Palm sunday day special Devotional program at our Lady of Miracles Church Mangalore ಮಂಗಳೂರು ; ಪಾಮ್ ಸಂಡೆ ದಿವಸ ಮಂಗಳೂರು ಮಿಲಾಗ್ರೆಸ್ ಚರ್ಚ್ ನಲ್ಲಿ ವಿಶೇಷ ಕಾರ್ಯಕ್ರಮ ಮಂಗಳೂರು ಪಾಮ್ ಸಂಡೇಯನ್ನು ಮಿಲಾಗ್ರೆಸ್ನ ನಮ್ಮ ಅದ್ಭುತಗಳ ತಾಯಿ (Our Lady of Miracles) ಚರ್ಚ್ನಲ್ಲಿಸಂಜೆ ಭಕ್ತಿಭಾವದಿಂದ ಆಚರಿಸಲಾಯಿತು. ಪವಿತ್ರ ಬಲಿಯನ್ನು ಫಾ. ಜೆರಾಲ್ಡ್ ಪಿಂಟೋ ಅವರು ಆಚರಿಸಿದರು. ಭಕ್ತರು ಒಟ್ಟಾಗಿ ಸೇರಿ ನಮ್ಮ ಕರ್ತನನ್ನೂ ಆಶೀರ್ವಾದಿತ ತಾಯಿಯನ್ನೂ ಗೌರವಿಸಲು ಚರ್ಚ್ ಸುತ್ತ […]
ಕುಂದಾಪುರ: ಮಾರ್ಚ್ 29ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ಹಟ್ಟಿಯಂಗಡಿ ಶಾಂತಾನಂದ ಭಟ್ ಸ್ಮಾರಕ” ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸಿದರು.ದಾನಿಗಳಾದ ವಿಜಯಾ ಕಾರ್ಕಳ ಅವರು ತಮ್ಮ ಸಹೋದರ ಹಟ್ಟಿಯಂಗಡಿ ಶಾಂತಾನಂದ ಭಟ್ ಅವರ ಸವಿನೆನಪಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿದ್ಯಾರ್ಥಿಗಳಿಗಾಗಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ದಾನಿಗಳಾದ ಪ್ರಾಕ್ತನ ವಿದ್ಯಾರ್ಥಿಗಳಾದ ಕಿರಣ್ ಹಟ್ಟಿಯಂಗಡಿ, ಚಂದ್ರಶೇಖರ್ ಕೊತ್ವಾಲ್, ಭಾಸ್ಕರ ಗಾಣಿಗ, ನಾಮದೇವ […]
ಕೋಟ: ಯೇಸು ಕ್ರಿಸ್ತರ ಜೆರುಸಲೇಮ್ ಪುರ ಪ್ರವೇಶದ ಸ್ಮರಣೆಯಾಗಿ ಆಚರಿಸುವ ಗರಿಗಳ ಭಾನುವಾರವನ್ನು ಮಾರ್ಚ್ ೨೯ ರಂದು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಉಡುಪಿ ಧರ್ಮ ಪ್ರಾಂತ್ಯದ ಯುವ ಆಯೋಗದ ನಿರ್ದೇಶಕರಾದ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಬಲಿಪೂಜೆಯುಲ್ಲಿ ಸಹಕರಿಸಿದರು.
ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಮತ್ತು ಸಹಾಯಕ ಧರ್ಮಗುರು ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಗರಿಗಳ ಭಾನುವಾರದ ಆಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.
ಮಂಗಳೂರು ; ನಮ್ಮ ಅದ್ಭುತಗಳ ತಾಯಿ (Our Lady of Miracles) ದೇವಾಲಯದ ಭಕ್ತರು ಪಾಮ್ ಸಂಡೇವನ್ನು ಸಿಲ್ವರ್ ಜೂಬಿಲಿ ಹಾಲ್ ನ ವಠಾರ ದಲ್ಲಿ ತಾಳೆ ಎಲೆಗಳನ್ನು ಆಶೀರ್ವದಿಸುವ ಮೂಲಕ ಆಚರಿಸಿದರು. ಫಾ. ಅವಿತ್ ಫಾಯ್ಸ್ ಅವರು ಪ್ರಾಥನಾ ವಿಧಿ ನೆರವೇರಿಸಿ ತಾಳೆ ಎಲೆ ಗಳನ್ನು ಆಶೀರ್ವದಿ ಸಿದರು ಫಾ. ಬೊನವೆಂಚರ್ ನಜರೇತ್, ಫಾ. ಆಲ್ವಿನ್ ಸೆರಾವ್, ಫಾ. ಜೆರಾಲ್ಡ್ ಪಿಂಟೋ ಹಾಗೂ ಫಾ. ಉದಯ ಫರ್ನಾಂಡಿಸ್ ಅವರೊಂದಿಗೆ ತಾಳೆ ಎಲೆಗಳನ್ನು ಹಿಡಿದು ಮೆರವಣಿಗೆ ಯಲ್ಲಿ […]
ಬಸ್ರೂರು; ಸೇಂಟ್ ಫಿಲಿಪ್ ನೇರಿ ಚರ್ಚ್ ಬಸ್ರೂರುರಿನಲ್ಲಿ ಏಸುಕ್ರಿಸ್ತರು ಜರಿಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ಸಂದರ್ಭವನ್ನು ನೆನಪಿಸಿಕೊಂಡು ಇಂದು ಬಸ್ರೂರುರಿನಲ್ಲಿ ಸೆಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನಿಲ್ ಮಾರ್ಟಿಸ್ ಗರಿಗಳನ್ನು ಆಶೀರ್ವಚನದ ಬಳಿಕ ಮೆರವಣಿಗೆ ನಡೆಯಿತು ಹಾಗೂ ದೇವರ ವಾಕ್ಯದ ಮೇಲೆ ಕ್ರಿಸ್ತ ಸಂದೇಶ ನೀಡಿದರು ವಿಧಿಗಳನ್ನು ನಡೆಸ ಸಂದೇಶ ನೀಡಿದರು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಶುಭಾಶಯ ಸಲ್ಲಿಸಿದರು ಸಹಾಯಕ ಧರ್ಮಗುರುಗಳಾದ ಫಾದರ್ […]
ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮದ ಭಾವನೆಯನ್ನು ಮೂಡಿಸುವ ಹಾಗೂ ತಂದೆ ತಾಯಿಯ ಮೌಲ್ಯವನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಮಾತಾ ಪಿತೃ ವಂದನಾ ಹಾಗೂ ಭಾರತ ಮಾತಾ ಪೂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗಣೇಶ್ ನಾಯಕ್, ಶಿಕ್ಷಕರು ಶಿರಿಯಾರ ಇವರು ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಖಂಡ ಭಾರತದ ನಕಾಶೆಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ತಾಯಿ […]
ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಯಲ್ಲಿ U. ಏ.ಉ ತರಗತಿ ಗೆ ಗ್ರಾಜುಯೇಷನ್ ಡೇ ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ನಿವೃತ್ತ ಮುಖ್ಯೋ ಪಾಧ್ಯಾಯಿನಿ ರಾದ ಶ್ರೀಮತಿ ಗೌರಿ ಇವರು ವಿದ್ಯಾರ್ಥಿ ಗಳಿಗೆ ಸರ್ಟಿಫಿಕೇಟ್ ನೀಡಿ ” ಮಕ್ಕಳು ಮಣ್ಣಿನ ಮುದ್ದೆ, ಸುಂದರ ಕಲಾಕೃತಿ ಮಾಡುವುದು ಶಿಕ್ಷಕರ ಜವಾಬ್ದಾರಿ ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಶಾಲೆಯ ಸಂಚಾಲಕರಾದ ಶ್ರೀ ರಾಜರಾಮ್ ಶೆಟ್ಟಿ […]
ಕುಂದಾಪುರ: ಮಾರ್ಚ್ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ್ ಅವರು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ತರಬೇತಿ ಶಿಬಿರವಾಗಿರುತ್ತದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸುವುದುರೊಂದಿಗೆ ಜೀವನದ ಪಾಠವನ್ನು ಕಲಿಯುತ್ತೇವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತರಾಮ ಪ್ರಭು ವಹಿಸಿದ್ದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ […]

