

ಶ್ರೀನಿವಾಸಪುರ ತಾಲ್ಲೂಕಿನ ಚೊಕ್ಕನಹಳ್ಳಿ ಗೇಟ್‍ನಲ್ಲಿ, ರಾಜಗುಂಡ್ಲಹಳ್ಳಿ ಮಾರ್ಗವಾಗಿ ಹೋಗುವ ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.


ಶ್ರೀನಿವಾಸಪುರ; ಜು.26: ಅರಣ್ಯ ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಅರಣ್ಯ ಭೂಮಿಯನ್ನು ಉಳಿಸುವಂತೆ ರೈತಸಂಘದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಲಾಯಿತು.
ಅರಣ್ಯ ಇಲಾಖೆ ಸಚಿವರಿಗೆ, ವಲಯ ಅರಣ್ಯಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಧಿಕಾರ, ರಾಜಕೀಯ ಬಲವಿದ್ದರೆ ಕೆರೆ, ಕುಂಟೆ ಜೊತೆಗೆ ಅರಣ್ಯ ಭೂಮಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಶ್ರೀನಿವಾಸಪುರ ತಾಲೂಕಿನಾದ್ಯಂತ 3725 ಎಕರೆ ಅರಣ್ಯ ಭೂಮಿ ಪ್ರಭಾವಿ ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಒತ್ತುವರಿ ಮಾಡಿಕೊಂಡಿರುವುದೇ ಸಾಕ್ಷಿಯಾಗಿದೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಕ್ಷಿ ಇದ್ದರೂ ಬಲಾಢ್ಯರ ಮುಂದೆ ಅರಣ್ಯ ಅಧಿಕಾರಿಗಳು ನಿಂತುಕೊಳ್ಳಲು ಬೆವರುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಣ್ಣಪುಟ್ಟ ಅನಕ್ಷರಸ್ಥ ಅಮಾಯಕ ರೈತರು 2 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡರೆ ಆ ಸಮಸ್ಯೆಯನ್ನೇ ದೊಡ್ಡದಾಗಿ ಬಿಂಬಿಸಿ ನೂರಾರು ಪೊಲೀಸರ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಲು ಸಿಂಹದಂತೆ ಮುನ್ನುಗ್ಗುವ ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿಗೆ ಕಂದಾಯ ಸರ್ವೇ ಅಧಿಕಾರಿಗಳು ದಾಖಲೆಗಳನ್ನು ಸೃಷ್ಠಿ ಮಾಡಿ ಒತ್ತುವರಿದಾರರಿಗೆ ಕೋಟಿಕೋಟಿ ಹಣಕ್ಕೆ ಮಾರಾಟ ಮಾಡಿರುವವರ ವಿರುದ್ಧ ಕ್ರಮವಿಲ್ಲವೇ ಎಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಒತ್ತುವರಿದಾರರು ಅರಣ್ಯ ಭೂಮಿಯ ದಾಖಲೆಗಳನ್ನೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಅಡವಿಟ್ಟು ಕೋಟಿಕೋಟಿ ಸಾಲ ಪಡೆದಿದ್ದರೂ ತಾವುಗಳು ಮೌನವೇಕೆ. ಬಲಾಢ್ಯರಿಗೆ ಒಂದು ನ್ಯಾಯ, ಅಮಾಯಕ ಅನ್ನದಾತರಿಗೆ ಒಂದು ನ್ಯಾಯವೇ. ಇದು ನಮ್ಮ ಪ್ರಶ್ನೆ. ಎಲ್ಲಾ ದಾಖಲೆಗಳ ಸಮೇತ ಒತ್ತುವರಿಯಾಗಿರುವ ಅರಣ್ಯ ಭೂಮಿಯ ಬಗ್ಗೆ ಮಾಹಿತಿ ಇದ್ದರೂ ಒತ್ತುವರಿದಾರರಿಗೆ ಹಿರಿಯ ಅಧಿಕಾರಿಗಳು ರಕ್ಷಣೆ ನೀಡಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಒಂದು ವಾರದ ಒಳಗೆ ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜೊತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೇ, ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ದಾಖಲು ಮಾಡಿ, ಅರಣ್ಯ ಭೂಮಿಯನ್ನು ಉಳಿಸಬೇಕಿದ್ದು, ಇಲ್ಲವಾದರೆ ಮರಗಳ ಸಮೇತ ಅರಣ್ಯ ಸಚಿವರ ಮನೆ ಮುಂದೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿಗಳು, ಒತ್ತುವರಿದಾರರ ವಿರುದ್ಧ ಈಗಾಗಲೇ ಅರಣ್ಯ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆದಷ್ಟು ಬೇಗ ಒತ್ತುವರಿಯನ್ನು ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆಲವಾಟಿ ಶಿವ, ಷೇಕ್ ಷಫೀಉಲ್ಲಾ, ಸಹದೇವಣ್ಣ, ಮುನಿರಾಜು, ಫಾರೂಖ್ ಪಾಷ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ವಿಜಯ್‍ಪಾಲ್, ವಿಶ್ವ ಮುಂತಾದವರಿದ್ದರು.



ಬೆಂಗಳೂರು: ಕನಕಪುರ ರಸ್ತೆಯ ಪಕ್ಕದ ನೈಸ್ ರಸ್ತೆಯ ಬಳಿಯ ಪೊದೆಯಲ್ಲಿ ಸೂಟ್ ಕೇಸ್ ಹಾಗೂ ಎರಡು ರಟ್ಟಿನ ಕಾರ್ಟುನ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಬಾಕ್ಸ್ ಮತ್ತು ಸೂಟ್ ಕೇಸ್ ಬಿಚ್ಚಿ ನೋಡಿದಾಗ ₹2000 ಮುಖಬೆಲೆಯ ಜೆರಾಕ್ಸ್ ಮಾಡಿದ ನೋಟುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ₹2000 ಮುಖಬೆಲೆಯ ಒಟ್ಟು ಮೊತ್ತ ₹10 ಕೋಟಿ ಯಾಗಿದ್ದು, ಅಸಲಿ ನೋಟುಗಳ ಜೊತೆ ಸೇರ್ಪಡೆ ಮಾಡಿ ಚಲಾವಣೆ ಮಾಡುವ ಜಾಲದ ಕೈವಾಡ ಇದಾಗಿದೆ ಎಂದು ಅನುಮಾನಿಸಲಾಗಿದೆ. ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯನ್ನು ಆರ್ ಬಿಐ ರದ್ದು ಮಾಡಿದ್ದು, ಹಳೆಯ ನೋಟುಗಳನ್ನು ಬ್ಯಾಂಕ್ ಗೆ ಪಾವತಿಸಲು ಕ್ರಮ ತೆಗೆದುಕೊಂಡಿದ್ದರಿಂದ ರಸ್ತೆ ಬದಿಗೆ ಎಸೆದಿರಬೇಕು ಎಂದು ಅನುಮಾನ ಪಡಲಾಗಿದೆ. ಖೋಟಾ ನೋಟು ಜಾಲ ಸಕ್ರಿಯವಾಗಿದೆಯೆಂದು ಅನುಮಾನ ಕಾಡಿದ್ದು, ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆಯೆಂಬುದನ್ನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.


ಕೋಲಾರ,ಜು.26: ಮಹಿಳೆಯೋರ್ವರು ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 1 ತಾಸಿನಲ್ಲೇ ಆಟೋ ಪತ್ತೆ ಹಚ್ಚಿ, ಬ್ಯಾಗನ್ನು ಮರಳಿ ವಾರಸುದಾರರಿಗೆ ನೀಡುವಲ್ಲಿ ನಗರದ ಗಲ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆ ಉದ್ಯೋಗಿ ಭಾರತಿ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ 23 ರಂದು ತನ್ನ ತಾಯಿಯನ್ನು ನಂಗಲಿ ಗ್ರಾಮದ ಮನೆಯಲ್ಲಿ ಬಿಟ್ಟು ಮರಳಿ ಬಸ್‍ನಲ್ಲಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಕ್ಕಳ ಸಮೇತ ಇಳಿದುಕೊಂಡಿದ್ದಾರೆ. ನಂತರ ಇಲ್ಲಿ ಆಟೋ ಹತ್ತಿದ ಈಕೆ ತಂಗಿಯ ಮನೆಗೆ ಹೋಗಲು ಇಲ್ಲಿನ ಬೈರೇಗೌಡ ನಗರದ ಮೈಲಾರಿ ಹೋಟೆಲ್ ಹತ್ತಿರ ಇಳಿದು ಬ್ಯಾಗ್ ಮರೆತು ಹಾಗೆ ಹೋಗಿದ್ದಾರೆ.
ಬ್ಯಾಗ್ ಬಿಟ್ಟಿದ್ದನ್ನು ಅರಿತ ಅವರು ತಕ್ಷಣ ತಾನು ಬಂದ ದಾರಿ ಮತ್ತು ಹಳೇ ಬಸ್ ನಿಲ್ದಾಣದ ವಿವಿಧ ಕಡೆ ಹುಡುಕಾಡಿದರೂ ಆಟೋ ಪತ್ತೆ ಹಚ್ಚಲಾಗಲಿಲ್ಲ, ಕೊನೆಗೆ 24 ರಂದು ನಗರದ ಗಲ್‍ಪೇಟೆ ಪೊಲೀಸ್ ಠಾಣೆಗೆ ಮಧ್ಯಾಹ್ನ 12-00 ಗಂಟೆಗೆ ಬೇಟಿ ನೀಡಿದ ಮಹಿಳೆ ಘಟನೆಯ ಬಗ್ಗೆ ಮಾಹಿತಿನೀಡಿದ್ದಾರೆ. ಠಾಣಾಧಿಕಾರಿ ಅರುಣ್‍ಗೌಡ ಪಾಟೀಲ್ ಅವರು ತಕ್ಷಣ ಆಟೋ ಪತ್ತೆ ಹಚ್ಚುವಂತೆ ಪೇದೆ ಹೆಚ್.ರಾಜಣ್ಣ ಅವರಿಗೆ ಸೂಚಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೇದೆ ರಾಜಣ್ಣ ಹಳೇ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಸಿ.ಸಿ.ಕ್ಯಾಮೆರಾಗಳನ್ನು ಪರಿಶೀಲಿಸಲು ಹೋದಾಗ ಅವುಗಳು ಕೆಟ್ಟಿರುವುದು ಹಾಗೂ ಅಂಗಡಿಗಳ ಸಿ.ಸಿ. ಕ್ಯಾಮೆರಾ ಪರಿಶೀಲಿಸಲಾಗಿ ಅವು ರಸ್ತೆಯ ಕಡೆ ಪೋಕಸ್ ಮಾಡದೆ ಇರುವ ಕಾರಣ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಮಹಿಳೆಯು ಇಳಿದುಕೊಂಡಿದ್ದ ಸ್ಥಳಕ್ಕೆ ಹೋಗಲಾಗಿ ಮೈಲಾರಿ ಹೋಟೆಲ್‍ನ ಸಿ.ಸಿ.ಕ್ಯಾಮೆರಾ ಪರಿಶೀಲಿಸಲಾಗಿ ಮಹಿಳೆ ಆಟೋ ಇಳಿದು ಹಣ ಕೊಟ್ಟು ಬ್ಯಾಗ್ ಬಿಟ್ಟು ಬರಿಕೈಲಿ ಮಳೆಯ ಕಾರಣ ತರಾತುರಿಯಲ್ಲಿ ಹೋಗುತ್ತಿರುವುದು ಕಂಡು ಬಂದಿದೆ.
ಸದರಿ ಆಟೋ ನೊಂದಣಿ ಸಂಖ್ಯೆ ಕೆ.ಎ-05 ಎಂಬುದನ್ನು ಬಿಟ್ಟರೆ ಉಳಿದ ಸಂಖ್ಯೆಗಳು ಅಸ್ಪಷ್ಟವಾಗಿತ್ತು. ಹಾಗೂ ಬಲಭಾಗದ ಇಂಡಿಕೇಟರ್ ಒಡೆದುಹೋಗಿತ್ತು. ಇದರ ತುಣುಕು (ಪುಟೇಜ್) ಪಡೆದ ಪೇದೆ ಆರ್.ಟಿ.ಓದಲ್ಲಿ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ನಂತರ ಆಟೋ ಚಾಲಕರು ಹಾಗೂ ಸಂಘದ ಮುಖಂಡರನ್ನು ಭೇಟಿ ಮಾಡಿ ಅವರ ಸಂಪರ್ಕ ಜಾಲದಲ್ಲಿ ತಲಾಷೆ ಮಾಡಿದಾಗ ಆಟೋ ಮತ್ತು ಚಾಲಕನ ಸುಳಿವು ಸಿಕ್ಕಿ ನಂತರ ಹಳೇ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಯಿತು.
ಆಟೋವನ್ನು ಪರಿಶೀಲಿಸಲಾಗಿ ಸೀಟಿನ ಹಿಂಭಾಗ ಬ್ಯಾಗ್ ಇದುವುದು ಪತ್ತೆಯಾಯಿತು. ಅದರೊಳಗೆ 5 ಸಾವಿರ ನಗದು, ಬ್ಯಾಂಕಿಗೆ ಸಂಬಂಧಪಟ್ಟ ಎ.ಟಿ.ಎಂ, ಕ್ರೆಡಿಟ್ ಕಾರ್ಡ್‍ಗಳು, ಅಮೂಲ್ಯ ದಾಖಲೆಗಳು ಹಾಗೂ ಬಟ್ಟೆಗಳು ಹಾಗೆ ಇರುವುದು ಕಂಡುಬಂತು. ಮಹಿಳೆ ಮಕ್ಕಳನ್ನು ಸೀಟಿನಲ್ಲಿ ಕುಳ್ಳರಿಸಿಕೊಂಡಿದ್ದು ಆಕೆಯ ಬ್ಯಾಗನ್ನು ಹಿಂಭಾಗದ ಜಾಗದಲ್ಲಿ ಇಟ್ಟು ಮರೆತು ಬಿಟ್ಟು ಹೋಗಿದ್ದು ಇದು ನನ್ನ ಗಮನಕ್ಕೆ ಬಂದಿಲ್ಲವೆಂದು ಚಾಲಕ ತಿಳಿಸಿದ್ದಾನೆ.
ಮಾಹಿತಿ ಬಂದು ಒಂದು ತಾಸಿನಲ್ಲಿ ಆಟೋ ಪತ್ತೆ ಹಚ್ಚಿ ಅಧಿಕಾರಿಗಳ ಸಮ್ಮುಖದಲ್ಲಿ ಅದೇ ಚಾಲಕನಿಂದ ಮಹಿಳೆಗೆ ಬ್ಯಾಗ್ ಹಿಂದಿರುಗಿಸಿದ ಪೇದೆ ರಾಜಣ್ಣ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ 2020-2023 ಸಾಲಿನ ಉಮಾದೇವಿ ಶಂಕರ್ ರಾವ್ ದತ್ತಿ ಪ್ರಶಸ್ತಿಯು ಕುಂದಾಪುರದ ಉಮಾಪ್ರಕಾಶ್ ಶೆಟ್ಟಿ ಅವರ ‘ತೆರೆಯೋ… ಬಾಗಿಲನು’ ಸಣ್ಣ ಕಥೆಗೆ ಲಭಿಸಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಜು.23ರ ಭಾನುವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬಾಲ್ಯದಿಂದಲೂ ಪರಿಸರ ಮತ್ತು ಸಾಹಿತ್ಯ ಪ್ರೇಮಿಯಾಗಿರುವ ಉಮಾ ಪ್ರಕಾಶ್ ಶೆಟ್ಟಿ ಅವರು ತಮ್ಮ ತಂದೆ ದಿವಂಗತ ದಾಸರಬೆಟ್ಟು ವೆಂಕಪ್ಪಶೆಟ್ಟಿ ಅವರ ಜೀವಮಾನದ ಸಾಧನೆ ಕುರಿತ ನೈಜ ಕಥೆ ಆಧರಿಸಿ ‘ತೆರೆಯೋ… ಬಾಗಿಲನು’ ಕಥೆ ಬರೆದಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಎಚ್.ಎಲ್. ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಮತ್ತು ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಇದ್ದರು. ಮೂಲತ ಕುಂದಾಪುರದವರಾದ ಉಮಾ ಪ್ರಕಾಶ್ ಶೆಟ್ಟಿಯವರು, ಕುಂದಾಪುರ ಭಂಡಾರ್ಕಾರ್ಸ ಕಾಲೇಜಿನ ಹಳೆಯ ವಿಧ್ಯಾರ್ಥಿನಿಯೂ ಹೌದು ಹಾಗೂ ಕುಂದಾಪುರ ರೋಟರಿ ಇನ್ನರ್ವೀಲ್ ಸೌತ್, ಸದಸ್ಯೆ ಕೂಡಾ ಆಗಿರುತ್ತಾರೆ, ಅವರ ಪತಿ ಟಿ. ಪ್ರಕಾಶ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುತ್ತಾರೆ.


ಕುಂದಾಪುರ : ಮೂಲತ: ಕುಂದಾಪುರದವರಾದ ಡಾ.ನಮೀತಾ ವಿಯೊನ್ನಾ ಪಾಯಸ್ ಅವರು ಸಂಖ್ಯಾಶಾಸ್ತ್ರ ವಿಭಾಗದಲ್ಲಿ ‘ ಮೊಡಲಿಂಗ್ ಆಫ್ ಕ್ರಾಸ್ ಸೆಕ್ಷನಲ್ , ರೀಪಿಟೇಡ್ ಮೇಸರ್ಸ್ ಮತ್ತು ಟೈಮ್ ಸೀರಿಸ್ ಡಾಟಾ ಸ್ಟ್ರಚರ್ಸ್ ‘ ಸಂಶೋಧನಾ ಪ್ರಬಂಧಕ್ಕೆ ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದೆ.
ಅಮೇರಿಕಾದ ಕನೆಕ್ಟಿಕಟ್ ವಿಶ್ವ ವಿದ್ಯಾಲಯದ ಸಂಖ್ಯಾ ಶಾಸ್ತ್ರ ವಿಭಾಗದ ಸಂಗುತ್ತೇವಾರ್ ರಾಜೇಶೇಖರನ್ ಡಾ.ನಳೀನಿ ರವಿಶಂಕರ ಅವರ ಮಾರ್ಗದರ್ಶನ ಪಡೆದುಕೊಂಡಿರುವ ನಮೀತಾ, ಕುಂದಾಪುರದ ಹಿರಿಯ ಪತ್ರಕರ್ತ, ಉದ್ಯಮಿ ವಿನಯ್ ಎ. ಪಾಯಸ್ ಹಾಗೂ ಜಸಿಂತಾ ವಿ. ಪಾಯಸ್ ಅವರ ಪುತ್ರಿಯಾಗಿದ್ದಾರೆ. ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜ್ ಹಾಗೂ ಪೂನಾದ ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯದ ಪ್ರಾಕ್ತನ ವಿದ್ಯಾರ್ಥಿನಿಯಾಗಿದ್ದಾರೆ.


ಬೆಂಗಳೂರು, ಜು.೧೬:”ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಬೇಕು’ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ. ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರೂ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.


ಮಂಗಳೂರು: “ಕಲರ್ ಸ್ಪ್ಲಾಶ್” ಎಂಬ ವಿಷಯದೊಂದಿಗೆ ಬಹು ನಿರೀಕ್ಷಿತ ಹಳೆಯ ವಿದ್ಯಾರ್ಥಿಗಳ ಸಭೆ -ಅಗ್ನೋಸ್ಪಿಯರ್ ಜುಲೈ 22, 2023, ಶನಿವಾರ ಮಂಗಳೂರಿನ ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ನಡೆಯಿತು. ಈವೆಂಟ್ ಆಗ್ನೇಷಿಯನ್ನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿತ್ತು, ಅವರು ತಮ್ಮ ಅಲ್ಮಾ ಮೇಟರ್ ಅನ್ನು ಮರುಭೇಟಿ ಮಾಡುವಾಗ ಉತ್ಕಟತೆ ಮತ್ತು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಿದರು. ರೋಮಾಂಚಕ ಥೀಮ್ “ಕಲರ್ ಸ್ಪ್ಲಾಶ್” ಉತ್ಕ್ರಷ್ಟತೆ ಉತ್ಸಾಹ ಹಳೆ ನೆನಪುಗಳಿಂದ ತುಂಬಿದ ಸುಂದರ ಸಂಜೆಯಾಗಿ ಮಾರ್ಪಟ್ಟಿತು.
ಹಳೆಯ ವಿದ್ಯಾರ್ಥಿಗಳ ಸಭೆಯು ಹೃದಯಕ್ಕೆ ತಟ್ಟುವ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ದಿನದ ಪ್ರಕ್ರಿಯೆಗಳಿಗೆ ಪ್ರತಿಫಲಿತ ಮತ್ತು ಆಧ್ಯಾತ್ಮಿಕ ಧ್ವನಿಯನ್ನು ಹೊಂದಿಸುತ್ತದೆ. ಪ್ರತೀಕ್ಷಾ ಮತ್ತು ತಂಡದವರು ಮನಮೋಹಕ ನೃತ್ಯ ಪ್ರದರ್ಶನದೊಂದಿಗೆ ಸಭಿಕರನ್ನು ಸ್ವಾಗತಿಸಿದರು. ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜಾ ಅವರು ಹಳೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರನ್ನು ಉದ್ದೇಶಿಸಿ ಮಾತನಾಡಿ, ಅವರ ಉಪಸ್ಥಿತಿಗೆ ಕೃತಜ್ಞತೆ ಸಲ್ಲಿಸಿ, ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರುವುದರ ಮಹತ್ವವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಅಗ್ನೋಸ್ಫಿಯರ್ – ದಿ ಅಲುಮ್ನಿ ಅಸೋಸಿಯೇಷನ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಮತ್ತು ಪ್ರಪಂಚದಾದ್ಯಂತದ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಸುವಾಸಿನಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಆಗ್ನೇಶಿಯನ್ನರ ಮನಮೋಹಕ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು. ಯೋಶಿತಾ ಮತ್ತು ಅವರ ತಂಡವು ತಮ್ಮ ಸಿಂಕ್ರೊನೈಸ್ ಮಾಡಲಾದ ಚಲನೆಗಳೊಂದಿಗೆ ವೇದಿಕೆಯನ್ನು ಆಕರ್ಷಣೆಗೆ ಒಳಪಡಿಸಿದರು, ಭೂಮಿಕಾ ಮತ್ತು ಅವರ ಗುಂಪಿನಿಂದ ಪ್ರದರ್ಶನ ಪ್ರೇಕ್ಷರ ಮೇಲೆ ಪ್ರಭಾವ ಬಿರಿತು. ತ್ರಿಶಾ ಶೆಟ್ಟಿ ತಮ್ಮ ಅಸಾಧಾರಣ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ತಮ್ಮ ಆಕರ್ಷಕ ಏಕವ್ಯಕ್ತಿ ಪ್ರದರ್ಶನದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಪ್ರತಿಭಾವಂತ ಸಹೋದರಿಯರಾದ ಜೆನ್ನಿಫರ್ ಮತ್ತು ಶರಲ್ ಸಿಕ್ವೇರಾ ಅವರು ಜನಪ್ರಿಯ ಪಾಶ್ಚಿಮಾತ್ಯ ಗೀತೆಯ ಸುಮಧುರ ನಿರೂಪಣೆಯನ್ನು ನೀಡಿದರು, ಅವರ ಸಂಗೀತ ಪ್ರತಿಭೆಯ ಬಗ್ಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಕಾಲೇಜು ದಿನಗಳಲ್ಲಿ ಸೆರೆಹಿಡಿಯಲಾದ ಅಚ್ಚುಮೆಚ್ಚಿನ ಫೋಟೋಗಳ ಮೂಲಕ ‘ಕಾಲೇಜು ದಿನಗಳ ಥ್ರೋಬ್ಯಾಕ್’ ವಿಷಯದ ಮೇಲೆ ಆತ್ಮವನ್ನು ಕಲಕುವ ವೀಡಿಯೊವನ್ನು ಪ್ರಸ್ತುತಪಡಿಸಲಾಯಿತು.
ಹಳೆಯ ವಿದ್ಯಾರ್ಥಿಗಳಿಗೆ ಎದ್ದುಕಾಣುವ ಕ್ಷಣಗಳನ್ನು ಸೆರೆಹಿಡಿಯಲು ಅವಕಾಶವನ್ನು ಒದಗಿಸಲು ಸೃಜನಾತ್ಮಕ ಫೋಟೋ ಬೂತ್‌ಗಳನ್ನು ಚಿಂತನಶೀಲವಾಗಿ ಹೊಂದಿಸಲಾಗಿತ್ತು. ಸಭಾಂಗಣದಲ್ಲಿ ರೋಮಾಂಚಕ ಮತ್ತು ವರ್ಣರಂಜಿತ ಅಲಂಕಾರಗಳು ಈ ಚಿತ್ರ-ಪರಿಪೂರ್ಣ ಕ್ಷಣಗಳಿಗೆ ಪರಿಪೂರ್ಣ ಹಿನ್ನೆಲೆಯನ್ನು ಒದಗಿಸಿತ್ತು.
ಸಹಮಿಲನದ ಪಾಲಿಸಬೇಕಾದ ಸಂಪ್ರದಾಯದಂತೆ, ಆಯಾಯ ಬ್ಯಾಚುಗಳ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಲಾಗಿದ್ದು, ಘಟನೆಯ ನೆನಪುಗಳನ್ನು ಸಂರಕ್ಷಿಸಲಾಗಿದ್ದು ಹಳೆಯ ವಿದ್ಯಾರ್ಥಿಗಳ ಸಂಘದ ಏಕತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ.
ಈ ಕಾರ್ಯಕ್ರಮವನ್ನು ಸಂಚಾಲಕ ಶ್ರೀಮತಿ ವೆನಿಟಿಯಾ ರಸ್ಕ್ವಿನ್ಹಾ ನೇತೃತ್ವದ ಆಗ್ನೋಸ್ಫಿಯರ್ ಕೋರ್ ಕಮಿಟಿಯು ನಿಖರವಾಗಿ ಯೋಜಿಸಿತ್ತು. ಇದಕ್ಕೆ ವೈಸ್ ಪ್ರಿನ್ಸಿಪಾಲ್, ಸೀನಿಯರ್ ಜಾನೆಟ್ ಸಿಕ್ವೇರಾ, ಬೋಧಕ ಮತ್ತು ಸಹಾಯಕ ಸಿಬ್ಬಂದಿ ಮತ್ತು ರೋಮಾಂಚಕ ಮತ್ತು ಶಕ್ತಿಯುತ ಹಳೆಯ ವಿದ್ಯಾರ್ಥಿಗಳ ದೊಡ್ಡ ಗುಂಪು ಸಾಕ್ಷಿಯಾಯಿತು. ಪ್ರೀವಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರೆ, ಕಾಲ್ಡ್ರಿಡಾ ಡಿಸೋಜ ವಂದಿಸಿದರು.
ಅಲುಮ್ನಿ ಮೀಟ್ “ಕಲರ್ ಸ್ಪ್ಲಾಶ್” ನಿಸ್ಸಂದೇಹವಾಗಿ ಸ್ಮರಣೀಯ ಮತ್ತು ಆನಂದದಾಯಕ ಘಟನೆಯಾಗಿದೆ. ವಿವಿಧ ಬ್ಯಾಚ್‌ಗಳ ಆಗ್ನೇಷಿಯನ್‌ಗಳು ಹಳೆಯ ಸ್ನೇಹವನ್ನು ಪುನರುಜ್ಜೀವನಗೊಳಿಸಿದರು, ಪ್ರೀತಿಯ ನೆನಪುಗಳನ್ನು ಹಂಚಿಕೊಂಡರು ಮತ್ತು ಕಾಲೇಜಿನೊಂದಿಗೆ ತಮ್ಮ ಸಂಪರ್ಕವನ್ನು ಆಚರಿಸಿದರು. ಯಶಸ್ವಿ ಸಭೆಯು ಸಂಸ್ಥೆ ಮತ್ತು ಅದರ ಹಿಂದಿನ ವಿದ್ಯಾರ್ಥಿಗಳ ನಡುವಿನ ಬಲವಾದ ಬಾಂಧವ್ಯವನ್ನು ಪುನರುಚ್ಚರಿಸಿತು, ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಸ್ಪೂರ್ತಿಯು ಮುಂದಿನ ಪೀಳಿಗೆಗೆ ಅಭಿವೃದ್ಧಿ ಹೊಂದುವುದನ್ನು ಖಾತ್ರಿಪಡಿಸಿತು.






















