ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಉತ್ತಮ ಆರೋಗ್ಯಕ್ಕಾಗಿ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣ ಸ್ವಚ್ಛತಾ ಕಾರ್ಯಕ್ರಮವನ್ನು ಮಂಗಳವಾರ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಭಾರತ್ ಅಭಿಯಾನ ವರದಾನವಾಗಿದೆ. ಪ್ರಧಾನಿ ಮೋದಿ ಅವರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾದ ಈ ಅಭಿಯಾನ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಬೆಳೆಯಲಾಗಿದ್ದ ಕಳೆ ಗಿಡಗಳನ್ನು ಕಿತ್ತು ಸ್ವಚ್ಛಗೊಳಿಸಲಾಯಿತು. […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ ,ಸೆ-28, ಜಿಲ್ಲಾದ್ಯಂತ ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆಗಳ ಟೇಬಲ್ ಮೇಲೆ ದೂಳು ಹಿಡಿಯುತ್ತಿರುವ ಲಕ್ಷಾಂತರ ಅರ್ಜಿಗಳಿಗೆ ಮುಕ್ತಿ ನೀಡಬೇಕೆಂದು ಸಾಮೂಹಿಕ ನಾಯಕತ್ವದ ರೈತ ಸಂಘದಿಂದ ಸರ್ವೆ ಇಲಾಖೆ ಉಪ ನಿರ್ದೇಶಕರಾದ ಭಾಗ್ಯಮ್ಮ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.ಸರ್ವೆ ಇಲಾಖೆಯಲ್ಲಿ ಯಾರ ಒತ್ತಡ ಅಧಿಕಾರಿಗಳಿಗೆ ಇದಿಯೋ ಗೊತ್ತಿಲ್ಲ. ಕೋಲಾರ ಜಿಲ್ಲೆಯ ಸರ್ವೆ ಇಲಾಖೆಗೆ ಅಧಿಕಾರಿಗಳು ಬರಬೇಕಾದರೆ ಭಯಬೀತರಾಗಿದ್ದಾರೆ. ಕಾರಣ ಗೊತ್ತಾಗುತ್ತಿಲ್ಲ. ಜೊತೆಗೆ ಜಿಲ್ಲಾದ್ಯಂತ 30 ಜನ ಅಧಿಕಾರಿಗಳು […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ, ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮ ದೇವತೆ ನರಡಮ್ಮದೇವಿ ವಿಗ್ರಹದ ಮೆರವಣಿಗೆ ಮೂರು ದಿನಗಳ ಕಾಲ ವಿಜೃಂಭಣೆಯಾಗಿ ನಡೆಯಿತುತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಗಟ್ಟಿಹಳ್ಳಿ ನರಡಮ್ಮ ದೇವರ ಮೆರವಣಿಗೆ ಅತ್ಯಂತ ವೈಭವವಾಗಿ ನಡೆಯಿತು ದೇವಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತಾಧಿಗಳು ದೇವಿಗೆ ವಿಶೇಷ ಪೂಜೆ ಹಾಗೂ ಒಡೆಬಾಲು ನೀಡಿ ದೇವರ ದರ್ಶನ ಪಡೆದು ಪುನೀತರಾದರು. ಗ್ರಾಮದ ಭಕ್ತಾಧಿಗಳಿಗೆ ತೀರ್ಥಪ್ರಸಾದವನ್ನು ಏರ್ಪಡಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಪಕ್ಷ ಬೇದವನ್ನು ಮರೆತು […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ, ಸದಾಶಿವ ಆಯೋಗದ ವರದಿಯನ್ನು ಏಕಪಕ್ಷಿಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದಂತೆ ಒತ್ತಾಯಿಸಿ ತಾಲ್ಲೂಕು ಬೋವಿ ಕೌಶಲ್ಯ ಅಭಿವೃದ್ದಿ ಸಂಘದ ವತಿಯಿಂದ ಶಾಸಕ ಕೆ.ಆರ್. ರಮೇಶ್ ಕುಮಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂಧರ್ಭದಲ್ಲಿ ತಾಲ್ಲೂಕು ಬೋವಿ ಕೌಶಲ್ಯ ಅಭಿವೃದ್ದಿ ಸಂಘದ ಅಧ್ಯಕ್ಷ ಎಸ್.ಆರ್. ಶಿವಶಂಕರ್, ಕಾರ್ಯದರ್ಶಿ ಜೆ.ವಿ. ಕಾಲೋನಿ ವೆಂಕಟೇಶ್ ಗುತ್ತಿಗೆದಾರ ಗಂಗಾಧರ್, ಮುತ್ತಕಪಲ್ಲಿ ಶ್ರೀನಾಥ್, ಶಿವಪುರ ಎಸ್.ಜಿ.ವಿ. ವೆಂಕಟೇಶ್, ಗುರ್ರಪ್ಪ, ಶಿವಪುರ ಗಣೇಶ್, ಗೌನಿಪಲ್ಲಿ ರಮೇಶ್, ಶಿವಪ್ಪ, ಸಮುದಾಯದ ಮುಖಂಡರು […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ, ಕೇಂದ್ರದ ಕೃಷಿ ಕಾಯ್ದೆ ವಿರೋದಿಸಿ ಹಲವು ಸಂಘಟನೆಗಳು ಹಮ್ಮಿಕೊಂಡಿದ್ದ ಭಾರತ ಬಂದ್ ಶ್ರೀನಿವಾಸಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಬಸ್ಸ್ ವಾಹನ, ಸಂಚಾರ ಇದ್ದು ವ್ಯಾಪಾರ ವಹಿವಾಟ ಕೂಡ ನಡೆಯುತ್ತಿತ್ತು.ಪಟ್ಟಣದಲ್ಲಿ ಸಾರಿಗೆ ಸಂಚಾರ ಆಟೋ, ಇತರೆ ವಾಹನ ಎಂದಿನಂತೆ ಇತ್ತು ವ್ಯಾಪಾರ ವಹಿವಾಟ ಚಟುವಟಿಕೆ ಕೂಡಾ ಬೆಳಗ್ಗೆಯಿಂದ ನಡೆಯುತ್ತಿತ್ತು, ಈಗಾಗಲೇ ಕರೋನಾದಿಂದ ತತ್ತರಿಸಿ ಅರ್ಥಿಕ ಸಂಕಷ್ಟದಲ್ಲಿ ಇರುವ ಜನರಿಂದ ಭಾರತ್ ಬಂದ್‍ಗೆ ಬೆಂಬಲ ನೀಡಿಲ್ಲ.ಇಂದಿರಾ ಭವನ್ ವೃತ್ತದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಬಂಗಾರಪೇಟೆ,ಸೆ-27, ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಸಂಯುಕ್ತ ಕಿಸಾನ್ ಮೋರ್ಚ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ರೈತ ಸಂಘದಿಂದ ಆಸ್ಪತ್ರೆ ಸರ್ಕಲ್‍ನಲ್ಲಿ ತರಕಾರಿ ಸಮೇತ ಹೊರಾಟ ಮಾಡಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.ದೇಶದ ಶೇಕಡ 80 ರಷ್ಟು ಕೃಷಿಯನ್ನು ನಂಬಿರುವ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವ ರೀತಿ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಸ್ಪರ್ಧಾರ್ಥಿಗಳು ಆತ್ಮವಿಶ್ವಾಸ, ಅರ್ಥಗ್ರಹಿಕೆ ಹಾಗೂ ಅಭ್ಯಾಸ ಈ ಮೂರೂ ಸೂತ್ರಗಳನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದರಲ್ಲಿ ಯಾವುದೇ ಸಂಶವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಪಲ್ಲವಿಮಣಿ ಅವರು ತಿಳಿಸಿದರು.ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನವಚೇತನ ವಿದ್ಯಾಸಂಸ್ಥೆಯಲ್ಲಿ ಕೋಲಾರದ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಒಂದು ದಿನದ ಉಚಿತ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಇಂದಿನ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : – ಸಂಪೂರ್ಣ ಗಣಕೀಕರಣದ ಮೂಲಕ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಪ್ಯಾಕ್‌ಗಳ ದೈನಂದಿನ ವಹಿವಾಟು ನ .೧ ರಿಂದ ಆರಂಭಗೊಳ್ಳಲಿದ್ದು , ಒಂದೇ ಬಾರಿಗೆ ಕೇಂದ್ರ ಕಚೇರಿಯಲ್ಲೇ ಮಾಹಿತಿ ಲಭ್ಯವಾಗುವ ಮೂಲಕ ದೇಶದ ಸಹಕಾರ ರಂಗದ ಇತಿಹಾಸದಲ್ಲೇ ಹೊಸ ಪ್ರಯೋಗದೊಂದಿಗೆ ಕ್ರಾಂತಿಕಾರಿ ಹೆಚ್ಚ ಇಡಲು ಡಿಸಿಸಿ ಬ್ಯಾಂಕ್ ಸಜ್ಜಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ಭಾನುವಾರ ಬೆಳಗ್ಗೆ ನಡದ ಅವಿಭಜಿತ ಜಿಲ್ಲೆಯ ಪತ್ತಿನ ಸಹಕಾರ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ಇಂದು ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯ ಆವರಣದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್‌ನ್ನು ಉದ್ಘಾಟನೆಯನ್ನು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ನೆರವೇರಿಸಿದರು .ಈ ಸಂದರ್ಭದಲ್ಲಿ ಲೋಕಸಭಾ ಸಂಸದರಾದ ಎಸ್. […]

