ಕುವೈಟ್ ಅಬ್ಬಾಸಿಯಾ (AKFK) ತನ್ನ ಸಂಘದಿಂದ ಆಚರಿಸಲ್ಪಡುವ ಮೊಂತಿ ಹಬ್ಬಕ್ಕೆ ಬೆಳ್ಳಿ ಹಬ್ಬದ ಸಂಭ್ರಮ – ಸಿಯೋನ್ ಆಶ್ರಮದ ಸಹಯಾರ್ಥ ಭವ್ಯ ಕಾರ್ಯಕ್ರಮ

Kuwait Abbasia (AKFK) celebrates its silver jubilee for the Monti festival celebrated by its association – a grand event in support of Zion Ashram

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಎಂಜಿನಿಯರ್ಸ್ ದಿನಾಚರಣೆ

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿ ಎಂಜಿನಿಯರ್ಸ್ ದಿನಾಚರಣೆ ನಡೆಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಇವರು ವಿಶ್ವೇಶ್ವರಯ್ಯ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರಿಗೂ ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ ಮೆಲ್ವಿನ್ ಡಿ ಸೋಜಾ ಅವರು ವಿಶ್ವೇಶ್ವರಯ್ಯ ಅವರ ಜೀವನ ಶೈಲಿಯನ್ನು ನಾವೆಲ್ಲರು ಅಳವಡಿಸಿಕೊಂಡು ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ಮಾನವರಾಗಬೇಕು ಎಂದು ಹೇಳಿದರು. ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಹಾಗೂ ಪ್ರಾಂಶುಪಾಲರಾದ ಡಾ ರಾಮಕೃಷ್ಣ ಹೆಗ್ಡೆ ಅವರು ವಿಶ್ವೇಶ್ವರಯ್ಯ ಅವರು ನಡೆದು ಬಂದ ಹಾದಿ ನಮಗೆಲ್ಲ ಮಾದರಿ, ಅವರಂತೆ ಕ್ರಿಯಾತ್ಮಕವಾಗಿ ಯೋಚಿಸಿ ಸಾಧನೆಗೈಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ  ನಡೆಸಿದ   “ಭಾರತದ ಎಂಜಿನಿಯರಿಂಗ್ ಅದ್ಭುತಗಳು ವಿಷಯದ ಮೇಲೆ ನಡೆದ
ಸ್ಪರ್ದಾ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. “ಕಾರ್ಯಕ್ರಮದ ಮುಖ್ಯ ಆಯೋಜಕರಾದ ಡಾಟಾಸೈನ್ಸ್ ವಿಭಾಗದ ಮುಖ್ಯಸ್ಥ ಶ್ರೀ ಕಾರ್ತಿಕೇಯನ್ ಕಾರ್ಯಕ್ರಮ ನಿರೂಪಿಸಿದರು. ವಿಧ್ಯಾರ್ಥಿನಿ ಶ್ರೇಯ ಉಪಾಧ್ಯಾಯ ಸ್ವಾಗತಿಸಿ, ದರ್ಶನ್ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.

ಸರಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು – ಪಿ.ಆರ್.ಸೂರ್ಯನಾರಾಯಣ ಒತ್ತಾಯ

ಕುಂದಾಪುರ: ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ “ಹಿಂದಿ ದಿವಸ್”

ಪಡುಕೋಣೆ ಹಿರಿಯ ನಾಗರಿಕರ ದಿನಾಚರಣೆ- ಧರ್ಮಗುರುಗಳು ಹಿರಿಯ ಸಂಗೀತ ಸಂಯೋಜಕರಾದ ಫಾ।ಪ್ರಾನ್ಸಿಸ್ ಕರ್ನೆಲಿಯೊರವರಿಗೆ ಗೌರವ

ಕುಂದಾಪುರದವರಾದ ಮಾಲ್ಕಂ ಬ್ರಗಾಂಜಾ (51) ಬಹ್ರೇನ್ ನಲ್ಲಿ ನಿಧನ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ 2024-25ನೇ ವಾರ್ಷಿಕ ಮಹಾ ಸಭೆ

ದೇರಳಕಟ್ಟೆ ಕ್ಯಾಂಪಸ್‌ನಲ್ಲಿ ಎಫ್‌ಎಂಎಚ್‌ಎಂಸಿ ಹೊಸ ಪಿಜಿಬ್ಲಾಕ್ ಮತ್ತು ಎಫ್‌ಎಂಸಿಐ ಯ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

Inauguration of FMHMC New PG block & FMCI Badminton Indoor Stadium at Deralakatte campus

ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ (ರಿ.)- ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಮಾಹಿತಿ ಶಿಬಿರ