ಶ್ರೀನಿವಾಸಪುರ : ಮಾವಿನ ಹಣ್ಣಿಗೆ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ತೋಟಗಾರಿಕೆ ಹಾಗೂ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದು ರೈತರ ಆರ್ಥಿಕ ಹಿತಕಾಪಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಕುರಿತು ವಿವರ ನೀಡಿದ ಶಾಸಕರು, ಶ್ರೀನಿವಾಸಪುರ ಕ್ಷೇತ್ರವು ಏಷ್ಯಾದಲ್ಲಿ ಅತಿ ಹೆಚ್ಚು ಮಾವು ಉತ್ಪಾದನೆ ಮಾಡುವ ಪ್ರದೇಶವೆಂದು ಉಲ್ಲೇಖಿಸಿ, ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣದಿಂದಾಗಿ ರೈತರು ತೀವ್ರ […]
ಕೋಲಾರ, ಜೂನ್ 10 – ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ರಾಷ್ಟ್ರೀಯ ಕಲ್ಯಾಣಾತ್ಮಕ ಕಾರ್ಯಕ್ರಮದ ಭಾಗವಾಗಿ ರಚಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ನಾಮನಿರ್ದೇಶನಗೊಂಡಿರುವ ಅಧಿಕಾರೇತರ ಸದಸ್ಯರ ಪರಿಚಯ ಸಭೆ ಇಂದು ಕೋಲಾರ ಜಿಲ್ಲೆಯ ಮೌಲಾನಾ ಆಜಾದ್ ಭವನದಲ್ಲಿ ಜರುಗಿತು. ಜಿಲ್ಲಾ ಆಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಈ ಸಭೆಯಲ್ಲಿ ನಾಮಿತ ಸದಸ್ಯರು ತಮ್ಮ ಪರಿಚಯ ನೀಡಿದ್ದು, ಸಮಿತಿಯ ಉದ್ದೇಶ, ಕಾರ್ಯವಿಧಾನ ಹಾಗೂ ತಮ್ಮ ಕರ್ತವ್ಯಗಳ ಕುರಿತು ಪ್ರಸ್ತುತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು […]
ಬೆಂಗಳೂರು : ತುಮಕೂರಿನ ಹಿರಿಯ ಫೋಟೋ ಜರ್ನಲಿಸ್ಟ್ ನಾಗರಾಜ್ ಅವರಿಗೆ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿರುವುದು ಸಾಂದರ್ಭಿಕ ಮಾದರಿ ಉದಾಹರಣೆಯಾಗಿದೆ. ಹೃದಯ ಸಂಬಂಧಿತ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಾಗರಾಜ್ ಅವರು, ಚಿಕಿತ್ಸೆಗಾಗಿ 3 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿದರೆಂದು ತಿಳಿದು ಬಂದಿದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ನಾಗರಾಜ್ ಅವರಿಗೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮನವಿ ಸಲ್ಲಿಸಿತ್ತು. ಈ ಮನವಿಗೆ ಸ್ಪಂದಿಸಿದ […]
ಶ್ರೀನಿವಾಸಪುರ, ಜೂನ್ 7: ಇಂದು ಶ್ರೀನಿವಾಸಪುರ ಪಟ್ಟಣದ ಮುಸ್ಲಿಂ ಸಮಾಜವು ಈದ್ ಅಲ್ ಅಧಾ (ಬಕ್ರೀದ್) ಹಬ್ಬವನ್ನು ಭಕ್ತಿ ಭಾವದಿಂದ ಹಾಗೂ ಸಂಪ್ರದಾಯಬದ್ಧ ರೀತಿಯಲ್ಲಿ ಆಚರಿಸುವ ಮೂಲಕ ಧಾರ್ಮಿಕ ಶ್ರದ್ಧೆಗೆ ಸಾರಥ್ಯವಾಯಿತು. ಪಟ್ಟಣದ ಪ್ರಮುಖ ಈದ್ಗಾ ಮೈದಾನಗಳಾದ ಚಾರ್ಮಿನಾರ್ ಈದ್ಗಾ ಮತ್ತು ಜಾಮಿಯ ಮಸೀದಿ ಈದ್ಗಾ ಪ್ರದೇಶಗಳು ಸಾವಿರಾರು ಭಕ್ತರ ಪ್ರಾರ್ಥನೆಗಳಿಂದ ತುಂಬಿ ಹೊಳೆಯುವ ದೃಶ್ಯವನ್ನೆತ್ತಿಕೊಂಡಿದ್ದವು. ನಮಾಝ್ ಕಾರ್ಯಕ್ರಮಗಳು ಶಿಸ್ತಿನಂತೆಚಾರ್ಮಿನಾರ್ ಮಸೀದಿ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 7:30 ಕ್ಕೆ ಮತ್ತು ಜಾಮಿಯ ಮಸೀದಿ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ […]
ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ನಾವು ಉಸಿರಾಡಲು ಶುದ್ದಗಾಳಿ ಇಲ್ಲದೆ ರಾಸಾಯನಿಕ ವಿಷ ಮಿಶ್ರಿತ ಗಾಳಿಯನ್ನು ಉಸಿರಾಡುವಂತಾಗಿದೆ . ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.ಪಟ್ಟಣದ ಪುರಸಭೆವತಿಯಿಂದ ಗುರುವಾರ ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಉಳಿಸಲು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇವುಗಳನ್ನು ತಡೆಗಟ್ಟಲು ಪ್ರತಿ ಮನೆಗಳ ಸುತ್ತಮುತ್ತ ಮಗುವಿಗೊಂದು ಸಸಿಯಂತೆ ನೆಟ್ಟು, ಮರಗಳಾಗಿಸಿ, ವನವಾಗಿಸುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಶುದ್ದವಾದ ಗಾಳಿಯನ್ನು ನೀಡುವುದು ನಮ್ಮಲ್ಲೆರ ಆದ್ಯ ಕರ್ತವ್ಯವೆಂದರು .ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸುವುದು […]
ಶ್ರೀನಿವಾಸಪುರ : ನೆರೆಯ ರಾಜ್ಯಗಳಲ್ಲಿ ಮಾವು ಬೆಳೆಗೆ 12 ಸಾವಿರ ಬೆಂಬಲ ಬೆಲೆ ನೀಡಿದ್ದು, ಅದರಂತೆ ನಮಗೂ ಸರ್ಕಾರ ಬೆಂಬಲ ನೀಡಲಿ ಎಂದು ಒತ್ತಾಯಿಸಿದರು. ಎರಡು ಮೂರು ದಿನಗಳಲ್ಲಿ ಬೆಂಬಲ ಬೆಲೆ ಘೋಷಣೆ ಆಗದ ಪಕ್ಷದಲ್ಲಿ ಸೋಮವಾರ ದಿಂದ ಕೋಲಾರ ಜಿಲ್ಲೆಯಾದ್ಯಂತ ಅರ್ನಿಧಿಷ್ಟ ಕಾಲ ಬಂದ್ ಕರೆ ನೀಡುತ್ತೇವೆ ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮಾವು ಬೆಳೆಗೆ ಬೆಂಬಲ ಬೆಲೆಯನ್ನು ಆಗ್ರಹಿಸಿ ನಡೆದ ರೈತರ ಸಭೆಯಲ್ಲಿ […]
ಶ್ರೀನಿವಾಸಪುರ : ಹಬ್ಬಗಳನ್ನು ಖುಸಿಯಾಗಿರಲು ಆಚರಣೆ ಮಾಡಬೇಕು ವಿನಃ, ಸ್ವಾರ್ಥದಿಂದ ಸಮಾಜದ ಸ್ವಾಸ್ಥ್ಯ ಕಡೆಸುವಂತೆ ಇರಬಾರದು. ಅಂತವರಿಂದ ಎಚ್ಚರಿಕೆಯಿಂದ ಇರಬೇಕು. ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮುಖಾಂತರ ಮೊತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಮಹ್ಮದ್ ಗೊರವನಕೊಳ್ಳ ಅಭಿಪ್ರಾಯಪಟ್ಟರು.ಪಟ್ಟಣ ಪೊಲೀಸ್ಠಾಣೆಯಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮತನಾಡಿದರು.ನೀವು ಮಾಡುವ ಕೆಲಸ ಕಾರ್ಯಗಳ ಬಗ್ಗೆ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಧಾರ್ಮಿಕ ಕೆಲಸ ಕಾರ್ಯಗಳಿಗೆ ದಕ್ಕೆ ಆಗದಂತೆ ನಡೆಯದಂತೆ ಎಚ್ಚರವಹಿಸಿ […]
ಶ್ರೀನಿವಾಸಪುರ : ಸಂತೆ ಎಂಬುದು ಕೊಂಡುಕೊಳ್ಳುವ ಸ್ಥಳವಾದರೂ ಅದು ಕೇವಲ ವ್ಯಾಪಾರ ವ್ಯವಹಾರಕ್ಕೆಷ್ಟೇ ಸೀಮಿತವಾಗಿರಲಿಲ್ಲ . ಸಂತೆ ಎಂಬ ವ್ಯಾವಹಾರಿಕ ಜಗತ್ತಿನ ನಡುವೆ ಉತ್ತಮವಾದ ಸಂಬಂದಗಳು ಮಾನವೀಯ ಮೌಲ್ಯಗಳು ಸಹ ಉಸಿರಾಡುತ್ತಿರುತ್ತವೆ ಎಂದು ಪ್ರಾಂಶುಪಾಲ ಕೆ.ಎನ್.ರಾಮಾಂಜನೇಯ ಅಭಿಪ್ರಾಯಪಟ್ಟರು.ಪಟ್ಟಣದ ಸಾಯಿವಿಜಯ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಂಗಳವಾರ ನಡೆದ ಮೆಗಾ ಸೇಲ್ಸ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಪಠ್ಯದೊಂದಿಗೆ ಯಾವ ರೀತಿಯಾದ ಸ್ವಾಲಂಬಿ ಜೀವನ ನಡೆಸಬಹುದು ಎಂಬುದಕ್ಕೆ ಸೇಲ್ಸ್ಡೇ ಪ್ರಾಯೋಗಿಕವಾಗಿ ಅನುಭವ ಸಿಗುತ್ತದೆ. ಕಾಲೇಜು […]
ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳ ಸ್ಥಾಪನೆಗಾಗಿ ಜಮೀನು ಗುರುತಿಸುವ ಸಂಬಂಧ ಕೆಐಡಿಬಿ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ತೆರಳಿ ಸಭೆ ನಡೆಸಿ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದರು. ಈಗಾಗಲೇ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳಿಗಾಗಿ 1273 ಎಕರೆ ಜಮೀನು ಗುರುತಿಸಿದ್ದು, ಇದಕ್ಕೆ ಕೆಲವು ರೈತರಿಂದ ವಿರೋಧವೂ ವ್ಯಕ್ತವಾಗಿದ್ದು, ಕೆಲವು ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾರೆ. ಈ ನಡುವೆ ಕೈಗಾರಿಕೆಗಳಿಗಾಗಿ ಗುರುತಿಸಿರುವ ಜಮೀನಿಗೆ ಸಂಬಂಧಿಸಿದಂತೆ 551 ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ […]

