

ಬಸ್ರೂರು; ಸೈಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ಬಸ್ರೂರು ವತಿಯಿಂದ ಗಣರಾಜ್ಯೋತ್ಸವ ದಿನದಂದು ಆರೋಗ್ಯಕ್ಕಾಗಿ ಓಟ ಸ್ವಾತಂತ್ರ್ಯ ಕ್ಕಾಗಿ ಓಟ ಎಂಬ ಧ್ಯೇಯ ದೊಂದಿಗೆ ಮ್ಯಾರಥಾನ್ ಓಟಕ್ಕೆ ಶಾಲಾ ಜಂಟಿ ಕಾರ್ಯದರ್ಶಿ ಹಾಗೂ ಸೆಂಟ್ ಫಿಲಿಪ್ ನೇರಿ ಚರ್ಚ್ ಧರ್ಮಗುರು
ಫಾದರ್ ರೋಯ್ ಲೋಬೊ ಚಾಲನೆ ನೀಡಿದರು ಶಾಲಾ ಪ್ರಾಂಶುಪಾಲ ಫಾದರ್ ಡ್ಯಾನ್ಸಿ ಸುನಿಲ್ ಮಾರ್ಟಿಸ್ ಸ್ವಾಗತಿಸಿದರು ಸಹಾಯಕ ಧರ್ಮಗುರುಗಳಾದ ಫಾದರ್ ಶರೂನ್ ಡಿಸೋಜ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು,ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬೀರಣ್ಣ ಗಾಂವ್ಕರ್ ಧನ್ಯವಾದ ವಿತ್ತರು.





