Roy Castelino Elected President of Rachana, Catholic Chamber of Commerce & Industry ಮಂಗಳೂರು ; 26 ನೇ ಮಹಾಸಭೆಯು 16.11.25 ರಂದು ನಗರದ ಬೆಂದೂರು ಸಭಾಂಗಣದಲ್ಲಿ ನೆರವೇರಿತು. ಕ್ರೈಸ್ತ ಮುಖಂಡ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಗೊಂಡರು. ಇತರೆ ಪದಾಧಿಕಾರಿಗಳು: ಉಪಾಧ್ಯಕ್ಷ – ಲೆಸ್ಲಿ ರೇಗೊ, ಕಾರ್ಯದರ್ಶಿ – ಎಲ್ರೊನ್ ರೊಡ್ರಿಗಸ್, ಜತೆ ಕಾರ್ಯದರ್ಶಿ – ಜೇಮ್ಸ್ ಮಾಡ್ತಾ, ಕೋಶಾಧಿಕಾರಿ – ನವೀನ್ ಲೋಬೊ […]

Read More

ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂ ಐ ಟಿ ಕೆ)  ಯಲ್ಲಿ ಹದಿನೆಂಟನೇ ಪದವಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ  ಎಮ್ ಎಸ್ ಎಮ್  ಇ( ಭಾರತ ಸರ್ಕಾರ) ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಮತ್ತು ಎ ಎಮ್ ಎಸ್ ಇಂಡಿಯಾ ಇದರ ಕೊ ಫೌಂಡರ್ ಆಗಿರುವ ಶ್ರೀ ಗೋಪಿನಾಥ ರಾವ್, ಐಈಡಿಎಸ್ ಇವರು ಆಗಮಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಇವರು ಸರ್ಕಾರದಿಂದ ಲಭ್ಯವಿರುವ ಫಂಡಿಂಗ್ ಅವಕಾಶಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಉದ್ಯೋಗಿ ಮತ್ತು […]

Read More

ಹಂಗಾರಕಟ್ಟೆ ; ಕಥೆ ಕವನಗಳು ಮೌಖಿಕ ಸಂಸ್ಕøತಿಯ ಅಡಿಪಾಯವಾಗಿದ್ದು ಇಂದಿನ ಈ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಸರಿ ತಪ್ಪುಗಳ ಮೌಲ್ಯಗಳನ್ನು ಗುರುತಿಸಲು ಸಾಧ್ಯವಿದೆ, ಅಲ್ಲದೇ ಮೌಖಿಕ ಪರಂಪರೆಯ ಜ್ಞಾನ ಮತ್ತು ವಿವೇಕವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಸುಲಭ ಮತ್ತು ಪರಿಣಾಮಕಾರಿ ಸಾಧನವೇ ಕಥೆ ಹೇಳುವುದು ಎಂದು ರೋ| ಪಿ. ರಾಘವೇಂದ್ರ ಭಟ್ ಅಧ್ಯಕ್ಷರು ರೋಟರಿ ಉಡುಪಿ ಮಿಡ್‍ಟೌನ್ ಇವರು ಅಭಿಪ್ರಾಯ ಪಟ್ಟರು.ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ರೋಟರಿ ಉಡುಪಿ ಮಿಡ್‍ಟೌನ್, ಸರಕಾರಿ ಪ್ರೌಢಶಾಲೆ […]

Read More

Milagres PU College Hosts Special Talk on Research Techniques and Career Opportunities ಕಲ್ಯಾಣಪುರದ ಮಿಲಾಗ್ರೆಸ್ ಪಿಯು ಕಾಲೇಜು, ಮಾನವಿಕ ಸಂಘದ ಆಶ್ರಯದಲ್ಲಿ ನವೆಂಬರ್ 14, 2025 ರಂದು ಕಾಲೇಜಿನ ಆಡಿಯೋ ವಿಶುವಲ್ ಹಾಲ್‌ನಲ್ಲಿ “ಪಿಯುಸಿ ನಂತರದ ಸಂಶೋಧನಾ ತಂತ್ರಗಳು ಮತ್ತು ವೃತ್ತಿ ಅವಕಾಶಗಳು” ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು. ತಮ್ಮ ಪರಿಚಯಾತ್ಮಕ ಮಾತುಗಳಲ್ಲಿ, ಇತಿಹಾಸ ಉಪನ್ಯಾಸಕಿ ಮತ್ತು ಮಾನವಿಕ ಸಂಘದ ಸಂಚಾಲಕಿ ಶ್ರೀಮತಿ ಫ್ಲೋರಿನ್ ಡಿ’ಸಿಲ್ವಾ ಅವರು ವಿಶೇಷ ಉಪನ್ಯಾಸದ ಮಹತ್ವವನ್ನು ಎತ್ತಿ […]

Read More

ಕೋಟಾ : ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಾಡಿ ಶಾಖೆಯಲ್ಲಿ ಗಣನೀಯ ಆರ್ಥಿಕ ದುರುಪಯೋಗ ನಡೆದಿರುವುದು ಬೆಳಕಿಗೆ ಬಂದ ನಂತರ, ಅಧಿಕಾರಿಗಳು ಆಪಾದಿತ ವಂಚನೆ ಕೋಟ್ಯಂತರ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದ್ದು, ಇದು ಕಾನೂನು ಜಾರಿ ಸಂಸ್ಥೆಗಳಿಂದ ಸಂಪೂರ್ಣ ತನಿಖೆಗೆ ಕಾರಣವಾಯಿತು. ನಿಯಮಿತ ಹಸ್ತಾಂತರ ಪ್ರಕ್ರಿಯೆಯಲ್ಲಿ ಶಾಖೆಯ ಖಾತೆಗಳಲ್ಲಿ ವ್ಯತ್ಯಾಸ ಕಂಡುಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಅಧಿಕೃತ ವರದಿಗಳ ಪ್ರಕಾರ, ಸಂಘದ ಆಡಳಿತ ಮಂಡಳಿಯ ನಿರ್ಧಾರದಂತೆ, ಶಾಖೆಯ ಉಸ್ತುವಾರಿ ವ್ಯವಸ್ಥಾಪಕ ಸುರೇಶ್ ಭಟ್ ಮತ್ತು ಕಿರಿಯ ಗುಮಾಸ್ತ ಹರೀಶ್ […]

Read More

Joshal D’Souza’s Sumadhur mesmerises audience with a fusion of music and visuals ಜೋಶಲ್ ಡಿ’ಸೋಜಾ ಸ್ವತಂತ್ರ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದ ಉದ್ಘಾಟನಾ ಸುಮಧುರ್ ಸಂಗೀತ ಕಚೇರಿಯು ಮಂಗಳೂರಿನ ಸೇಂಟ್ ಆಗ್ನೆಸ್ ಶತಮಾನೋತ್ಸವ ಸಭಾಂಗಣದಲ್ಲಿ ಸಂಗೀತ, ನೃತ್ಯ ಮತ್ತು ದೃಶ್ಯ ಕಥೆ ಹೇಳುವಿಕೆಯ ಆಕರ್ಷಕ ಮಿಶ್ರಣದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿತು. ನವೆಂಬರ್ 15 ರ ಭಾನುವಾರ ನಡೆದ ಈ ಕಾರ್ಯಕ್ರಮವು ಜೋಶಲ್ ಅವರ ಕಲಾತ್ಮಕ ಪ್ರಯಾಣ ಮತ್ತು ಯುವ ಪ್ರತಿಭೆಗಳನ್ನು ಪೋಷಿಸುವ ಅವರ ಬದ್ಧತೆಯನ್ನು ಪ್ರದರ್ಶಿಸಿತು. […]

Read More

St Aloysius Gonzaga School holds Fancy Fete “Viva Gonzaga” on the occasion of Children’s Day ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ನವೆಂಬರ್ 15, 2025 ರಂದು ‘ವಿವಾ ಗೊನ್ಝಾಗ’ ಶೀರ್ಷಿಕೆಯಡಿಯಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಪಾಲಕ ಶಿಕ್ಷಕರ ಕಾರ್ಯಕಾರಿ ಸಮಿತಿ ಸಹಯೋಗದೊಂದಿಗೆ ಅದ್ದೂರಿ ಮಕ್ಕಳ ದಿನಾಚರಣೆಯನ್ನು ಆಯೋಜಿಸಲಾಯಿತು.ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಪಾತ್ರರಾದ ಎಂ.ಎಸ್. ರೆಮೋನಾ ಪಿರೇರಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು […]

Read More

ಪಡುಕೋಣೆ ; ದಿನಾಂಕ 14.11.2025 ರಂದು ಪಡುಕೋಣೆ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡುಕೋಣೆಯಲ್ಲಿ ಮಕ್ಕಳ ದಿನಾಚರಣೆ ನಡೆಸಲಾಯಿತು. ಶಾಲೆಯ ಜಂಟಿ ಕಾರ್ಯದರ್ಶಿಯಾದ ವಂ। ಫಾ। ಫ್ರಾನ್ಸಿಸ್ ಕರ್ನೆಲಿಯೊರವರು,ಅಧ್ಯಕ್ಷರಾಗಿ,ಅಧ್ಯಕ್ಷರಾದ ವಂದನೀಯ ಫಾದರ್ ಕರ್ನೆಲಿಯೊರವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಉತ್ತಮ ಗುಣಗಳಾದ ಶಿಸ್ತು, ದಯೆ, ಪ್ರಾಮಾಣಿಕತೆ, ಹಿರಿಯರಿಗೆ ಗೌರವ, ಸತ್ಯವನ್ನೇ ನುಡಿಯುವುದು ಮತ್ತು ಜವಾಬ್ದಾರಿಯುತ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಶಾಲಾಮುಖಂಡ ಶಿಶಿರ ಮಾತನಾಡಿ ಈ ನಮ್ಮ ಶಾಲೆಯಲ್ಲಿ ಪಾಠಗಳ ಜೊತೆ ಉತ್ತಮ ಮೌಲ್ಯಗಳನ್ನು […]

Read More

ಕುಂದಾಪುರದ;”ವಿದ್ಯಾರ್ಥಿಗಳು ಮೊಬೈಲ್ ನ‌ ಅತಿಯಾದ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡಿ ಮನೋದೈಹಿಕ ಉಲ್ಲಾಸ ತರುವ ಚಟುವಟಿಕೆಗಳಲ್ಲಿ ನಿರತರಾಗಬೇಕು. ನಿತ್ಯಜೀವನದಲ್ಲಿ ಆ ಮೂಲಕ ಹುರುಪು ಪಡೆದು ಪೋಷಕರು ಹೆಮ್ಮೆ ಪಡುವಂಥ ಸಾಧನೆ ಮಾಡಬೇಕು” ಎಂದು ಹೊಸೂರಿನ ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿಯವರು ಕುಂದಾಪುರದ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ, ಬೈಂದೂರಿನ ಮಾಜಿ ಶಾಸಕರೂ ಆದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸಿ.ಇ.ಎಸ್ ಸಂಸ್ಥೆಗಳ ಸುವರ್ಣ ಸಂಭ್ರಮದ ವಿಶೇಷ ವರ್ಷದಲ್ಲಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತುಂಬು ಸಂಭ್ರಮದಿಂದ ಮುಂಬರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆನ್ನುತ್ತಾ ಕ್ರೀಡೋತ್ಸವಕ್ಕೆ ಶುಭಕೋರಿದರು.ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಯವರಾದ ಶ್ರೀ ಸೀತಾರಾಮ ನಕ್ಕತ್ತಾಯರವರು, ಜೊತೆ ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಭಾಂಡ್ಯ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇಂಗ್ಲೀಷ್ ಉಪನ್ಯಾಸಕಿ ರೂಪಾ ವೆರ್ಣೇಕರ್ ಕ್ರೀಡಾಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಷಾ ಡಿಸೋಜಾರವರು ಪಥ ಸಂಚಲನ ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯ ಪಿ.ಯು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಪ್ರತಿಜ್ಞಾ ವಿಧಿ ಬೋಧಿಸಿದರು.ಇಂಗ್ಲೀಷ್ ಉಪನ್ಯಾಸಕಿ ಸುಮತಿ ಶೆಣೈ ವಂದನಾರ್ಪಣೆಗೈದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಂಶಿತ್, ಸಪ್ತಮಿ ಹಾಗೂ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಕೀರ್ತನಾ ಇವರು ಕ್ರೀಡಾಗ್ರೇಸರರಾಗಿ ಮೂಡಿಬಂದರು. 

Read More
1 69 70 71 72 73 555