

ಕುಂದಾಪುರ ; ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಪ್ರಸ್ತುತ ದುಬೈನಲ್ಲಿ ನೆಲೆಸಿರುವ, ಗುಜರಾತಿನ ಶ್ರೀಮತಿ ನೇಹಾ ಮನೋಜ್ ಜೇತ್ವಾನಿಯವರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದವರು ನಿರ್ಮಿಸುತ್ತಿರುವ ” ರೆಡ್ ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್” ಯೋಜನೆಗೆ ಹತ್ತು ಲಕ್ಷ ದೇಣಿಗೆಯನ್ನು ನೀಡಿದರು. ದೇಣಿಗೆಯನ್ನು ಸಂಗ್ರಹಿಸಲು ಸಹಕರಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಬಸ್ರೂರು ದಿನಕರ ಆರ್ ಶೆಟ್ಟಿಯವರು ಚೆಕ್ಕನ್ನು ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

