ಬರವ್ಪಿ; ಬಾಬ್ ಎಡ್ಮಂಡ್ ಜಾರ್ಜ್ ನೊರೊನ್ಹಾ, ಕಿನ್ನಿಗೊಳ್ಳಿ

ಆಜ್ ಸಕಾಳಿಂ ಕಿನ್ನಿಗೋಳಿ ಥಾವ್ನ್ ಗ್ರೆಗರಿ ಸಿಕೇರ್, ಅನ್ಸಿ ಪಾಲಡ್ಕ ಆನಿ ಹಾಂವ್ ಮೆಳೊನ್ (ಎಡ್ಮಂಡ್ ನೊರೊನ್ಹಾ ಮೆಳೊನ್ ಕುಂದಾಪುರ್ ಸಾಹಿತಿಂಚಿಂ ಭೇಟೆಕ್ ಬಾಯ್ರ್ ಸರ್ಲ್ಯಾಂವ್
ಕೊಂಕ್ಣೆಂತ್ಲೊ ಮಾಲ್ಘಡೊ ಬರಯ್ಣಾರ್, ಕಾಣಿಯಾಂಗಾರ್, ನಾಟಕಿಸ್ತ್ ಆನಿ ಪತ್ರಕಾರ್ ತಾಚಾಕೀ ಚ್ಹಡ್, ಖಾಲ್ತೊ, ಕೆದ್ನಾಂಚ್ಚ್ ನಾಂವಾಕ್ ಆಪೇಕ್ಷಿ ನಾತ್ ಲ್ಲೊ, ಬಾಬ್ ಬರ್ನಾರ್ಡ್ ಜೆ. ಡಿಕೋಸ್ತಾ ಕ್ ಆನಿ ತಾಚ್ಯಾ ಶ್ರೀಮತಿ ವಿನಯ ಕ್ ಕುಂದಾಪುರಾಂತ್ ತಾಂಚ್ಯಾ ನಿವಾಸಾಂತ್, ಭೆಟ್ಲ್ಯಾಂವ್!
ದುಸ್ರ್ಯಾನ್ ಮಾಲ್ಘಡೊ ಬರಯ್ಣಾರ್, ಬಾಬ್ ಸ್ಟೇನ್ ಹೆಚ್ ಲೋಬೊ (ಎಸ್ಲೋಬೊ-ಸ್ಟ್ಯಾನಿ ಬಿ.ಲೋಬೊ) ಕ್ ತಾಂಚ್ಯಾ ನಿವಾಸಾಂತ್ ಭೆಟ್ಲ್ಯಾಂವ್.
ತಿಸ್ರ್ಯಾನ್, ಕಾಣಿಯಾಂಗಾರ್ನ್, ಲೇಖಕಿ, ಮಾನೇಸ್ತಿಣ್ ಜ್ಯೋತಿ ಡಿಸಿಲ್ವಾ (ಜ್ಯೇಯಲ್, ಮಂಜರಪಲ್ಕೆ) ಹಿಕಾ ತಿಚ್ಯಾ ಇಸ್ಕೊಲಾಚ್ಯಾ ಧಫ್ತರಾಂತ್ ಮೆಳ್ಳ್ಯಾಂವ್.
ಆಮ್ಚ್ಯಾ ಪಟ್ಟೆಂತ್ಲಿಂ ತೇಗಾಂ (ರೋನಿ ಓಲಿವೆರಾ/ವಿಲ್ಸನ್ ಓಲಿವೆರಾ/ಸೋನಿಯಾ ಡಿಕೋಸ್ತಾ)ಚುಕ್ಲಿಂ.
ಉಪ್ರಾಂತ್ ಪಾಟಿಂ ವೆತಾನಾ ಉಡ್ಪಿಂತ್ಲ್ಯಾ “ತಿಮ್ಮಪ್ಪ” ಹೋಟೆಲಾಕ್ ಮೆಳೊನ್ ನಂತರ್, ಪಾಲಡ್ಕಾ, ಅನ್ಸಿಚ್ಯಾ ಪ್ರಾಯೆಸ್ತ್ ಮಾಂಯ್ಕ್ ಮೆಳೊನ್ ಆಶೀರ್ವಾದ್ ಘೆವ್ನ್ ಪರತ್ ಆಮ್ಚಾ-ಮ್ಚಾ ಘರ್ ವಾಪಸಿಂ ಜಾಲ್ಯಾಂವ್.
ಬಾಬ್ ಎಡ್ಮಂಡ್ ಜಾರ್ಜ್ ನೊರೊನ್ಹಾ, ಬಾಬ್ ಅನ್ಸಿ ಪಲಡ್ಕಾ, ಲೇಖಕ್ ಜಾವ್ನಆಸಾತ್, ಬಾಬ್ ಗ್ರೆಗರಿ ಸಿಕೇರ್, ಮ್ಹಾತಾರೊ ಚರ್ಬೆಲ್ ನಾಟಕಾಚೊ ಮುಖ್ಯ್ ಕಲಾಕಾರ್ ಜಾವ್ನಾಸಾ – ಸಂಪಾದಕ್ ಬರ್ನಾಡ್ ಡಿಕೋಸ್ತಾ









