ಯರ್ರಂವಾರಿಪಲ್ಲಿ -ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಸರ್ಕಾರವನ್ನು, ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ:ವೈ.ಆರ್.ಶ್ರೀನಿವಾಸರೆಡ್ಡಿ

ಶ್ರೀನಿವಾಸಪುರ : ತಾಲೂಕಿನ ಯರಂವಾರಿಪಲ್ಲಿ ಪಂಚಾಯಿತಿಯ ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಕಚೇರಿಗೆ ಬಾರದೇ ಪಂಚಾಯಿತಿ ಹಣವನ್ನು ಗುಳಂ ಮಾಡಿಕೊಂಡು ಸರ್ಕಾರವನ್ನು , ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್. ಶ್ರೀನಿವಾಸರೆಡ್ಡಿ ಪಿಡಿಒ ಅಧಿಕಾರಿ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಯರಂವಾರಿಪಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಿಂದ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದರು , ಸರ್ಕಾರವು ಗ್ರಾಮೀಣ ಭಾಗದ ಹಳ್ಳಿಗಳು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂಗಳ ವೆಚ್ಚ ಮಾಡುತ್ತಿದೆ ಆದರೆ ಯರಂವಾರಿಪಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣವನ್ನು ಗ್ರಾ.ಪಂ. ಅಧ್ಯಕ್ಷೆ ಉಪಾಧ್ಯಕ್ಷರ ಗಮನಕ್ಕೆ ತರದೇ ಕೋಟ್ಯಾಂತರ ರೂಗಳನ್ನು ಡ್ರಾ ಮಾಡಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

ಪಿಡಿಒ ಏಜಾಜ್‌ಪಾಷ ರವರು ಲಕ್ಷಾಂತರ ಹಣವನ್ನು ಲೋಟಿ ಮಾಡುತ್ತಿರುವ ಬಗ್ಗೆ ದಾಖಲೆಗಳು ಇದ್ದು ಈ ದಾಖಲೆಗಳನ್ನು ಸಿಇಒ ಹಾಗೂ ಇಒ ರವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದರು. ನರೇಗಾ ಹಾಗೂ ಇತರೆ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡಲು ಸರ್ಕಾರದಿಂದ ಡ್ಯಾಂಗಲ್‌ನ್ನು ಅಧ್ಯಕ್ಷರಿಗೊಂದು , ಪಿಡಿಒ ಗೊಂದು ನೀಡಲಾಗಿದೆ.

ಪಿಡಿಒ ರವರು ಅಧ್ಯಕ್ಷೆ ಅನಕ್ತಸ್ಥರಾಗಿದ್ದು , ಪತಿಗೆ ಆಸೆ , ಆಮೀಷಗಳನ್ನು ನೀಡಿ , ಅಧ್ಯಕ್ಷರ ಡ್ಯಾಂಗಲ್‌ನ್ನು ಸಹ ಪಡೆದುಕೊಂಡು ಲಕ್ಷಾಂತರ ಹಣವನ್ನು ಡ್ರಾ ಮಾಡಿ ಸರ್ಕಾರದ ಹಣವನ್ನು ಲೋಟಿ ಮಾಡಿದ್ದಾರೆ. ಪಿಡಿಒರವರು ಸರ್ಕಾರದ ಯಾವುದೇ ಅನುದಾನ ಬಂದರೂ ಸದಸ್ಯರ ಗಮನಕ್ಕೆ ತರುವುದಿಲ್ಲ . ೧೬ ಸದಸ್ಯರು ಕಳೆದ ೬ ತಿಂಗಳಿನಿಂದ ಸಾಮಾನ್ಯ ಸಭೆ ನಡೆದಿಲ್ಲ . ವಾರ್ಡ್ ಸಭೆ , ಗ್ರಾಮಸಭೆ ನಡೆದಿಲ್ಲ .

ಅಲ್ಲದೆ ವಸತಿ ಯೋಜನೆಗೆ ಸಂಬಂದಿಸಿದಂತೆ ವಸತಿ ಹೀನರಿಗೆ ಪಕ್ಷಾತೀತವಾಗಿ ವಸತಿಯನ್ನು ಕಟ್ಟಿಕೊಳ್ಳಲು ೧೬೨ ಫಲಾನುಭವಿಗಳ ಪಟ್ಟಿ ಮಾಡಿದರೆ , ಪಟ್ಟಿಯಲ್ಲಿ ತಮಗೆ ಇಷ್ಟ ಬಂದವರನ್ನು ಪಟ್ಟಿಗೆ ಸೇರಿಸಿದ್ದಾರೆ ಎಂದು ಪಿಡಿಒ ವಿರುದ್ಧ ಆರೋಪಿಸಿದರು . ೩೪ ಗ್ರಾಮಗಳಿಗೆ ಕಾಮಾಗಾರಿಗಳಿಗೆ ೧ ಕೋಟಿ ೩೦ ಲಕ್ಷ ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಹಣವನ್ನು ಡ್ರಾ ಮಾಡಿದ್ದಾರೆ ಎಂದು ಆರೋಪಿಸಿದರು.

ಪಂಚಾಯಿತಿಗೆ ಸಂಬಂಧಿಸಿದಂತೆ ವರ್ಷಕೊಮ್ಮೆ ಪಂಚಾಯಿತಿಯ ಖರ್ಚು ವೆಚ್ಚಗಳ ಜಮಾಬಂದಿ ಕಾರ್ಯಕ್ರಮವನ್ನು ಆಯೋಜಿಸಬೇಕಾಗಿತ್ತು . ಅದ ಸಹ ನಡೆದಿಲ್ಲ . ಪಿಡಿಓ ಏಜಾಜಪಾಷ ರವರು ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ .

ಪಂಚಾಯಿತಿಗೆ ಸಂಬಂಧಿಸಿದ ಸಾರ್ವಜನಿಕರನ್ನು ನಿಮಗೆ ಕೆಲಸ ಕೊಡುತ್ತೇನೆ ನೀವು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಮೀಷವನ್ನು ಒಡ್ಡುತ್ತಿದ್ದಾರೆ ಎಂದು ಆಪರೋಪ ವ್ಯಕ್ತಪಡಿಸಿದರು.

ಪಿಡಿಒ ಅಧಿಕಾರಿ ಕಳೆದ ೪ ತಿಂಗಳಿನಿಂದ ತಂಬ್ ಕೊಟ್ಟಿಲ್ಲ , ಇದರ ಬಗ್ಗೆ ಇಒ ಬಗ್ಗೆ ಗಮನಕ್ಕೆ ತರಲಾಗಿದೆ . ಪಿಡಿಒ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಅನೇಕ ಬಾರಿ ಸಿಇಒ , ಇಒ ರವರು ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಪತ್ರಿಕೆ ಬಳಿ ತಮ್ಮ ಆಳಲು ತೋಡಿಕೊಂಡರು.

ಜಿಲ್ಲೆಯ ಹಿರಿಯ ಅಧಿಕಾರಿಗಳು ಪಿಡಿಒ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು . ಗ್ರಾಪಂ ಸದಸ್ಯೆ ಮಂಜುಳ ಮಾತನಾಡಿ ಸರ್ಕಾರವು ಮಹಿಳೆಯರನ್ನು ಮನೆಕೆಲಸಗಳಲ್ಲಿ ಸೀಮತವಾಗಿಸದೆ , ಮಹಿಳೆಯರನ್ನು ಸಬಲರಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇಲ್ಲಿ ನಮ್ಮನ್ನು ಪರಿಗಣಿಸದೆ ೧೫ ನೇ ಕಾಸಿನ ಯೋಜನೆಡಿಯಲ್ಲಿ ಒಟ್ಟು ೯೩ ಲಕ್ಷವನ್ನು ದೂರಪಯೋಗಪಡಿಸಿಕೊಂಡಿದ್ದಾರೆ. ಪಂಚಾಯಿತಿಯಲ್ಲಿ ಇರಬೇಕಾದ ದಾಖಲೆ ಪುಸ್ತಕಗಳು ಪಿಡಿಒ ಮನೆಯಲ್ಲಿ ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖಂಡ ಪದ್ಮನಾಭರೆಡ್ಡಿ ಮಾತನಾಡಿ ನನ್ನ ಹೆಂಡತಿ ರಾಧಮ್ಮ ಯರಂವಾರಿಪಲ್ಲಿ ಪಂಚಾಯಿತಿಯಲ್ಲಿ ೨೦೧೫-೨೦೨೦ ರ ಅಧ್ಯಕ್ಷರಾಗಿ ಕಾರ್ಯನಿರ್ವಹಿದ್ದರು . ಈ ೫ ವರ್ಷದ ಸಮಯದಲ್ಲಿ ಅಧ್ಯಕ್ಷರು ಸಹಿತ ಇದುವರೆಗೂ ಯಾರಿಗೂ ಗೌರವಧನ ನೀಡಿಲ್ಲವೆಂದು ದೂರಿದ್ದಾರೆ.

ಗ್ರಾ.ಪಂ.ಸದಸ್ಯರಾದ ರಾಜ , ಗೌರಿಶಂಕರ್ , ಕವಿತ , ಶಿವಾರೆಡ್ಡಿ , ಮುಖಂಡರಾದ ಸುಧಾಕರ , ಪದ್ಮನಾಭರಡ್ಡಿ , ಪಾತೂರು ಬಾಬುರೆಡ್ಡಿ , ಹರ್ಷವರ್ಧನ ಇದ್ದರು.


.

ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಅಹ್ಮದ್

ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸಪುರದ ಸಾದಿಕ್ ಅಹ್ಮದ್ ಅವರನ್ನು, ವೇದಿಕೆಯ ರಾಜ್ಯಾಧ್ಯ್ಕಷ ರಾಮಚಂದ್ರಪ್ಪ ಆಯ್ಕೆ ಮಾಡಿದ್ದಾರೆ. ಮುಖಂಡರಾದ ಮಂಜುನಾಥ್, ನರಸಿಂಹಯ್ಯ, ಬರೀದ್, ಸಾಬೀರ್ ಇದ್ದರು

ಶ್ರೀನಿವಾಸಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಸಾಹಿತ್ಯ ಪ್ರೇಮಿಗಳು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು:ಎನ್.ಬಿ.ಗೋಪಾಲಗೌಡ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಡಿ.9 ರಂದು ಏರ್ಪಡಿಸಿರುವ 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಸಾಹಿತ್ಯ ಪ್ರೇಮಿಗಳು ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣದ ಬಳಿಕ, ಗ್ರಾಮದಲ್ಲಿ ಸಮ್ಮೇಳನಾಧ್ಯಕ್ಷ ಸಾಹಿತಿ ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಅವರ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಹೇಳಿದು.
ಸಮ್ಮೇಳನದ ಉದ್ಘಾಟನೆ ಬಳಿಕ ವಿಚಾರ ಗೋಷ್ಠಿ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 4.30 ಕ್ಕೆ ಸಮಾರೋಪ, ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಸಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ ಮಾತನಾಡಿ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರ ಹಬ್ಬ. ಹಾಗಾಗಿ ತಾಲ್ಲೂಕಿನ ಎಲ್ಲ ಕಡೆಗಳಿಂದಲೂ ಸಾಹಿತ್ಯ ಪ್ರೇಮಿಗಳು ಹರಿದುಬರಬೇಕು. ಸಮ್ಮೇಳನದ ಯಶಸ್ಸಿಗೆ ಸಮಾಜದ ಎಲ್ಲ ವರ್ಗದ ಜನರೂ ಸಹಕರಿಸಬೇಕು ಎಂದು ಹೇಳಿದರು.
ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಟಿ.ಎಸ್.ಮಾಯಾ ಬಾಲಚಂದ್ರ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಂ.ಬೈರೇಗೌಡ, ಶ್ರೀರಾಮೇಗೌಡ, ಜಿ.ವಿ.ಚಂದ್ರಪ್ಪ, ಕಲಾ ಶಂಕರ್, ಆರ್.ರವಿಕುಮಾರ್, ನಟರಾಜ್, ಅನಿಲ್ ಕುಮಾರ್, ಚಂದ್ರಶೇಖರ್, ಮುರಳಿ, ಬಾಬು, ಕೃಷ್ಣಮೂರ್ತಿ ಸುಧಾಕರ್, ವೆಂಕಟರವಣ, ಸುಬ್ರಮಣ ಇದ್ದರು.

ಸರಕಾರಿ ಶಾಲೆಯಲ್ಲಿ ಓದಿದ್ದರಿಂದ ಜನರ ಕಷ್ಟ
ಅರಿಯಲು ಸಾಧ್ಯವಾಯಿತು-ಸಿಎಂಆರ್ ಶ್ರೀನಾಥ್

ಕೋಲಾರ:- ಸರಕಾರಿ ಶಾಲೆಯಲ್ಲಿ ಓದಿದ್ದರಿಂದಲೇ ತಮಗೆ ಸಮಾಜದ ವಿವಿಧ ವರ್ಗಗಳ ಜನರ ಕಷ್ಟ ಅರಿತುಕೊಳ್ಳಲು ಸಹಕಾರಿಯಾಯಿತೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ತಾಲೂಕಿನ ಮಣಿಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸೆಂಟ್ರಲ್‍ವತಿಯಿಂದ ಬರೆಯುವ ಫಲಕಗಳನ್ನು ಬುಧವಾರ ಕೊಡುಗೆಯಾಗಿ ನೀಡಿ ಅವರು ಮಾತನಾಡುತ್ತಿದ್ದರು.
ವಿವಿಧ ವರ್ಗದ ಮಕ್ಕಳೊಂದಿಗೆ ಬೆರೆತು ಕಲಿಯುವ ಅವರ ನೋವು ನಲಿವಿನಲ್ಲಿ ಭಾಗಿಯಾಗುವ, ಕಷ್ಟ ಸುಖದಲ್ಲಿ ತೊಡಗಿಸಿಕೊಳ್ಳುವ ಸರಕಾರಿ ಶಾಲೆ ಮಕ್ಕಳು ಭಾಗ್ಯವಂತರೆಂದು ಅವರು ವಿವರಿಸಿದರು.
ಸರಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿರೋಟರಿ ಸೆಂಟ್ರಲ್‍ವತಿಯಿಂದ ಡೆಸ್ಕ್ ಸೇರಿದಂತೆ ಮತ್ತಷ್ಟು ಕೊಡುಗೆಗಳನ್ನು ನೀಡುವುದಾಗಿ ಅವರು ಘೋಷಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಾ ಮಾತನಾಡಿ, ಮಣಿಘಟ್ಟ ಶಾಲೆಯಲ್ಲಿ ಬರೆಯುವ ಫಲಕಗಳ ಕೊರತೆಯನ್ನು ನೀಗಿದ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್‍ರಿಗೆ ಧನ್ಯವಾದ ಹೇಳಿ, ಶಾಲಾ ಮಕ್ಕಳ ಅನುಕೂಲಕ್ಕಾಗಿ ರೋಟರಿ ಸೆಂಟ್ರಲ್‍ವತಿಯಿಂದ ಡೆಸ್ಕ್‍ಗಳನ್ನು ಕೊಡುಗೆಯಾಗಿ ನೀಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್, ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ಬಣಕನಹಳ್ಳಿ ನಟರಾಜ್ ಇತರರು ಹಾಜರಿದ್ದರು.

ಕಿಶೋರ್ ಕುಮಾರ್ ವೀಣೆ ಸ್ಪರ್ಧೆಯಲ್ಲಿ ಪ್ರಥಮ ; ರಾಜ್ಯ ಮಟ್ಟಕ್ಕೆ ಆಯ್ಕೆ

ಕೋಲಾರ ಡಿಸೆಂಬರ್ 7 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೋಲಾರ ಜಿಲ್ಲೆಯ ಯುವ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೋಲಾರ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆದ 2022-23ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ವೀಣೆ ಸ್ಪರ್ಧೆಯಲ್ಲಿ ಕೋಲಾರ ನಗರದ ಪಿ.ಸಿ. ಬಡಾವಣೆಯ ಕಿಶೋರ್ ಕುಮಾರ್.ಎಸ್ ರವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.
ಕಿಶೋರ್ ಕುಮಾರ್ ರವರು ಪ್ರಸ್ತುತ ವೀಣಾಶಾಸ್ತ್ರಿ ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಲಕ್ಷ್ಮೀನಾರಾಯಣ ಶಾಸ್ತ್ರಿ ರವರ ಪುತ್ರಿಯರಾದ ಟಿ.ಎಲ್. ಲಕ್ಷ್ಮೀಕಾಂತಮ್ಮ ಮತ್ತು ಟಿ.ಎಲ್. ಮಾಲತಿ ರವರ ಬಳಿ ವೀಣೆ ತರಬೇತಿ ಪಡೆಯುತ್ತಿದ್ದಾರೆ

ಮಂಗಳೂರು ಯುವ ನ್ಯಾಯವಾದಿ ಮೇಲೆ ಪುಂಜಾಲಕಟ್ಟೆ ಪೊಲೀಸ್ ದೌರ್ಜನ್ಯ : ಬನ್ನಾಡಿ ಸೋಮನಾಥ್ ಹೆಗ್ಡೆ ಖಂಡನೆ.

ದಿನಾಂಕ 3.12.2022 ರಂದು ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಪೊಲೀಸರು ನಡೆಸಿದ ದೌರ್ಜನ್ಯವನ್ನು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ತೀವ್ರವಾಗಿ ಖಂಡಿಸಿರುತ್ತಾರೆ.

ಈ ಬಗ್ಗೆ ಕುಂದಾಪುರ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆ ಕರೆದು ಚರ್ಚಿಸಲಾಗಿದೆ.ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ದ ಪ್ರತಿಬಂದಕಾಜ್ಞೆ ಇದ್ದರೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲರ ಮೇಲೆ ಎಫ್ ಐ ಆರ್ ದಾಖಲಿಸಿ ರಾತೋರಾತ್ರಿ ವಕೀಲರ ಮನೆ ಪ್ರವೇಶ ಮಾಡಿ ವಕೀಲರನ್ನು ಮನೆಯಿಂದ ಎಳೆದುಕೊಂಡು ಹೋಗಿ ನಡೆಸಿದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಸಭೆಯಲ್ಲಿ ಖಂಡಿಸಲಾಗಿದೆ.

ಮಾನ್ಯ ಬಂಟ್ವಾಳದ ನ್ಯಾಯಾಲಯ ಕೂಡ ಪೊಲೀಸರ ದೌರ್ಜನ್ಯವನ್ನು ತನಿಖೆ ಮಾಡಿ ವರದಿ ಕೊಡುವಂತೆ ಹಿರಿಯ ಪೊಲೀಸ್ ಅಧಿಕಾರಿಗೆ ಆದೇಶಿಸಿರುತ್ತದೆ. ಹಾಗಾಗಿ ನ್ಯಾಯಾಲಯದ ಆದೇಶದಂತೆ ಈ ಕೂಡಲೇ ತಪ್ಪಿತಸ್ತ ಪೋಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾಳೆ ಕುಂದಾಪುರ ವಕೀಲರ ಸಂಘದಲ್ಲಿ ಎಲ್ಲಾ ವಕೀಲರು ಸೇರಿ ತೀವ್ರ ಪ್ರತಿಭಟನೆ ಮಾಡಲು ನಿರ್ಣಯಿಸಲಾಗಿದೆ.

ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೊಸೆಫ್, ಜತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ಉಪಸ್ತಿತರಿದ್ದರು.

ಜಿಲ್ಲೆಯ ರೈತರು ಪರ್ಯಾಯ ಬೆಳೆಗಳನ್ನು ಬೆಳೆಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕೋಲಾರ :ನಮ್ಮ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ ಅವರು ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕ ಸೇವೆಗಳಲ್ಲದೆ ಜಿಲ್ಲೆಯ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಶಂಸಿದರು . ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಕರ್ನಾಟಕ ಪ್ರಾದೇಶಿಕ ಕೃಷಿಕ ಸಮಾಜ , ಕೃಷಿ , ತೋಟಗಾರಿಕೆ ಮತ್ತು ಪೊಲೀಸ್ ಇಲಾಖೆ , ಜಿಲ್ಲಾ ಕೃಷಿ ಸಮಾಜ ಮತ್ತು ತೋಟಗಾರಿಕೆ ಮಹಾವಿದ್ಯಾಲಯ , ಟಮಕ ಇವರ ಸಂಯುಕ್ತಾಶ್ರಯದಲ್ಲಿ “ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕೀರ್ಣ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ ಹೆಚ್ಚಾಗಿ ಟೊಮ್ಯಾಟೋ ಮತ್ತು ಮಾವು ಮಾತ್ರವಲ್ಲ . ಇತರೆ ಬೆಳೆಗಳನ್ನು ಬೆಳೆಯುವ ಮೂಲಕ ಅರ್ಥಿಕವಾಗಿ ಸಧೃಡರಾಗಲು ಅವರು ಬೆಳೆದಿರುವಂತ ಡ್ರಾಗನ್ ಫೂಟ್ , ಬಟರ್ ಫೂಟ್ , ಸ್ಟ್ರಾಬೆರಿ , ಜುಕನಿ , ಹಣ್ಣುಗಳನ್ನು ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಕಡಿಮೆ ನೀರಿನಲ್ಲಿ ಸಾವಯವ ಗೊಬ್ಬರವನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸುವುದನ್ನು ತೋರಿಸಿದ್ದಾರೆ . ಎಲ್ಲಾ ರೈತರು ಇವರ ಮಾರ್ಗದರ್ಶನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂಬ ದೆಸೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು . ಪರ್ಯಾಯ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ಹೆಚ್ಚಿನ ಲಾಭವಿದ್ದು , ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ , ನೇರ ಮಾರಾಟ ಮಾಡಬಹುದಾಗಿದೆ ಎಂದರು . ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಭಾಗಿತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಇಂಥಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು . ರಂಗಮಂದಿರದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಯುಕೇಶ್ ಕುಮಾರ್‌ ಅವರು ಮಾತನಾಡಿ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಸಮಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ . ಯಾವೂದೇ ಬೆಳೆಗಳು ಬೆಳೆಯುವ ಮುನ್ನ ಮಾರುಕಟ್ಟೆಯ ಬೇಡಿಕೆ , ಬೆಲೆ , ಇಳುವರಿ , ಲಾಭಾಂಶಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು . ಎಲ್ಲಾ ರೈತರು ಟೊಮ್ಯಾಟೋ , ಮಾವು ಬೆಳೆದರೆ ಮಾರುಕಟ್ಟೆ ಬೆಲೆಯಾಗಲಿ ಸಿಗಲು ಸಾಧ್ಯವಿಲ್ಲ . ಕನಿಷ್ಠ ಅರ್ಧ ಭಾಗದಷ್ಟು ರೈತರು ಇತರೆ ಬೆಳೆಗಳನ್ನು ಬೆಳೆಯುವಂತಾಗಬೇಕು ಎಂದ ಅವರು ಮಹಾತ್ಮಗಾಂಧಿ ರೋಜಗಾರ್ ಯೋಜನೆಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನೇಕ ಬೆಳೆಗಳಿಗೆ ಸಹಾಯಧನ ಲಭ್ಯವಿದ್ದು , ಇದನ್ನು ರೈತರು ಇಲಾಖೆಯವರಿಂದ ರೈತ ಸಂರ್ಪಕಗಳ ಮೂಲಕ ಮಾಹಿತಿ ಪಡೆದು ಪ್ರಗತಿ ಹೊಂದ ಬೇಕೆಂದು ಕರೆ ನೀಡಿದರು . ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಜಿಲ್ಲಾಡಳಿತವು ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸುತ್ತಿರುವುದು ಜನಪರ ಕಾಳಜಿಯನ್ನು ಸಾಕ್ಷೀಕರಿಸುತ್ತಿದೆ ಎಂದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲೆಯಲ್ಲಿನ ಪ್ರಗತಿ ಪರ ರೈತರಿಗಿಂತ ಹೆಚ್ಚಾಗಿ ಎಲೆಯ ಮರೆಯ ಕಾಯಿಯಂತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಯ ರೈತರಿಗೆ ವಿಶೇಷವಾದ ಮಾರ್ಗದರ್ಶನದ ಕೊಡುಗೆಯನ್ನು ನೀಡಿದ್ದಾರೆ . ಪೊಲೀಸ್ ಅಧಿಕಾರಿಯಾಗಿದ್ದರೂ ಸಹ ಕೃಷಿ ಮತ್ತು ತೋಟಗಾರಿಕೆಯಲ್ಲಿ ಅಪಾರ ಜ್ಞಾನವನ್ನು ಅಳವಡಿಸಿ ಕೊಂಡಿರುವುದು ಅವರ ಸಾಧನೆಯಿಂದ ತಿಳಿಯಬಹುದಾಗಿದೆ ಎಂದು ಶ್ಲಾಘಿಸಿದರು . ಸದಾ ಟಮೋಟೋ ಬೆಳೆಯನ್ನು ಬೆಳೆದು ಕೊನೆಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕುವ ಬದಲು ನೂತನ ವಿಧಾನವನ್ನು ಅಳವಡಿಸಿ ಕೊಂಡು ಪ್ರಗತಿ ಹೊಂದ ಬಹುದಾಗಿದೆ ಎಂದರು . ಕೇವಲ 2-3 ಎಕರೆ ಜಮೀನು ಇದ್ದರೆ ಸಾಕು ಯಾವ ಗೆಜೆಟೆಡ್ ಅಧಿಕಾರಿಗಿಂತ ಹೆಚ್ಚಾಗಿ ಅರ್ಥಿಕವಾಗಿ ಸಧೃಡರಾಗಿರಬಹುದು ಎಂಬುವುದನ್ನು ಎಸ್.ಪಿ ಅವರಂತೆ ಟಮ್ಯಾಟೊ ಬದಲು ಡ್ರಾಗನ್ ಫ್ರಟ್ , ಬಟರ್ ಫೂಟ್ , ಸ್ಟ್ರಾಬೆರಿ , ಜುಕನಿ ಮುಂತಾದ ಬೆಳೆಗಳನ್ನು ಬೆಳೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯಲ್ಲಿ ಅರಿತು ಮುಂದುವರೆಯುವಂತೆ ತಿಳಿಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರು ತಮ್ಮ ಜಮೀನುಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿದ್ದ ಡ್ರಾಗನ್ ಫೂಟ್ , ಬಟರ್ ಫೂಟ್ , ಸ್ಟ್ರಾಬೆರಿ , ಜುಕನಿ , ಮುಂತಾದ ಬೆಳೆಗಳನ್ನು ತಮ್ಮ ಸ್ವಗ್ರಾಮವಾದ ಕೋರಗಂಡಹಳ್ಳಿಯಲ್ಲಿ ಬೆಳೆದ ವಿಧಾನಗಳನ್ನು ಚಿತ್ರಿಕರಿಸಿರುವುದು ಎಲ್‌ಇಡಿ ಪರದೆಯಲ್ಲಿ ಪ್ರಾಕ್ಟಿಕತೆ ಪ್ರದರ್ಶಿಸುವ ಮೂಲಕ ವಿವರಿಸಿದರು.

ಇದೇ ಸಂದರ್ಭದಲ್ಲಿ ರೈತರೊಡನೆ ಸಂವಾದದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉತ್ತರಿಸಿ ಯಾವೂದೇ ಸಂಪನ್ಮೂಲ ವ್ಯಕ್ತಿಗಳಿಗಿಂತ ಕಡಿಮೆ ಇಲ್ಲದಂತೆ ಸ್ಪಷ್ಟ ಪಡಿಸಿ ರೈತರಲ್ಲಿ ಹೊಸ ಅಶಯವನ್ನು ಬೆಳಗಿಸಿದರು . ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐ.ಎ.ಎಸ್ . ಅಧಿಕಾರಿ ವಿನಾಯಕ್ , ಜಂಟಿ ಕೃಷಿ ನಿರ್ದೇಶಕಿ ವಿ.ಡಿ.ರೂಪಾದೇವಿ , ತೋಟಗಾರಿಕೆ ಉಪನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ , ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ || ಶಿವರಾಮ್ , ಹಿರಿಯ ವಕೀಲ ಕೆ.ವಿ.ಶಂಕರಪ್ಪ , ಪ್ರಗತಿ ಪರ ರೈತರಾದ ಅಬ್ಬಣಿ ಶಿವಪ್ಪ , ಕೋಟಿಗಾನಹಳ್ಳಿ ಗಣೇಶಗೌಡ , ಪ್ರಗತಿಪರ ಮಹಿಳೆಯರಾದ ವಿ.ಗೀತಾ , ನಳಿನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಭಾರತದ ಅಗಾಧ ಸಾಧನೆಗೆ ಅಂಬೇಡ್ಕರ್‌ ಕಾರಣ – ಸಿಎಂಆರ್ ಶ್ರೀನಾಥ್

ಕೋಲಾರ : – ಭಾರತದ ಅಗಾಧ ಸಾಧನೆಗೆ ಅಂಬೇಡ್ಕರ್‌ ನೀಡಿದ ಸಂವಿಧಾನವೇ ಕಾರಣವಾಗಿದೆಯೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್ . ಶ್ರೀನಾಥ್ ಅಭಿಪ್ರಾಯಪಟ್ಟರು . ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್‌ರ ೬೬ ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು . ಸಂವಿಧಾನ ಭಾರತಕ್ಕೆ ಸೀಮಿತವಾಗಿದರೂ , ವಿಶ್ವದ ಹತ್ತು ಹಲವು ರಾಷ್ಟ್ರಗಳ ಅನುಸರಣೆ ಮತ್ತು ಅಳವಡಿಕೆಗೆ ಕಾರಣವಾಗಿದೆಯೆಂದು ವಿವರಿಸಿದರು . ಸಂವಿಧಾನದ ಮಹತ್ವ ಪ್ರತಿಯೊಬ್ಬರ ಬದುಕಿನ ಪ್ರತಿ ಆಚರಣೆಯಲ್ಲೂ ಪ್ರತಿಫಲಿಸುವಂತಾದರೆ ದೇಶದ ಪ್ರಗತಿ ಸಾಧ್ಯವೆಂದು ಹೇಳಿದ ಅವರು , ಸೇವಾದಳವು ಮಹನೀಯರ ಬದುಕಿನ ಸಾಧನೆಗಳ ಸ್ಮರಣೆ ಕಾರ್ಯಕ್ರಮಗಳ ಅತ್ಯುತ್ತಮವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು .

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಅಂಬೇಡ್ಕರ್‌ ಗತಿಸಿ ೬೬ ವರ್ಷಗಳ ನಂತರವೂ ಅವರನ್ನು ದೇಶ ಮಾತ್ರವಲ್ಲದೆ ವಿಶ್ವವ್ಯಾಪಿ ಸ್ಮರಿಸಿಕೊಳ್ಳಲಾಗುತ್ತಿದೆ . ಜೀವಮಾನವಿಡಿ ದೇವರ ಅಸ್ತಿತ್ವನ್ನೇ ನಂಬದ ಅಂಬೇಡ್ಕರ್‌ ಕೋಟ್ಯಾಂತರ ಜನರ ಬದುಕಿಗೆ ದೇವರಾಗಿರುವುದು ಅವರ ಬದುಕಿನ ಶ್ರೇಷ್ಟತೆಯ ಸಂಕೇತವಾಗಿದೆಯೆಂದರು . ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ , ವಿಶ್ವ ಜ್ಞಾನಿ ಅಂಬೇಡ್ಕರ್‌ರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಿ , ಪುಸ್ತಕ ಪ್ರೇಮಿಗಳಾಗಿ , ಸಮಾಜದ ತಪ್ಪುಗಳ ಸರಿಪಡಿಸಿದಾಗ ಮಾತ್ರವೇ ಅವರ ಪರಿನಿರ್ವಾಹಣ ಸ್ಮರಣೆಗೆ ಅರ್ಥ ಎಂದರು . ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್‌.ಸುಧಾಕರ್‌ ಮಾತನಾಡಿ , ಭಾರತ ಭವ್ಯತೆಗಾಗಿ ಅಂಬೇಡ್ಕರ್‌ ಹಾದಿಯಲ್ಲಿ ಸಾಗೋಣ ಎಂದರು . ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್ , ಫಲ್ಗುಣ ಬಣಕನಹಳ್ಳಿ ನಟರಾಜ್ , ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ , ಜಗನ್ನಾಥ್ , ವಿ.ಪಿ.ಸೋಮಶೇಖರ್ , ಸುರೇಶ್ ಮತ್ತಿತರರು ಹಾಜರಿದ್ದರು . ಸೇವಾದಳ ಸಂಘಟಕ ಎಂ.ಬಿ.ದಾನೇಶ್‌ ಕಾರ್ಯಕ್ರಮ ನಿರೂಪಿಸಿದರು . ಸರ್ವಧರ್ಮ ಪ್ರಾರ್ಥನೆ , ರಾಷ್ಟ್ರಗೀತೆ ಗಾಯನ ನೆರವೇರಿತು .

ಶ್ರೀನಿವಾಸಪುರ ಶಿಬಿರ ಕಚೇರಿಯಲ್ಲಿ ರೂ.5,70,000/- ಗಳ ಮೊತ್ತದ ರಾಸುಗಳ ವಿಮಾ ಪರಿಹಾರ ಚೆಕ್ ವಿತರಣೆ ಮಾಡಿದರು

ಶ್ರೀನಿವಾಸಪುರ: ಕೋಲಾರ ಜಿಲ್ಲಾ ಹಾಲು ಒಕ್ಕೂಟ, ಶ್ರೀನಿವಾಸಪುರ ಶಿಬಿರ ಕಚೇರಿಯಲ್ಲಿ ರೂ.5,70,000/- ಗಳ ಮೊತ್ತದ ರಾಸುಗಳ ವಿಮಾ ಪರಿಹಾರ ಚೆಕ್ ಗಳನ್ನು ಕೋಮುಲ್ ನಿರ್ದೇಶಕರು ಎನ್. ಹನುಮೇಶ್ ರವರು ಫಲಾನುಭವಿಗಳಿಗೆ ವಿತರಣೆ ಮಾಡಿದರು, ಕಾರ್ಯಕ್ರಮದಲ್ಲಿ ಮಾತನಾಡಿ ದಿನಾಂಕ.16.11.2022 ರಿಂದ ಹಾಲು ಉತ್ಪಾದಕರಿಗೆ ಹಾಲಿನ ಖರೀದಿ ಧರ ರೂ.2 ಹೆಚ್ಚಿಸಲಾಗಿದ್ದು, ಪುನಃ ದಿನಾಂಕ.01.12.2022 ರಿಂದ ರೂ.2 ಹೆಚ್ಚಿಸಲಾಗಿದ್ದು ಒಕ್ಕೂಟವು ಒಟ್ಟಾರೆ ರೂ 4/- ಹೆಚ್ಚಿಸಲಾಗಿದ್ದು, ಪ್ರಸ್ತುತ 3.5 FAT, 8.5 SNF ಹಾಲಿನ ಗುಣಮಟ್ಟಕ್ಕೆ 31ರೂ ಒಕ್ಕೂಟ ನೀಡುತ್ತಿದ್ದು, ಸರ್ಕಾರದ ಪ್ರೋತ್ಸಾಹ ಧನ ರೂ 5 ಸೇರಿ ಪ್ರತಿ ಲೀಟರ್ ಹಾಲಿಗೆ ರೂ.36/- ರೈತರಿಗೆ ದೊರೆಯುತ್ತಿದ್ದು, ಉತ್ಪಾದಕರು ಖಾಸಗಿ ಡೇರಿಗಳಿಗೆ ಹಾಲು ಪೂರೈಸುವ ಬದಲು ಒಕ್ಕೂಟದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುವ ಮೂಲಕ ಒಕ್ಕೂಟದ ಸೌಲಭ್ಯಗಳನ್ನು ಪಡೆಯಲು ತಿಳಿಸಿದರು, ಹಾಗೂ ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ ಗುಣಮಟ್ಟದ ಹಾಲು ಸಂಘಗಳಿಗೆ ಪೂರೈಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಕೋಮುಲ್ ಶ್ರೀನಿವಾಸಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಕೆ.ಎಂ. ಮುನಿರಾಜು, ಡಾ.ಲೋಕೇಶ್, ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳು ಭಾಗವಹಿಸಿದ್ದರು.