ರೋಟರಿಯಿಂದ ಜಪ್ತಿಯಲ್ಲಿ ಜಪಾನಿನ ಮಿಯಾವಾಕಿ ಪದ್ದತಿಯಲ್ಲಿ ಅರಣ್ಯ ಬೆಳೆಸುವ ಪದ್ದತಿಗೆ ಚಾಲನೆ


ಕುಂದಾಪುರ, ಅ.25: ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಗ್ರೀನ್ ಇಂಡಿಯಾ ಮೂವ್‍ಮೆಂಟ್ ಇವರ ಸಹಯೋಗದೊಂದಿಗೆ ಅರಣ್ಯ ಬೆಳೆಸಿ ಪರಿಸರ ಉಳಿಸಿ ಎಂಬ ನಿಟ್ಟಿನಲ್ಲಿ ಜಪಾನಿನ ಮಿಯಾವಾಕಿ ಪದ್ದತಿಯಲ್ಲಿ ಅರಣ್ಯ ಬೆಳೆಸುವ ಪದ್ದತಿಗೆ ರೊ. ಡಾ|ಉತ್ತಮ್ ಶೆಟ್ಟಿಯವರ ಪರಿಸರದಲ್ಲಿ ಚಾಲನೆ ನೀಡಲಾಯಿತು.
ಗೀಡ ನೆಟ್ಟು ಚಾಲನೆ ನೀಡಿದ ಕೊಟೇಶ್ವರ ವಕ್ವಾಡಿಯ ಗುರುಕುಲ ಪಬ್ಲಿಕ್ ಶಾಲೆಯ ಜಂಟಿ ಕರ್ಯದರ್ಶಿ ಅನುಪಮ ಎಸ್ ಶೆಟ್ಟಿ ಮಾತನಾಡಿ “ಹಿಂದೆ ನಮ್ಮ ಹಿರಿಯರು ಮನೆ ಸುತ್ತಲು 16 ಬಗೆಯ ಮರ ಗೀಡಗಳನ್ನು ಬೆಳೆಸುತಿದ್ದರು, ಈ ಮರ ಗೀಡಗಳಿಂದ ಅಗತ್ಯವಿದ್ದ ಓಷಧಿಗಳು ಸಿದ್ದ ಮಾಡಬಹುದಿತ್ತು, ಮಾತ್ರವಲ್ಲ ನಮಗೆ ಶುದ್ದ ಗಾಳಿ, ಒಕ್ಸಿಜನ್ ಸಿಗುತಿತ್ತು. ಮರ ಗೀಡಗಳು ನಮಗೆ ಸಾಂತ್ವನ ಕೂಡ ನೀಡುತ್ತವೆ ಎಂಬುದು ನನ್ನ ಅನುಭವ. ಮಿಯಾವಾಕಿ ಪದ್ದತಿಯಲ್ಲಿ ಬೆಳೆಸಿದ ಅರಣ್ಯ 25 ವರ್ಷಗಳಲ್ಲಿ ದೊಡ್ಡ ಮರಗಳಾಗಿ, ಅದನ್ನು ಕಡಿದು ಪುನಹ ಅರಣ್ಯ ಬೆಳೆಸಬಹುದು. ಇದರಿಂದಾಗಿ ಹಲವು ಕಿ.ಮಿ. ದೂರದ ತನಕ ನಮಗೆ ಒಕ್ಸಿಜನ್ ಸಿಗುತ್ತದೆ” ಎಂದು ಹೇಳಿದರು.
ಪ್ರಸ್ತಾವಿಸಿ ಮಾತನಾಡಿದ ರೊ. ಡಾ|ಉತ್ತಮ್ ಶೆಟ್ಟಿ “ಮಿಯಾವಾಕಿ ಪದ್ದತಿಯಲ್ಲಿ ಮರ ಗೀಡಗಳನ್ನು ಹತ್ತಿರ ಹತ್ತಿರವಾಗಿ ಬೇಳೆಸುತ್ತಾರೆ, ಅವಾಗ ಮರಗೀಡಗಳು ಸೂರ್ಯನ ಬೆಳಕು ಪಡೆದುಕೊಳ್ಳಲು ಮರಗೀಡಗಳಲ್ಲಿ ಪೈಪೆÇೀಟಿ ನಡೆದು ತಾ ಮುಂದೆ ನಾ ಮುಂದೆ ಎಂದು ಎತ್ತರಕ್ಕೆ ಬೆಳೆಯುತ್ತವೆ, ಮಾತ್ರವಲ್ಲ ಹತ್ತಿರ ಹತ್ತಿರ ಇರುವುದರಿಂದ ಗಾಳಿ ಮಳೆಗೆ, ಬೀಳದೆ ತಡೆಯೊಡ್ಡಿ ನಿಲ್ಲುತ್ತವೆ. ಮರ ಗೀಡಗಳು ನಡುವ ಮೊದಲು ಮೊದಲಿನ ಮಣ್ಣು ತೆಗೆದು, ಅಲ್ಲಿ ಹದ ಮಾಡಿ ಬೇರುಗಳು ವೇಗವಾಗಿ ಆಳಕ್ಕೆ ಹೋಗುವಂತೆ ಮಾಡ ಬೇಕಾಗುತ್ತದೆ” ಎಂದು ತಿಳಿಸಿದರು.
ಗ್ರೀನ್ ಇಂಡಿಯಾ ಮೂವ್‍ಮೆಂಟಿನ ಸದಸ್ಯರಾದ ಲೇಖಕ ಮುನಿಯಾಲು ಗಣೇಶ ಶೆಣೈ ವಿವಿಧ ಮರಗಳಿಂದ ಆಗುವ ಉಪಯೋಗಗಳನ್ನು ತಿಳಿಸಿದರು, ನಮಗೆ ಕೆಲವೇ ಕೆಲವು ಪದಾರ್ಥಕ್ಕಾಗಿ ತರಕಾರಿಗಳು ಇವೆ, ಹಲವು ಪಲ್ಯ ಮಾಡುವ ಹಲವು ಎಲೆಗಳಿಂದ ಮಾಡಬಹುದು, ಸಂಪದ್ಭರಿತವಾದ ನಮ್ಮ ದೇಶ, ಕಾಡು ಸಂಪತ್ತನ್ನು ಬಲಸದೆ ಬಡವಾಗಿದೆ. ಜಪಾನಿನಲ್ಲಿ ಭೂ ಪ್ರದೇಶ ಸ್ವಲ್ಪವಿದ್ದು ಅರಣ್ಯ ಗೀಡ ಮರಗಳು ಬೆಳೆಸಲು ಕಷ್ಟವಾಗಿ ಈ ಮಿಯಾವಾಕಿ ಎಂಬವರು ಸಂಶೋಧನೆ ಮಾಡಿದ ಪದ್ದತಿಯಿಂದ ಚಿಕ್ಕ ಜಾಗದಲ್ಲಿ ಜಪಾನಿಗರು ಕಾಡುಗಳನ್ನು ಬೆಳೆಸುತ್ತಾರೆ, ಈ ವಿಧದ ಕಾಡುಗಳಲ್ಲಿ ಹೆಚ್ಚಾಗಿ ಪಕ್ಷಿಗಳು ಆಸರೆಯನ್ನು ಪಡೆಯುತ್ತವೆ. ಬೊನ್ಸಾಯಿ ಪದ್ದತಿ ಕೂಡ ಜಪಾನಿನ ಪದ್ದತಿಯಾಗಿದ್ದು, ಚಿಕ್ಕ ಜಾಗ ಇದ್ದವರಿಗೆ ಇದು ತುಂಬ ಅನುಕೂಲ” ಎಂದು ತಿಳಿಸಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷರಾದ ರೊ.ಸತ್ಯನಾರಯಣ ಪುರಾಣಿಕ್ ಸ್ವಾಗತಿಸಿ ಇಂತಹ ಕಾರ್ಯಕ್ರಮ ನೂತನವಾಗಿದ್ದು, ಆಸಕ್ತಿದಾಯಕವಾಗಿದೆ ಎಂದರು.
ರೊ.ಜೂಡಿತ್ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿದರು, ರೊ. ವಾಸುದೇವ ಕಾರಂತ ಧನ್ಯವಾದಗಳನ್ನು ಸಮರ್ಪಿಸಿದರು.

ಕಲ್ಯಾ ಸರಕಾರಿ ಪ್ರೌಢಶಾಲೆ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

NMMS ಪರೀಕ್ಷೆ ಉತ್ತೀರ್ಣರಾದವರಿಗೆ ಸನ್ಮಾನ

2022ರ ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರಕಾರಿ ಪ್ರೌಢಶಾಲೆ, ಕಲ್ಯಾ ಇಲ್ಲಿನ ವಿದ್ಯಾರ್ಥಿಗಳಾದ ಪ್ರಿಯಾ, ಮೋನಿಕಾ, ಶ್ರೇಯಾ.ಜೆ.ಪಿ, ಮಿಥುನ್, ಹಿತೇಶ್ ಇವರನ್ನು ಸನ್ಮಾನಿಸಲಾಯಿತು. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ, SDMC  ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಉಪಾಧ್ಯಾಯ ಹಾಗೂ ಶ್ರೀ ರತ್ನಾಕರ ಹೆಬ್ಬಾರ್ ಇವರು ಉಪಸ್ಥಿತರಿದ್ದರು.

SSLC ಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ಸನ್ಮಾನ


2022ರ ಎಪ್ರಿಲ್ ನಲ್ಲಿ ನಡೆದ SSLC ಪಬ್ಲಿಕ್ ಪರೀಕ್ಷೆಯಲ್ಲಿ 616 ಅಂಕ ಗಳಿಸಿ ಕನ್ನಡ ಮಾಧ್ಯಮದಲ್ಲಿ ಕಾರ್ಕಳ ತಾಲೂಕಿನಲ್ಲಿ 5ನೇ ಸ್ಥಾನ ಪಡೆದ ವಿನೀತ್ ಹಾಗೂ ರೇಷ್ಮಾ, 606 ಅಂಕ ಪಡೆದ ಧನ್ಯಾ, 603 ಅಂಕ ಪಡೆದ ಸೃಜಾ ಇವರನ್ನು ಅಮೃತ ಸ್ವಾತಂತ್ಯೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ನಿವೃತ್ತ ಯೋಧರಿಗೆ ಸನ್ಮಾನ


ಅಮೃತ ಸ್ವಾತಂತ್ಯೋತ್ಸವದ ಸಮಾರಂಭದ ದಿನ ನಿವೃತ್ತ ಯೋಧ ಬೇಲಾಡಿ ಶ್ರೀ ರತ್ನಾಕರ ಹೆಬ್ಬಾರ್ ಇವರನ್ನು ಸನ್ಮಾನಿಸಲಾಯಿತು

ಕು/ ಅಕ್ಷಿತಾ ಹೆಗ್ಡೆಗೆ ಸನ್ಮಾನ


ಮಂಕುತಿಮ್ಮನ ಕಗ್ಗದ 13 ಹಾಡುಗಳನ್ನು ಕನ್ನಡ ಕೈ ಬರಹದಲ್ಲಿ ಬರೆದು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ತನ್ನ ಹೆಸರು ಮುದ್ರಿಸಿದ ಸರಕಾರಿ ಪ್ರೌಢಶಾಲೆ, ಕಲ್ಯಾದ ಹಳೆ ವಿದ್ಯಾರ್ಥಿನಿ ಕು/ ಅಕ್ಷಿತಾ ಹೆಗ್ಡೆ ಇವರನ್ನು ಅಮೃತ ಸ್ವಾತಂತ್ಯೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತಾಲೂಕು ಖೋ-ಖೋ ಪಂದ್ಯಾಟ


ದಿನಾಂಕ 18-08-2022 ರಂದು ತಾಲೂಕು ಮಟ್ಟದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟವು ಸರಕಾರಿ ಪ್ರೌಢಶಾಲೆ, ಕಲ್ಯಾ ಇಲ್ಲಿ ನಡೆಯಿತು. ಇಲ್ಲಿನ ಬಾಲಕರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ, ಸದಸ್ಯರಾದ ಶ್ರೀಮತಿ ಪ್ರೇಮ ಪೂಜಾರಿ ಹಾಗೂ ಶ್ರೀ ಜಗದೀಶ್ ಆಚಾರ್ಯ, SDMC  ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ರಾಮಚಂದ್ರ ಕಾರಂತ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಜೈನ್, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಶ್ರೀ ರಾಜಾರಾಮ ಶೇರ್ವೇಗಾರ್ ಉಪಸ್ಥಿತರಿದ್ದರು

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಉಡುಪಿ ಜಿಲ್ಲಾ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಶೆಣೈ

Photos: STANY DALMEIDA

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರು
ಉಡುಪಿ ಜಿಲ್ಲಾ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಕಾಂತ್ ಶೆಣೈರವರಿಗೆ ಮಾಜಿ ಅಧ್ಯಕ್ಷರಾದ ಶ್ರೀ ನಾಗರಾಜ್ ಭಟ್ ಪಾಂಗಳ ಇವರು ಇಂದು ಅಧಿಕೃತ ಅಧಿಕಾರ ಹಸ್ತಾಂತರವನ್ನು ಮಾಡಿದರು ಹಾಗೂ ನೂತನವಾಗಿ ಆಯ್ಕೆಗೊಂಡ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಅಶೋಕ್ ಸುವರ್ಣ ಕಾರ್ಕಳ ಮತ್ತು ಕೃಷ್ಣ ಕುಲಾಲ್ ಮಣಿಪಾಲ್, ಜಿಲ್ಲಾ ಕಾರ್ಯದರ್ಶಿಯಾದ ಸುರೇಶ್ ಪೂಜಾರಿ, ಕೋಶಾಧ್ಯಕ್ಷರಾದ ಆನಂದ ಸೇರಿಗಾರ್, ಜೊತೆ ಕಾರ್ಯದರ್ಶಿಯಾದ ರವಿಚಂದ್ರ ವಿಕೆ , ತಮ್ಮ ತಮ್ಮ ಅಧಿಕಾರವನ್ನು ಸ್ವೀಕರಿಸಿ ಕಾರ್ಯಪ್ರವೃತ್ತರಾದ ಸಂಘಟನಾ ಕಾರ್ಯದರ್ಶಿಯಾದ ಜಯಸುದರ್ಶನ್ ತೆಕ್ಕಟ್ಟೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀಯುತ ನಾಗರಾಜ್ ಭಟ್ ಪಾಂಗಳ ಹಾಗೂ ಉಳಿದೆಲ್ಲ ಕಾರ್ಯವನ್ನು ನಡೆಸುತ್ತಿದ್ದ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.

“ಆರೋಗ್ಯ ರಕ್ಷಾ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ”

ಶ್ರೀನಿವಾಸಪುರ: “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸದಸ್ಯರಿಗೆ 2021-22ನೇ ಸಾಲಿನಲ್ಲಿ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಆರೋಗ್ಯ ರಕ್ಷಾ ಕ್ಲೈಂ ಆದ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಕಛೇರಿಯ ಮಾನ್ಯ ನಿರ್ದೇಶಕರಾದ ಶ್ರೀಯುತ ಮುರಳಿಧರ ಶೆಟ್ಟಿ.ಕೆ ರವರು ಉದ್ಘಾಟಿಸಿಮಾತನಾಡುತ್ತಾ ಇದುವರೆಗೂ ಶ್ರೀನಿವಾಸಪುರ ತಾಲೂಕಿನಲ್ಲಿ ಒಟ್ಟು-102 ಸದಸ್ಯರಿಗೆ9 ಲಕ್ಷ30 ಸಾವಿರದ655 ರೂಗಳನ್ನು ವಿತರಣೆ ಮಾಡಲಾಗಿರುತ್ತದೆ ಎಂದು ತಿಳಿಸಿದರು ಹಾಗೂ ಯೋಜನೆ ಹಲವು ಕಾರ್ಯಕ್ರಮಗಳಲ್ಲಿ ಒಂದಾದ ಆರೋಗ್ಯ ವಿಮೆಯು ಸಂಘದ ಸದಸ್ಯರಿಗೆ ಆರೋಗ್ಯಕ್ಕೆ ಒಂದು ಭದ್ರತೆ ಎಂದು ತಿಳಿಸಿದರು ಹಾಗೂ ಯೋಜನೆಯ ಕಾರ್ಯಕ್ರಮಗಳಲ್ಲಿ ಸಮಾಜದ ಹಿತದೃಷ್ಠಿಯಿಂದ ಪೂಜ್ಯರು ದುಶ್ಚಟಗಳ ಮುಕ್ತ ಸಮಾಜವನ್ನಾಗಿಸಲು ವಿಶ್ವ ತಂಬಾಕು ವಿರೋಧಿ ದಿನಾಚರಣೆ ಹಾಗೂ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಾ ಜನರ ಕೆಟ್ಟ ಚಟಗಳನ್ನು ಹೋಗಲಾಡಿಸುವಲ್ಲಿ ಮುಂದಾಗಿರುತ್ತಾರೆ ಇದರಿಂದ ಅನೇಕ ಹೆಣ್ಣು ಮಕ್ಕಳ ಜೀವನ ಸುಧಾರಣೆ ಆಗುತ್ತಿದೆ ಎಂದು ತಿಳಿಸಿದರು.
ನಂತರ ಮಾಜಿ ತಾಲ್ಲೂಕು ಪಂಚಾಯ್ತಿಸದಸ್ಯರಾದ ನಾಗವೇಣಿರೆಡ್ಡಿ ರವರು ಮಾತನಾಡುತ್ತಾ, ಯೋಜನೆಯಕಾರ್ಯಕ್ರಮಗಳಲ್ಲಿ ಸಮಾಜದ ಹಿತದೃಷ್ಠಿಯಿಂದಪೂಜ್ಯರು ಗ್ರಾಮೀಣ ಮಟ್ಟದ ಮಹಿಳೆಯರಿಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಸಿರಿ ಧಾನ್ಯಗಳ ಉಪಯೋಗದ ಬಗ್ಗೆ ಅರಿವು ಮೂಢಿಸಿ ಸಿರಿ ಧಾನ್ಯಗಳನ್ನು ಪ್ರತಿಯೊಬ್ಬ ಮಹಿಳೆಯು ಅಳವಡಿಕೆ ಮಾಡಿಕೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ ಹಾಗೂ ದುಶ್ಚಟಗಳ ಮುಕ್ತ ಸಮಾಜವನ್ನಾಗಿಸಲು ಮದ್ಯವರ್ಜನ ಶಿಬಿರಗಳನ್ನು & ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಲ್ಲಿ ಚಟ ಮುಕ್ತರಾಗಲು ಮಾಹಿತಿನೀಡುತ್ತಿದ್ದಾರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಾ ಜನ ಸಾಮಾನ್ಯರ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಪಡಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
ನಂತರ ಐIಅಅಭಿವೃದ್ಧಿ ಅಧಿಕಾರಿಯಾದ ಶ್ರೀಯುತ ಬಾಲಚಂದ್ರನ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡುತ್ತಿರುವ ಆರೋಗ್ಯ ರಕ್ಷಾ ಕ್ಲೈಂ ಒಂದು ಮಂಜುನಾಥಸ್ವಾಮಿಯ ಪ್ರಸಾದ ಎಂದು ಸ್ವೀಕರಿಸಿ ನಿಮಗೆ ಈ ಪ್ರಸಾದ ಸಿಕ್ಕಿರುವ ಭಾಗ್ಯ ನಿಮ್ಮ ಪಾಲಿಗೆ ಬಂದಿದೆ ಎಂದರು ಹಾಗೂಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಮೃತಹಸ್ತವನ್ನು ಜೋಡಿಸುತ್ತಾ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದೆ ಎಂದು ತಿಳಿಸಿದರು. ಹಾಗೂವಿಷೇಶವಾಗಿ ಬಡವರಿಗೆ ಹಾಗೂ ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ಗ್ರಾಮಾಭಿವೃದ್ಧಿ ಯೋಜನೆಯು ಮುಂದಾಗುತ್ತಿದೆ ಹಾಗೂ ಸರ್ಕಾರದ ಪರ್ಯಾಯವಾಗಿ ಈ ರೀತಿ ಮಂಜುನಾಥಸ್ವಾಮಿ ಕೃಪಾರ್ಶೀವಾದದಿಂದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ಹಾಗೂ ಆರೋಗ್ಯ ರಕ್ಷಾ ಕ್ಲೈಂಗಳನ್ನು ನೀಡುತ್ತಾ ಆರೋಗ್ಯದ ಕಡೆಯು ನೆರೆವಾಗುತ್ತಿದೆ ಎಂದು ತಿಳಿಸಿದರು.
ಉಪಸ್ಥಿತಿ: ಶ್ರೀನಿವಾಸಪುರ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ಸುರೇಶ್ ಗೌಡ ಎಸ್, ರವರು ಹಾಗೂಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀಯುತ ನಾರಾಯಣಸ್ವಾಮಿ ರವರು ಹಾಗೂ ಉದಯವಾಣಿ ಪತ್ರಕರ್ತರಾದ ಶ್ರೀಯುತ ನಾಗರಾಜ್ ರವರು ಹಾಗೂಆರೋಗ್ಯ ರಕ್ಷಾ ವಿಮಾ ಕ್ಲೈಂನ ಫಲಾನುಭವಿಗಳು ಹಾಗೂ ಪ್ರಗತಿ ಬಂಧು ಸ್ವಸಹಾಯಸಂಘದ ಸದಸ್ಯರು ಉಪಸ್ಥಿತರಿದ್ದರು.

ಕೋಲಾರ: ಶುದ್ಧ ಕುಡಿಯುವ ನೀರು ಕೊಡುವ ಉದ್ದೇಶದಿಂದ ಹೊಂಡಾ ಕಂಪನಿಯು ಮುಂದೆ ಬಂದಿದೆ-ಎಂ.ಎಲ್ ಅನಿಲ್ ಕುಮಾರ್

ಕೋಲಾರ: ಸಮಾಜದ ಎಲ್ಲಾ ವರ್ಗಗಳಿಗೂ ಶುದ್ಧ ಕುಡಿಯುವ ನೀರು ಕೊಡುವ ಉದ್ದೇಶದಿಂದ ಹೊಂಡಾ ಕಂಪನಿಯು ಮುಂದೆ ಬಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು

ವಕ್ಕಲೇರಿಯ ಸಿ.ಬ್ಲಾಕ್ ನಲ್ಲಿ ನರಸಾಪುರ ಹೊಂಡಾ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ 10 ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತ‌ನಾಡಿದ ಅವರು ಜಿಲ್ಲೆಯಾದ್ಯಂತ ಕುಡಿಯುವ ನೀರು ಫ್ಲೋರೈಡ್ ನಿಂದ ಕೂಡಿದ್ದು ಮನುಷ್ಯನ ಆರೋಗ್ಯ ದೃಷ್ಟಿಯಿಂದ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಮುಂದೆ ಬಂದಿದ್ದಾರೆ ಇದರ ನಿರ್ವಹಣೆ ಸಹ ಕಂಪನಿಯೇ ನೋಡಿಕೊಳ್ಳುತ್ತಾ ಇರುವುದು ಹೆಮ್ಮೆಯ ವಿಷಯವಾಗಿದೆ ಎಂದರು

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ ಹೋಬಳಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮತ್ತೊಂದು ಶುದ್ದೀಕರಣ ಘಟಕ ಮಾಡಲು ಸ್ಥಳೀಯ ಸಂಘಸಂಸ್ಥೆಗಳ ಗಮನಕ್ಕೆ ತರಲಾಗುತ್ತದೆ ಇರುವ ಘಟಕಗಳಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ.ಎನ್ ಹೋಂಡಾ ಕಂಪನಿಯ ವಿನೋದ್, ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷ ವಕ್ಕಲೇರಿ ರಾಜಪ್ಪ ಮಾಜಿ ತಾಲೂಕ್ ಪಚಾಯತ್ ಅಧ್ಯಕ್ಷ ರಮಾದೇವಿ ಚಲಪತಿ, ಉಪಾಧ್ಯಕ್ಷೆ ಚಿನ್ನಮ್ಮ, ಸದಸ್ಯರಾದ ಎಂ ಆನಂದ್, ಶ್ರೀನಿವಾಸ್, ಶ್ರೀಪತಿ, , ಜಯಲಕ್ಷ್ಮಿ, ಜ್ಯೋತಿ,ಕವಿತಾ, ಬೊಟ್ಟು ರಾಜಪ್ಪ, ಲೋಕೇಶ್, ಶೋಭಾ ಮಂಜುನಾಥ್ , ಜಯಲಕ್ಷ್ಮಿ ವೆಂಕಟೇಶ್, ಚಿನ್ನಮ್ಮ ಚಿಕ್ಕಮರಿಯಪ್ಪ, ಪಿಡಿಒ ಮಂಜುನಾಥ್ ಹಾಗೂ ಗ್ರಾಮ ಪಂಚಾಯಿತಿ ಸಿಬಂದಿ ವರ್ಗದವರು ಹಾಗೂ ಇನಾಯತ್ ರವರು ಗ್ರಾಮದ ಮುಕಂಡರು ಮುಂತಾದವರು ಇದ್ದರು.

ಸಂತ ಮೇರಿ ಕಾಲೇಜು, ಶಿರ್ವ “ಜಾವ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆ

ಶಿವ೯: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರಿನ ಯುನೈಟೆಡ್ ಏಜೆನ್ಸಿ ಇದರ ಸಂಪಾದಕರಾದ ಶ್ರೀಯುತ ಕೃಷ್ಣನ್ ಅಯ್ಯರ್ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್‍ರವರ “ಜಾವ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು.
ಪರೀಕ್ಷಾ ತಯಾರಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಪರೀಕ್ಷಾ ಪೂವ೯ ತಯಾರಿಯಾಗಿ ಇಂತಹ ಪ್ರಶ್ನೋತ್ತರ ಮಾಲಿಕೆ ಪುಸ್ತಕಗಳು ವಿದ್ಯಾರ್ಥಿಯ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯೆಂದು ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಪುಸ್ತಕದ ಬಗ್ಗೆ ಲೇಖಕರನ್ನು ಪ್ರಶಂಸೆಯ ಮಾತುಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನದ ಸಂಯೋಜಕರಾದ ಲೆಫ್ಟಿನೆಂಟ್ ಕೆ.ಪವೀಣ್ ಕುಮಾರ್ ರವರು ಇಂತಹ ಪುಸ್ತಕಗಳನ್ನು ತಯಾರು ಮಾಡಲು ನನ್ನ ಗಣಕ ವಿಜ್ಞಾನದ ವಿದ್ಯಾರ್ಥಿಗಳೆ ಪ್ರೇರಕ ಶಕ್ತಿ, ಅವರಿಗೆ ನಾನು ಅಭಾರಿಯಾಗಿದ್ದೇನೆ. ಪುಸ್ತಕದ ಬಗ್ಗೆ ಮಾತನಾಡುತ್ತಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ದ್ವಿತೀಯ ಬಿ.ಸಿ.ಎ. ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿ ಯಿಂದ ಈ ಪುಸ್ತಕ ಹೆಚ್ವು ಸಹಕಾರಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಏಜೆನ್ಸಿನ ಪ್ರಸನ್ನ ಅಯ್ಯರ್, ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿನ ಜೂನಿಯರ್ ಅಸೋಸಿಯೇಟ್ಸ್ ಶ್ರೀ ರಾಮ್ದಾಸ್ ಭಟ್ , ಪೂಜಾರಿ ಪ್ರತೀಕ್ ಪ್ರಭಾಕರ್, ಉಪನ್ಯಾಸಕರುಗಳಾದ ಶ್ರೀ ಪ್ರಕಾಶ್ ,ಶ್ರೀಮತಿ ದಿವ್ಯಾ ಶ್ರೀ, ಕು. ಪ್ರಣಿತ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ , ಅನುಕ್ ನಾಯಕ್ ಸಹಕರಿಸಿದ್ದರು.ಕು. ದೀಪಿಕಾ ಮತ್ತು ಬಳಗ ಪಾರ್ಥಿಸಿದರು. ಕು.ವರ್ಷ ಬಂಗೇರ ಸ್ವಾಗತಿಸಿ, ಕು.ಶಮಿತಾ ಶೆಟ್ಟಿ ವಂದಿಸಿದರು.ಕು. ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.

ಶಿವಮೊಗ್ಗ ಓಪನ್ ಕರಾಟೆ ಪಂದ್ಯಾವಳಿಯ ಕಟಾ ಮತ್ತು ಕುಮೀಟ್ ಎರಡರಲ್ಲಿಯೂ ಹುಣ್ಸೆಮಕ್ಕಿ ವಿಘ್ನೇಶ್ ಗೆ ಚಿನ್ನದ ಪದಕ

ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ  ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯಲ್ಲಿ ಬ್ಲ್ಯಾಕ್ ಬೆಲ್ಟ್ ವಿಘ್ನೇಶ್ ಮಧುಸೂದನ್ ನಾಯಕ್ ಹುಣ್ಸೆಮಕ್ಕಿ ಇವನು  ಕಟಾ ಮತ್ತು ಕುಮೀಟ್ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಇವನು ಮಧುಸೂದನ್ ಮತ್ತು ಶಶಿಕಲಾ  ದಂಪತಿಯ ಪುತ್ರನಾಗಿದ್ದಾನೆ.

“ಪ್ರತಿಭೆಯನ್ನು ಅಡಗಿಸಿಡಬಾರದು,ಪ್ರತಿಭೆಯಿಂದ ನೀವು ಸಮಾಜದ ಬೆಳಕಾಗಬೇಕು” ಪ್ರತಿಭಾ ಕಾರಂಜಿಯಲ್ಲಿ ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಅ.24: “ನಿಮ್ಮ ಪ್ರತಿಭೆಯನ್ನು ಅಡಗಿಡಿಸಬೇಡಿ, ಬೆಳಕು ಯಾವಗಲೂ ಪ್ರಜ್ವಲಿಸಬೇಕು, ಬೆಳಕಿನ ದೀಪವನ್ನು ಒಂದು ಪಾತ್ರೆಯೊಳಗೆ ಹಾಕಿ ಇಟ್ಟರೆ, ಅದರಿಂದೇನು ಪ್ರಯೋಜನವಿಲ್ಲ, ಬೆಳಕಿನ ದೀಪವನ್ನು ಎತ್ತರದಲ್ಲಿ ಇಟ್ಟರೆ, ಅದರಿಂದ ಎಲ್ಲ ಕಡೆ ಬೆಳಕು ಚೆಲ್ಲುತ್ತದೆ, ಅದೇ ರೀತಿ ಪ್ರತಿಭೆಯನ್ನು ಕೂಡ, ಅಡಗಿಸಿಡಬಾರದು. ನಿಮ್ಮ ಪ್ರತಿಭೆಯಿಂದ ನೀವು ಸಮಾಜದ ಬೆಳಕಾಗಬೇಕು” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಮತ್ತು ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳು, ಕುಂದಾಪುರ ಇವರ ಸಹಯೋಗದೊಂದಿಗೆ ವಡೇರಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ರ ಕಾರ್ಯಕ್ರಮವನ್ನು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. “ಪ್ರತಿಭೆ ಎಲ್ಲಾ ಮಕ್ಕಳಲ್ಲಿ ಇದೆ, ಅದು ಶ್ರೀಮಂತರ ಸೊತ್ತು ಮಾತ್ರವಲ್ಲ, ಪ್ರತಿಭೆ ಬಡವರಲ್ಲಿಯೂ, ಭಿಕ್ಷುಕರ ಮಕ್ಕಳಲ್ಲಿಯೂ ಇದೆ, ಅದನ್ನು ಅಡಗಿಡಿಸದೆ, ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿರಿ, ನಿಮ್ಮ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆ’ ಯಾಗಿದೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಪುರಸಭೆಯ ಸದಸ್ಯ ಪ್ರಭಾಕರ, ಜಯಶೀಲ ಶೆಟ್ಟಿ ಮುಖ್ಯ ಶಿಕ್ಷಕರು ಬ್ಯಾರೀಸ್ ಅನುದಾನಿತ ಶಾಲೆ ಹಾಗೂ ಅನುದಾನಿತ ಪೌಢ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರು, ಅಂಪಾರು ದಿನಕರ ಶೆಟ್ಟಿ, ಪ್ರಾರ್ಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಸರಕಾರಿ ನೌಕರರ ಸಂಘದ ಉಡುಪಿ ಜಿಲಾಧ್ಯಕ್ಷರು, ಕಾರ್ಯಕ್ರಮಕ್ಕೆ ಶುಭ ಕೋರಿದರು. ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂ|ಅಶ್ವಿನ್ ಅರಾನ್ಹಾ, ಸಿ.ಆರ್.ಪಿ. ಸುನಿತಾ ಬಾಂಜ್ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ರೋಜರಿ ಚರ್ಚಿನ ಉಪಾಧ್ಯಕ್ಷರಾದ ಎಲ್.ಜೆ. ಫೆರ್ನಾಂಡಿಸ್, ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಪ್ರತಿಭಾ ಕಾರಂಜಿಯ ತೀರ್ಪುಗಾರರು, ವಿವಿಧ ಕ್ಲಸ್ಟರಿನ ಸಿ.ಅರ್.ಪಿ. ಯವರು ಉಪಸ್ಥಿತರಿದ್ದರು.
ಸಂತೋಷ್ ಕುಮಾರ್ ಶೆಟ್ಟಿ ಬಿ.ಅರ್.ಪಿ. ಪ್ರಸ್ತಾವಿಕ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿನ ಸಮನ್ವಯ ಅಧಿಕಾರಿ ಅಶೋಕ್ ನಾಯ್ಕ್, ಸ್ಪರ್ಧಿಗಳಿಗೆ, ತೀರ್ಪುಗಾರರಿಗೆ ಸಲಹೆ ಸೂಚನೆ ನೀಡಿದರು. ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಸ್ ಶಾಂತಿ ಸ್ವಾಗತಿಸಿದರು. ಶಿಕ್ಷಕ ರತ್ನಾಕರ ಶೆಟ್ಟಿ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸತ್ಕರಿಸಿದರು. ಸಂತ ಮೇರಿಸ್ ಪಿ.ಯು. ಕಾಲೇಜಿನ ಉಪನ್ಯಾಸಕರಾದ ನಾಗರಜ್ ಶೆಟ್ಟಿ ಮತ್ತು ಶಿಕ್ಷಕಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು


ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಾಗ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯ: ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಬತ್ತಲಗುಟ್ಟಪಲ್ಲಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿನ ವಿವಿಧ ಸಮುದಾಯಗಳ ಮಧ್ಯೆ ಸಾಮರಸ್ಯ ನೆಲೆಗೊಳ್ಳಲು ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಜೀವಿಸುವ ಹಕ್ಕು ಕಲ್ಪಿಸಿದ ಪರಿಣಾಮಗಾಗಿ, ಸಾಮಾಜಿಕ ಸಂಬಂಧ ಬಿಗಿಯಾಗಿ ಹೆಣೆದುಕೊಂಡಿದೆ. ಸಂವಿಧಾನದ ಆಶಯ ಸಂಪೂರ್ಣ ಸಾಕಾರಗೊಂಡಾಗ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅವರ ಬದುಕು ಹಾಗೂ ಬರಹದ ಬಗ್ಗೆ ಯುವ ಸಮುದಾಯ ಆಸಕ್ತಿ ತಳೆಯಬೇಕು. ಕಷ್ಟಗಳ ಸರಮಾಲೆ ಹೊತ್ತು ಬದುಕಿದ ಅವರು, ಕೊನೆ ವರೆಗೆ ಸಮಾಜದ ಒಳಿತನ್ನೇ ಬಯಸಿದರು. ತಾವು ನಂಬಿದ ತತ್ವಕ್ಕೆ ಬದ್ಧರಾಗಿ ನಡೆದುಕೊಂಡರು. ಜಗತ್ತಿಗೆ ಒಂದು ಮಾದರಿಯಾಗಿ ಉಳಿದರು ಎಂದು ಹೇಳಿದರು.
ಮುಖಂಡರಾದ ಎಂ.ಜಿ.ಶಂಕರಪ್ಪ, ರಾಮಪ್ಪ, ಬಿ.ವಿ.ನಾಗರಾಜ್, ಚಂದ್ರಪ್ಪ, ಬಿ.ಕೆ.ನರಸಿಂಹಪ್ಪ, ಶಿವಣ್ಣ, ಭರತ್ ಮತ್ತಿತರರು ಇದ್ದರು.