ಸ್ಥಳೀಯ ಮದ್ದುಗುಡ್ಡೆ ನಿವಾಸಿ ನಿವೃತ್ತ ಶಿಕ್ಷಕ, ಕೆ.ಕೊಗ್ಗ ಗಾಣಿಗ (71) ಅವರು ದಿನಾಂಕ17.08 22ರ ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.ಜಿಲ್ಲಾ ಸ್ಕೌಟ್ಸ್ ಎಂಡ್ ಗೈಡ್ ನ ಪ್ರಸ್ತುತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದ ಇವರು ಅಪಾರ ಶಿಕ್ಷಕ ವ್ರಂದ ಹಾಗೂ ಅಭಿಮಾನಿಗಳ ಸಹಿತ ಪತ್ನಿ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Read More

ಲಯನ್ಸ್ ಕ್ಲಬ್ ಕುಂದಾಪುರ ಹಾಗೂ ಶ್ರೀ ನಂದಿಕೇಶ್ವರ ಯುವಕಮಂಡಲ ಅಸೋಡು ಇದರ ಜಂಟಿ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ಬೃಹತ್ ವನಮಹೋತ್ಸವ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಸೋಡಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಲಬಿನ ಅಧ್ಯಕ್ಷರಾದ ನವೀನ ಕುಮಾರ ಶೆಟ್ಟಿ ಹಾಗೂ ಯುವಕಮಂಡಲದ ಅಧ್ಯಕ್ಷರಾದ ಉಮೇಶ ಪೂಜಾರಿಯವರು ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಊರಿನ ಮಹನೀಯರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸಸಿಗಳನ್ನು ನೀಡಲಾಯಿತು. ಲಯನ್ಸ್ ಕ್ಲಬಿನ ಕೋಶಾಧಿಕಾರಿ ಲ. ಶಂಕರ ಶೆಟ್ಟಿ, ಸದಸ್ಯರಾದ […]

Read More

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಇದರ ವತಿಯಿಂದ ಭಂಡಾರಕಾರ್ಸ್ ಕಾಲೇಜಿನ ಕೋಯಾಕುಟ್ಟಿ – ಲಯನ್ಸ್ ಹಾಲ್‍ನ ಎದುರುಗಡೆ 75ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕ್ಲಬಿನ ಅಧ್ಯಕ್ಷರಾದ ನವೀನ ಕುಮಾರ ಶೆಟ್ಟಿಯವರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನದ ಕುರಿತು ಮಾತನಾಡಿದರು. ಮಾಜಿ ಲಯನ್ಸ್ ಗವರ್ನರಗಳಾದ ಕೆ. ಜಯಕರ ಶೆಟ್ಟಿ ಹಾಗೂ ಪ್ರಕಾಶ ಟಿ. ಸೋನ್ಸ್‍ರವರು ಸ್ವಾತಂತ್ರ ದಿನದ ಮಹತ್ವವನ್ನು ವಿವರಿಸಿದರು. ಲ. ರಾಜೀವ ಕೋಟ್ಯಾನ್‍ರವರು ಸಿಹಿತಿಂಡಿ ವಿತರಿಸಿದರು. ಲ. ಶಂಕರ ಶೆಟ್ಟಿಯವರು ಕೃತಜ್ಞತೆ ಅರ್ಪಿಸಿದರು.

Read More

ಕುಂದಾಪುರ: ಚೈತನ್ಯ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಲಯನ್ಸ್ ಕ್ಲಬಿನ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಕ್ಲಬಿನ ಹಿರಿಯ ಸದಸ್ಯ ಲ.ಬಿ. ನಾರಾಯಣ ಶೆಟ್ಟಿಯವರು ಧ್ವಜಾರೋಹಣವನ್ನು ಮಾಡಿದರು. ಕ್ಲಬಿನ ಅಧ್ಯಕ್ಷ ನವೀನ ಕುಮಾರ ಶೆಟ್ಟಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ನೀಡಿದರು. ಲಯನ್ ಚಂದ್ರಶೇಖರ ಕಲ್ಪತರು ದಂಪತಿಗಳು ರೂ. 25,000 ಮೌಲ್ಯದ ಸಮವಸ್ತ್ರವನ್ನು ಶಾಲೆಯ ಮಕ್ಕಳಿಗೆ ವಿತರಿಸಿದರು. ಲ. ರಾಜೀವ ಕೋಟ್ಯಾನ್ ಸಿಹಿತಿಂಡಿ ವಿತರಿಸಿದರು. ಕ್ಲಬಿನ ಕೋಶಾಧಿಕಾರಿ ಲ. ಶಂಕರ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಸುರೇಂದ್ರ ಶೆಟ್ಟಿ, ಸಂತೋಷ ಕುಮಾರ ಶೆಟ್ಟಿ, […]

Read More

ಕೋಲಾರ: ಮಾಜಿ ಯೋಧರಿಗೆ ಸರಕಾರವೇ ಘೋಷಿಸಿರುವ ಸೌಲಭ್ಯ ಮತ್ತು ಸಲವತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ, ಸ್ವಾತಂತ್ರ‍್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈಗಲಾದರೂ ಎಲ್ಲಾ ಮಾಜಿ ಯೋಧರಿಗೆ ಸೌಲಭ್ಯ ಸವಲತ್ತುಗಳು ಸಿಗುವಂತಾಗಲಿ ಎಂದು ಮಾಜಿ ಯೋಧ ರಹಮತ್ ಉಲ್ಲಾ ಮನವಿ ಮಾಡಿದರು. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗೆ ತ್ರಿವರ್ಣ ಧ್ವಜ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರಭಕ್ತಿ ಕುರಿತು ಭಾರತ ಸೇವಾದಳದ […]

Read More

‘ಸ್ವತಂತ್ರ ಭಾರತ ಅಮೃತ ಮಹೋತ್ಸವದ ಮೈಲಿಗಲ್ಲು ದಾಟುತ್ತಿರುವ ಶುಭ ಸಂದರ್ಭದಲ್ಲಿ ದೇಶ ಕಟ್ಟಿದ ಅಂದಿನ ಮತ್ತು ಇಂದಿನ ನಾಯಕರ ಆಶೋತ್ತರಗಳನ್ನು ಮನದಲ್ಲಿಟ್ಟು ಪ್ರಜ್ಞಾವಂತ ನಾಗರೀಕರಾದ ನಾವು ರಾಷ್ಟ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಮ್ಮ ಕೊಡುಗೆಯನ್ನು ನೀಡಬೇಕು ‘ ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಮ್ರೋತ್ಸವ ಆಚರಣೆಯ ಅಂಗವಾಗಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಧ್ವಜಾರೋಹಣಗೈದು ಕರೆ ನೀಡಿದರು. ‘ಆಝಾದಿ ಕಾ ಅಮೃತ್ ಮಹೊತ್ಸವ್ […]

Read More

ಅಮೃತ ಸಂದೇಶ ಸ್ವಾತಂತ್ರದ ಅಮೃತ ಮಹೋತ್ಸವವು ಈ ಭವ್ಯ ಭಾರತ ದೇಶದ ಪ್ರಜೆಗಳಾದ ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಅತೀವ ಆನಂದದ ದಿನ. ಸ್ವಾತಂತ್ರ್ಯ ದಿನವನ್ನು ಆಚರಿಸುವ ಮುಖ್ಯ ಗುರಿ ಸಕಲ ಭಾರತೀಯರಿಗೆ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ಧೈರ್ಯಗಳಿಂದ ಪ್ರೇರಿತರಾಗುವಂತೆ ಮಾಡುವುದು. ಎಲ್ಲಾ ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು. ಒಗ್ಗಟ್ಟಿನಿಂದ ಹೋರಾಡಿದರೆ ಜಯವು ಶತಸಿದ್ಧ ಎಂದು ಮತ್ತೊಮ್ಮೆ ಒಪ್ಪಿಕೊಳ್ಳುವ ದಿನ.ದೇಶದ ಸ್ವಾತಂತ್ರದ ಅಮೃತ ಮಹೋತ್ಸವದ ಈ ದಿನವು ದೇಶದ ವೈವಿಧ್ಯತೆಯಲ್ಲಿ […]

Read More

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸೈಂಟ್ ಅಂತೋಣಿ ಹಿರಿಯ ನಾಗರಿಕರ ಆಶ್ರಮಕ್ಕೆ ತೆರಳಿ ಒಂದು ಆಕ್ಸಿಜನ್ ಕೋನ್ಸೆಂಟ್ ರೇಟರ್ ದೇಣಿಗೆಯಾಗಿ ನೀಡಿದರು. ಹಾಗೂ ಎಲ್ಲಾ ಹಿರಿಯ ನಾಗರಿಕರಿಗೆ ಫಲವನ್ನು ನೀಡಿದರು. ಕಾರ್ಯ ಕ್ರಮದಲ್ಲಿ ಸಭಾಪತಿ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ಸೋನಿ, ಮತ್ತು ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

Read More

JANANUDI NEWS NETWORK PHOTOS: STANY DALMEIDA ಬ್ರಹ್ಮಾವರ: ಗ್ರಾಮ ಹಿತಾ ರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಕರ್ನಾಟಕ, ಸಂತ ಅಂತೋನಿ ದೇವಾಲಯ ಘಟಕ ಸಾಸ್ತಾನ ಇವರ ಜಂಟಿ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯೋತ್ಸವ ಅಚರಣೆ ಸೂಲ್ಕೂದ್ರುವಿನಲ್ಲಿ ಸಡಗರದಿಂದ ನಡೆಯಿತು.ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಒಂದು ಕಿ.ಮೀ ನಷ್ಟು ತ್ರಿರಂಗ ಧ್ವಜದೊಂದಿಗೆ ಜಾಥ ್ನಡೆಯಿತು. ಪಾಂಡೇಶ್ವರ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಕಲ್ಪನಾ ದಿನಕರ್ ಧ್ವಜಾರೋಹಣ ನೆರವೇರಿಸಿ “ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ […]

Read More