ಶ್ರೀನಿವಾಸಪುರ : ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾವಂತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಬಿ.ಸಿ. ಮುನಿಲಕ್ಷ್ಮಯ್ಯ ಸಲಹೆ ನೀಡಿದರು. ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಸಬಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಪಾಠಪ್ರವಚನಗಳಿಗೆ ಮಾತ್ರ ಸೀಮಿತವಾಗಿದ್ದ ಸರ್ಕಾರಿ ಶಾಲೆಗಳು, ಇದೀಗ […]

Read More

ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆಯಲ್ಲಿರುವ ಹೋಲ್ಸೇಲ್ ಮಾರಾಟ ಅಂಗಡಿ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 200 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟದ ಮೇಲೆ ನಿಷೇಧ ಜಾರಿಯಲ್ಲಿರುವ ಹಿನ್ನೆಲೆ, ಪುರಸಭೆ ಆರೋಗ್ಯ ನಿರೀಕ್ಷಕ ಟಿ.ವಿ. ಸುರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ದಾಳಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸಹ ಭಾಗವಹಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿದರು. ನಿಷೇಧಿತ ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ […]

Read More

ಶ್ರೀನಿವಾಸಪುರ : ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಗರುವಾರ ಹಿಂದೂ ಸಮಾಜ್ಯೋತ್ಸವ ಸಮಿತಿವತಿಯಿಂದ ನಡೆದ ಪೂರ್ವ ಬಾವಿಸಭೆಯ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ೩೧ ಶನಿವಾರ ವೇದಿಕೆ ಕಾರ್ಯಕ್ರಮವನ್ನ ವರದಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ವರದ ಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಪ್ರಾರಂಭವಾಗುವ ಮುನ್ನಾ, ಶೋಭಾಯಾತ್ರೆಯನ್ನ ಎಂಜಿ ರಸ್ತೆಯ ಮೂಲಕ ಮುಳಬಾಗಿಲು ವೃತ್ತ, ಕೋಲಾರ ವೃತ್ತ, ಚಿಂತಾಮಣಿ ವೃತ್ತ, ಮೂಲಕ ವೇದಿಕೆಯ ಬಳಿ ಶೋಬಾಯಾತ್ರೆಯು ಪೂರ್ಣವಾಗುವುದು […]

Read More

ಶ್ರೀನಿವಾಸಪುರ: ಅಲ್ಪಸಂಖ್ಯಾತ ಸಮುದಾಯದಲ್ಲಿ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿ ಅತ್ಯಂತ ಅಗತ್ಯವಾಗಿದೆ ಎಂದು ಮಾನ್ಯ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಯ ನಾಮ ನಿರ್ದೇಶನ ಸದಸ್ಯರಾದ ಶಬ್ಬೀರ್ ಅಹ್ಮದ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ವ್ಯಕ್ತಿ ಹಾಗೂ ಸಮಾಜದ ಪ್ರಗತಿಗೆ ಮೂಲಾಧಾರವಾಗಿದೆ. ಆದರೆ ಅಲ್ಪಸಂಖ್ಯಾತ ಸಮುದಾಯದ ಅನೇಕ ವಿದ್ಯಾರ್ಥಿಗಳು ಆರ್ಥಿಕ ಹಿಂದುಳಿಕೆ, ಸರಿಯಾದ ಮಾರ್ಗದರ್ಶನದ ಕೊರತೆ, ಶಿಕ್ಷಣ ಸೌಲಭ್ಯಗಳ ಕುರಿತು ಮಾಹಿತಿ ಅಭಾವ ಮತ್ತು ಸಾಮಾಜಿಕ […]

Read More

ಕೋಲಾರ ;ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಹಮ್ಮಿಕೊಂಡಿದ್ದ ೨೦೨೬ರ ಫಲಪುಷ್ಪ ಪ್ರದರ್ಶನದಲ್ಲಿ ಟಮಕದ ತೋಟಗಾರಿಕಾ ಮಹಾವಿದ್ಯಾಲಯದ ಅಕಾಲಿಕ ಹಲಸಿನ ಹಣ್ಣುಗಳು ವೀಕ್ಷಕರ ಗಮನ ಸೆಳೆದವು. ಕೋಲಾರದ ವಿಧಾನಸಭಾ ಸದಸ್ಯರಾದ ಶ್ರೀ ಕೊತ್ತೂರು ಜಿ. ಮಂಜುನಾಥರವರು ಅಕಾಲಿಕ ಹಲಸಿನ ಗಾತ್ರವನ್ನು ನೋಡಿ ಬೆರಗಾಗಿ ಅಕಾಲಿಕ ಹಲಸಿನ ಕಸಿಗಿಡಗಳನ್ನು ರೈತರಿಗೆ ಒದಗಿಸಲು ವಿಜ್ಞಾನಿಗಳು ಶ್ರಮಿಸಿದರೆ ಇದರಿಂದ ರೈತರ ಆದಾಯ ಹೆಚ್ಚುವುದರ ಜೊತೆಗೆ ಅಕಾಲದಲ್ಲಿ ಹಣ್ಣನ್ನು ಸಾರ್ವಜನಿಕರು ಸವಿಯಬಹುದು ಎಂದರು.ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಎಮ್. ಆರ್. ರವಿಯವರು ಅಕಾಲಿಕ ಹಲಸಿನ ಹಣ್ಣುಗಳನ್ನು […]

Read More

ಶ್ರೀನಿವಾಸಪುರ : ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಮಿತಿಯ ನಿರ್ದೇಶಕರ ಆಯ್ಕೆಗಾಗಿ ಮಂಗಳವಾರ ಚುನಾವಣೆಯಲ್ಲಿ ಒಟ್ಟು ೧೧ ಸ್ಥಾನದಲ್ಲಿ ೬ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೫ ನಿರ್ದೇಶಕರಿಗೆ ಫೆ.೧ ರಂದು ಚುನಾವಣೆಯು ನಡೆಯಲಿದೆ ಎಂದು ಚುನಾವಣಾಧಿಕಾರಿ ಮುಸ್ತಾಕಅಹ್ಮದ್‌ರವರು ಮಾಹಿತಿ ನೀಡಿದರು.ಸಹಾಯಕ ಚುನಾವಣಾಧಿಕಾರಿ ವೀರಭದ್ರಯ್ಯ , ಕಾರ್ಯನಿವಾಹಣಾಧಿಕಾರಿ ನಾಗರಾಜ್ ಇದ್ದರು.

Read More

ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ, ಈಚೆಗೆ ಕೋಲಾರದಲ್ಲಿ ನಿಧನರಾದ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ, ಈಚೆಗೆ ಕೋಲಾರದಲ್ಲಿ ನಿಧನರಾದ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ.ಜಿ.ಪ್ರಭಾಕರ್ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ನಾಗರಾಜ್, ಹಿರಿಯ ಪತ್ರಕರ್ತರಾದ ಆರ್.ಚೌಡರೆಡ್ಡಿ, ಕೆ.ಎಂ.ಚೌಡಪ್ಪ, ಕೆ.ವಿ.ನಾಗರಾಜ್, ವೇಣುಗೋಪಾಲ್, ಮುರಳಿ ಮೋಹನ್, […]

Read More

ಶ್ರೀನಿವಾಸಪುರ : ಈಗಾಗಲೇ ದೇಶದಲ್ಲಿನ ೨ ಕೋಟಿ ಕುಟುಂಬಗಳು ಎಲ್‌ಐಸಿಯ ಪಾಲಿಸಿದಾರರಾಗಿದ್ದು, ಎಲ್‌ಐಸಿ ಸಂಸ್ಥೆಯು ವಿವಿಧ ಯೋಜನೆಗಳ ಮೂಲಕ ತನ್ನದೇ ಆದ ಪಾಲಿಸಿಗಳ ಮೂಲಕ ದೇಶದ ನಾಗರಿಕರಿಗೆ ಜೀವನ ಭದ್ರತೆ ಒದಗಿಸುತ್ತಿದೆ ಎಂದು ಎಲ್‌ಐಸಿ ಶಾಖಾ ವ್ಯವಸ್ಥಾಪಕಿ ವಿಜಯ ಕುಮಾರಿ ಹೇಳಿದರು. ಪಟ್ಟಣದ ಎಲ್‌ಐಸಿ ಕಚೇರಿಯಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್‌ಐಸಿ ಕಂಪನಿಯು ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಭವಿಷ್ಯ ಭದ್ರತೆಗೆ ಅಗತ್ಯವಿರುವ ಎಲ್ಲಾ ರೀತಿಯ ಪಾಲಿಸಿಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. […]

Read More

ವಿಜಯಪುರ: ಹಿರಿಯ ಉರ್ದು ಪತ್ರಕರ್ತ ರಫೀ ಭಂಡಾರಿ ಅವರ ವ್ಯಕ್ತಿತ್ವ ಹಾಗೂ ಪತ್ರಿಕಾ ಕ್ಷೇತ್ರದ ಸಾಧನೆ ಕುರಿತ ಅಭಿನಂದನಾ ಕೃತಿ ಬಿಡುಗಡೆ, ಸನ್ಮಾನ ಮತ್ತು ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ದತ್ತಿನಿಧಿ ಉಪನ್ಯಾಸ ಸ್ಥಾಪನೆ ಘೋಷಣೆ ಕಾರ್ಯಕ್ರಮ ಜ.25ರಂದು ಬೆಳಿಗ್ಗೆ 10.30ಕ್ಕೆ ನಗರದ ಮಧುವನ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಅಧ್ಯಕ್ಷತೆ ವಹಿಸಲಿದ್ದಾರೆ. […]

Read More
1 11 12 13 14 15 385