ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಯೋಜನಾ ಅರಿವು ‘ ಕಾರ್ಯಕ್ರಮ’  ’  ಕುಂದಾಪುರದ ಆರ್. ಎನ್‌ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಕುಂದಾಪುರ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(KUIDFC), ಕರ್ನಾಟಕ ಸಮಗ್ರ ನಗರ ನೀರು ನರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ ಹಾಗೂ  ಆರ್.ಡಿ.ಎಸ್ ಸಂಸ್ಥೆಯ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ(CAPRR) ಚಟುವಟಿಕೆಗಳ ಆಶ್ರಯದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು. ಶ್ರೀ ಮಾಲತೇಶ್ ಎಮ್.ಎಚ್, ಸುಮುದಾಯ ಅಭಿವೃದ್ಧಿ ಸಹಾಯಕರು, KUIDFC KIUWMIP, ಉಡುಪಿ, ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಎಲ್ಲಾ ಕಡೆ ನಿರಂತರವಾಗಿ ಸರಬರಾಜು ಮಾಡುವ ಬಗ್ಗೆ ದೃಶ್ಯಾವಳಿಗಳ ಮೂಲಕ ಸವಿವರವಾದ ಮಾಹಿತಿಗಳನ್ನು ನೀಡಿದರು. ಕೆಯುಐಡಿಎಫ್ ಸಿಪಿಐಯು, ಕುಂದಾಪುರ ಇದರ ಸಹಾಯಕ ಅಭಿಯಂತರರಾದ ಶ್ರೀ ಮೃತ್ಯುಂಜಯ ಎಸ್‌. ಹಿರೇಮಠ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಟಿ.ಸಿ, ಕುಂದಾಪುರ ಇದರ ಸಮಾಲೋಚಕ ಅಭಿಯಂತರರಾದ ಶ್ರೀ ಪಿ.ವಿ.ಸುರೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಹೊಸ ಅರಿವು ಮೂಡಿಸುವ ಪುರಸಭೆಯ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು. 

Read More

ಕಳೆದ 29 ವರ್ಷಗಳಿಂದ ಮಂಗಳೂರು ಆಸುಪಾಸಿನಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್, ಬಿಜೈ ಮುಖ್ಯ ರಸ್ತೆಯಲ್ಲಿ, ಅತ್ಯಾಧುನಿಕ ಸೌಕರ್ಯಗಳ ‘ರೋಹನ್ ಸಿಟಿ’ ಸಮುಚ್ಛಯವನ್ನು ಅಭಿವೃದ್ದಿಪಡಿಸುತ್ತಿದೆ. ಸಹಕಾರಿ ರಂಗದ ಭೀಷ್ಮ ಎಂದೇ ಹೆಸರುವಾಸಿಯಾಗಿರುವ ‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಈ ಸಮುಚ್ಚಯದ ಸಹ – ಪ್ರವರ್ತಕರಾಗಿದ್ದಾರೆ. ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು ಇದೀಗ ಬುಕ್ಕಿಂಗ್‍ಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತಿದೆ.ಬಿಜೈ ಮುಖ್ಯ ರಸ್ತೆ ಪ್ರದೇಶ, ಸ್ಮಾರ್ಟ್ ಸಿಟಿಯ ವ್ಯಾಪ್ತಿಗೆ ಬರುವ […]

Read More

ಬಸ್ರೂರು, ಜ.6: ಇಲ್ಲಿನ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ 18 ನೇಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.      ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ, ಮಾಜಿ ಶಾಸಕ ಜಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಳೆದ 18 ವರ್ಷಗಳಿಂದ ಬಸ್ರೂರಿನ ಶ್ರೀ ಶಾರದಾ ಆಂಗ್ಲಮಾಧ್ಯಮ ಶಾಲೆ ಉತ್ತಮ ಶೈಕ್ಷಣಿಕ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು.    ಕಾರ್ಯಕ್ರಮ ಉದ್ಭಾಟಿಸಿದ ಶಿಕ್ಷಣ ಸಂಯೋಜಕ, ರಾಜ್ಯ ಜೆಡಿಎಸ್‌ ವಕ್ತಾರ ಮಹೇಶ್‌ ಗೌಡ ಮಂಡ್ಯ ಮಾತನಾಡಿ, ಈ ಶಾಲೆ ಉತ್ತಮ ಶೈಕ್ಷಣಿಕ […]

Read More

ಶಿರ್ವ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿಪುಲ ಉದ್ಯೋಗಾವಕಾಶಗಳಿದ್ದು ಅದನ್ನು ಪಡುವುದರಲ್ಲಿ ಯುವಕರಿಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಅರಿವು ಇಂದು ಅತ್ಯಂತ ಅಗತ್ಯವಾಗಿದೆ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಬ್ಯಾಂಕಿಂಗ್ ಉದ್ಯೋಗದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿಯ ಪೃಥ್ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಸಾಮಗಾರವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ ವಿಎಚ್ ಇನ್ನಂಜೆ ಪಿಯು ಕಾಲೇಜಿನ ಪ್ರಾಂಶುಪಾಲರು […]

Read More

ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಅಣಿಯಾಗಲು ನವದಿನಗಳ ಪ್ರಾರ್ಥನಾವಿಧಿ ಹಾಗೂ ನವೇನಾ ಪೂಜೆಗಳಿಗೆ ಧ್ವಜಾರೋಹಣದೊಂದಿಗೆ ಬುಧವಾರ 04, 2023 ಸಂಜೆ 6.30ಗೆ ಪುಣ್ಯಕ್ಷೇತ್ರದ ಅವರಣದಲ್ಲಿ ಚಾಲನೆ ನೀಡಲಾಯಿತು. ಧ್ವಜಾರೋಹಣದ ಮುಂಚೆ ಕೈಕಂಬ-ಬಿಕರ್ನಕಟ್ಟೆ ಮೈದಾನದಿಂದ ಪುಣ್ಯಕ್ಷೇತ್ರದ ಕಡೆಗೆ ಹೊರೆಕಾಣಿಕೆ ಮೆರವಣಿಗೆ ನೆರವೇರಿತು. ವಂದನೀಯ ಗುರು ಲ್ಯಾನ್ಸಿ ಲುವಿಸ್‍ ಪ್ರಾರ್ಥನವಿಧಿಯನ್ನು ನಡೆಸಿಕೊಟ್ಟರು. ಅನೇಕ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು.        ತದನಂತರ ಬಾಲ ಯೇಸುವಿನ ಆವರಣದಲ್ಲಿ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಕಾರ್ಪೊರೇಟರಗಳು ಹಾಗು ಇತರ ಪ್ರಮುಖ ಗಣ್ಯರಿಗೆ ಗೌರವ […]

Read More