ವಿದ್ಯಾರ್ಥಿಗಳು ಕೇವಲ ಜೀವನದ ಗುರಿಯನ್ನು ಮುಟ್ಟವ ಕನಸು ಕಂಡರೆ ಸಾಲದು ನಿಮ್ಮ ಗುರಿ ಛಲದಿಂದ ಸಾಧಿಸಬೇಕು-ಪತ್ತಿ ಸೀತರಾಮಯ್ಯ

ರಾಯಲ್ಪಾಡು 1 : ವಿದ್ಯಾರ್ಥಿಗಳು ಕೇವಲ ಜೀವನದ ಗುರಿಯನ್ನು ಮುಟ್ಟಲು ಕೇವಲ ಕನಸನ್ನು ಕಾಣದೇ ಜೀವನದ ಗುರಿಯನ್ನು ಸಾಧಿಸುವ ಛಲವನ್ನು ಸದಾ ನಿರಂತರವಾಗಿ ಮನದಮಟ್ಟು ಮಾಡಿಕೊಳ್ಳುತ್ತಾ, ಗುರು ಹಿರಿಯರ ಮಾರ್ಗದರ್ಶನ ಪಡೆದು ಜೀವನದ ಗುರಿಯನ್ನು ಮುಟ್ಟುವಂತೆ ಬೆಂಗಳೂರಿನ ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಪತ್ತಿ ಸೀತರಾಮಯ್ಯ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ಕೋಲಾರ-ಬೆಂಗಳೂರು ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬಕ್ಸ್ , ಲೇಖನಿ ಸಾಮಗ್ರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ನ ಕೋಲಾರ ವಿಭಾಗದ ಅಧ್ಯಕ್ಷ ಬಿ.ಎಸ್.ಗೋವಿಂದರಾಜು ಮಾತನಾಡಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉನ್ನತ ಅಧಿಕಾರಿಗಳಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇದ್ದು, ಶಿಕ್ಷಕರು ಭೋದಿಸುವ ಪಾಠಪ್ರವಚನಗಳನ್ನು ಆಲಿಸಿ , ಶ್ರದ್ಧಾ ಭಕ್ತಿಯಿಂದ ಓದುವಂತೆ ಸಲಹೆ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್ ಮಾತನಾಡಿ ಸರ್ಕಾರದಿಂದ ನೀಡುವಂತಹ ಹಾಗೂ ದಾನಿಗಳು ನೀಡುವಂತಹ ಕಲಿಕಾ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗುವಂತೆ ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕ ಪಿ.ಮಾರಣ್ಣ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಣವಂತರು ಬಡಮಕ್ಕಳನ್ನು ಶೈಕ್ಷಣಿಕ ಪ್ರಗತಿಯನ್ನು ಹೊಂದಲು ತಮ್ಮಿಂದಾಗುವ ಆರ್ಥಿಕ ಸಹಾಯ ಹಾಗು ಶಿಕ್ಷಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಡುಗೆಯನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ಆಶಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ಅಲ್ಲದೆ 8, 9, 10 ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪತ್ತಿ ಸೀತರಾಮಯ್ಯರವರು ನಗದು ಬಹುಮಾನ ವಿತರಣೆ ಮಾಡಿದರು.
ಉಪಾಧ್ಯಕ್ಷ ಎಂ.ಯುವರಾಜು, ಟ್ರಸ್ಟ್‍ನ ಸದಸ್ಯ ಬಾಲರಾಜು, ಸಿಆರ್‍ಪಿ ವರದರೆಡ್ಡಿ ಮಾತನಾಡಿದರು. ಟ್ರಸ್ಟ್‍ನ ಪಿಆರ್‍ಒ ಜಯಮಾಲ, ಕಾರ್ಯದರ್ಶಿ ಡಿ.ಕೆ.ನಾಗರಾಜ್, ಖಜಾಂಚಿ ಎಂ.ಆರ್.ಶ್ರೀನಿವಾಸಮೂರ್ತಿ, ಸಹ ಖಜಾಂಚಿ ಬಿ.ಎಚ್.ರಮೇಶ್‍ಕುಮಾರ್, ಸದಸ್ಯರಾದ ಪಿ.ಆರ್. ಅಮರನಾಥ್, ಎ.ಎನ್.ಚಂದ್ರಶೇಖರ್, ಬಿ.ವಿ.ಶ್ರೀದೇವಿರಾಜ್, ರಾಯಲ್ಪಾಡು ವಾಸವಿ ಸಂಘದ ಸದಸ್ಯರಾದ ಸುಬ್ಬರಾಜಶೆಟ್ಟಿ, ಮಿಟ್ಟಾ ಪ್ರಸಾದ್, ರಾಧಪ್ರಸಾದ್, ಸಿ.ವಿ.ಮಂಜುನಾಥ್, ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್, ಗ್ರಾಮದ ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಸಿ.ಎಸ್.ವೆಂಕಟರಮಣಪ್ಪ, ಶಾಲೆಯ ಮುಖ್ಯ ಪಿ.ಮಾರಣ್ಣ, ಸಿಆರ್‍ಪಿ ವರದರೆಡ್ಡಿ ಇದ್ದರು.

ಮನುಕುಲಕ್ಕೆ ಆರೋಗ್ಯವೇ ಪ್ರಧಾನ, ಪ್ರತಿಯೊಬ್ಬರು ತಮ್ಮ ಆರೋಗ್ಯ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ; ಇಒ ಕೃಷ್ಣಪ್ಪ

ಶ್ರೀನಿವಾಸಪುರ 1 : ಮನುಕುಲಕ್ಕೆ ಆರೋಗ್ಯವೇ ಪ್ರಧಾನವಾಗಿದ್ದು, ಪ್ರತಿಯೊಬ್ಬರು ತಮ್ಮ – ತಮ್ಮ ಆರೋಗ್ಯವನ್ನು ಜಾಗೃತವಾಗಿ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸಾರ್ವಜನಿಕರಿಗೆ ಇಒ ಕೃಷ್ಣಪ್ಪ ಸಲಹೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ, ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಹಾಗು ಕಾರ್ಯಕ್ರಮ ವಿಶ್ವ ಜನ ಸಂಖ್ಯಾದಿನಾಚರಣೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರ, ವಸತಿ, ಉಡುಪು, ಉದ್ಯೋಗ, ಜೀವನ ನಿರ್ವಹಣೆ, ಸೇವೆ, ಶ್ರುಶೂಷ ಇತ್ಯಾದಿ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದು ಇದನ್ನ ತಡೆಗಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯ್ರಂತಣ ಅಧಿಕಾರಿ ಡಾ|| ಪ್ರಸನ್ನಕುಮಾರ್ ಮಾತನಾಡಿ 2030 ಒಳಗೆ ಎಲ್ಲಾ ಆರೋಗ್ಯ, ಎಲ್ಲಡೆ ಆರೋಗ್ಯ ಎಂಬ ಘೋಷಣೆಯಂತೆ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ಕ್ರಮಕೈಗೊಳ್ಳಬೇಕಾಗಿದೆ . 2025ರ ಒಳಗೆ ಕರ್ನಾಟಕ ರಾಜ್ಯವನ್ನು ಕ್ಷಯರೋಗ ಮುಕ್ತಮಾಡುವ ಬಗ್ಗೆ ಸರ್ಕಾರವು ಆದೇಶವನ್ನು ಹೊರಡಿಸಿದ್ದು, ಅಧಿಕಾರಿಗಳು ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಿಡಿಒ ಅಧಿಕಾರಿಗಳು ಕರೋನ ಟಾಸ್ಕ್‍ಪೋರ್ಸ್ ಅವರ ಜೊತೆ ಸಹಕಾರ ಪಡೆದು ಕ್ಷಯರೋಗಿಗಳನ್ನು ಪತ್ತೆ ಮಾಡಿ ಎಷ್ಟು ಜನಕ್ಕೆ ರೋಗವಿದೆ. ರೋಗವಿರುವವರು ಎಷ್ಟು ಜನ ಮಾತ್ರೆಗಳನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದು ರೋಗ ಲಕ್ಷಣ ಇರುವವರಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದರು.
ತಾಲೂಕಿನ ಯಾವ ಗ್ರಾಮಪಂಚಾಯಿತಿ ಕ್ಷಯರೋಗದ ಬಗ್ಗೆ ಹೆಚ್ಚು ಕಾರ್ಯನಿರ್ವಹಿಸತ್ತದೋ ಆ ಗ್ರಾಮಪಂಚಾಯಿತಿಗೆ ಮಹಾತ್ಮ ಗಾಂದಿಜೀಯವರ ಬಾವಚಿತ್ರ ಇರುವ ಪ್ರಥಮ ಬಹುಮಾನವಾಗಿ ಬಂಗಾರ ನಾಣ್ಯ, ಎರಡನೇ ಬಹುಮಾನವಾಗಿ ಬೆಳ್ಳಿ ನಾಣ್ಯ, ಮೂರನೇ ಬಹುಮಾನವಾಗಿ ಕಂಚು ನಾಣ್ಯವನ್ನು ನೀಡಲಾಗುವುದು ಎಂದರು. ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಕ್ಷಯಮುಕ್ತವನ್ನಾಗಿ ಮಾಡಬೇಕು ಎಂದರು.
ಜನರನ್ನು ಜಾಗೃತಗೊಳಿಸಲು ಮತ್ತು ಜನಸಂಖ್ಯೆ ನಿಯಂತ್ರಣದ ಅಗತ್ಯೆಯ ಅರಿವು ಮೂಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ತಗೆದುಕೊಳ್ಳುತ್ತಿದೆ ಜನಸಂಖ್ಯೆ ನಿಯಂತ್ರಣದಲ್ಲಿ ಗಂಡ, ಹೆಂಡತಿ ಪಾತ್ರ ಮುಖ್ಯ ಸಹಕಾರ ಬೇಕಿದೆ ಎಂದರು.
ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳ ಪಿಡಿಒಗಳು ಹಾಜರಿದ್ದರು. ಟಿಎಚ್‍ಒ ಡಾ|| ಷರೀಫ್, ಬ್ಲಾಕ್ ರೋಗ ನಿಯಂತ್ರಣ ಅಧಿಕಾರಿ ಆಂಜಲಮ್ಮ, ಮೇಲ್ವಿಚಾರಕ ಶಿವರಾಜ್, ಆರೋಗಯ ನಿರೀಕ್ಷ ಗಿರೀಶ್‍ಪ್ರಸಾದ್, ಕಾರ್ಯಕ್ರಮದ ವ್ಯವಸ್ಥಾಪಕ ಟಿ.ಹರೀಶ್‍ಕುಮಾರ್, ತಾ.ಪಂ.ಗಣಕಯಂತ್ರ ಅಪರೇಟರ್ ಕೆ.ಎನ್.ಶ್ರೀನಾಥ್ ಇದ್ದರು.

ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಚುನಾವಣೆಯ ಪ್ರಕಟಣೆ

ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಕುಂದಾಪುರ ತಾಲೂಕು ಇದರ ಚುನಾವಣಾ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ಸಂಘದ ಆಡಳಿತ ಕಛೇರಿಯ ಆವರಣದಲ್ಲಿ ದಿನಾಂಕ 29-07-2023ರಂದು ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಚುನಾವಣೆ ಜರುಗಲಿದ್ದು, ಸ್ಪರ್ಧಿಸಲಿಚ್ಚಿಸುವ ಸಂಘದ ಅರ್ಹ ಸದಸ್ಯರು ತಮ್ಮ ನಾಮಪತ್ರವನ್ನು ಸಂಘದ ಕಛೇರಿಯಲ್ಲಿ ಪಡೆದು ದಿನಾಂಕ 15-07-2023 ರಿಂದ ದಿನಾಂಕ 21-07-2023ರ ವರೆಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:00 ಗಂಟೆಯೊಳಗಾಗಿ ಸಂಘದ ಆಡಳಿತ ಕಛೇರಿಯಲ್ಲಿ ಚುನಾವಣಾ ನಿರ್ವಾಚನಾಧಿಕಾರಿಯವರಿಗೆ ಅಥವಾ ಅವರಿಂದ ಅಧಿಕಾರ ಪಡೆದವರಿಗೆ ಸಲ್ಲಿಸತಕ್ಕದ್ದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೇಳಾಪಟ್ಟಿಯನ್ನು ಸಂಘದ ಸೂಚನಾಫಲಕದಲ್ಲಿ ಪ್ರಕಟಿಸಲಾಗಿದೆ.

                                             ಕಂದಾವರ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.),
                                             ಕಂದಾವರ


                                                   ಚುನಾವಣಾ ನಿರ್ವಾಚನಾಧಿಕಾರಿ

ಸ್ಥಳ : ಮೂಡ್ಲಕಟ್ಟೆ
ದಿನಾಂಕ : 12-07-2023

ಕುಂದಾಪುರ : ಬಿಜೆಪಿಯ ರಾಜನೀತಿ ಹಾಗೂ ರಾಹುಲ್ ಗಾಂಧಿಯವರ ತೇಜೊವಧೆಯ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ

ಕುಂದಾಪುರ. ಜು.12: ರಾಹುಲ್ ಗಾಂಧಿಯವರು ವಿವಿಧ ವೇದಿಕೆಯಲ್ಲಿ ಮೋದಿ  ಹಾಗೂ  ಅದಾನಿ  ನಡುವಿನ ಸಂಬಂಧವನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ, ಈ ನಿರ್ಭೀತಿ ನಡೆಯನ್ನು ಸಹಿಸಿಕೊಳ್ಳದೆ  ಮೋದಿ  ಪದನಾಮ ಬಳಕೆಯನ್ನೇ  ನೆಪವಾಗಿರಿಸಿಕೊಂಡು  ರಾಹುಲ್  ಗಾಂಧಿಯವರನ್ನು  ಲೋಕಸಭಾ ಸದಸ್ಯತ್ವದಿಂದ  ಅನರ್ಹತೆಗೊಳಿಸಿದ  ಕೇಂದ್ರ ಸರಕಾರ ಹಾಗೂ ಬಿಜೆಪಿಯ  ಸೇಡಿನ ಹುನ್ನಾರವನ್ನು ಪ್ರತಿಭಟಿಸಿ ಕುಂದಾಪುರ ಬ್ಲಾಕ್  ಕಾಂಗ್ರೆಸ್  ಸಮಿತಿಯಿಂದ ಇಂದು ದಿನಾಂಕ  12 -07 -2023 ಬುಧವಾರ  ಬೆಳಿಗ್ಗೆ 10  ರಿಂದ ಮೌನ ಧರಣಿ  ಶಾಸ್ತ್ರಿ ವೃತ್ತ ಬಳಿ ಆರಂಭಿಸಿದೆ.

ಮಾಜಿ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ ( ಎಂ. ಎಲ್. ಎ. ಅಭ್ಯರ್ಥಿ) ಹರಿಪ್ರಸಾದ್ ಶೆಟ್ಟಿ ( ಬ್ಲಾಕ್ ಅಧ್ಯಕ್ಷರು) ಶಿವರಾಮ ಶೆಟ್ಟಿ ( ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ) ಬಿ. ಹೆರಿಯಣ್ಣ, ಕೇದೂರು ಸದಾನಂದ ಶೆಟ್ಟಿ, ಅಶೋಕ್ ಪೂಜಾರಿ ( ಬಿಲ್ಲವರ ಸಂಘದ ಅಧ್ಯಕ್ಷರು) , ದೇವಾನಂದ ಶೆಟ್ಟಿ, ವಿಕಾಸ್ ಹೆಗ್ಡೆ ( ಜಿಲ್ಲಾ ವಕ್ತಾರರು), ಇಚ್ಚಿತಾರ್ಥ ಶೆಟ್ಟಿ ( ಯುವ ಕಾಂಗ್ರೆಸ್ ಅಧ್ಯಕ್ಷ) ವಿನೋದ್ ಕ್ರಾಸ್ತಾ ( ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ), ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಚಂದ್ರ ಶೇಖರ್ ಖಾರ್ವಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಅಬ್ಬು, ಎನ್ ಎಸ್  ಯು ಐ ನಾ ಸುಜನ್ ಶೆಟ್ಟಿ, ಗಣೇಶ್ ಶೇರೆಗಾರ್, ಜ್ಯೋತಿ ಪುತ್ರನ್, ರೇವತಿ ಶೆಟ್ಟಿ, ಚಂದ್ರ ಶೇಖರ್ ಶೆಟ್ಟಿ, ಗಂಗಾಧರ್ ಶೆಟ್ಟಿ, ಜಾನಕಿ ಬಿಲ್ಲವ, ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ರಮೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಮೇಬಲ್ ಡಿಸೋಜ, ಕೇಶವ್ ಭಟ್, ಅಶೋಕ್ ಸುವರ್ಣ, ದಿವಾಕರ್ ಶೆಟ್ಟಿ ಕೋಣಿ ಮುಂತಾದ ಪ್ರಮುಖ ನಾಯಕರು ಈ ಧರಣಿಯಲ್ಲಿ ಪಾಲ್ಗೊಂಡರು.

 ಈ ಧರಣಿ ಸಂಜೆ 5 ಗಂಟೆ ತನಕ ನಡೆಯಲಿದೆಯೆಂದು ಕುಂದಾಪುರ ಬ್ಲಾಕ್  ಕಾಂಗ್ರೆಸ್  ಸಮಿತಿಯಿ ತಿಳಿಸಿದೆ.

ರೋಜರಿ ಕ್ರೆಡಿಟ್ ಕೋ ಆಪರೇಟಿವ್  ಸೊ. ಕುಂದಾಪುರ ಇವರಿಂದ ಸಂತ ಜೋಸೆಫರ ಪ್ರೌಢಶಾಲೆ ಉಚಿತ ಸಮವಸ್ತ್ರ ವಿತರಣೆ

ಕುಂದಾಪುರ, ಜು. : ಸಂತ ಜೋಸೆಫರ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಜುಲಾಯ್ ೧೧ ರಂದು ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇವರು ಉಚಿತ ಸಮವಸ್ತ್ರ ಕೊಡುಗೆಯಾಗಿ ನೀಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್  ಸೊಸೈಟಿ ಲಿ. ಇದರ ಅಧ್ಯಕ್ಷರಾಗಿರುವ ಶ್ರೀ ಜಾನ್ಸನ್ ಡಿ ಅಲ್ಮೇಡಾ ಇವರು ಸಮವಸ್ತ್ರವನ್ನು ವಿತರಿಸಿ ಸಮವಸ್ತ್ರದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ರೋಜರಿ ಸೊಸೈಟಿಯ ನಿರ್ದೇಶಕಿ ಶಾಂತಿ ಆರ್ ಕರ್ವಾಲ್ಲೊ, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ ಅಲ್ಮೇಡಾ, ಸಿಬ್ಬಂದಿಯಾದ ಜೀವನ್ ರಾಜ್ ಡಿಸೋಜ ಇವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಶುಭ ಹಾರೈಸಿದರು. ಶಿಕ್ಷಕರಾದ ಮೈಕಲ್ ಪುಟಾರ್ಡೊ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆ :ರಕ್ಷಕ-ಶಿಕ್ಷಕ ಸಭೆ

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜೂ.10 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಇವರು ವಹಿಸಿ ಪ್ರತಿ ಮಗುವಿನ ಸಮಗ್ರ ಬೆಳವಣಿಗೆಗೆ ರಕ್ಷಕ -ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೋ, ರಾಜು ಪೂಜಾರಿ ಇವರು ಮಕ್ಕಳು ಶಿಸ್ತು ಹಾಗೂ ಸಂಸ್ಕಾರವನ್ನು ಮನೆಯಲ್ಲಿಯೇ ಕಲಿಯಬೇಕು. ಪೋಷಕರು ಮಕ್ಕಳೆದುರು ಎಂದಿಗೂ ಸುಳ್ಳನ್ನು ಹೇಳಬಾರದು. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಆಗುಗಳನ್ನು ಹೋಗುಗಳನ್ನು ವಿಚಾರಿಸುತ್ತಿರಬೇಕು. ಎಲ್ಲಾ ಮಕ್ಕಳಲ್ಲಿ ಸಾಮರ್ಥ್ಯ ಇದೆ ಪೋಷಕರು ಅವರಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸಬೇಕು. ಮನೆಯ ಕಷ್ಟದ ಪರಿಸ್ಥಿತಿಯನ್ನು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಕ್ಕಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಬೇಕು. ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ ಎಂದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ಶಾಲಾ ವರದಿ ವಾಚಿಸಿದರು.ಶಿಕ್ಷಕರಾದ ಸರ್ ಮೈಕಲ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸರಸ್ವತಿ ಇವರು ವಂದಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ನಿರೂಪಿಸಿದರು. ಶಿಕ್ಷಕರ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಶ್ರೀನಿವಾಸಪುರ ತಾಲ್ಲೂಕು ತಾಡಿಗೋಳ್ ಕ್ರಾಸ್‍ ಕಾರು ಬೈಕ್‍ ಡಿಕ್ಕಿ- ಬೈಕ್ ಪ್ರಯಾಣಿಕರಿಬ್ಬರು ಸ್ಥಳದಲ್ಲಿಯೇ ಸಾವು

ಶ್ರೀನಿವಾಸಪುರ: ತಾಲ್ಲೂಕಿನ ತಾಡಿಗೋಳ್ ಕ್ರಾಸ್‍ನಲ್ಲಿ ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ.
ತಾಡಿಗೋಳ್ ಗ್ರಾಮದ ಶಂಕರಪ್ಪ (40), ಮ್ಯಾಕಲಗಡ್ಡ ಗ್ರಾಮದ ಮುನಿಸ್ವಾಮಿ (45) ಮೃತರು.
ಬೆಂಗಳೂರು-ಕಡಪ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಆಂಧ್ರಪ್ರದೇಶಕ್ಕೆ ಸೇರಿದ ಕಾರು, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರು ರಸ್ತೆಯಿಂದ ದೂರ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು, ರಸ್ತೆ ಪಕ್ಕದ ಟೊಮೆಟೊ ತೋಟದಲ್ಲಿ ನಿಂತಿದೆ. ಅಪಘಾತದ ಬಳಿಕ ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಗೌನಿಪಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶ್ರೀನಿವಾಸಪುರ: ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ

ಶ್ರೀನಿವಾಸಪುರ: ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರತಿಭಟನ ನಿರತ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ನಿಗದಿಪಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಹಗಲಿರಳು ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಕರ್ಯ ಕೊಡಬೇಕು. ಗ್ರಾಚ್ಯುಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಬೇಕು. ಮೂಲವೇತನ ಮತ್ತಿತರ ಸೌಲಭ್ಯ ನೀಡುವ ಕುರಿತು ಪರಿಶೀಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಿತಿ ರಚಿಸಬೇಕು. ಏಕರೂಪ ಸೇವಾ ನಿಯಮ ರೂಪಿಸಬೇಕು ಎಂದು ಹೇಳಿದರು.
ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಆರ್.ಆಂಜಲಮ್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಉತ್ತಮ ಗುಣಮಟ್ಟದ ಮೊಬೈಲ್ ಕೊಡಬೇಕು. ಪ್ರದೇಶಿಕ ಭಾಷೆಯಲ್ಲಿ ಪ್ರೋಗ್ರಾಂ ಅಳವಡಿಸಬೇಕು. ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಅದೇಶ ಹಿಂಪಡೆಯಬೇಕು. ಆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡಿಪಿಒಗೆ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ನೀಡಲಾಯಿತು.
ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಜಿ.ಈಶ್ವರಮ್ಮ, ಕಾರ್ಯದರ್ಶಿ ಕೆ.ಎಸ್.ಮಮತ, ಖಜಾಂಚಿ ಕೆ.ಪಿ.ಪುಷ್ಪ ಇದ್ದರು.

Inauguration of “Graha Jyothi”  at Infant Mary Church Bajjodi / ಬಜ್ಜೋಡಿ ಇನ್‌ಫೆಂಟ್ ಮೇರಿ ಚರ್ಚ್‌ನಲ್ಲಿ “ಗ್ರಹ ಜ್ಯೋತಿ” ” ಆನ್‌ಲೈನ್ ನೋಂದಣಿ ಕಾರ್ಯಕ್ರಮ ಉದ್ಘಾಟನೆ

On Sunday, July 9th, the “ Graha Jyothi” online registration program was organized at Bajjodi Church Hall, Mangalore.

The program began with a prayer song led by ‘Ayog’  members. The program was inaugurated by Rev. Fr. Dominic Vas, the Parish priest of Bajjodi parish accompanied by Mr. Arun John D’souza, the proprietor of  “Mangalore Digital Seva Kendra”; Mr. Prakash Saldanha, PPC Vice President; Mrs. Elizabeth Pereira, PPC secretary and Mr. Ronald Goveas, the Ayog  Sanchalak.

Mr. Arun John D’souza in his speech said that the present congress government has introduced many schemes for the poor and middle class. We are ready to offer our services for online registration of the schemes. Hence, you are welcome to avail these facilities.

Fr. Dominic Vas opined that many people and especially, the  Christians are very slow in availing the government schemes. Hope in future we will avail these benefits.

Throughout the day many people came for the online registration of  “Graha Jyothi”. The inaugural program was concluded with a vote of thanks by Mrs. Irene Pinto.

ಬಜ್ಜೋಡಿ ಇನ್‌ಫೆಂಟ್ ಮೇರಿ ಚರ್ಚ್‌ನಲ್ಲಿ “ಗ್ರಹ ಜ್ಯೋತಿ” ಉದ್ಘಾಟನೆ

ಜುಲೈ 9 ರ ಭಾನುವಾರದಂದು ಮಂಗಳೂರಿನ ಬಜ್ಜೋಡಿ ಚರ್ಚ್ ಹಾಲ್‌ನಲ್ಲಿ “ಗ್ರಹ ಜ್ಯೋತಿ” ಆನ್‌ಲೈನ್ ನೋಂದಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ಆಯೋಗ’ ಸದಸ್ಯರ ನೇತೃತ್ವದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮವನ್ನು ರೆ.ಫಾ. “ಮಂಗಳೂರು ಡಿಜಿಟಲ್ ಸೇವಾ ಕೇಂದ್ರ”ದ ಮಾಲಕರಾದ ಶ್ರೀ. ಅರುಣ್ ಜಾನ್ ಡಿಸೋಜ ಅವರೊಂದಿಗೆ ಬಜ್ಜೋಡಿ ಪ್ಯಾರಿಷ್‌ನ ಧರ್ಮಗುರು ಡಾಮಿನಿಕ್ ವಾಸ್; ಶ್ರೀ ಪ್ರಕಾಶ್ ಸಲ್ಡಾನ್ಹಾ, PPC ಉಪಾಧ್ಯಕ್ಷ; PPC ಕಾರ್ಯದರ್ಶಿ ಶ್ರೀಮತಿ ಎಲಿಜಬೆತ್ ಪಿರೇರಾ ಮತ್ತು ಆಯೋಗ್ ಸಂಚಾಲಕ್ ಶ್ರೀ ರೊನಾಲ್ಡ್ ಗೋವಿಸ್ ಉಪಸ್ಥಿತರಿದ್ದರು

ಶ್ರೀ ಅರುಣ್ ಜಾನ್ ಡಿಸೋಜ ತಮ್ಮ ಭಾಷಣದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಆನ್‌ಲೈನ್ ನೋಂದಣಿಗಾಗಿ ನಮ್ಮ ಸೇವೆಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ಆದ್ದರಿಂದ, ಈ ಸೌಲಭ್ಯಗಳನ್ನು ಪಡೆಯಲು ನಿಮಗೆ ಸ್ವಾಗತ.

’ಅನೇಕ ಜನರು ಮತ್ತು ವಿಶೇಷವಾಗಿ ಕ್ರಿಶ್ಚಿಯನ್ನರು ಸರ್ಕಾರದ ಯೋಜನೆಗಳನ್ನು ಪಡೆಯುವಲ್ಲಿ ಬಹಳ ನಿಧಾನವಾಗಿದ್ದಾರೆ”ಎಂದು ಫಾ.ಡೊಮಿನಿಕ್ ವಾಸ್ ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದಲ್ಲಿ ನಾವು ಈ ಪ್ರಯೋಜನಗಳನ್ನು ಪಡೆಯುತ್ತೇವೆ ಎಂದು ಭಾವಿಸುತ್ತೇವೆ.

ದಿನವಿಡೀ ಅನೇಕ ಜನರು “ಗ್ರಹ ಜ್ಯೋತಿ” ಯ ಆನ್‌ಲೈನ್ ನೋಂದಣಿಗಾಗಿ ಬಂದರು. ಶ್ರೀಮತಿ ಐರಿನ್ ಪಿಂಟೋ ರವರ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.