ವೀಕೆಂಡ್ ಎಣ್ಣೆ ಕೂಡ ಬಂದ್ ಶುಕ್ರವಾರ ದಿಂದ ಭಾನುವಾರ ಮದ್ಯ ಮಾರಾಟ ನಿಷೇಧ

JANANUDI.COM NETWORK


ರಾಜ್ಯ ಸರ್ಕಾರವು ವೀಕೆಂಡ್ ಕಪ್ರ್ಯೂ ಹೇರಿದ ಹಿನ್ನೆಲೆಯಲ್ಲಿ ಎಣ್ಣೆ ಹಾಕುವ ಅಭ್ಯಾಸ ಇರುವರಿಗೆ ದೊಡ್ಡ ಶಾಕ್ ನೀಡಿದೆ. ವೀಕೆಂಡ್ ಕಪ್ರ್ಯೂ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಅಬಕಾರಿ ಇಲಾಖೆಯಿಂದ ತಿಳಿದು ಬಂದಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಹಾಗೂ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯಾದ್ಯಂತ ವೀಕೆಂಡ್ ಕಪ್ರ್ಯೂ ಜಾರಿಗೊಳಿಸಿದ್ದು ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ವೀಕೆಂಡ್ ನಲ್ಲಿ ಮದ್ಯ ಸಿಗಲ್ಲ.
ಅಂದ ಹಾಗೇ ಎಣ್ಣೆ ಹಾಕುವರು ನಾಳೆ ಶುಕ್ರವಾರ ಅಂಗಡಿಯ ಮುಂದೆ ಸಾಲು ಕಟ್ಟಿ ನಿಲ್ಲುತಾರೋ ಎಂಬ ಅನುಮಾನ!