನೆಯಲ್ಲಿ ಸೌಂದರ್ಯದ ಅನುಭವ ಆಗುತ್ತದೆ. ಕಲೆಯಲ್ಲಿ ಬದುಕಿನ ಎಲ್ಲಾ ಸಂಘರ್ಷ ಮತ್ತು ಸಮಾಧಾನವನ್ನು ತಂದುಕೊಳ್ಳಬಹುದು ಮತ್ತು ಕಾಣಬಹುದಾಗಿದೆ. ಕಲೆ ಅಂದರೆ ಸಂಗೀತ ಸಾಹಿತ್ಯ, ನಾಟಕ, ಚಿತ್ರಕಲೆ, ಕರಕುಶಲ ಕಲೆಗಳು ಹೀಗೆ ಹಲವು ಇವೆ. […]
ಕುಂದಾಪುರ, ಡಿ. 3: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲಾ ವಾರ್ಷಿಕ ಕ್ರೀಡೋತ್ಸವ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ 02-12-2022 ರಂದು ನಡೆಯಿತು. ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡುತ್ತಾ “ಕ್ರೀಡೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ದೃಢತೆಗೆ ಸಹಕಾರಿಯಾಗುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ” ಎಂದರು. ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಕ್ರೀಡೋತ್ಸವದ ಅಧ್ಯಕ್ಷರಾದ ಸಿಸ್ಟರ್ ಸಂಗೀತಾ […]

