ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ನಗರದ ರೋಟರಿ ಸೆಂಟ್ರಲ್‌ ವತಿಯಿಂದ ಭಾನುವಾರ ನಗರದ ಎಪಿಎಂಸಿ ಟೊಮೇಟೋ ಮಾರುಕಟ್ಟೆಯಲ್ಲಿ ರೈತರು , ಕೂಲಿ ಕಾರ್ಮಿಕರಿಗೆ ಪೌಷ್ಠಿಕ ಪಾನೀಯವನ್ನು ರೋಟರಿ ಸೆಂಟ್ರಲ್‌ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹಾಗೂ ಕಾರ್ಯದರ್ಶಿ ಎಸ್‌.ಸುಧಾಕರ್‌ ವಿತರಿಸಿದರು . ವಿಷ್ಯಾದ ಅತಿ ದೊಡ್ಡ ಎರಡನೇ ಟೊಮೇಟೋ ಮಾರುಕಟ್ಟೆ ಎಂದು ಹೆಸರಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಲ್ಲಿ ನಿತ್ಯವೂ ನೂರಾರು ಟನ್ ಟೊಮೆಟೋ ಆವಕವಾಗಿ , ಇದನ್ನು ನಿತ್ಯ ಬೆಳಿಗ್ಗೆ ಹರಾಜು ಮಾಡಿಹೊರ ರಾಜ್ಯ ಮತ್ತು ದೇಶಗಳಿಗೆ ಕಳುಹಿಸಲಾಗುತ್ತದೆ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ನೀರಾವರಿಯನ್ನು ಬಳಸಿಕೊಳ್ಳಲು ಇಚ್ಛೆಯುಳ್ಳ ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬೇಕು . ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪಾಲಿಹೌಸ್ ನಿರ್ಮಾಣ ಮಾಡುವ ರೈತರಿಗೆ ಶೇಕಡ 50 ರಷ್ಟು ಸಮುದಾಯ ಕೃಷಿ ಹೊಂಡಗಳಿಗೆ 4 ಲಕ್ಷ ಮತ್ತು ಸಣ್ಣ ಕೃಷಿ ಹೊಂಡಗಳಿಗೆ 70 ಸಾವಿರ ಸಹಾಯಧನ ನೀಡಲಾಗುತ್ತದೆ . ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಯಾವುದೇ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಮಾವು , ಸೀಬೆ , ಸಪೋಟ ಹಾಗೂ ಡ್ರಾಗನ್ ಫ್ರಟ್ ಬೆಳೆಯುವುದಕ್ಕೆ ಇಲಾಖೆ […]

Read More

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಎಸ್ಸಿ , ಎಸ್ಟಿಗಳಿಗೆ ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಹಿಂದುಳಿದ ಜಾತಿಗಳ ಜನಾಂಗದವರಿಗೂ ಒದಗಿಸಬೇಕೆಂದು ಪ್ರವರ್ಗ ೧ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಆರ್.ಜೋಗಮಲ್ ಆಗ್ರಹಿಸಿದರು . ಸುದ್ದಿಗಾರರೊಂದಿಗೆ ಮಾತನಾಡಿ , ೧೯೯೪ ರವರೆಗೆ ಸರ್ಕಾರ ಹಿಂದುಳಿದ ಜಾತಿಗಳ ಜನಾಂಗದವರಿಗೆ ಎಸ್ಸಿ , ಎಸ್ಟಿಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಿದ್ದರೂ ನಂತರದಲ್ಲಿ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ಅನ್ಯಾಯ ಮಾಡಿರುವುದರಿಂದಾಗಿ ಈಗಲಾದರೂ ನ್ಯಾಯ ಒದಗಿಸಬೇಕಾಗಿದೆ ಎಂದರು . ವಿದ್ಯಾರ್ಥಿ ವೇತನ […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ನಾವು ಆಧುನಿಕ ಸಿದ್ಧ ಪಡಿಸಿದ ಬೀಜ ಸಂಸ್ಕೃತಿ ಹಾಗೂ ರಸಾಯನಿಕ ಔಷಧಿಗಳನ್ನು ಅವಲಂಭಿತ ಕೃಷಿ ಪದ್ಧತಿಯನ್ನು ಅನುಸರಿಸುತ್ತಾ , ನಮ್ಮ ಪಾರಂಪರಿಕ ಕೃಷಿ ಪದ್ಧತಿಗಳನ್ನು ಮರೆಯುತ್ತಿದ್ದೇವೆ . ನಮ್ಮ ನೆಲದ ಪಾರಂಪರಿಕ ಕೃಷಿ ಪದ್ಧತಿಯ ಬಗೆಗಿನ ಸ್ಥಳೀಯ ಸಾಂಪ್ರದಾಯಿಕ ಜ್ಞಾನಾಧ್ಯಯನ ನಡೆಸಿ ದಾಖಲು ಮಾಡುವ ಅಗತ್ಯವಿದೆ . ಹಾಗಾಗಿ ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕೆಂದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ . ಸಲ್ವಮಣಿ ಕರೆ ನೀಡಿದರು . […]

Read More

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : – ದೈವಕೃಪೆಯಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು , ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅಗತ್ಯವಾದ ಸಾಲ ಸೌಲಭ್ಯ ಒದಗಿಸುವ ಮೂಲಕ ಅನ್ನದಾತನ ನೆರವಿಗೆ ನಿಲ್ಲಲು ಡಿಸಿಸಿ ಬ್ಯಾಂಕ್‌ ಸಂಕಲ್ಪ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ನಗರದ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ವಿಜಯದಶಮಿ ಅಂಗವಾಗಿ ನಡೆದ ಆಯುಧಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು . ಬ್ಯಾಂಕ್ ಅಭಿವೃದ್ಧಿಯ ಮೂಲಕ ೧೫ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಶುಕ್ರವಾರ ಸುರಿದ ಗುಡುಗು ಮಿಂಚಿನೊಂದಿಗೆ ಸುರಿದ ಭಾರಿ ಮಳೆಯಿಂದಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.ಮಳೆಯ ಹೊಡೆತಕ್ಕೆ ಶ್ರೀನಿವಾಸಪುರ ಸೇರಿದಂತೆ ಸಮೀಪದ ಹೆಬ್ಬಟ, ಚಲ್ದಿಗಾನಹಳ್ಳಿ, ಪನಸಮಾಕನಹಳ್ಳಿ ಗ್ರಾಮಗಳಲ್ಲಿ, ಮಳೆ ನೀರು ಮನೆಗಳಿಗೆ ನುಗ್ಗಿದೆ. ಶಾಲೆ ಹಾಗೂ ಕೆಲವು ಮನೆಗಳು ಬಿದ್ದುಹೋಗಿವೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ.ಹೆಬ್ಬಟ ಗ್ರಾಮದಲ್ಲಿ 6 ಮನೆಗಳು ಕುಸಿದು ಬಿದ್ದಿವೆ. ಕೆಲವು ಮನೆಗಳ ಗೋಡೆಗಳು ಕುಸಿದಿವೆ. ಶುಕ್ರವಾರ ರಾತ್ರಿ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಗ್ರಾಮಕ್ಕೆ ಭೇಟಿ ನೀಡಿ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ: ಭಾರತಕ್ಕೆ 12 ದೇಶಗಳಿಂದ ತೆರಿಗೆ ರಹಿತ ಹಾಲು ಹರಿಸಲು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಜ್ಜಾಗಿರುವುದನ್ನು ಕೈಬಿಡುವ ಮೂಲಕ ದೇಶದ ಡೈರಿ ಉದ್ಯಮಕ್ಕೆ ಬೀಳಲಿರುವ ಭಾರೀ ಹೊಡೆತವನ್ನು ತಪ್ಪಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಎಡಿಸಿ ಡಾ.ಸ್ನೇಹಾ ಮೂಲಕ ಕೇಂದ್ರ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತೆರಿಗೆಯಿಲ್ಲದೆ ದೇಶದೊಳಗೆ ಬಿಟ್ಟುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೈತರ ಪಾಲಿಗೆ ಗಂಡಾಂತರಕಾರಿಯಾಗುವುದು ನಿಶ್ಚಿತ. […]

Read More

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ ತನ್ನ ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ವ್ಯಕ್ತಿಗಳ ಜೀವನಕ್ಕೆ ಬೆಳಕನ್ನು ನೀಡಬಹುದು . ಆದ್ದರಿಂದ ಕಣ್ಣುಗಳ ರಕ್ಷಣೆ ಮತ್ತು ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ತಿಳಿಸಿದರು . ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ […]

Read More