ಕೋಲಾರ ಬಿಎಂಎಸ್ ಹಿರಿಯ ಬೋಧಕರಿಗೆ ಸನ್ಮಾನ


ಕೋಲಾರದ : (ಜನವರಿ9) ಕೋಲಾರದ ಟಿ. ಚೆನ್ನಯ್ಯರಂಗಮಂದಿರದಲ್ಲಿ ನಡೆದ ಬೆಂಗಳೂರು ಮಾಂಟೆಸರಿ ಶಾಲೆಯ (ಬಿಎಂಎಸ್) ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ಶಿಕ್ಷಕ-ಶಿಕ್ಷಕಿಯರಾದ ವೆಂಕಟೇಶ್, ಪ್ರೇಮಾ, ಶಾಹಿನ್ ಮತ್ತು ಮಮತಾಕುಂದಾಪುರಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್, ಡಿಡಿಪಿಐಕೃಷ್ಣಮೂರ್ತಿ, ಭಾರತ ಸ್ಕೌಟ್ ಮತ್ತುಗೈಡ್ಸ್‍ಕಮಿಷನರ್ ಕೆ.ವಿ. ಶಂಕರಪ್ಪ, ಎಸ್‍ಎಸ್‍ಎಲ್‍ಸಿ ನೋಡಲ್‍ಅಧಿಕಾರಿ ಸಿ.ಆರ್. ಅಶೋಕ್, ಮಾಜಿಕೌನ್ಸಿಲರ್ ನದೀಂ ಹೈದರ್, ಸೈಯದ್ ಶಾಲಿ, ಬಿಎಂಎಸ್ ಕಾರ್ಯದರ್ಶಿ ಅ.ಮು. ಲಕ್ಷ್ಮೀನಾರಾಯಣ, ಮುಖ್ಯ ಶಿಕ್ಷಕ ಶ್ರೀನಿವಾಸ, ಮುಖ್ಯ ಶಿಕ್ಷಕಿ ರತ್ನಾಕುಮಾರಿ, ಜಲಜಾ ಮತ್ತು ಆಡಳಿತ ಮಂಡಳಿಯ ವಿಜಯೇಂದ್ರ ಹಾಗೂ ಶ್ರೀಮತಿ ವಿಜಯೇಂದ್ರ ಮೊದಲಾದವರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸ್ರೂರು ಸ್ಪೋರ್ಟ್ಸ್ ಆಶ್ರಯದಲ್ಲಿ ‘ಹಿರಿಯರ ಕ್ರಿಕೆಟ್ ಟ್ರೋಫಿ-2023’ – ಲಕ್ಕಿ ಲೆಜೆಂಡ್ಸ್ಗೆ ಪ್ರಶಸ್ತಿ

ಬಸ್ರೂರು: ಬಸ್ರೂರು ಸ್ಪೋರ್ಟ್ಸ್ ಆಶ್ರಯದಲ್ಲಿ ರವಿವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಮೈದಾನದಲ್ಲಿ ಹಿರಿಯರ ಕ್ರಿಕೆಟ್ ಟ್ರೋಫಿ-2023 ನಡೆಯಿತು. ಪಂದ್ಯಾವಳಿಯಲ್ಲಿ ಬಸ್ರೂರು ಪರಿಸರದ ಹಿರಿಯ ಕ್ರಿಕೆಟ್ ತಂಡಗಳು ಭಾಗವವಹಿಸಿದ್ದು, ಲಕ್ಕಿ ಲೆಜೆಂಡ್ಸ್ ಪ್ರಥಮ, ಲೆಜೆಂಡ್ಸ್ ಕಿಂಗ್ಸ್‌ ತಂಡ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

      ಟ್ರೋಫಿಗಳನ್ನು ವಿಜೇತರಿಗೆ ವಿತರಿಸಿದ ಧಾರ್ಮಿಕ ನೇತಾರ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಸುಮಾರು 25-30 ವರ್ಷಗಳ ಹಿಂದೆ ಜಿಲ್ಲೆ ರಾಜ್ಯ,ರಾಷ್ಟ್ರದಲ್ಲಿ ಮಿಂಚಿದ ಸ್ಥಳೀಯ ಕ್ರಿಕೆಟ್  ಪಟುಗಳ ಸಮಾಗಮ ಈಗ ಮತ್ತೊಮ್ಮೆ ನಡೆದಿರುವುದು ಸಂತಸದ ವಿಚಾರವಾಗಿದೆ. ಇಂದಿನ ಯುವ ಕ್ರಿಕೆಟ್ ಪಟುಗಳು ಹಿರಿಯ ಆಟಗಾರರಿಂದ ಅನೇಕ ಕೌಶಲಗಳನ್ನು ಕಲಿತು ಕೊಳ್ಳಬೇಕಾಗಿದೆ ಎಂದರು.

ಬಸ್ರೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಬಿ.ಗೋಪಾಲ ಪೂಜಾರಿ, ಕ್ರಿಕೆಟ್ ಪಟು ಮನೋಜ್ ನಾಯರ್, ಕುಂದಾಪುರ ಕಾರ್ತಿಕ್ ಸ್ಕ್ಯಾನಿಂಗ್‌ನ ಡಾ|ಬಿ. ವೆಂಕಟರಾಮ ಉಡುಪ, ರಿಯಾಜ್. ಅಹ್ಮದ್, ಬಸ್ರೂರು  ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಅಬ್ದುಲ್ ಅಜೀಜ್, ಅಧ್ಯಕ್ಷ  ಬಿ.ಸತ್ಯನಾರಾಯಣ, ಕಾರ್ಯದರ್ಶಿ ಬಿ. ವಿವೇಕಾನಂದ, ಕೋಶಾಧಿಕಾರಿ ಅಶೋಕ್ , ಬಿ.ಕೆ., ಬಿ.ರಾಮ್ ಕಿಶನ್‌ ಹೆಗ್ಡೆ, ಸತೀಶ್ ಮಧ್ಯಸ್ಥ ಉಪಸ್ಥಿತರಿದ್ದರು.

ಸಮ್ಮಾನ

ಬಿ.ಅಪ್ಪಣ್ಣ ಹೆಗ್ಡೆ ಮತ್ತು ಸಮಾಜ ಸೇವಕ ಕೃಷ್ಣ ಬಿ. ಅವರನ್ನು ಸಮ್ಮಾನಿಸಲಾಯಿತು. ಬಸ್ರೂರುಸರಕಾರಿ ಪ್ರೌಢಶಾಲೆಯ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರನ್ನು ಗೌರವಿಸಲಾಯಿತು. ಬೆಳಗ್ಗೆ ರಿಯಾಜ್ ಸಾನಕದಕಟ್ಟೆ ರಮೇಶ್ ಆಚಾರ್, ಸತೀಶ್ ಮಧ್ಯಸ್ಥ ಪಾರಿತೋಷಕಗಳನ್ನು ಅನಾವರಣಗೊಳಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದ್ದರು. ಯುವ ಮುಖಂಡ ಅಶೋಕ್ ಕೆರೆಕಟ್ಟೆ ,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸ್ಮಾರ್ಟ್ ಸಿಟಿಗೊಂದು ‘ಐಡೆಂಟಿಟಿ’ – ರೋಹನ್ ಸಿಟಿ


ಕಳೆದ 29 ವರ್ಷಗಳಿಂದ ಮಂಗಳೂರು ಆಸುಪಾಸಿನಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್, ಬಿಜೈ ಮುಖ್ಯ ರಸ್ತೆಯಲ್ಲಿ, ಅತ್ಯಾಧುನಿಕ ಸೌಕರ್ಯಗಳ ‘ರೋಹನ್ ಸಿಟಿ’ ಸಮುಚ್ಛಯವನ್ನು ಅಭಿವೃದ್ದಿಪಡಿಸುತ್ತಿದೆ. ಸಹಕಾರಿ ರಂಗದ ಭೀಷ್ಮ ಎಂದೇ ಹೆಸರುವಾಸಿಯಾಗಿರುವ ‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಈ ಸಮುಚ್ಚಯದ ಸಹ – ಪ್ರವರ್ತಕರಾಗಿದ್ದಾರೆ. ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು ಇದೀಗ ಬುಕ್ಕಿಂಗ್‍ಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತಿದೆ.
ಬಿಜೈ ಮುಖ್ಯ ರಸ್ತೆ ಪ್ರದೇಶ, ಸ್ಮಾರ್ಟ್ ಸಿಟಿಯ ವ್ಯಾಪ್ತಿಗೆ ಬರುವ ಮಂಗಳೂರು ಮಹಾನಗರಪಾಲಿಕೆಯ ಹೃದಯ ಭಾಗವಾಗಿದ್ದು, ಸಕಲ ಸೌಕರ್ಯಗಳೊಂದಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಆಧುನಿಕ ವೈದ್ಯಕೀಯ ಸೇವೆ ನೀಡುವ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಸೂಪರ್ ಮಾರ್ಕೆಟ್, ಮಲ್ಟಿಫ್ಲೆಕ್ಸ್ ಇವೆಲ್ಲವೂ ಕೂಗಳತೆ ದೂರದಲ್ಲಿವೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ 10 ಕಿಮೀ ಅಂತರದಲ್ಲಿದ್ದು, ಉತ್ತಮ ರಸ್ತೆಯ ಸಂಪರ್ಕ ಹೊಂದಿದೆ.
3.5 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೋಹನ್ ಸಿಟಿ – ರೋಹನ್ ಕಾರ್ಪೊರೇಶನ್‍ನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಆತ್ಯಾಧುನಿಕ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಮತ್ತು ನೀರು ಸರಬರಾಜು, ಯಾಂತೀಕೃತ ವಾಹನ ನಿಲುಗಡೆ, ಹಸಿರುವನ ಮತ್ತು ವಾಯುವಿಹಾರಕ್ಕೆ ಕಾಲುದಾರಿಯನ್ನು ಹೊಂದಿದೆ. ವಸತಿಗಾಗಿ 6 ಲಕ್ಷ ಚದರ ಅಡಿ, ವಾಣಿಜ್ಯ ಮಳಿಗೆಗಳಿಗಾಗಿ 2 ಲಕ್ಷ ಚದರ ಅಡಿಯನ್ನು ಕಾಯ್ದಿರಿಸಲಾಗಿದೆ. ವಿವಿಧ ವಿಸ್ತೀರ್ಣ ಮತ್ತು ವಿನ್ಯಾಸದಲ್ಲಿ ಒಟ್ಟು 546, ಸಿಂಗಲ್, ಡಬಲ್ ಮತ್ತು ತ್ರೀ ಬೆಡ್‍ರೂಂ ಫ್ಲ್ಯಾಟ್‍ಗಳು ಹಾಗೂ 284 ವಾಣಿಜ್ಯ ಮಳಿಗೆಗಳು ಮಾರಾಟಕ್ಕಿವೆ.
ವಾಣಿಜ್ಯ ಮಳಿಗೆಯಲ್ಲಿ ಎರಡು ಜತೆ ಸರ್ವಿಸ್ ಎಸ್ಕಲೇಟರ್, 6 ಹೈ ಸ್ಪೀಡ್ ಸ್ವಯಂಚಾಲಿತ ಸರ್ವಿಸ್ ಮತ್ತು ಪ್ಯಾಸೆಂಜರ್ ಲಿಫ್ಟ್, ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಫಲಕ ಸ್ಥಳಗಳು, ಎರಡು ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ, ಚಿಲ್ಲರೆ ಅಂಗಡಿಗಳು, ಸಗಟು ಅಂಗಡಿಗಳು, ಕಾರ್ಪೊರೇಟ್ ಹಾಗೂ ಇತರ ಕಚೇರಿಗಳು, ಸುರಕ್ಷಿತ ಮಕ್ಕಳ ಆಟದ ಸ್ಥಳ, ಹಾಗೂ ಸ್ವಯಂಚಾಲಿತ ಚೇಂಜ್ ಓವರ್‍ನೊಂದಿಗೆ 100% ಡೀಸೆಲ್ ಜನರೇಟರ್ ಪವರ್ ಬ್ಯಾಕಪ್ ಮತ್ತು ಒಟ್ಟು 1486 ಚತುಶ್ಚಕ್ರ ಮತ್ತು 395 ದ್ವಿಚಕ್ರ ಯಾಂತೀಕೃತ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.
ಮಂಗಳೂರು ಸ್ಮಾರ್ಟ್ ಸಿಟಿಯ ಪ್ರಪ್ರಥಮ ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್ ರೋಹನ್ ಸಿಟಿಯ ಪ್ರಧಾನ ಆಕರ್ಷಣೆಯಾಗಲಿದೆ. ವಿಶಾಲ ವಿಶ್ರಾಂತಿ ಕೊಠಡಿಗಳು, ಸ್ವಾಗತ ಆವರಣ, ವಿದ್ಯಾರ್ಥಿಗಳ ಚಟುವಟಿಕೆ ಕೊಠಡಿ, ಅತ್ಯಾಧುನಿಕ ಗ್ರಂಥಾಲಯ, ಬಾರ್, ಕಾಫಿ ಶಾಪ್, ಫೈನ್ ಡೈನ್ ಫ್ಯಾಮಿಲಿ ರೆಸ್ಟೋರೆಂಟ್, ಜಾಗಿಂಗ್ ಟ್ರ್ಯಾಕ್, ಸೀನಿಯರ್ ಸಿಟಿಜನ್ ಪಾರ್ಕ್, ಈಜುಕೊಳ, ಸ್ನೂಕರ್ ಟೇಬಲ್, ಟೇಬಲ್ ಟೆನ್ನಿಸ್, ವಿಡಿಯೋ ಗೇಮ್ಸ್ ವಲಯ, 3 ಡಿ ಥಿಯೇಟರ್, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಏರೋಬಿಕ್ ಹಾಗೂ ಯೋಗ ಕೊಠಡಿ, ಕಾನ್ಫರೆನ್ಸ್ ಹಾಲ್, ವಿವಿದೊದ್ದೇಶ ಹಾಲ್, ಸಭಾಂಗಣ, ಒಳಾಂಗಣ ಕಾರ್ಡ್ ರೂಮ್, ಬೋರ್ಡ್ ರೂಮ್ ಮತ್ತಿತರ ವೈಶಿಷ್ಟ್ಯಗಳನ್ನೊಳಗೊಂಡ ಸಂಪೂರ್ಣ ಹವಾನಿಯಂತ್ರಿತ ಸಿಟಿ ಕ್ಲಬ್, 365 ದಿನಗಳು, 24ಘಿ7 ತೆರೆದಿರುತ್ತದೆ. ಸಮುಚ್ಛಯಕ್ಕೆ ತನ್ನದೇ ಮಳೆ ನೀರು ಕೊಯ್ಲು ವ್ಯವಸ್ಥೆ, ಘನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ, ಸೌರಶಕ್ತಿ ವ್ಯವಸ್ಥೆ, ವಾಹನ ಚಾರ್ಜಿಂಗ್ ವ್ಯವಸ್ಥೆ ಮತ್ತು ಅಗ್ನಿಶಾಮಕ ವ್ಯವಸ್ಥೆ ಇರಲಿದೆ.
ರೋಹನ್ ಸಿಟಿಗೆ ರೇರಾ (ಖಇಖಂ) ಹಾಗೂ ಕ್ರೆಡಾಯ್ (ಅಖಇಆಂI) ಮಾನ್ಯತೆಯಿದ್ದು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‍ಗಳ ಅನುಮೋದನೆ ಇರುವುದರಿಂದ ಸಾಲಸೌಲಭ್ಯ ಗ್ರಾಹಕರಿಗೆ ಸುಲಭವಾಗಲಿದೆ. ಜತೆಗೆ ರೂ. 31,000/-* (ಶರತ್ತುಗಳು ಅನ್ವಯ) ಮಾಸಿಕ ಕಂತಿನಲ್ಲಿ ಫ್ಲ್ಯಾಟ್ ಖರೀದಿಸಲು ನಿರ್ಮಾಣ ಸಂಸ್ಥೆ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ರೋಹನ್ ಕಾರ್ಪೊರೇಶನ್, ಮುಖ್ಯ ರಸ್ತೆ, ಬಿಜೈ, ಮಂಗಳೂರು ಮಾರಾಟ ಕಚೇರಿಗೆ ಭೇಟಿ ನೀಡಬಹುದು ಅಥವಾ ಅಂತರ್‍ಜಾಲತಾಣ ಡಿohಚಿಟಿಛಿoಡಿಠಿoಡಿಚಿಣioಟಿ.iಟಿ ಅಥವಾ ದೂರವಾಣಿ ಸಂಖ್ಯೆ 98454 90100 ಸಂಪರ್ಕಿಸಬಹುದಾಗಿದೆ.

ರೋಹನ್ ಕಾರ್ಪೊರೇಶನ್
ಕಳೆದ 29 ವರ್ಷಗಳಿಂದ, ಯುವ ಉದ್ಯಮಿ ಶ್ರೀ ರೋಹನ್ ಮೊಂತೇರೊ ಅವರ ನಾಯಕತ್ವದಲ್ಲಿ, ರೋಹನ್ ಕಾರ್ಪೊರೇಶನ್ ನಿರ್ಮಾಣ ಸಂಸ್ಥೆ ಮಂಗಳೂರು ನಗರದಾದ್ಯಂತ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಮನೆಮಾತಾಗಿದೆ. ಈ ವರೆಗೆ 25 ಕ್ಕೂ ಹೆಚ್ಚು ಪ್ರತಿಷ್ಠಿತ ನಿರ್ಮಾಣಗಳೊಂದಿಗೆ, 2000 ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ಶ್ರೇಯಸ್ಸು ಶ್ರೀ ರೋಹನ್ ಮೊಂತೇರೊ ಅವರಿಗೆ ಸಲ್ಲುತ್ತದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ರೋಹನ್ ಎಸ್ಟೇಟ್, ಕುಲಶೇಖರ-ಬೈತುರ್ಲಿಯಲ್ಲಿ ರೋಹನ್ ಎಸ್ಟೇಟ್, ಮಂಗಳೂರು-ಬೆಂಗಳೂರು ಹೆದ್ದಾರಿಯ ಪಂಪ್‍ವೆಲ್ ಬಳಿಯ ವಸತಿ ಮತ್ತು ವಾಣಿಜ್ಯ ಸಂಕೀರ್ಣ ರೋಹನ್ ಸ್ಕ್ವೇರ್ ಮುಂತಾದ ಯೋಜನೆಗಳಲ್ಲಿ ಕೆಲವೇ ಕೆಲವು ಫ್ಲ್ಯಾಟ್‍ಗಳು, ಮಳಿಗೆಗಳು, ಸಂಪೂರ್ಣ ಸುಸಜ್ಜಿತ ನಿವೇಶನಗಳು ಮಾರಾಟಕ್ಕಿವೆ.

ಉಪಸ್ಥಿತಿ: ಶ್ರೀ ರೋಹನ್ ಮೊಂತೆರೋ, ಶ್ರೀ ಎಮ್. ಎನ್. ರಾಜೇಂದ್ರ ಕುಮಾರ್

ಗಂಗೊಳ್ಳಿ ವೀರಭದ್ರ ಖಾರ್ವಿ ನಿಧನ


ಗಂಗೊಳ್ಳಿ: ಹಿರಿಯರು ಹಾಗೂ ನಮ್ಮ ಸಮಾಜದ ಗಣ್ಯ ವ್ಯಕ್ತಿಯು ಆದ ಗಂಗೊಳ್ಳಿ ವೀರಭದ್ರ ಖಾರ್ವಿಯವರು ದಿನಾಂಕ 10-01-2023 ರ
ಮಂಗಳವಾರದಂದು ಬೆಂಗಳೂರಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಜನಾನುರಾಗಿಯಾಗಿದ್ದ ಇವರು 6 ಪುತ್ರರು, 2 ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Bikarnakatte – The sixth day of the novena YOUTH EXHORTED TO ‘PURSUE LASTING JOY RATHER THAN FLEETING PLEASURES’/ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಯುವಜನರ – ಸಂತೃಪ್ತಿಯ ಜೀವನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

YOUTH EXHORTED TO ‘PURSUE LASTING JOY RATHER THAN FLEETING PLEASURES’

10 Tuesday:Nine masses were held throughout the day on the sixth day of the novena at the Infant Jesus Shrine in Bikarnakatte, with a particular emphasis on praying for the youth. “Be happy while you are young, and let your heart give you joy in the days of your youth” was the theme of the day for reflection.

Happiness is a journey that we look forward to, not a destination. Happiness exists right now, not in the future. Joy and happiness come from within. Nobody or nothing can always make us happy. It’s a system inside of us that keeps us content. We must all beg for and be at peace with the gift of joy that the Holy Spirit bestows upon us’, was the crux of the reflection of the day. The faithful were present in good numbers for Eucharistic adoration at midday. All faithful were provided with a midday meal.

Jan 5-13, there will be 9 Masses from 6 a.m. to 7:30 p.m. in Konkani, English Malayalam, and Kannada. The annual feast will be celebrated on 14 & 15 January.

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಯುವಜನರ – ಸಂತೃಪ್ತಿಯ ಜೀವನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

10, ಮಂಗಳವಾರ:ಯುವಜನರ ಸಂತೃಪ್ತಿಯ ಜೀವನಕ್ಕಾಗಿಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನವೇನಾ ಪೂಜಾರ್ಪಣೆಯ ಆರನೇ ದಿನದಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದಿನವಿಡೀ ಭಕ್ತಾದಿಗಳು, ಯುವಜನರು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಗಳಲ್ಲಿ ಹಾಗೂ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗಿಯಾದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು.
ಜನವರಿ 5 ರಿಂದ 13ರ ತನಕ ಮುಂಜಾನೆ 6.00 ಘಂಟೆಯಿಂದ ಮೊದಲುಗೊಂಡು ಸಂಜೆ 7.15 ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು. ಜನವರಿ 14 ಹಾಗೂ 15 ರಂದು ಮಹೋತ್ಸವ ನಡೆಯಲಿರುವುದು.

ಕೊಡಗು ಜಿಲ್ಲಾ ಬಂಟರ ಅಧ್ಯಕ್ಷರಾಗಿ ವಕೀಲ ರತ್ನಾಕರ್ ಶೆಟ್ಟಿ ಅವಿರೋಧ ಆಯ್ಕೆ 

ಕೊಡಗು ಜಿಲ್ಲಾ ಬಂಟರ ಅಧ್ಯಕ್ಷರಾಗಿ ವಕೀಲ ರತ್ನಾಕರ್ ಶೆಟ್ಟಿ ಅವಿರೋಧ ಆಯ್ಕೆ  ಭಾನುವಾರ ವಿರಾಜಪೇಟೆ ಸಮೀಪದ ಮಗ್ಗುಲದ ಅಗ್ನೋನಿಮಾ ರೆಸಾರ್ಟ್ ನಲ್ಲಿನ ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ವಿರಾಜಪೇಟೆಯ ಹಿರಿಯ  ವಕೀಲರು, ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ ಆರ್ ರತ್ನಾಕರ ಶೆಟ್ಟಿ ಅವರನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ, ಹಾಗೂ ನಾರಾಯಣ್ ರೈ ಯವರನ್ನು ಆಯ್ಕೆ ಮಾಡಲಾಗಿದೆ . ಪ್ರಧಾನ ಕಾರ್ಯದರ್ಶಿಗಳಾಗಿ ವಿರಾಜಪೇಟೆಯ ಶಬರೀಶ್ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಗಿದೆ. ಸಭೆಯಲ್ಲಿ ನೂತನ ಆಡಳಿತ ಮಂಡಳಿ ಹಾಗೂ 5 ತಾಲೂಕುಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.

Special prayers for those working abroad offered at Infant Jesus/ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮಿಕ ವರ್ಗದವರಿಗಾಗಿವಿಶೇಷ ಪ್ರಾರ್ಥನೆ

Special prayers for those working abroad offered at Infant Jesus

09 Monday: The fifth day of novena was held at the holy shrine of Infant Jesus at Bikarnakatte today and special prayers were offered for those working abroad. The day’s theme, “Let love and faithfulness never leave you” (Proverbs 3:3), inspired everyone to consider how our families are built through the sacrifices made by each member, particularly the member who lives far away from the family and works arduously to realize his or her dreams for the family.

Jan 5-13, there will be 9 Masses from 6 a.m. to 7:30 p.m. in Konkani, English Malayalam, and Kannada. The annual feast will be celebrated on 14 & 15 January.

Report: Carmel Kiran Media Pics: StanyBantwal

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮಿಕ ವರ್ಗದವರಿಗಾಗಿವಿಶೇಷ ಪ್ರಾರ್ಥನೆ


09, ಸೋಮವಾರ: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನವೇನಾ ಪೂಜಾರ್ಪಣೆಯ ಐದನೇ ದಿನದಂದು, ಸೋಮವಾರ ಪರವೂರಿನಲಿ ಕೆಲಸ ಮಾಡುತ್ತಾ ತಂತಮ್ಮ ಕುಟುಂಬಗಳನ್ನು ಪೆÇೀಶಿಸಲು ತನ್ನಿಡಿಜೀವನವನ್ನು ಮುಡಿಪಾಗಿಡುವಎಲ್ಲ ಬಾಂಧವರಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಯೇಸು ಬಾಲರಲ್ಲಿ ತಮ್ಮ ಸಮಸ್ಯೆಗಳನ್ನು ಅವಲತ್ತುಕೊಂಡು ಪ್ರಾರ್ಥಿಸಿದರು. ಮಧ್ಯಾಹ್ನ ಪರಮ ಪ್ರಸಾದದ ಆರಾಧನೆ ನೆರವೇರಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು.


ಜನವರಿ 5 ರಿಂದ 13ರ ತನಕ ಮುಂಜಾನೆ 6.00 ಘಂಟೆಯಿಂದ ಮೊದಲುಗೊಂಡು ಸಂಜೆ 7.00ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು. ಜನವರಿ 14 ಹಾಗೂ 15 ರಂದು ಮಹೋತ್ಸವ ನಡೆಯಲಿರುವುದು.

Report: Carmel Kiran Media Pics: StanyBantwal

ಅವರೆಕಾಯಿ ವಹಿವಾಟನ್ನು ಪಟ್ಟಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು- ರೈತ ಸಂಘ

ಶ್ರೀನಿವಾಸಪುರ; ಜ.9: ಅವರೆಕಾಯಿ ವಹಿವಾಟನ್ನು ಪಟ್ಟಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜ.12ರಂದು ಅವರೇಕಾಯಿ ಸಮೇತ ತಾಲೂಕು ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಮಂಡಿ ಮಾಲೀಕರು ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತಿ ವರ್ಷ ಪಟ್ಟಣದಲ್ಲಿ ಅವರೇಕಾಯಿ ವಹಿವಾಟನ್ನು ನಡೆಸುವ ಮುಖಾಂತರ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಶುಲ್ಕಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ಮಂಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಅವರೇಕಾಯಿ ಅವಕದ ಸಮಯದಲ್ಲಿ ಪಟ್ಟಣದಲ್ಲಿ ವಹಿವಾಟು ನಡೆಸುವ ಮುಖಾಂತರ ತಮ್ಮ ಹಿಟ್ಲರ್ ಧೋರಣೆಯನ್ನು ಅಧಿಕಾರಿಗಳ ಮೇಲೆ ಪ್ರದರ್ಶಿಸುತ್ತಿದ್ದಾರೆ. ಪರವಾನಗಿ ಪಡೆಯುವಾಗ ಯಾವುದೇ ವಹಿವಾಟು ಮಾರುಕಟ್ಟೆಯಲ್ಲೇ ನಡೆಸುವ ಒಪ್ಪಂದಕ್ಕೆ ಸಹಿ ಹಾಕಿ ಆ ನಂತರ ಅಧಿಕಾರಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡು ತರಕಾರಿ, ಅವರೆಕಾಯಿ ವಹಿವಾಟನ್ನು ನಗರದಲ್ಲಿ ನಡೆಸುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ಪ್ರತಿದಿನ ನೂರಾರು ಟನ್ ಅವರೆಕಾಯಿ ತುಂಬಿಕೊಂಡು ಬರುವ ಟ್ರಾಕ್ಟರ್, ಟೆಂಪೋ ಮತ್ತಿತರ ವಾಹನಗಳಿಂದ ಅಧಿಕ ಟ್ರಾಫಿಕ್ ಸಂಚಾರ ಹೆಚ್ಚಾಗಿ ತುರ್ತು ಪರಿಸ್ಥಿತಿಯಲ್ಲಿ ಬರುವ ಆಂಬ್ಯುಲೆನ್ಸ್ ಮತ್ತಿತರ ವಾಹನಗಳಿಗೆ ಅವರೆಕಾಯಿ ವ್ಯಾಪಾರಸ್ಥರಿಂದ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಹಾಗೂ ರೈತರು ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳದೆ ಮಂಡಿ ಮಾಲೀಕರು ರೈತರಿಗೆ ವಂಚನೆ ಮಾಡಲು ನಗರದಲ್ಲಿ ವಹಿವಾಟು ನಡೆಸಿ ತೂಕ ಹಾಗೂ ಬೆಲೆಯಲ್ಲೂ ಮೋಸ ಮಾಡಿ ಕಾನೂನು ಬಾಹಿರ 10ರೂಪಾಯಿ ಮೀಟರ್ ಬಡ್ಡಿ ದಂಧೆಯಂತೆ ಕಮೀಷನ್ ಕೊಳ್ಳೆ ಹೊಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಮಾವು ಹಾಗೂ ಟೊಮೇಟೊ ಅವಕ ಮಾರುಕಟ್ಟೆಗೆ ಬರುತ್ತಿದ್ದು, ಮುಂಜಾಗೃತವಾಗಿ ಮಾವು, ಟೊಮೇಟೊ ಬೆಳೆಗಾರರಿಗೆ ಹಾಗೂ ದಲ್ಲಾಳರಿಗೆ ತೊಂದರೆಯಾಗದ ರೀತಿ ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗುಣಮಟ್ಟದ ಊಟ ದೊರೆಯುವಂತೆ ಜಾಗೃತಿ ವಹಿಸುವಂತೆ ಜ.12ರ ಗುರುವಾರದಂದು ಅವರೆಕಾಯಿ ಸಮೇತ ತಾಲ್ಲೂಕು ಆಡಳಿತ ಕಚೇರಿ ಮುತ್ತಿಗೆ ಹಾಕುವ ನಿರ್ಧಾರವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಟೆ ಮಂಜುಳಮ್ಮ, ಶ್ರೀನಿವಾಸ್, ವೆಂಕಟ್, ಶೇಷಾದ್ರಿ, ಸಹದೇವಣ್ಣ, ಷೇಕ್ ಷಫೀಉಲ್ಲಾ, ವೆಂಕಟೇಶ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಶ್ರೀಕಾಂತ್ ಮುಂತಾದವರು ಇದ್ದರು.

ಉದ್ಯಮಿ ಕೃಷ್ಣ ಖಾರ್ವಿ ನಿಧನ


ಕುಂದಾಪುರದ ಖ್ಯಾತ ಕೃಷ್ಣ ಕೋಲ್ಡ್ ಡ್ರಿಂಕ್ಸ್ ಮಾಲಕ, ಮತ್ಸ್ಯೋದ್ಯಮಿ ಕೃಷ್ಣ ಖಾರ್ವಿ (73) ಜ. 10 ರಂದು ನಿಧನರಾದರು.
ಕುಂದಾಪುರದ ಇಂದಿರಾ ಮಹಲ್ ಕಟ್ಟಡದಲ್ಲಿ ಹಲವು ದಶಕಗಳಿಂದ ಕೂಲ್ ಡ್ರಿಂಕ್ಸ್ ವ್ಯವಹಾರ ನಡೆಸುತ್ತಿದ್ದ ಇವರು ಮೀನುಗಾರಿಕಾ ಬೋಟ್ ಮಾಲಕರಾಗಿಯೂ ಮತ್ಸ್ಯೋದ್ಯಮಿ ನಡೆಸುತ್ತಿದ್ದರು. ತಮ್ಮ ಶ್ರಮ, ಲವಲವಿಕೆ, ಸಾತ್ವಿಕ ಗುಣ, ಸಮಾಜ ಸೇವೆಯಿಂದ ಜನ ಮನ್ನಣೆ ಪಡೆದಿದ್ದರು.
ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.