

ಕುಂದಾಪುರ; ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಆಯೋಜಿಸಿದ್ದ 21 ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯು ಕೋಟೇಶ್ವರದ ಯುವ ಮೆರಿಡಿಯನ್ ಹಾಲ್ ನಲ್ಲಿ ಸೆಪ್ಟೆಂಬರ್ 20 ರಂದು ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 2 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಕುಂದಾಪುರ ಸೆಂಟರ್ ನ 183 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಪ್ರಥಮ, 37 ವಿದ್ಯಾರ್ಥಿಗಳು ದ್ವಿತೀಯ ಮತ್ತು 45 ವಿದ್ಯಾರ್ಥಿಗಳು ತ್ರಿತಿಯ ಸ್ಥಾನ, 23 ಚತುರ್ಥ ಮತ್ತು 22 ಪಂಚಮ ಸ್ಥಾನ ವಿವಿಧ ವಿಭಾಗದಲ್ಲಿ ಪಡೆದಿದ್ದಾರೆ.
ಸಾಯಿ ಪರಿತ್ ಓಪನ್ ಕೆಟಗರಿಯಲ್ಲಿ ವಿನ್ನರ್ ಪ್ರೈಜ್, ಹಾಗೂ ಪರ್ವಧಿ ಪಿ ಎಮ್, ಜಿ ಕೆಟಗರಿಯಲ್ಲಿ ಮತ್ತು ಆಧ್ಯಾ ಎನ್ ಕಾಂಚನ್ ಏಫ್ ಕೆಟಗರಿಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಐಪಿಎ ಕುಂದಾಪುರ ಸೆಂಟರ್ ನ ಮುಖ್ಯಸ್ಥ ಮಹಾಲಕ್ಷ್ಮಿ ಪ್ರಸನ್ನ ಮತ್ತು ಶಿಕ್ಷಕಿಯರಾದ ದೀಪಾರ ಮತ್ತು ನಿಶ್ಮಿತಾ ತರಬೇತಿ ನೀಡಿರುತ್ತಾರೆ.

ಸಾಯಿ ಪರಿತ್ ವಿನ್ನರ್ @ ಓಪನ್ ಕೆಟಗರಿ

ಪರ್ವಧಿ ಜಿ ಕೆಟಗರಿ 1st priz

ಆಧ್ಯಾ ಎನ್ ಕಾಂಚನ f category 1st prize

