

ಕಥೋಲಿಕ್ ವಿಜಯಡ್ಕ ಘಟಕದಿಂದ ಜುಲಾಯ್ 6 ರಂದು ಭಾಬುವಾರ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ನಡೆಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಡ್ಕ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಸಂತ ಜೋಸೆಫ್ ವಾಸ್ ವಲಯದ ಅಧ್ಯಕ್ಷ ಡೊಲ್ಫಿ ಡಿಸೋಜ ಆಗಮಿಸಿದ್ದರು. ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್, ಕಥೊಲಿಕ್ ಸಭಾ ವಿಜಯಡ್ಕ ಘಟಕದ ಅಧ್ಯಕ್ಷ ರಾಜೇಂದ್ರ ಡಿಸೋಜ, ಕಾರ್ಯದರ್ಶಿ ವೀರಾ ಡಿಸೋಜ, ಸಂಚಾಲಕ ಜೋನ್ ಡಿಸೋಜ, ವಿಜಯಡ್ಕ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರನ್ನು ಸನ್ಮಾನಿಸಲಾಯಿತು.



























